For Quick Alerts
ALLOW NOTIFICATIONS  
For Daily Alerts

ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನೆಯಲ್ಲಿ ಐಶ್ವರ್ಯ

By Manohar.V
|

ಅದ್ಭುತ ಸುಂದರಿ ಐಶ್ವರ್ಯ ರೈಯನ್ನು ಸೌಂದರ್ಯದಲ್ಲಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ದುಬೈಯಲ್ಲಿ ನಡೆದ ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನಾ ಸಮಾರಂಭವೇ ಸಾಕ್ಷಿಯಾಯಿತು. ಬಾಲಿವುಡ್ ತಾರೆ ಐಶ್ವರ್ಯ ರೈ ಬಚ್ಚನ್ ಭುವನ ಸುಂದರಿಯಾಗಿ ನೋಡುಗರ ಕಣ್ಮನ ಸೆಳೆದರು. ಅವರು ಧರಿಸಿದ ಅನಾರ್ಕಲಿ ಧಿರಿಸಿನಲ್ಲಿ ಕಂಡುಬಂದ ಸುಂದರ ಗೋಲ್ಡನ್ ಕುಸುರಿ ನೋಡುಗರನ್ನು ಸ್ತಂಭೀಭೂತಗೊಳಿಸಿತು. ಸವ್ಯಸಾಚಿ ಅನಾರ್ಕಲಿ ಉಡುಗೆಯಲ್ಲಿ ರಾತ್ರಿ ಪೂರ್ತಿ ಐಶ್ ಮಿಂಚಿದರು.

ದುಬೈನಲ್ಲಿ ನಡೆದ ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನಾ ಸಮಾರಂಭದಲ್ಲಿ ಐಶ್ ಪ್ರತಿಯೊಬ್ಬರ ನೋಟವನ್ನು ತನ್ನತ್ತ ಸೆಳೆಯುವಂತೆ ಮಾಡಿದರು. ನಮಗೆ ಇಲ್ಲಿ ಕಂಡುಬಂದ ಪ್ರಮುಖ ಅಂಶವೆಂದರೆ ಸುಂದರಿ ಐಶ್ವರ್ಯರವರ ಸ್ಟೈಲ್ ಸೆನ್ಸ್ ಆಗಿದೆ. ತನ್ನ ಸೌಂದರ್ಯವನ್ನು ಇನ್ನಷ್ಟು ಕಾಂತಿಯುಕ್ತಗೊಳಿಸುವ ಕಲೆ ಐಶ್‌ಗೆ ಕರಗತವಾಗಿರುವುದು ಒಂದು ವಿಶೇಷವೇ ಸರಿ..! ಪ್ರತಿಯೊಂದು ಉಡುಗೆಯು ಅವರ ಧರಿಸುವ ಶೈಲಿಯಿಂದ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

Aishwarya Rai At Kalyan Jewellers Inauguration In Dubai

ಮುಕ್ತವಾಗಿ ಇಳಿಬಿಟ್ಟಂತೆ ಕಾಣುವ ಅನಾರ್ಕಲಿ ಗೌನ್ ವಿನ್ಯಾಸಕ ಸವ್ಯಸಾಚಿಯ ಪ್ರತಿಭೆಗೆ ಹಿಡಿದ ಕೈಗನ್ನಡಿ. ಪೂರ್ತಿ ಅನಾರ್ಕಲಿ ಧಿರಿಸು ಚಿನ್ನದ ಎಳೆಯಿಂದ ಮಾಡಲಾಗಿದ್ದು ಭಾರಿ ಎಂಬ್ರಾಯಿಡರಿ ಕೆಲಸ ಧಿರಿಸಿಗೆ ಹೊಸ ರೂಪವನ್ನು ನೀಡಿದೆ. ಉಡುಗೆಯ ಮುಂಭಾಗದಲ್ಲಿ ಫಿಶ್ ಸ್ಕೇಲ್ ವಿನ್ಯಾಸವನ್ನು ಮಾಡಲಾಗಿದ್ದು ಚಮತ್ಕಾರಿ ನೋಟವನ್ನು ಪ್ರದರ್ಶಿಸಿದೆ. ಈ ಗೋಲ್ಡನ್ ಅನಾರ್ಕಲಿಯ ಅಂಚನ್ನು ಸ್ಟೋನ್‌ಗಳಿಂದ ಅಲಂಕೃತಗೊಳಿಸಲಾಗಿದ್ದು ಹೆಚ್ಚಿನ ಗೋಲ್ಡನ್ ಎಂಬ್ರಾಯಿಡರಿ ಉಡುಗೆಯನ್ನು ಭಾರವಾಗಿಸಿದೆ.

