For Quick Alerts
ALLOW NOTIFICATIONS  
For Daily Alerts

ಕೇನ್ಸ್‌ 2015: ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ಸೆಲೆಬ್ರಿಟಿಗಳು

|

68ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು, ಕೇವಲ ಒಂದು ನೆಪವಷ್ಟೆ. ಕೇನ್ಸ್‌‍ನಲ್ಲಿ ನಡೆಯುತ್ತಿರುವ 2015 ರ ಚಿತ್ರೋತ್ಸವವು ಸೆಲೆಬ್ರಿಟಿಗಳ ಪಾಲಿಗೆ ತಮ್ಮ ಫ್ಯಾಷನ್ ಪ್ರಜ್ಞೆಯನ್ನು ತೋರಿಸುವ ಅಖಾಡವಾಗಿರುತ್ತದೆ. ಕೇನ್ಸ್‌‍ನ ಮೊದಲ ದಿನದಲ್ಲಿ ಕಂಡು ಬಂದ ಸೆಲೆಬ್ರಿಟಿಗಳು ಮತ್ತು ಅವರ ಗೌನ್‍ಗಳು ವಿಶ್ವದಲ್ಲಿಯೇ ಅತ್ಯದ್ಭುತ ಎಂದು ಹೇಳಬಹುದು.

ಎರಡನೆ ದಿನ ಕೇನ್ಸ್‌‍ನಲ್ಲಿ ಕಂಡು ಬಂದ ಪ್ರಮುಖ ನಟಿಮಟಿಯರಲ್ಲಿ, ನವೊಮಿ ವ್ಯಾಟ್ಸ್, ಸಲ್ಮಾ ಹಯೆಕ್, ಜೂಲಿಯನ್ ಮೂರ್, ಚಾರ್ಲೀಜ್ ಥೆರಾನ್ ಮತ್ತು ಭಾರತದಿಂದ ಕತ್ರಿನಾ ಕೈಫ್ ಮತ್ತು ಮಲ್ಲಿಕಾ ಶೆರಾವತ್ ಕೆಂಪು ಹಾಸಿನ ಮೇಲೆ ಕಿಚ್ಚು ಹಚ್ಚಿದರು. ಕೇನ್ಸ್‌ 2015: ಮೋಡಿ ಮಾಡುವರೇ ಸೋನಮ್ ಕಪೂರ್?

ಇಬ್ಬರು ಮಹಿಳೆಯರು ನೋಡುವವರ ಕಣ್ಮನವನ್ನು ಎರಡನೆ ದಿನ ಇಲ್ಲಿ ಸೂರೆಗೊಂಡರು. ಅವರಲ್ಲಿ ಒಬ್ಬರು ಕತ್ರಿನಾ ತನ್ನ ರೆಡ್ ಎಲಿ ಸಾಬ್ ಮೆರ್ಮೇಡ್ ಗೌನ್ ನಿಂದರೆ ಮನಸೂರೆಗೊಂಡರೆ, ಮತ್ತೊಬ್ಬರು ಮಲ್ಲಿಕಾ ಶೆರಾವತ್, ಈಕೆ ಅಲೆಕ್ಸಿಸ್ ಮ್ಯಾಬಿಲ್ಲೆಯ ಗುಲಾಬಿ ಬಣ್ಣದ ದಿರಿಸಿನಲ್ಲಿ ನೋಡುಗರ ಗಮನ ಸೆಳೆದರು. ಇವರಿಬ್ಬರು ಸರಳ ಮತ್ತು ಸುಂದರವಾದ ಲುಕ್‌ಗಳೊಂದಿಗೆ ಭಾರತವನ್ನು ಪ್ರತಿನಿಧಿಸಿದರು. ಬನ್ನಿ ಕೇನ್ಸ್‌‍ 2015 ರಲ್ಲಿ ಕಂಡು ಬಂದ ಮತ್ತಷ್ಟು ಸುಂದರವಾದ ಹೆಂಗಳೆಯರನ್ನು ನಾವು ನಿಮಗೆ ತೋರಿಸುತ್ತೇವೆ ನೋಡಿ:

