For Quick Alerts
ALLOW NOTIFICATIONS  
For Daily Alerts

ನೀವು ಕುಳಿತುಕೊಳ್ಳುವ ಭಂಗಿಯೂ ನಿಮ್ಮ ವ್ಯಕ್ತಿತ್ವ ಹೇಗೆ ಅನ್ನೋದನ್ನು ಹೇಳುತ್ತೆ ಗೊತ್ತಾ..!

|

ಪ್ರಪಂಚದಲ್ಲಿ ಎಲ್ಲರೂ ಒಂದೇ ರೀತಿ ಇರೋದಿಲ್ಲ, ಎಲ್ಲರ ಯೋಚನೆಗಳೂ ವಿಭಿನ್ನ. ನಮ್ಮ ಮುಂದೆ ಕುಳಿತುಕೊಳ್ಳುವ ವ್ಯಕ್ತಿ ಮನಸ್ಸನ್ನು ತಿಳಿದುಕೊಳ್ಳುವುದು ಕಷ್ಟ, ಅವರ ಸ್ವಭಾವ ಹೇಗಿರುತ್ತೋ ಎನ್ನುವುದನ್ನು ನೋಡಿ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟಾನೇ. ಆದರೆ ನಾವು ಕುಳಿತುಕೊಳ್ಳುವ ಸ್ಟೈಲ್‌ನಿಂದ ನಮ್ಮ ವ್ಯಕ್ತಿತ್ವ ಹೇಗೆ ಎನ್ನುವುದನ್ನು ತಿಳಿದುಕೊಳ್ಳಬಹುದಂತೆ.ಅಧ್ಯಯನದ ಪ್ರಕಾರ ಕುಳಿತುಕೊಳ್ಳುವ ಭಂಗಿ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದಂತೆ. ಅದು ಹೇಗೆ ಎನ್ನುವ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಮಿಸ್‌ ಮಾಡ್ದೇ ಓದಿ.

123
ನೇರವಾಗಿ ಕುಳಿತುಕೊಳ್ಳುವ ಶೈಲಿ

ನೇರವಾಗಿ ಕುಳಿತುಕೊಳ್ಳುವ ಶೈಲಿ

ಮೊಣಕಾಲುಗಳನ್ನು ನೇರವಾಗಿಟ್ಟುಕೊಳ್ಳುವವರು ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯದ ಬಗ್ಗೆ ನಂಬಿಕೆಯಿಡುತ್ತಾರೆ. ಇವರು ಆರೋಗ್ಯಕರ ಮತ್ತು ಸಕಾರಾತ್ಮಕ ದೃಷ್ಟಿಕೋನವುಳ್ಳವರು. ಹಾಗಾಗಿ ಇವರಿಗೆ ಅಭದ್ರತೆಯ ಭಾವನೆ ಕಡಿಮೆ ಇರುತ್ತದೆ. ಮೊಣಕಾಲುಗಳನ್ನು ನೇರವಾಗಿಟ್ಟು ಕುಳಿತುಕೊಳ್ಳುವುದು ಆತ್ಮವಿಶ್ವಾಸದ ಸೂಚಕ. ಹೀಗೆ ಕುಳಿತುಕೊಳ್ಳುವವರು ಬುದ್ಧಿವಂತರು, ತರ್ಕಬದ್ಧ ಚಿಂತಕರು ಹಾಗೂ ಸಮಯಪ್ರಜ್ಞೆಯನ್ನು ಹೊಂದಿರುತ್ತಾರೆ. ಹಾಗಾಗಿ ಇವರು ಯಾವುದೇ ಕೆಲಸಕ್ಕಾಗಲಿ, ಉದ್ಯೋಗ ಸಂದರ್ಶನಕ್ಕಾಗಿ ತಡವಾಗಿ ಹೋಗುವ ಪ್ರಶ್ನೆಯೇ ಇಲ್ಲ.

ಇವರು ಕೆಲಸದಲ್ಲಿ ಸ್ಮಾರ್ಟ್‌. ಜೊತೆಗೆ ಅವರು ಕೆಲಸ ಮಾಡುವ ಸ್ಥಳವಾಗಲಿ, ಮನೆಯಾಗಲಿ ಎಲ್ಲಾ ಕಡೆಯೂ ಅಚ್ಚುಕಟ್ಟಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ. ಸ್ವಭಾವದಲ್ಲಿ ಇವರು ಪ್ರಾಮಾಣಿಕರು. ಗಾಸಿಪ್‌ ಮಾಡುವುದಾಗಲಿ, ಇನ್ನೊಬ್ಬರ ಹಿಂದಿನಿಂದ ಮಾತನಾಡುವ ಗೋಜಿಗೆ ಹೋಗಲಾರರು. ಇವರು ತಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುತ್ತಾರೆ, ತಮ್ಮ ಮನಸ್ಸಿನೊಳಗೆಯೇ ಸಂಘರ್ಷವನ್ನು ಎದುರಿಸುತ್ತಾರೆ.

