ಮಾರುಕಟ್ಟೆಯಲ್ಲಿ ಸಿಗುವ ವಿಲಕ್ಷಣ ಬುಡಕಟ್ಟು ಆಹಾರಗಳು

By: Poonima Heggade
Subscribe to Boldsky

ನಾವೆಲ್ಲರೂ ಪ್ರತಿದಿನ ಪ್ರತಿ ಸ್ಥಳದಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಸವಿಯಲು ಇಷ್ಟಪಡುತ್ತೇವೆ. ಈ ಆಹಾರ ಪದ್ಧತಿಗಳು ದೇಶದಿಂದ ದೇಶಕ್ಕೆ, ಜನಾಂಗದಿಂದ ಜನಾಂಗಕ್ಕೆ ಇದು ಬದಲಾಗುತ್ತಾ ಹೋಗುತ್ತವೆ. ಇದು ಮಾನವ ಸಹಜ ಸ್ವಭಾವ ಕೂಡ. ಇವುಗಳಲ್ಲಿ ಹಲವು ವಿಲಕ್ಷಣ ಆಹಾರ ಪದ್ಧತಿಗಳೂ ಆಗಿವೆ. ಏನನ್ನು ಕೂಡ ತಿನ್ನಲು ಸಾಮರ್ಥ್ಯವುಳ್ಳವರು ಅವುಗಳು ಹೇಗೆ ವಿಲಕ್ಷಣವಾಗಿದ್ದರೂ, ಹೊಸ ಆಹಾರ ಮೂಲಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ನೀವು ಏನೇ ತಿಂದರೂ ನಿಮ್ಮ ಹೊಟ್ಟೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಂದುಕೊಂಡರೆ ನಿಮಗೆ ಯಾವುದೇ ಪರಿಣಾಮಗಳೂ ಆಗದಿರಬಹುದು. ಜೀವಂತ ಪ್ರಾಣಿಗಳನ್ನು ತಿನ್ನಬಲ್ಲವರು ಆರೋಗ್ಯದ ಬಗ್ಗೆ ಸ್ಪಲ್ವವೂ ಚಿಂತಿಸುವುದಿಲ್ಲ. ಇತರರು ವಿಲಕ್ಷಣ ಎಂದು ಭಾವಿಸುವ ಆಹಾರಗಳನ್ನು ತಿಂದು ತಮ್ಮ ಜೀವನದಲ್ಲಿ ಅಪಾಯವನ್ನು ಎದುರಿಸಲು ತಯಾರಾಗಿರುವ ಜನರ ಬಗ್ಗೆ ತಿಳಿದುಕೊಳ್ಳುವಂತಹ ಹಲವು ಆಶ್ಚರ್ಯಕರ ವಿಷಯಗಳಿರುತ್ತವೆ!

ಸಾಮಾನ್ಯವಾಗಿ ಯಾವುದೇ ಬುಡಕಟ್ಟು ಜನರು ವಿಲಕ್ಷಣ ಆಹಾರವನ್ನು ವಿಶೇಷ ಮತ್ತು ಸಾಂಪ್ರದಾಯಿಕ ಎಂದು ಪರಿಗಣಿಸಲಾಗುತ್ತದೆ. ಹಲವು ಪಂಗಡಗಳು ತಾವು ಮಾಡುವ ಪಾಕವಿಧಾನವನ್ನು ಆರೋಗ್ಯಕರವಾದುದು ಎಂದು ಪರಿಗಣಿಸುತ್ತಾರೆ. ಆದರೆ, ಅವುಗಳಲ್ಲಿ ಕೆಲವು ಆಹಾರಗಳನ್ನು ನಾವು ಸಂಪೂರ್ಣವಾಗಿ ವಿಲಕ್ಷಣ ಬುಡಕಟ್ಟು ಆಹಾರಗಳು ಎಂದೇ ಪರಿಗಣಿಸುತ್ತೇವೆ. ವಿಲಕ್ಷಣ ಬುಡಕಟ್ಟು ಆಹಾರಗಳಲ್ಲಿ ಕೆಲವು ಆಹಾರಗಳು ಇಂತಿವೆ.

