For Quick Alerts
ALLOW NOTIFICATIONS  
For Daily Alerts

ಸಹೋದರನಿಗಾಗಿ ರಾಖಿ ತಯಾರಿಸಲು ಸರಳ ಉಪಾಯಗಳು

By Poornima heggade
|

ರಕ್ಷಾ ಬಂಧನ ಸಹೋದರರು ಮತ್ತು ಸಹೋದರಿಯರ ನಡುವಿನ ಪ್ರೀತಿಯ ಅನುಬಂಧವನ್ನು ವ್ಯಕ್ತಪಡಿಸುವ ಒಂದು ಆಚರಣೆ ಅಥವಾ ಹಬ್ಬ. ಸಹೋದರ ಸಹೋದರಿಯರ ಬಂಧ ಅಕ್ಷರಶಃ 'ರಾಖಿ' ಎಂದು ಕರೆಯುವ ಇಂದು ದಾರದ ಮೂಲಕ ಪ್ರತಿನಿಧಿಸಲಾಗುತ್ತದೆ. ರಾಖಿ ಮೂಲತಃ ಮಡಚಿದ ಎಳೆಯ ರೂಪದಲ್ಲಿತ್ತು, ಈಗ ಒಂದು ವಿನ್ಯಾಸಕ ರೂಪದಲ್ಲಿರುತ್ತದೆ. ವೈವಿಧ್ಯಮಯ ಕಲಾಕೃತಿಗಳೊಂದಿಗೆ ವಿವಿಧ ವಿಧಗಳಲ್ಲಿ ದೊರೆಯುತ್ತವೆ.

ಸಾಮಾನ್ಯವಾಗಿ, ಒಂದು ರಾಖಿ ಕೇಂದ್ರದಲ್ಲಿ ವಿನ್ಯಾಸಕ ಕಲಾಕೃತಿಯನ್ನು ದಾರದಲ್ಲಿ ಜೋಡಿಸಿಟ್ಟಂತೆ ಇರುತ್ತದೆ. ವಿವಿಧ ರೀತಿಯ ರಾಖಿಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ ಆದರೆ ಕೈಯಾರೆ ಮಾಡಿದ ರಾಖಿ ಇವೆಲ್ಲವುಗಿಂತ ಹೆಚ್ಚು ವಿಶೇಷವಾಗಿರುತ್ತದೆ. ನೀವು ನಿಜವಾಗಿಯೂ ನಿಮ್ಮ ಸಹೋದರನಲ್ಲಿ ವಿಶೇಷ ಭಾವನೆಗಳನ್ನು ಮೂಡಿಸಲು ಬಯಸಿದರೆ, ಸ್ವತ: ನೀವೇ ರಾಖಿಯನ್ನು ತಯಾರಿಸಲು ಯೋಚಿಸಬಹುದು.

ನಿಮ್ಮ ಸಹೋದರರಿಗಾಗಿ 26 ಬಗೆಯ ರಾಖಿಗಳು!

ರಾಖಿಯನ್ನು ಮನೆಯಲ್ಲೇ ಮಾಡಲು ಸರಳ ಉಪಾಯಗಳು ಸಾಕಷ್ಟಿವೆ. ಎಷ್ಟು ಸರಳವಾದ ರಾಖಿಯನ್ನು ನೀವು ತಯಾರಿಸುತ್ತೀರಿ ಎನ್ನುವುದು ಮುಖ್ಯವಲ್ಲ. ಅದು ಹೇಗೆ ಇರಲಿ ನಿಮ್ಮ ಸಹೋದರನಿಗೆ ಕಟ್ಟಿದರೆ ಅವರ ಮುಖದಲ್ಲಿ ಮಂದಹಾಸ ಮೂಡುವುದಂತೂ ಖಂಡಿತ!