ಚಾರ್ಲಿ ಥೆರಾನ್

ಚಾರ್ಲಿ ಥೆರಾನ್

ಕೇನ್ಸ್‌‍ನಲ್ಲಿ ನಮ್ಮ ಕಣ್ಣಿಗೆ ಮೊದಲು ಬಿದ್ದದ್ದು. ಸಪೂರ ಸುಂದರಿ ಚಾರ್ಲಿ ಥೆರಾನ್. ಈಕೆ ರೆಡ್ ಕಾರ್ಪೆಟ್ ಮೇಲೆ ಕ್ಯಾನರಿ ಯೆಲ್ಲೋ ಕೌಚರ್ ಗೌನ್ ಧರಿಸಿ ಮೋಡಿ ಮಾಡಿದಳು. ಥೆರಾನ್ ಧರಿಸಿದ್ದ ಹೊಳೆಯುವ ಉಡುಗೆಯು, ಅದಕ್ಕೆ ಒಪ್ಪುವಂತಹ ಚೊಪಾರ್ಡ್ ಆಭರಣಗಳ ಜೊತೆಗೆ ಮತ್ತಷ್ಟು ಸುಂದರವಾಗಿ ಕಾಣುತ್ತಿತ್ತು. ಈಕೆ ತನ್ನ ಲುಕ್‌ಗೆ ಸರಿಹೊಂದುವಂತಹ ಉಡುಗೆಯನ್ನು ಧರಿಸಿ ಎಲ್ಲರನ್ನು ಮೋಡಿ ಮಾಡಿದಳು.

ಜೂಲಿಯನ್ ಮೂರ್

ಜೂಲಿಯನ್ ಮೂರ್

ಕೇನ್ಸ್‌ 2015 ರಲ್ಲಿ ಎರಡನೆಯ ದಿನ ಮೂರ್ ಆಕ್ಸಿ ಬ್ಲಡ್ ಗಿವೆಂಚಿ ಕೌಚರ್ ಧರಿಸಿದ್ದಳು. ಈಕೆ ಇದಕ್ಕೆ ಒಪ್ಪುವಂತಹ ಚೊಪಾರ್ಡ್ ಜ್ಯೂವೆಲ್ ಮತ್ತು ವೆಲ್ವೆಟ್ ಪಂಪ್‌ಗಳು, ತೊಡೆ ಎತ್ತರದ ಸ್ಲಿಟ್ ಮತ್ತು ಲೇಟೆಕ್ಸ್ ಸ್ನೇಹ್ ಫ್ಯಾಬ್ರಿಕ್ ಬಾಡಿಸ್ ಧರಿಸಿ ಕೆಂಪು ಹಾಸಿನ ಮೇಲೆ ನಯನ ಮನೋಹರವಾಗಿ ನಡೆದು ಬಂದಳು.

ಕತ್ರಿನಾ ಕೈಫ್

ಕತ್ರಿನಾ ಕೈಫ್

ವಾವ್! ಭಾರತದ ಈ ಸುಂದರಿ ರಾಸ್ಪ್‌ಬೆರ್ರಿ-ಹ್ಯೂಡ್ ಎಲಿ ಸಾಬ್ ಗೌನ್ ಧರಿಸಿದ್ದಳು. ಇದು ಆಕೆಯ ದೇಹದ ಆಯಕಟ್ಟಿನ ಸ್ಥಳಗಳಲ್ಲಿ ಸರಿಯಾಗಿ ಅಪ್ಪಿಕೊಂಡಿತ್ತು. ನಿನ್ನೆ ಮತ್ತು ಇಂದು ಧರಿಸಿದ್ದ ಗೌನ್‍ಗಳಲ್ಲಿ ಕೆಂಪು ಬಣ್ಣದ ಲುಕ್ ಅನ್ನು ನಾವು ಸೂಪರ್ ಎಂದು ಹೇಳಬಹುದು.