ನೀವು ಕೆಲವು ವಿಲಕ್ಷಣ ಬುಡಕಟ್ಟು ಆಹಾರಗಳನ್ನು ಇಷ್ಟಪಡುತ್ತೀರಾ? ಹಾಗಾದರೆ ನೀವು ಮಾರುಕಟ್ಟೆಗಳಲ್ಲಿ ಇಂತಹ ಕೆಲವು ವಿಲಕ್ಷಣ ಬುಡಕಟ್ಟು ಆಹಾರಗಳನ್ನು ಖರೀದಿಸಬಹುದು. ಯಾವ ಆಹಾರವನ್ನೂ ಕೂಡ ಸೇವಿಸಲು ಇಷ್ಟಪಡುವವರು ಖರೀದಿಸಬಹುದಾದ ಕೆಲವು ವಿಲಕ್ಷಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಸಾಮಾನ್ಯ ವಿಲಕ್ಷಣ ಬುಡಕಟ್ಟು ಆಹಾರಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.

ಬಲುಟ್

ಬಲುಟ್

ಬಲುಟ್ ಇದೊಂದು ವಿಲಕ್ಷಣ ಆಹಾರಗಳಲ್ಲಿ ಒಂದಾಗಿದ್ದು ಬಾತುಕೋಳಿ ಅಥವಾ ಕೋಳಿ ಮೊಟ್ಟೆಯನ್ನು ಕೆಲವು ವಾರಗಳ ಕಾಲ ನೆಲದಲ್ಲಿ ಹೂತಿಟ್ಟು ನಂತರ ಸೇವಿಸುವುದು. ಇದು ಫಿಲಿಪೈನ್ಸ್ ನ ಆಹಾರ. ಬೇಡಿಕೆ ಹೆಚ್ಚಾದಂತೆ, ಸಾಂಪ್ರದಾಯಿಕ ಆಹಾರ ತಯಾರಿಕೆಯ ಬದಲಾಗಿ ಯಾಂತ್ರಿಕ ತಯಾರಿಕೆ ಆರಂಭವಾಗಿದೆ. ಇತ್ತೀಚಿಗೆ ಈ ಆಹಾರವನ್ನು ಸಾಮಾನ್ಯವಾಗಿ ಫಿಲಿಪೈನ್ಸ್ ರಸ್ತೆ ಬದಿಗಳಲ್ಲಿ ಮಾರಲಾಗುತ್ತದೆ.

ನಾಯಿ ಮಾಂಸ

ನಾಯಿ ಮಾಂಸ

ನಾಯಿ ಮಾಂಸ ನಾಗಾಲ್ಯಾಂಡ್ ನ ಅತ್ಯಂತ ಮೆಚ್ಚಿನ ಬುಡಕಟ್ಟು ಆಹಾರಗಳಲ್ಲಿ ಒಂದು. ನಾಯಿ ಮಾಂಸ ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರ ಬುಡಕಟ್ಟು ಸಮುದಾಯಗಳಲ್ಲಿ ಒಂದು ದೌರ್ಬಲ್ಯ (ಅತ್ಯಂತ ಬೇಡಿಕೆ ಇರುವುದರಿಂದ) ಎಂದೇ ಪರಿಗಣಿಸಲಾಗಿದೆ. ಈ ವಿಲಕ್ಷಣ ಬುಡಕಟ್ಟು ಆಹಾರ 'ಗೆಗೋಗಿ' (Gaegogi) ಎಂದೇ ಕರೆಯಲ್ಪಡುವ ದಕ್ಷಿಣ ಕೊರಿಯಾ ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಕಪ್ಪೆ ಕಾಲುಗಳು