ನೀವು ಪ್ರತಿ ವರ್ಷ ಹಲವಾರು ಮಳಿಗೆಗಳು ಸುತ್ತಿ ಹಲವು ರಾಖಿಗಳನ್ನು ಖರೀದಿ ಮಾಡಿರಬಹುದು. ಆದರೆ ಈ ವರ್ಷ, ಈ ಕೆಲವು ಉಪಾಯಗಳನ್ನು ಬಳಸಿಕೊಂಡು ನೀವೇ ಸ್ವತಃ ವಿಶೇಷ ಪ್ರಯತ್ನ ಮಾಡಿ ರಾಖಿಯನ್ನು ತಯಾರಿಸಿ. ಇವು ಸರಳ ಮತ್ತು ಅತ್ಯಂತ ಶೀಘ್ರದಲ್ಲಿ ಮಾಡಬಹುದಾದಂತವು. ರಕ್ಷಾ ಬಂಧನಕ್ಕಾಗಿ ರಾಖಿಯನ್ನು ನೀವೇ ತಯಾರಿಸಲು ನೀವು ಅರ್ಧ ಗಂಟೆ ಶಾಪಿಂಗ್ (ಖರೀದಿ) ಮತ್ತು 20 ನಿಮಿಷಗಳ ಕಾಲ ಕರಕುಶಲ ಕೆಲಸಕ್ಕಾಗಿ ಅವಧಿಯನ್ನು ಮೀಸಲಿಡಬೇಕಾಗುತ್ತದೆ. ಇಲ್ಲಿ ನೀವೇ ಸ್ವತಃ ರಾಖಿ ತಯಾರಿಸಲು ಕೆಲವು ಉತ್ತಮ ಉಪಾಯಗಳನ್ನು ಹೇಳಲಾಗಿದೆ.

ಮಣಿಗಳಿಂದ ತಯಾರಿಸುವ ರಾಖಿ

ಮಣಿಗಳಿಂದ ತಯಾರಿಸುವ ರಾಖಿ

ಸ್ನೇಹಿತರ ದಿನ ಕಳೆಯಿತು. ನಿಮ್ಮ ಸ್ನೇಹಿತರು ನೀಡಿದ ಫ್ರೆಂಡ್ ಶಿಪ್ ಬ್ಯಾಂಡ್ ನಲ್ಲಿ ಇರುವ ಸಾಕಷ್ಟು ಮಣಿಗಳು ನಿಮ್ಮಲ್ಲಿ ಸಂಗ್ರಹವಾಗಿರಬಹುದು. ಈ ಎಲ್ಲಾ ವಿವಿಧ ವರ್ಣದ ಮಣಿಗಳನ್ನು ಕೆಂಪು ದಾರದಲ್ಲಿ ಜೋಡಿಸಿದರೆ ಸುಂದರವಾದ ಮಣಿಯ ರಾಖಿ ಸಿದ್ಧವಾಗುತ್ತದೆ.

ಝಲರ್ ರಾಖಿ

ಝಲರ್ ರಾಖಿ

ಈ ರಾಖಿಯನ್ನು ತಳದಲ್ಲಿ ಒಂದು ವೃತ್ತಾಕಾರದ ಆಕಾರದಲ್ಲಿ ಕಟ್ಟಿದ ರೇಷ್ಮೆಎಳೆಯಿಂದ ಮಾಡಲಾಗುತ್ತದೆ. ದಾರದ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಬಿಟೆಲ್ (ವೀಳ್ಯದೆಲೆ) ನ ವಿಶಿಷ್ಟ ಆಕೃತಿಯನ್ನು ಜೋಡಿಸಬಹುದು. ಈ ದಾರ ಮೂರು ವಿವಿಧ ಬಣ್ಣಗಳನ್ನು ಸುತ್ತಲೂ ಹೊಂದಿರುತ್ತದೆ.

ಓಂ ರಾಖಿ

ಓಂ ರಾಖಿ

ರಾಖಿ ಲಕ್ಷಣಗಳು ಸಾಮಾನ್ಯವಾಗಿ ಸಾಂಪ್ರದಾಯಿಕ ಮತ್ತು ಧಾರ್ಮಿಕವಾಗಿರುತ್ತವೆ. ಪವಿತ್ರ 'ಓಂ' ಎಂಬ ಅಕ್ಷರ ಹಿಂದೂ ಧರ್ಮರಲ್ಲಿ ಮಹತ್ವವನ್ನು ಹೊಂದಿದೆ. ಹಾಗೂ 'ಓಂ' ಬರಹವನ್ನು ಹುಡುಕುವುದು ಸಾಕಷ್ಟು ಸುಲಭ. ಇದನ್ನು ಪ್ರಕಾಶಮಾನವಾದ ಅಥವಾ ಹೊಳೆಯುವ ದಾರದ ಮೇಲೆ ಜೋಡಿಸಿದರೆ ರಾಖಿಯ ಮೆರುಗು ಹೆಚ್ಚುತ್ತದೆ.