ಇಂತಹ ಬೆಲೆಬಾಳುವ ಉಡುಗೆಯೊಂದಿಗೆ ಐಶ್ ಅಗಲವಾದ ಕುಸುರಿ ಕೆಲಸಗಳಿಂದ ಸಂಪೂರ್ಣಗೊಂಡ ಚೋಕರ್ ಸರವನ್ನು ಧರಿಸಿ ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದರು. ಚೋಕರ್ ಸರ ನಿಜವಾಗಿ ಅನಾರ್ಕಲಿ ಧಿರಿಸಿಗೆ ಹೊಂದಿಕೆಯಾಗುವುದಿಲ್ಲ. ಈ ಚಿನ್ನದ ಚೋಕರ್‌ಗಿಂತ ಇನ್ನಷ್ಟು ಉತ್ತಮವಾಗಿರುವುದನ್ನು ಧರಿಸಬಹುದಾಗಿತ್ತೆಂಬುದು ಬೋಲ್ಡ್‌ಸ್ಕೈ ಅಭಿಪ್ರಾಯವಾಗಿದೆ. ನಾವು ನೋಡಲು ನಿರೀಕ್ಷಿಸುವುದೇನಾಗಿತ್ತೆಂದರೆ ಈ ಉಡುಗೆಯೊಂದಿಗೆ ಇನ್ನಷ್ಟು ಸಾಂಪ್ರದಾಯಿಕವಾಗಿ ಹೊಂದಿಕೆಯಾಗುವುದನ್ನು ಧರಿಸಬೇಕೆಂಬುದಾಗಿದೆ.

ಈ ನೋಟದೊಂದಿಗೆ ಸ್ಟನ್ನಿಂಗ್ ಐಶ್ವರ್ಯ ಬೋಲ್ಡ್ ಆಗಿ ಕಂಡುಬರುತ್ತಿದ್ದಾರೆ. ಎಲ್ಲರ ನೋಟ ಆಕೆಯ ಮೇಲಿರುವಂತಹ ಮೇಕಪ್ ಕಡೆ ನೆಟ್ಟಿದ್ದು, ಅವಳ ಮೇಕಪ್‪‌ನ ಕೈಚಳಕ್ಕೆ ಸಾಕ್ಷಿ ಆಯಿತು . ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನಾ ಸಮಾರಂಭದ ರಾತ್ರಿ ಐಶ್ ಅನಾರ್ಕಲಿಯಲ್ಲಿ ಅಪ್ಸರೆಯಂತೆ ಮಿಂಚುತ್ತಿದ್ದರು. ಬೆಡಗಿ ಐಶ್ವರ್ಯ ರೈ ಬಚ್ಚನ್ ಯುಎಇ ಯಲ್ಲಿರುವ ದಾಮಾಸ್ಕಸ್‌ನಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಅನ್ನು ಉದ್ಗಾಟಿಸಿದರು.

ಸವ್ಯಸಾಚಿ ವಿನ್ಯಾಸದ ಗೋಲ್ಡನ್ ಅನಾರ್ಕಲಿ ಉಡುಗೆಯಲ್ಲಿ ಸುಂದರವಾಗಿ ಕಂಡುಬರುತ್ತಿರುವ ಐಶ್ವರ್ಯ ರೈ ಬಚ್ಚನ್ ಬಗ್ಗೆ ನೀವೇನು ಆಲೋಚಿಸುತ್ತಿರುವಿರಿ? ಅವರ ಉಡುಗೆಯನ್ನು ನೀವು ಮೆಚ್ಚಿಕೊಂಡಿರುವಿರಾ?

English summary

Aishwarya Rai At Kalyan Jewellers Inauguration In Dubai

No one can look as stunning as the gorgeous Aishwarya Rai who was recently spotted at the inauguration of Kalyan Jewellers store in Dubai. The Bollywood actress who was spotted in a Sabyasachi anarkalli looked completely drop dead gorgeous.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more