For Quick Alerts
ALLOW NOTIFICATIONS  
For Daily Alerts

ಮಹಿಳೆಯರ ದೇಹದ ಬಗ್ಗೆ ಇರುವ 5 ನಂಬಿಕೆಗಳು

By Arpitha Rao
|

ಐತಿಹಾಸಿಕವಾಗಿ ಸಾಮಾನ್ಯವಾಗಿ ಎಲ್ಲಾ ಸಂಶೋಧನೆಗಳು ಪುರುಷರ ಮೇಲೆ ನಡೆದಿವೆ.ಕ್ಯಾನ್ಸರ್ ಅಥವಾ ಇನ್ನಿತರ ಕಾಯಿಲೆಗಳು ಸ್ತ್ರೀ ಮತ್ತು ಪುರುಷರು ಇಬ್ಬರ ಮೇಲು ಆವರಿಸಬಹುದು.ಸರಿಯಾದ ಚಿಕಿತ್ಸೆಯನ್ನು ಸೂಕ್ತ ಸಮಯಕ್ಕೆ ನೀಡಲು ಪುರುಷರು ಮತ್ತು ಮಹಿಳೆಯರು ಇವರ ಮೇಲೆ ಸಂಶೋಧನೆ ನಡೆಸುವ ಅಗತ್ಯವಿದೆ ಎನ್ನಲಾಗುತ್ತದೆ.

ಕೇವಲ ಲೈಂಗಿಕತೆಗೆ ಸಂಬಂಧಪಟ್ಟಂತೆ ಮಾತ್ರವಲ್ಲ ಇತರ ಆರೋಗ್ಯದಲ್ಲಿ ಅಂದರೆ ಹಾರ್ಮೋನುಗಳ ಸಮಸ್ಯೆ ಬಗ್ಗೆ ಕೂಡ ಮಹಿಳೆಯರಿಗೆ ಇರುವ ತೊಂದರೆಯನ್ನು ಗುರುತಿಸುವುದು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಅತಿ ಅವಶ್ಯಕ.ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಇದರ ಬಗ್ಗೆ ಎಚ್ಚೆತ್ತುಕೊಂಡು ಇದರ ಬಗ್ಗೆ ಗಮನ ಹರಿಸುತ್ತಿರುವುದು ಕಂಡು ಬರುತ್ತಿದೆ.ಆದಾಗ್ಯೂ ಕೂಡ ಮಹಿಳೆಯರ ದೇಹದ ಬಗ್ಗೆ ತಪ್ಪು ನಂಬಿಕೆಗಳು ಕಂಡು ಬರುತ್ತಿವೆ.

ಕೆಲವು ತಪ್ಪು ನಂಬಿಕೆಗಳು ಒಬ್ಬರಿಂದೊಬ್ಬರು ಹೇಳಿ ಅಥವಾ ಬೇರೆಯವರಿಂದ ಕೇಳಿ ನಿಜ ಎಂದೆನಿಸಿಬಿಡಬಹುದು.ಆದರೆ ಸಾಕಷ್ಟು ಸಂಶೋಧನೆಗಳು ಮತ್ತು ಅಧ್ಯಯನಗಳನ್ನು ನಡೆಸಿದ ನಂತರ ಅವುಗಳ ಸತ್ಯಾಸತ್ಯತೆಗಳು ಬೆಳಕಿಗೆ ಬರುತ್ತವೆ.ಇಂತಹ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಕಂಡು ಕೊಂಡ ಸತ್ಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಓದಿ ತಿಳಿದುಕೊಳ್ಳಿ.ನಿಮ್ಮ ಅನುಮಾನ ಬಗೆಹರಿಸಿಕೊಳ್ಳಿ.

5 Myths About Women's Bodies

1. ಮಹಿಳೆ ಕನ್ಯಾತನವನ್ನು ಉಳಿಸಿಕೊಂಡಿದ್ದರೆ ವೈದ್ಯರು ಅದನ್ನು ಗುರುತಿಸಬಹುದು:

ಎಷ್ಟು ಪ್ರಯತ್ನಿಸಿದರೂ ಕೂಡ ವೈದ್ಯರು ಒಬ್ಬ ಮಹಿಳೆ ತನ್ನ ಕನ್ಯತ್ವವನ್ನು ಕಳೆದುಕೊಂಡಿದ್ದಾಳೆ ಅಥವಾ ಉಳಿಸಿಕೊಂದಿದ್ದಾಳೆ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಿಲ್ಲ ಏಕೆಂದರೆ ಇದು ಕೇವಲ ರಂದ್ರವನ್ನು ನೋಡಿ ಕಂಡು ಹಿಡಿಯುವಷ್ಟು ಸರಳವಾದುದಲ್ಲ.