ಆಭರಣದ ರಾಖಿ

ಆಭರಣದ ರಾಖಿ

ಈ ರಾಖಿಯನ್ನು ತಯಾರಿಸುವುದು ವಾಸ್ತವವಾಗಿ ತುಂಬಾ ಸರಳ. ಹೆಚ್ಚಾಗಿ ಮನೆಯಲ್ಲಿ ಅನಗತ್ಯ ಆಭರಣಗಳು ಸಾಕಷ್ಟಿರುತ್ತವೆ. ನಿಮ್ಮ ಹಳೆಯ ಆಭರಣಗಳಿಂದ ದೊಡ್ಡ ಪದಕ (ಪೆಂಡೆಂಟ್)ವನ್ನು ತೆಗೆದುಕೊಳ್ಳಿ. ಇದರ ಸುತ್ತ ಸುವರ್ಣ ಬಣ್ಣದ ಕಸೂತಿಯನ್ನು ಮಾಡಿ, ಕೆಂಪು ಮತ್ತು ಚಿನ್ನದ ಬಣ್ಣದ ಎಳೆಗಳಲ್ಲಿ ಜೋಡಿಸಿ.

ನವೀಲಿನ ರಾಖಿ

ನವೀಲಿನ ರಾಖಿ

ಭವ್ಯ ಪಕ್ಷಿ ನವೀಲಿನ ಕಲಾಕೃತಿ ಆಭರಣ ಮತ್ತು ರಾಖಿಗಳಲ್ಲಿ ಅತ್ಯಂತ ಪ್ರಮುಖವಾಗಿದೆ. ನೀವು ಯಾವುದೇ ಕ್ರಾಫ್ಟ್ ಅಂಗಡಿಯಲ್ಲಿ ನಿಮ್ಮ ರಾಖಿಗೆ ಬೇಕಾದ ಒಂದು ವಿನ್ಯಾಸಕ ನವೀಲಿನ ಕಲಾಕೃತಿಯನ್ನು ಕೊಳ್ಳಬಹುದು. ನವೀಲಿನ ಮೂಲಭೂತ ಬಣ್ಣವನ್ನು ಹಾಗೇ ಉಳಿಸಲು ಕಡು ನೀಲಿ ದಾರದಲ್ಲಿ ಇದನ್ನು ಜೋಡಿಸಿ.

ರುದ್ರಾಕ್ಷಿಯ ರಾಖಿ

ರುದ್ರಾಕ್ಷಿಯ ರಾಖಿ

ರುದ್ರಾಕ್ಷಿಯನ್ನು, ಹಿಂದೂ ಧರ್ಮದಲ್ಲಿ 'ಶಿವನ ಕಣ್ಣೀರು' ಎಂದು ಪೂಜಿಸಲಾಗುತ್ತದೆ. ಮತ್ತು ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಾಂಪ್ರದಾಯಿಕ ಕೆಂಪು ಮೌಲಿಯ ತಂತುಗಳ ಒಳಗೆ ಒಂದು ರುದ್ರಾಕ್ಷಿಯನ್ನು ಅಳವಡಿಸಿದರೆ 'ಭಾರತೀಯ' ರಾಖಿ ಸಿದ್ಧ!

ಲುಂಬಾ ರಾಖಿ

ಲುಂಬಾ ರಾಖಿ

ನಿಮ್ಮ ಸಹೋದರನಿಗಾಗಿ ಇಷ್ಟೆಲ್ಲಾ ಮಾಡುವಾಗ ಅತ್ತಿಗೆಯನ್ನು ಹೇಗೆ ಬಿಡಲು ಸಾಧ್ಯ? ನಿಮ್ಮ ಮೆಚ್ಚಿನ ಜುಮ್ಕಾವನ್ನು ಆರಿಸಿಕೊಳ್ಳಿ. ಇದನ್ನು ನಡುವಲ್ಲಿ ವಿಭಜಿಸಿ ದಾರದಲ್ಲಿ ಜೋಡಿಸಿದರೆ ಅತ್ತಿಗೆಗಾಗಿ ವಿಶೇಷವಾದ ಲುಂಬಾ ರಾಖಿ ರೆಡಿ!