ಲಿಯಾ ಕೆಬೆಡೆ

ಲಿಯಾ ಕೆಬೆಡೆ

ಈ ನಟಿಯು ಎರಡನೆ ದಿನದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಳು. ಈಕೆ ತಾಮ್ರದ ಟೆಕ್ಸ್‌ಚಯಲ್ ಸೆಕ್ವಿನ್-ಎಂಬ್ರಾಯಿಡರಿ ಟಾಪ್ ಧರಿಸಿದ್ದಳು. ಇದರ ವಿನ್ಯಾಸಕಾರ ಪ್ರೊನೆನ್ಜಾ ಸ್ಕೌಲ್ಡರ್, ಸ್ವಲ್ಪ ಮಟ್ಟಿಗೆ ಇನ್ನೂ ಏನೋ ಬಾಕಿ ಇದೆ ಎನ್ನುವಂತಿತ್ತು ಆಕೆಯ ಲುಕ್, ಆದರೂ ಆಕೆಗೆ ಸರಿಸಾಟಿ ಯಾರೂ ಇರಲಿಲ್ಲ.

ಮಲ್ಲಿಕಾ ಶೆರಾವತ್

ಮಲ್ಲಿಕಾ ಶೆರಾವತ್

ಮಲ್ಲಿಕಾ ಶೆರಾವತ್ ಗುಲಾಬಿ ಬಣ್ಣದ ಅಲೆಕ್ಸಿಸ್ ಮಾಬಿಲ್ಲೆ ಗೌನ್ ಧರಿಸಿದ್ದಳು. ಈ ಅದ್ಧೂರಿ ಗೌನಿನಲ್ಲಿ ಆಕೆ ನಯನ ಮನೋಹರವಾಗಿ ಮತ್ತಷ್ಟು ಸುಂದರಿಯಾಗಿ ಕಂಡುಬಂದಳು. ತನ್ನ ದೇಹವನ್ನು ಸಂಪೂರ್ಣವಾಗಿ ಸುತ್ತಿಕೊಂಡಿದ್ದ ಈ ಗೌನ್ ನೋಡುಗರಿಗೆ ಶಾಕ್ ನೀಡಿತ್ತು! ಏಕೆಂದರೆ ಜನ ಆಕೆಯನ್ನು ಹೀಗೆ ಊಹಿಸಿರಲಿಲ್ಲ.

ಮಿರಾಂಡ ಕೆರ್ರ್

ಮಿರಾಂಡ ಕೆರ್ರ್

ನೋಡುಗರ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ ಮತ್ತೊಬ್ಬ ಸುಂದರಿ ಮಿರಾಂಡ ಕೆರ್ರ್. ನೋಡುಗರನ್ನು ಮತ್ತು ಸರಿಸಾಟಿಗೆ ನಿಲುಕವ ಎಲ್ಲಾ ಸುಂದರಿಯರನ್ನು ಒಂದೇ ಏಟಿಗೆ ಮರಳು ಮಾಡಿದ್ದು, ಮಿರಾಂಡ ಕೆರ್ರ್. ತನ್ನ ಮೋಡಿ ಮಾಡುವ ಗುಲಾಬಿ ಬಣ್ಣ ಮತ್ತು ಬ್ಲಾಕ್ ಪಾರ್ಟಿಯೊಂದಿಗೆ ಕ್ಯಾನೆಸ್‌ಗೆ ಕಿಚ್ಚು ಹಚ್ಚಿದ್ದಳು ಈ ಮಾಡೆಲ್ ನಟಿ.

English summary

Cannes 15: Day 2 Best Dressed Celebs

The 68th International Film Festival is an event not to miss no matter what. The celebrities who attended the Day 1 at Cannes 2015 left us gasping for air. The gowns they wore werecompletely out of this world and the confidence seen by them on the red carpet in these fascinating attires was superb.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more