ಕೆಲವರು ಸಣ್ಣ ಪುಟ್ಟ ವಿಷಯಗಳನ್ನು ಅತಿರೇಕಕ್ಕೆ ಕೊಂಡೊಯ್ಯುತ್ತಾರೆ ಆದರೆ ಇವರು ಹಾಗಲ್ಲ. ಪ್ರತಿಕೂಲ ಸಂಧರ್ಬದಲ್ಲಿಯೂ ಕೂಲ್‌ ಆಗಿ ಇರುತ್ತಾರೆ. ಹಾಗಾಗಿ ಇವರು ತಾಳ್ಮೆಕಳೆದುಕೊಳ್ಳುವುದು ಕಡಿಮೆ. ಅವರ ಶಾಂತ ಮನಸ್ಸು ದಿನದಲ್ಲಿ ಆಗುವಂತಹ ಘಟನೆಗಳನ್ನು, ಬದಲಾವಣೆಗಳನ್ನು ಮರುನೆನಪಿಸಲು ಸಹಾಯ ಮಾಡುತ್ತದೆ.

2. ಮೊಣಕಾಲುಗಳನ್ನು ಅಗಲವಿರಿಸಿ ಕುಳಿತುಕೊಳ್ಳುವವರು

2. ಮೊಣಕಾಲುಗಳನ್ನು ಅಗಲವಿರಿಸಿ ಕುಳಿತುಕೊಳ್ಳುವವರು

ಕುಳಿತುಕೊಳ್ಳುವಾಗ ಮೊಣಕಾಲುಗಳನ್ನು ಅಗಲಿಸಿ ಕುಳಿತುಕೊಳ್ಳೋರು ಸ್ವಾರ್ಥಿಗಳು. ತಮ್ಮ ಬಗ್ಗೆಯೇ ಹೆಚ್ಚು ಯೋಚಿಸುವವರು. ಸ್ವಭಾವದಲ್ಲಿ ಅಹಂಕಾರಿಗಳು, ಬೇರೆಯವರ ಬಗ್ಗೆ ಟೀಕೆ ಮಾಡುವುದು ಹೆಚ್ಚು. ಜೊತೆಗೆ ಅಧ್ಯಯನದ ಪ್ರಕಾರ ತಿಳಿದುಬಂದಿರುವಂತೆ ಈ ರೀತಿ ಕುಳಿತುಕೊಳ್ಳುವವರು ಆತಂಕಕ್ಕೆ ಒಳಗಾಗುವವರು ಹಾಗೂ ಚಿಂತೆಯಲ್ಲಿರುವವರಂತೆ. ಏನಾದರೂ ಸಾಧಿಸಬೇಕೆಂಬ ಗುರಿಯನ್ನು ಹೊಂದಿರುತ್ತಾರೆ ಆದರೆ, ಎಲ್ಲಿ ತಪ್ಪಾಗಿ ಬಿಡುತ್ತದೋ ಎನ್ನುವ ಭಯ, ಚಿಂತೆಯಲ್ಲೇ ಇರುತ್ತಾರೆ.

ಮೊಣಕಾಲುಗಳನ್ನು ಅಗಲಿಸಿ ಕುಳಿತುಕೊಳ್ಳುವವರದ್ದು ಅಸ್ತವ್ಯಸ್ತವಾಗಿರುವ ಮನಸ್ಸು ಹಾಗೂ ಅವರ ದಿನಚರಿಯೇ ತಲೆಕೆಳಗಾಗುತ್ತದೆ ಎಂದು ಸಂಶೋಧನೆಗಳೂ ತೋರಿಸಿವೆ. ಇವರಿಗೆ ಏಕಾಗ್ರತೆ ಕಡಿಮೆ.ಒಂದು ಕೆಲಸವನ್ನು ಮಾಡುತ್ತಿರುವಾ ಇನ್ನೊಂದು ಹೊಸ ವಿಷಯ ಕಂಡಲ್ಲಿ ಅದರತ್ತ ಆಕರ್ಷಿತರಾಗಿ, ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ ಇವರು. ಹಾಗಾಗಿ ಅರ್ಧಂಬರ್ದ ಕೆಲಸ ಇವರದ್ದು. ಯಾವುದೇ ಕೆಲಸವನ್ನು ಪೂರ್ಣವಾಗಿ ಮುಗಿಸಲು ಇವರಿಂದ ಕಷ್ಟಸಾಧ್ಯ.