ಕಪ್ಪೆ ಕಾಲುಗಳು

ಸಿಕ್ಕಿಂ ಲೆಪ್ಚಾ ಸಮುದಾಯದ ಅತ್ಯಂತ ರುಚಿಕರವಾದ ಆಹಾರಗಳಲ್ಲಿ ಒಂದು ಕಪ್ಪೆ ಕಾಲುಗಳು. ಅವರು ಕಪ್ಪೆ ಕಾಲುಗಳು ಔಷಧೀಯ ಮೌಲ್ಯಗಳನ್ನು ಹೊಂದಿರುತ್ತವೆ ಎಂದು ನಂಬುತ್ತಾರೆ. ಈ ವಿಲಕ್ಷಣ ಬುಡಕಟ್ಟು ಆಹಾರ ಈಗ ಇಲ್ಲಿನ ನಗರಗಳ ರೆಸ್ಟೋರೆಂಟ್ ಗಳಲ್ಲಿ ಅತ್ಯಂತ ವಿಶೇಷ ಭಕ್ಷ್ಯವಾಗಿ ಲಭ್ಯವಿದೆ.

ಎರಿ ಪೊಲು

ಎರಿ ಪೊಲು

ಸಿಲ್ಕ್ ವರ್ಮ್ ಪುಪಸ್ ನಿಂದ ತಯಾರಿಸಬಹುದಾದ ವಿಲಕ್ಷಣ ಆಹಾರಗಳಲ್ಲಿ ಒಂದಾಗಿದ್ದು ಹುಳದ ರೇಷ್ಮೆ ನೂತ ನಂತರ ಆಹಾರವನ್ನು ತಯಾರಿಸಲಾಗುತ್ತದೆ. ಎರಿ ಪೊಲು ಸಾಮಾನ್ಯವಾಗಿ ಅಸ್ಸಾಂನಲ್ಲಿನ ಸಾಂಪ್ರದಾಯಿಕ ಆಹಾರ 'ಖೊರಿಸಾ' ಜೊತೆಗೆ ಉಣಬಡಿಸಲಾಗುತ್ತದೆ. ಈ ವಿಲಕ್ಷಣ ಬುಡಕಟ್ಟು ಆಹಾರ ನಿಮ್ಮ ರುಚಿಗೆ ತಕ್ಕಂತೆ ವಿಭಿನ್ನ ರುಚಿಗಳಲ್ಲಿ ಬೇರೆ ಬೇರೆ ರೆಸ್ಟೋರೆಂಟ್ ನಲ್ಲಿ ಸವಿಯಬಹುದು.

ಮಸಾಲೆಯುಕ್ತ ಕೆಂಪು ಇರುವೆ ಚಟ್ನಿ

ಮಸಾಲೆಯುಕ್ತ ಕೆಂಪು ಇರುವೆ ಚಟ್ನಿ

ಇದು ಭಾರತದಲ್ಲಿನ ಬುಡಕಟ್ಟು ರಾಜ್ಯಗಳಲ್ಲಿ ಒಂದಾದ ಚತ್ತೀಸ್ ಘಡದಲ್ಲಿ ಕಂಡುಬರುವ ವಿಚಿತ್ರವಾದ ಬುಡಕಟ್ಟು ಆಹಾರ. ಇಲ್ಲಿ ಈ ಚಟ್ನಿ ಕೆಂಪು ಇರುವೆಗಳ ಮೊಟ್ಟೆಗಳ ಜೊತೆಗೆ ಮಾಡಲಾಗುತ್ತಿದ್ದು ಛಪರಹ್ ಎಂದು ಕರೆಯಲಾಗುತ್ತದೆ. ಚಟ್ನಿ ಖಾರ ಮತ್ತು ರುಚಿಯನ್ನು ಹೊಂದಿರುತ್ತದೆ.