ಕೆಲವು ಜನರು ಒಮ್ಮೆ ತೆರೆದ ಯೋನಿ ನಂತರ (ಕನ್ಯತ್ವ ಕಳೆದುಕೊಂಡ ನಂತರ)ಮತ್ತೆ ಮುಚ್ಚಿಕೊಳ್ಳುತ್ತದೆ ಎಂದು ತಿಳಿಯುತ್ತಾರೆ ಆದರೆ ಅದು ಸತ್ಯವಲ್ಲ ಎಂದು 'ಡೋಂಟ್ ಶೋ ಮಿ ಯುವರ್ ಗಮ್' ನ ಸಹ ಲೇಖಕ ಮತ್ತು ಇಂಡಿಯಾನಾ ವಿಶ್ವವಿದ್ಯಾಲಯದ ಡಾ,ರಾಚೆಲ್ ವೀರ್ಮನ್ ಹೇಳುತ್ತಾರೆ. ಅಪರೂಪದ ಸಂದರ್ಭದಲ್ಲಿ ಒಂದುವೇಳೆ ಮುಚ್ಚಿಕೊಂಡರೆ ಮಹಿಳೆಯು ಮುಟ್ಟಿನ ತೊಂದರೆ ಜೊತೆಗೆ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ಅನುಭವಿಸುತ್ತಾಳೆ ಎನ್ನಲಾಗಿದೆ.

2. ಆಂಟಿಬಯೋಟಿಕ್ ತೆಗೆದುಕೊಂಡರೆ ಜನನ ನಿಯಂತ್ರಣ ಮಾತ್ರೆಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂದು ನಂಬಲಾಗುವುದಿಲ್ಲ:

ಹೆಚ್ಚಿನ ವೈದ್ಯರು ಇದನ್ನು ನಂಬುತ್ತಾರೆ ಎಂದು ಕಾರೆಲ್ ಹೇಳುತ್ತಾರೆ. ಜನನ ನಿಯಂತ್ರಣ ಮಾತ್ರೆ ಎಲ್ಲೋ ಒಂದು ಬಾರಿ ತನ್ನ ಕೆಲಸ ಮಾಡದಿರಬಹುದು.ಆಂಟಿ ಬಯೋಟಿಕ್ ತೆಗೆದುಕೊಳ್ಳುವುದರಿಂದ ಇದರ ಸಂಖ್ಯೆಯಲ್ಲಿ ಬದಲಾವಣೆ ಕಂಡು ಬಂದಿಲ್ಲ ಎಂದು ಕ್ಯಾರೋಲ್ ಹೇಳುತ್ತಾರೆ.

ಕ್ಷಯ ರೋಗಿಗಳಿಗೆ ನೀಡುವ ರಿಪಾಮ್ಫಿನ್ ಇದಕ್ಕೆ ಹೊರತಾಗಿರುವ ಸಾಧ್ಯತೆ ಇದೆ. ರಿಪಾಮ್ಫಿನ್ ತೆಗೆದುಕೊಳ್ಳುವವರು ಜನನ ನಿಯಂತ್ರಣ ಮಾತ್ರೆ ಬಳಸಿದಾಗ ಸ್ವಲ್ಪ ಮಟ್ಟಿಗೆ ಗರ್ಭ ಧರಿಸುವುದನ್ನು ತಡೆಯುವ ಪ್ರಮಾಣ ಕಡಿಮೆ ಎನ್ನಲಾಗಿದೆ. ಆದರೆ ಇದು ಹೆಚ್ಚಿನ ಮಟ್ಟಿಗೆ ಸರಿ ಎನ್ನಲಾಗುವುದಿಲ್ಲ.ಕ್ಯಾರೊಲ್ ಹೇಳುವ ಪ್ರಕಾರ ರಿಫಾಮ್ಫಿನ್ ಕೇವಲ ವದಂತಿಗಳನ್ನು ಹಬ್ಬಿಸಿತು ಎಂದು ಅಭಿಪ್ರಾಯಪಡುತ್ತಾರೆ.

3. ಮಹಿಳೆ ಮತ್ತು ಪುರುಷರು ಇಬ್ಬರಿಗೂ ಸಮ ಪ್ರಮಾಣದ ನಿದ್ರೆ ಸಾಕು:

2008 ರಲ್ಲಿ 201 ಜನರನ್ನು ಅಧ್ಯಾಯನ ನಡೆಸಿದ ಡ್ಯೂಕ್ ವಿಶ್ವವಿದ್ಯಾಲಯದ ಎಡ್ವರ್ಡ್ ಸೌರೆಜ್ ಹೇಳುವ ಪ್ರಕಾರ ಮಹಿಳೆಯರು ಹೆಚ್ಚು ಒತ್ತಡವನ್ನು ಅನುಭವಿಸುವುದು ಉರಿಯೂತ ಮತ್ತು ಇನ್ಸುಲಿನ್ ಮಟ್ಟದಲ್ಲಿ ಕೂಡ ಇದು ವ್ಯತ್ಯಾಸ ನೀಡುತ್ತದೆ.

