ಮನುಷ್ಯನ ಮರಣಾನಂತರ ನಡೆಯುವ 5 ವಿಚಿತ್ರಗಳು

By: Poornima Hegde
Subscribe to Boldsky

ಮನುಷ್ಯನ ಮರಣದ ನಂತರ ಭೂಮಿ ಮನುಷ್ಯನ ದೇಹಕ್ಕೆ ಬಹಳ ಸಹಾಯಕ ಆಗಿರುವುದಿಲ್ಲ. ಇದಕ್ಕಾಗಿಯೇ ಇಂದಿನ ಯುಗದಲ್ಲಿ ಮಾನವ ಕಂಡುಕೊಂಡ ಹಲವಾರು ಮರಣಾನಂತರ ಮಾಡಬೇಕಾದ ಕ್ರಿಯೆಗಳಿಗೆ ಧನ್ಯವಾದ ಹೇಳೋಣ.

ಈಗಿನ ದೇಹವನ್ನು ಸುಡುವ ಈ ಕ್ರಮಗಳನು ಅಷ್ಟೊಂದು ಸರಿ ಎಂದನ್ನಿಸದೇ ಹೋದರೂ ಹಿಂದಿನ ಮಣ್ಣು ಮಾಡುವ ಕ್ರಿಯೆಗಳೂ ಅಷ್ಟೊಂದು ಸಮರ್ಪಕವಲ್ಲ. ಬಹಳ ಹಿಂದಿನಿಂದಲೇ ಮನುಷ್ಯನಿಗೆ ತಾನು ಹಾಗೂ ಸತ್ತ ದೇಹವನ್ನು ಮಣ್ಣು ಮಾಡುವ ಜಾಗದ ನಡುವೆ ಅಂತರ ಇರಬೇಕೆಂದು ಗೊತ್ತಿತ್ತು.

2003 ರಲ್ಲಿ ಪುರಾತತ್ವ ಇಲಾಖೆ ಸುಮಾರು 3,50,000 ವರ್ಷಗಳ ಹಿಂದೆ ಉತ್ತರ ಸ್ಪೇನ್ ನಲ್ಲಿ ಮಣ್ಣು ಮಾಡಿದ ಶರೀರಗಳನ್ನು ಹೊರತೆಗೆದಿದ್ದಾರೆ. ಹಾಗಾದರೆ ಕೊಳೆಯುವಿಕೆ ಅಥವಾ ವಿಭಜನೆಯಾಗುವಾಗ ಏನಾಗುತ್ತದೆ ? ನಿಮಗೆ ಗೊತ್ತಿರದ ಕೆಲವು ಆಶ್ಚರ್ಯಕರ ಸತ್ಯಗಳು ಇಲ್ಲಿವೆ.

5 weird things that happen after you die

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಾರುಕಟ್ಟೆಯಲ್ಲಿ ಸಿಗುವ ವಿಲಕ್ಷಣ ಬುಡಕಟ್ಟು ಆಹಾರಗಳು

ಜೀವಕೋಶಗಳು ಒಡೆಯುತ್ತವೆ:

ಮನುಷ್ಯನ ಸಾವಿನ ಕೆಲವೇ ಕ್ಷಣಗಳಲ್ಲಿ ಆತನ ದೇಹದ ವಿಭಜನೆಯ ಕಾರ್ಯ ಆರಂಭವಾಗುತ್ತದೆ. ಹೃದಯ ಬಡಿಯುವುದನ್ನು ನಿಲ್ಲಿಸಿದ ಕೂಡಲೆ ನಾವು ಡೆತ್ ಚಿಲ್ ಅಥವಾ ಆಲ್ಗೋರ್ ಮಾರ್ಟಿಸ್ ಅನ್ನು ಅನುಭವಿಸುತ್ತೇವೆ. ನಮ್ಮ ದೇಹದ ಉಷ್ಣತೆ 1.5 ಡಿಗ್ರಿ ಫ್ಯಾರನ್ ಹೀಟ್ ಕಡಿಮೆ ಆದ ಬಳಿಕ ಸುಮಾರು ಬಂದ ಒಂದು ಗಂಟೆಯ ಹೊತ್ತಿಗೆ ಕೊಠಡಿ ಉಷ್ಣತೆಗೆ ಬರುತ್ತದೆ. ಈ ಸಮಯದಲ್ಲಿ ರಕ್ತ ಹೆಚ್ಚು ಆಮ್ಲೀಯವಾಗಿ ಇಂಗಾಲದ ಡೈ ಆಕ್ಸೈಡ್ ಆಗುತ್ತದೆ. ಇದರಿಂದಾಗಿ ಜೀವಕೋಶಗಳು ಒಡೆದು ತೆರೆದುಕೊಳ್ಳುತ್ತವೆ. ಕಿಣ್ವಗಳನ್ನು ಖಾಲಿ ಮಾಡುತ್ತಾ ಒಳಗಿನಿಂದ ನಾಶವಾಗಲು ಆರಂಭವಾಗುತ್ತದೆ.