ಡ್ರಂಕನ್ ಸೀಗಡಿ

ಡ್ರಂಕನ್ ಸೀಗಡಿ

ಡ್ರಂಕನ್ ಸೀಗಡಿ, ಜೀವಂತ ಸೀಗಡಿಗಳನ್ನು ಮದ್ಯದಲ್ಲಿ (ಹೆಂಡದಲ್ಲಿ) ನೆನೆಸಿ ತಯಾರಿಸುವ ವಿಚಿತ್ರವಾದ ಭಕ್ಷ್ಯವಾಗಿದೆ. ಇದು ಮುಖ್ಯಭೂಮಿ ಚೀನಾ ಹುಟ್ಟಿಕೊಂಡಿದ್ದರೂ ಕೂಡ, ಡ್ರಂಕನ್ ಸೀಗಡಿ ಈಗ ಅನೇಕ ಐಷಾರಾಮಿ ಹೋಟೆಲ್ ಮತ್ತು ರೆಸ್ಟೊರೆಂಟ್ ಗಳಲ್ಲಿ ಲಭ್ಯವಿರುವ ಒಂದು ಅತ್ಯಂತ ಜನಪ್ರಿಯ ಭಕ್ಷ್ಯವಾಗಿದೆ.

ಇಲಿ ಮಾಂಸ

ಇಲಿ ಮಾಂಸ

ಇದು ಉತ್ತರದ ಥೈಲ್ಯಾಂಡ್ ಕರೆನ್ ಬೆಟ್ಟಗಳಲ್ಲಿನ ಬುಡಕಟ್ಟು ವಿಲಕ್ಷಣ ಆಹಾರ. ಇಲಿಗಳನ್ನು ತಿನ್ನುವ ಉದ್ದೇಶಕ್ಕಾಗಿ ಅವುಗಳನ್ನು ಪ್ರತ್ಯೇಕ ಮನೆಗಳಲ್ಲಿ ಬೆಳೆಯಲು ಬಿಡುತ್ತಾರೆ. ಇದು ವಿಲಕ್ಷಣ ಆಹಾರಗಳನ್ನು ಇಷ್ಟಪಡುವವರು ಪ್ರಯತ್ನಿಸಿ ನೋಡಬಹುದಾದ ಆಹಾರ! ಇಲಿ ಮಾಂಸ ಅನೇಕ ರೆಸ್ಟೊರೆಂಟ್ ಗಳಲ್ಲಿ ಈಗ ಉಪಭೋಗ್ಯ ಆಹಾರ.

ಹಾವಿನ/ಸ್ನೇಕ್ ವೈನ್

ಹಾವಿನ/ಸ್ನೇಕ್ ವೈನ್

ಹಾವಿನ/ಸ್ನೇಕ್ ವೈನ್

ಭ್ರೂಣ

ಭ್ರೂಣ

ಭ್ರೂಣವನ್ನು ಆಹಾರವಾಗಿ ಸೇವಿಸುವುದು ಆಫ್ರಿಕಾದಲ್ಲಿ ಕೆಲವು ಬುಡಕಟ್ಟು ನಡುವೆ ಒಂದು ಸಾಮಾನ್ಯ ಪರಿಪಾಠವಾಗಿದೆ. ಬೇಬಿ ಮಾಂಸ ಈಗ ಅಮೇರಿಕಾದಲ್ಲಿ, ಚೀನಾದ ಕೆಲವು ಪಟ್ಟಣಗಳಾದ ಕ್ಯಾಂಟನ್ ( ಗುವಾಂಗ್ಡಾಂಗ್ ) ಗಳಲ್ಲಿಯೂ ಸಹ ಪ್ರಸಿದ್ಧವಾಗಿದೆ.

ನೀವು ಬೇರೆ ರುಚಿಯ ವೈನ್ ಸವಿಯಲು ಬಯಸಿದರೆ, ಮುಂದಿನ ಬಾರಿ ಹಾವಿನ ವೈನ್ ಸವಿಯಲು ಪ್ರಯತ್ನಿಸಿ. ಇದು ರೈಸ್ ವೈನ್, ಅಥವಾ ಮದ್ಯದಲ್ಲಿ ಹಾವಿನ ರಕ್ತ ಅಥವಾ ಹಾವಿನ ದ್ರವಗಳನ್ನು , ಬೆರೆಸಿ ತಯಾರಿಸಲಾಗುತ್ತದೆ.

English summary

Weird Tribal Foods Sold In The Market

Human beings have bizarre eating habits, when they want to try something different. The ability to eat anything makes them explore new food sources, no matter how weird it is.
Subscribe Newsletter