2007 ರಲ್ಲಿ ವಾರ್ವಿಕ್ ವಿಶ್ವವಿದ್ಯಾಲಯ 6000 ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ದಿನದಲ್ಲಿ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ಮಲಗಿದ ಮಹಿಳೆಯರು 7 ಗಂಟೆ ನಿದ್ರೆ ಮಾಡಿದ ಮಹಿಳೆಯರಿಗಿಂತ ಹೆಚ್ಚು ಒತ್ತಡವನ್ನು ಹೊಂದಿರುತ್ತಾರೆ ಎಂದು ತಿಳಿದು ಬಂದಿದೆ.ಆದರೆ ಪುರುಷರಲ್ಲಿ ಈ ರೀತಿಯ ವ್ಯತ್ಸಾಸ ಕಂಡು ಬಂದಿಲ್ಲ ಎನ್ನಲಾಗಿದೆ.

4. ಮೆನೋಪಾಸ್ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡಿಬಿಡುತ್ತದೆ:

1994 ರಲ್ಲಿ ಎಡ್ವರ್ಡ್ ಲಾಮನ್ ಮತ್ತು ಸಹೋದ್ಯೋಗಿಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಲೈಂಗಿಕ ಆಸಕ್ತಿ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ಹೆಚ್ಚಿನ ಮಹಿಳೆಯರು ತಮ್ಮ 50 ನೆ ವರ್ಷದ ನಂತರವೂ ಕೂಡ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಆ ಸಂದರ್ಭದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಂದ ಸ್ವಲ್ಪ ದಿನಗಳವರೆಗೆ ಮಹಿಳೆಯರು ಲೈಂಗಿಕತೆಯಿಂದ ಸ್ವಲ್ಪ ದೂರ ಉಳಿಯಬಹುದು ಆದರೆ ಲೈಂಗಿಕ ಬಯಕೆ ಮತ್ತು ಆಸಕ್ತಿಯ ಬಗ್ಗೆ ಇದು ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ವೀರ್ಮನ್ ಹೇಳುತ್ತಾರೆ.ಆದ್ದರಿಂದ ನೀವು ಮೆನೋಪಾಸ್ ಎದುರಿಸುತ್ತಿದ್ದೀರಾದರೆ ಲೈಂಗಿಕತೆಗೆ ನೋ ಹೇಳಬೇಕಾಗಿಲ್ಲ.

5. ಮಹಿಳೆ ತನ್ನ ಮುಟ್ಟಿನ ಸಮಯದಲ್ಲಿ ಗರ್ಭಿಣಿ ಆಗುವ ಸಂಭವ ಇಲ್ಲ :

ಹೆಣ್ಣು ತನ್ನ ಮುಟ್ಟಿನ ಸಮಯದಲ್ಲಿ ಗರ್ಭಿಣಿ ಆಗುವುದು ಅಸಾಧ್ಯ ಎಂಬುದು ತಪ್ಪು ಗರ್ಭದಾರಣೆ ವಿಷಯ ಬಂದಾಗ ಯಾವುದೂ ಅಸಂಭವವಲ್ಲ ಎಂದು ಡೋಂಟ್ ಶೋ ಮಿ ಯುವರ್ ಗಮ್' ನ ಸಹ ಲೇಖಕ ಮತ್ತು ಇಂಡಿಯಾನಾ ವಿಶ್ವವಿದ್ಯಾಲಯದ ಆರೋನ್ ಕ್ಯಾರೊಲ್ ಸಂಶೋಧನೆ ಮೂಲಕ (2009) ಹೇಳುತ್ತಾರೆ.

ಮಹಿಳೆಯ ಒಳಗೆ ವೀರ್ಯವು ಒಂದು ವಾರದವರೆಗೆ ಇರಬಲ್ಲದು. ಮಹಿಳೆಯು ತನ್ನ ಋತು ಚಕ್ರದ ಸಮಯದಲ್ಲಿ ಅಥವಾ ಅದು ಮುಗಿದ ತಕ್ಷಣ ದೇಹದಲ್ಲಿ ಅಡೋತ್ಪತ್ತಿ ಉತ್ಪತ್ತಿ ಮಾಡುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಜನನ ನಿಯಂತ್ರಣಗಳು ಸರಿಯಾಗಿ ಕೆಲಸ ಮಾಡುವುದಿಲ್ಲ, ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಸಂಗಾತಿಗಳು ಪೋಷಕರಾದ ಉದಾಹರಣೆಗಳು ಕೂಡ ಇವೆ ಎಂದು ಕ್ಯಾರೆಲ್ ಅಭಿಪ್ರಾಯಪಡುತ್ತಾರೆ.

English summary

5 Myths About Women's Bodies

Historically research has focused on men. As one example, women are under-represented in major clinical trials for cancers that affect both sexes, a new study found.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more