ಬಿಳಿ ಅಥವಾ ನೇರಳೆ ಬಣ್ಣಕ್ಕೆ ಬದಲಾಗುತ್ತೀರಿ:

ಸತ್ತ ಮರುಕ್ಷಣವೇ ನಮ್ಮ ದೇಹದ ಮೇಲೆ ಗುರುತ್ವ ಬಲದ ಸರ್ವಾಧಿಕಾರ ನಡೆಯುತ್ತದೆ. ದೇಹದ ಇತರ ಭಾಗ ಬಿಳಿ ಬಣ್ಣಕ್ಕೆ ತಿರುಗಿದರೆ ಭೂಮಿಗೆ ಸಮೀಪದ ಭಾಗಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಇದಕ್ಕೆ ಕಾರಣ ನಿಂತು ಹೋದ ರಕ್ತ ಸಂಚಾರ. ಇದರಿಂದಾಗಿ ಕೆಳಭಾಗದಲ್ಲಿ ನೇರಳೆ ಬಣ್ಣದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಇದೇ ಅಂಶಗಳನ್ನು ಗಮನದಲ್ಲಿಟ್ಟು ಯಾವ ಸಮಯದಲ್ಲಿ ಆ ವ್ಯಕ್ತಿಯ ಮೃತ್ಯುವಾಗಿದೆ ಎಂದು ಹೇಳಬಹುದು.

ಕ್ಯಾಲ್ಸಿಯಂ ನಿಮ್ಮ ಸ್ನಾಯುಗಳನ್ನು ಸಣ್ಣದಾಗಿಸುತ್ತದೆ

ರಿಗೋರ್ ಮೋರ್ಟಿಸ್ ಅನ್ನು ನಾವೆಲ್ಲಾ ಕೇಳಿಯೇ ಇದ್ದೇವೆ ಅಲ್ಲಿ ನಮ್ಮ ದೇಹ ಬಹಳ ಗಟ್ಟಿಯಾಗಿ ಬದಲಾಗುತ್ತದೆ. ಇದು ಸತ್ತ ನಂತರ ಮೂರು ಅಥವಾ ನಾಲ್ಕು ಗಂಟೆಗಳ ನಂತರ ನಡೆಯುವ ಕ್ರಿಯೆ. ಹಾಗೂ 12 ಗಂಟೆಗಳಾಗುವಾಗ ಬಹಳ ಹೆಚ್ಚಾಗಿರುತ್ತದೆ ಹಾಗೂ 48 ಗಂಟೆಗಳ ನಂತರ ಕಡಿಮೆಯಾಗುತ್ತದೆ. ಆದರೆ ಇದು ಯಾಕಾಗುತ್ತದೆ? ನಮ್ಮ ಸ್ನಾಯುಗಳ ಒಳಚರ್ಮದಲ್ಲಿ ಪಂಪ್ ಗಳಿದ್ದು ಇದು ಕ್ಯಾಲ್ಸಿಯಂ ಅನ್ನು ನಿಯಂತ್ರಿಸುತ್ತವೆ. ಆದರೆ ಆ ಪಂಪ್ ಗಳು ಕೆಲಸ ಮಾಡುವುದನ್ನು ನಿಲ್ಲಿಸಿದ ಕೂಡಲೆ ಕ್ಯಾಲ್ಸಿಯಂ ಜೀವಕೋಶಗಳನ್ನು ತನ್ನೊಂದಿಗೆ ತೆಗೆದುಕೊಂಡು ಸಾಗುತ್ತದೆ. ಹಾಗಾಗಿ ರಿಗೋರ್ ಮಾರ್ಟಿಸ್ ನಡೆಯುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಿಚಿತ್ರ ಕಾಯಿಲೆ ಇರುವ ಹಾಲಿವುಡ್ ಸೆಲೆಬ್ರಿಟಿಗಳು

ನಿಮ್ಮ ಅಂಗಾಗಗಳು ಜೀರ್ಣವಾಗುತ್ತವೆ:

ಕೊಳೆತ ಆರಂಭವಾದಾಗ ಅಥವಾ ನಮ್ಮ ದೇಹ ಜ಼ೊಂಬೀ ಚನಲಚಿತ್ರಗಳ ಜ಼ೊಂಬಿಗಳ ಹಾಗೆ ಆದಾಗ ರಿಗೋರ್ ಮಾರ್ಟಿಸ್ ನಡೆಯುತ್ತದೆ. ಇದನ್ನು ಶವವನ್ನು ಮಾಡುವ ಕ್ರಮದಲ್ಲಿ ತಡೆಯಲಾಗುತ್ತದೆ. ಆದರೆ ಕೊನೆಯಲ್ಲಿ ದೇಹ ಹೀಗೆಯೇ ಆಗುತ್ತದೆ. ಪ್ಯಾಂಕ್ರಿಯಾಸ್ ನಲ್ಲಿರುವ ಕಿಣ್ವಗಳು ತಮ್ಮನ್ನು ತಾವೇ ಜೀರ್ಣಿಸಿಕೊಳ್ಳುತ್ತವೆ. ಹಾಗೂ ನಮ್ಮ ದೇಹ ಹಸಿರಾಗಲು ಆರಂಭವಾಗುತ್ತದೆ.

ನಿಮ್ಮನ್ನು ಮೇಣದಲ್ಲಿ ಸುತ್ತುವರಿದಿಡಬಹುದು:

ಕೊಳೆತ ಆರಂಭವಾದಾಗ ನಮ್ಮ ದೇಹ ಆದಷ್ಟು ಬೇಗನೆ ಒಂದು ಅಸ್ಥಿಪಂಜರವಾಗಿಬಿಡುತ್ತದೆ. ಆದರೆ ಹಲವಾರು ದೇಹಗಳು ನಡುವಲ್ಲೇ ಒಂದು ಬೇರೆಯೇ ಹಂತ ತಲುಪುತ್ತವೆ. ದೇಹವು ತಂಪಾದ ಮಣ್ಣು ಅಥವಾ ನೀರಿನ ಸಂಪರ್ಕದಲ್ಲಿ ಬಂದರೆ ಆಡಿಪೊಸೆರ್ ಅನ್ನು ಅಭಿವೃದ್ಧಿ ಮಾಡುತ್ತದೆ. ಇದು ಕೊಬ್ಬಿನ ಮೇಣದಂತಿರುವ ಒಂದು ಅಂಶವಾಗಿದೆ. ಬಾಕ್ಟೀರಿಯಾಗಳು ನಮ್ಮ ಚರ್ಮವನ್ನು ವಿಭಜನೆ ಮಾಡುವ ಕಾರಣದಿಂದಾಗಿ ಹೀಗಾಗುತ್ತದೆ. ಇದು ಒಳ ಅಂಗಾಗಗಳಿಗೆ ರಕ್ಷಣೆಯಂತೆ ವರ್ತಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಭಾರತದಲ್ಲಿರುವ ಟಾಪ್ 10 ಹನಿಮೂನ್ ಸ್ಪಾಟ್

ಕೊನೆಯಲ್ಲಿ ನಾವೆಲ್ಲರೂ ಭೂಮಿಯ ಮಡಿಲಿಗೆ ಮತ್ತೆ ಸೇರುತ್ತೇವೆ. ಆದರೆ ಹೇಗೆ ಎಂಬುದಷ್ಟೇ ಪ್ರಶ್ನೆ. ಮಣ್ಣು ಮಾಡಿ ಆಗಲಿ ಅಥವಾ ಬೆಂಕಿಯಲ್ಲಿ ಸುಟ್ಟಾದರೂ ಸರಿ ನಾವೆಲ್ಲರೂ ಕೊನೆಗೆ ಬೂದಿ ಮತ್ತು ಧೂಳಾಗಿಯೇ ಪರಿವರ್ತನೆ ಆಗುತ್ತೇವೆ ಹಾಗೂ ಕೆಲವು ಸಂದರ್ಭಗಳಲ್ಲಿ ಮೇಣವಾಗಿ, ಅಷ್ಟೇ.

English summary

5 weird things that happen after you die

Nature isn't kind to the human body after death. Thankfully, the days of natural decomposition have been replaced by decidedly modern rituals of death. While our modern disposal rituals might not sound appealing,
Story first published: Sunday, March 2, 2014, 14:03 [IST]
Subscribe Newsletter