ಸ್ವಸ್ತಿಕ ರಾಖಿ

ಸ್ವಸ್ತಿಕ ರಾಖಿ

ಸ್ವಸ್ತಿಕ, ಶಾಂತಿ ಮತ್ತು ಸಮೃದ್ಧಿಯಯನ್ನು ಪ್ರತಿಬಿಂಬಿಸುವ ಹಿಂದೂ ಧರ್ಮದ ಸಂಕೇತವಾಗಿದೆ. ನೀವು ಸ್ವಸ್ತಿಕದ ಒಂದು ಸ್ಟಿಕರ್ ಖರೀದಿಸಬಹುದು ಅಥವಾ ಕೈಯಿಂದ ಈ ಆಕೃತಿಯನ್ನು ಬಿಡಿಸುವುದೂ ಕೂಡ ಸುಲಭ. ಸ್ವಸ್ತಿಕ ಯಾವಾಗಲೂ ಕೆಂಪು ಬಣ್ಣದಲ್ಲಿರಬೇಕು.

ಡ್ಯುಯಲ್ ಸ್ಟ್ರಿಂಗ್ ರಾಖಿ (ಎರಡು ದಾರದ ರಾಖಿ)

ಡ್ಯುಯಲ್ ಸ್ಟ್ರಿಂಗ್ ರಾಖಿ (ಎರಡು ದಾರದ ರಾಖಿ)

ಈ ದಿನಗಳಲ್ಲಿ, ಒಂದು ದಪ್ಪವಾದ ದಾರದ ಬದಲು ಎರಡು ದಾರದಿಂದ ಮಾಡಿದ ರಾಖಿಯನ್ನು ಧರಿಸುವುದು ವಾಡಿಕೆಯಾಗಿದೆ. ಇದಕ್ಕಾಗಿ ಸಾಮಾನ್ಯವಾಗಿ ಕೆಂಪು ಮತ್ತು ಹಳದಿ ಬಣ್ಣದ ದಾರಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಎರಡು ತಂತಿಗಳು ಗಂಟು ಹಾಕಿಕೊಳ್ಳದೇ ಇರುವ ಹಾಗೆ ಎಚ್ಚರವಹಿಸಿ.

ತ್ರಿವರ್ಣ ರಾಖಿ

ತ್ರಿವರ್ಣ ರಾಖಿ

ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಣ್ಣ ಮೃದು ಮತ್ತು ಪಫಿ ಚೆಂಡುಗಳನ್ನು ಖರೀದಿಸಬಹುದು. ದಪ್ಪವಾದ ದಾರಕ್ಕೆ ಒಟ್ಟಿಗೆ ಯಾವುದೇ ಮೂರು ಬಣ್ಣಗಳ ಸಣ್ಣ ಸ್ಟ್ರಿಂಗ್ ಸಾಫ್ಟ್ ಬಾಲ್ ಗಳನ್ನು ಆಯ್ಕೆ ಮಾಡಿ ಹಾಗೂ ಅದನ್ನು ಜೋಡಿಸಿ. ನಿಮ್ಮ ನೆಚ್ಚಿನ ತ್ರಿವರ್ಣ ರಾಖಿ ಸಿದ್ಧ!

ಆಂಗ್ರಿ ಬರ್ಡ್ ರಾಖೀ

ಆಂಗ್ರಿ ಬರ್ಡ್ ರಾಖೀ

ನಿಮ್ಮ ಸಹೋದರ ಬಹುಶಃ ಆಂಗ್ರಿ ಬರ್ಡ್ಸ್ ಅಭಿಮಾನಿ ಆಗಿರಬಹುದು. ನಿಮ್ಮ ಸಹೋದರನಿಗೆ ಅಚ್ಚರಿಯನ್ನು ಉಂಟುಮಾಡಲು ಈ ಜನಪ್ರಿಯ ಮೊಬೈಲ್ ಆಟದ ಕಾರ್ಟೂನ್ ನ್ನು ನಿಮ್ಮ ರಾಖಿಗೆ ಬಳಸಬಹುದು! ಅವರು ಖಂಡಿತವಾಗಿಯೂ ತಮಾಷೆಯನ್ನು ಎಂಜಾಯ್ ಮಾಡುತ್ತಾರೆ.

ತೂಗಾಡುವ ರಾಖಿ

ತೂಗಾಡುವ ರಾಖಿ

ಬಹುಪಾಲು ಹುಡುಗರಿಗೆ ಕೀ ಚೈನ್ (ಸರಪಳಿಗಳು) ಇಷ್ಟ. ನಿಮ್ಮ ಸಹೋದರನ ಹಳೆಯ ಕೀ ಚೈನ್ ನ್ನು ತೆಗೆದುಕೊಂಡು ಸ್ಟ್ರಿಂಗ್ ರೀತಿಯಲ್ಲಿ ನಿಮ್ಮ ರಾಖಿಯಾಗಿ ಬಳಸಿ. ಈ ತೂಗಾಡುವ ರಾಖಿ ನಿಮ್ಮ ಸಹೋದರನನ್ನು ಖಂಡಿತ ಬೆರೆಗುಗೊಳಿಸುತ್ತದೆ.

ಮೌಲಿ ರಾಖಿ

ಮೌಲಿ ರಾಖಿ

ನಿಮ್ಮ ಸಹೋದರನ ಕೈಗೆ ಮೌಲಿ ರಾಖಿ ಕಟ್ಟಿ, ರಕ್ಷಾಬಂಧನ ಆಚರಿಸಲು ಸಾಂಪ್ರದಾಯಿಕ ಮಾರ್ಗವಾಗಿದೆ. ನಿಮಗೆ ನಿಜವಾಗಿಯೂ ಹೆಚ್ಚು ಸಮಯವಿಲ್ಲದಿದ್ದರೆ ಕೆಂಪು ಮೌಲಿ ಎಳೆಗಳಿಗೆ ಹೊಳೆಯುವ ಸ್ಟಿಕರ್ ಮಾದರಿಯ ಸಣ್ಣ ಅಲಂಕಾರಗಳನ್ನು ಸೇರಿಸಿ ರಾಖಿ ತಯಾರಿಸಬಹುದು.

ಮುತ್ತಿನ ರಾಖಿ

ಮುತ್ತಿನ ರಾಖಿ

ಹೆಚ್ಚಿನ ಹುಡುಗಿಯರು ಸುಲಭವಾಗಿ ಒಡೆಯುವ ಅಗ್ಗದ ಕೃತಕ ಮುತ್ತುಗಳ ಆಭರಣಗಳನ್ನು ಹೊಂದಿರುತ್ತಾರೆ. ನಿಮ್ಮ ಹಳೆಯ ಆಭರಣಗಳಿಂದ ಮುತ್ತುಗಳನ್ನು ಸಂಗ್ರಹಿಸಿ ಸುಂದರವಾದ ಮುತ್ತಿನ ರಾಖಿಯನ್ನು ತಯಾರಿಸಿ.

ಮರದ ವಿಶಿಷ್ಟ ರಾಖಿ

ಮರದ ವಿಶಿಷ್ಟ ರಾಖಿ

ಕೇಂದ್ರದಲ್ಲಿ ಇಂದು ಅಕ್ಷರವಿರುವ ಈ ಮರದ ತುಂಡುಗಳನ್ನು ಕೀ ಚೈನ್ ಗಳು, ಅಲಂಕಾರಿಕ ವಸ್ತುಗಳು ಅಥವಾ ಹೇಳಿ ಮಾಡಿಸಿ ರಾಖಿಗಾಗಿ ಉಪಯೋಗಿಸಬಹುದು. ನಂತರ ನೀವು ಎಲ್ಲಾ ಅಲಂಕಾರಿಕ ವಿನ್ಯಾಸದ ನಂತರ ಎಳೆಗಳಿಗೆ ಈ ಅಕ್ಷರಗಳನ್ನು ಸೇರಿಸಬಹುದು. ಸಹೋದರನಿಗೆ ರಾಖಿಯನ್ನು ಕಟ್ಟಲು ರಾಖಿಯನ್ನು ಖರೀದಿಸಲೇಬೇಕೆಂದಿಲ್ಲ. ನೀವೇ ಮನೆಯಲ್ಲಿ ತಯಾರಿಸಿದ ರಾಖಿ ಖಂಡಿತವಾಗಿಯೂ ನಿಮ್ಮ ಸಹೋದರನ ಮೆಚ್ಚುಗೆಗೆ ಪಾತ್ರವಾಗುತ್ತದೆ. ಪ್ರಯತ್ನಿಸಿ..... ಪ್ರಶಂಸೆಗಳಿಸಿ!

English summary

Simple Ideas To Make Rakhi For Your Brother

Raksha Bandhan is a festival that celebrates the bond of love between brothers and sisters . If you really want to make your brother feel special, you can use some ideas to make Rakhi yourself. Here are some great ideas to make Rakhi all by yourself.
Story first published: Saturday, August 9, 2014, 11:34 [IST]
X
Desktop Bottom Promotion