ಈ ರೀತಿಯ ಜನರಲ್ಲಿ ತಾವು ಬುದ್ಧಿವಂತರು ಎನ್ನುವ ಮನೋಭಾವವಿರುತ್ತೆ ಆದರೆ ಸಾಮಾನ್ಯವಾಗಿ ಇವರ ಆಲೋಚನೆಗಳು ಅಸಂಬದ್ಧವಾಗಿರುತ್ತದೆ. ಮಾತುಗಳ ಪರಿಣಾಮವನ್ನು ಯೋಚಿಸದೇ ಮಾತನಾಡುತ್ತಾರೆ. ,ಅಥವಾ ತಾವು ಮಾತನಾಡುತ್ತಿರುವ ಟಾಪಿಕ್‌ ಮಧ್ಯದಲ್ಲೇ ಮರೆತು, ಬೇರೇನೋ ಮಾತಾಡಬಹುದು. ಇವರು ಬಹಳ ಬೇಗನೇ ಬೇಜಾರು ಪಟ್ಟುಕೊಳ್ಳುತ್ತಾರೆ, ಇದರಿಂದಾಗಿ ಇವರಲ್ಲಿ ಬೇಗನೆ ನಿರಾಸಕ್ತಿ ಕಾಣಿಸುತ್ತೆ. ಇಂತವರ ಮಧ್ಯೆ ಅವರನ್ನು ಹುರಿದುಂಬಿಸುವವರು ಬೇಕೇ ಬೇಕು. ಅದು ಕೆಲಸದಲ್ಲೇ ಆಗಲಿ ಮನೆಯಲ್ಲೇ ಆಗಲಿ, ಅವರಿಗೆ ಸರಿಯಾದ ರೀತಿಯಲ್ಲಿ ದಾರಿ ತೋರುವವರ ಅಗತ್ಯವಿರುತ್ತದೆ. ಪುರುಷರು ಸಾಮಾನ್ಯವಾಗಿ ಮೊಣಕಾಲುಗಳನ್ನು ಅಗಲಿಸಿಯೇ ಕುಳಿತುಕೊಳ್ಳುತ್ತಾರೆ. ಇದನ್ನು ಮ್ಯಾನ್‌ಸ್ಪ್ರೆಡಿಂಗ್‌ ಎಂದೂ ಕರೆಯುತ್ತಾರೆ.

3. ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳುವವರು

3. ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳುವವರು

ಸಂಶೋಧನೆಯ ಪ್ರಕಾರ ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳುವವರು ಸೃಜನಶೀರಂತೆ. ಇವರು ಹೆಚ್ಚು ಕಾಲ್ಪನಿಕವಾಗಿ ಯೋಚಿಸುವ ಕನಸುಗಾರರು. ಜನರ ಗುಂಪಿನಲ್ಲಿಯೂ ತಮ್ಮಷ್ಟಕ್ಕೆ ಯೋಚನೆ ಮಾಡುತ್ತಾ ಕಳೆದುಹೋಗುವವರು ಇವರು. ನೆಗೆಟಿವ್‌ ಆಗಿ ನೋಡುವುದಾದರೆ ಹೀಗೆ ಕುಳಿತುಕೊಳ್ಳುವವರು ತಮ್ಮ ಬಗ್ಗೆ ರಕ್ಷಣಾತ್ಮಕವಾಗಿರುತ್ತಾರಂತೆ. ಅವರ ಬಗ್ಗೆ ತೆರೆದುಕೊಳ್ಳುವುದಿಲ್ಲ. ಜೀವನದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ, ತಮ್ಮ ಮನಸ್ಸೊಳಗಿನ ಭಯವನ್ನು ಹೊರಗೆ ತೋರಿಸಲು ಇಷ್ಟಪಡುವುದಿಲ್ಲ.

ಕಾಲಮೇಲೆ ಕಾಲು ಹಾಕಿಕೊಳ್ಳುವುದು ಕೆಲವೊಮ್ಮೆ ಕಂಫರ್ಟ್ ಕೂಡ ಅಗಿರಬಹುದು. ಕೆಲವೊಮ್ಮೆ ಭಯವನ್ನು ಗುರುತಿಸಬಹುದಾದರೂ, ಆರಾಮವಾಗಿ ವ್ಯಕ್ತಿಯು ಈ ರೀತಿ ಕುಳಿತಿದ್ದರೆ ಅವರು ಆತ್ಮವಿಶ್ವಾಸದಿಂದಿದ್ದಾರೆ, ನಿಮ್ಮೊಂದಿಗಿನ ಸಂಭಾಷಣೆಯನ್ನು ಇಷ್ಟಪಡುತ್ತಿದ್ದಾರೆ ಎಂದರ್ಥವಂತೆ. ಈ ಸ್ಥಿತಿಯಲ್ಲಿ ಕಾಲುಗಳನ್ನು ಬಿಗಿಯಾಗಿಟ್ಟು ಕುಳಿತುಕೊಂಡಿದ್ದರೆ, ಚಡಪಡಿಸುತ್ತಿದ್ದರೆ ಏನೋ ಸಮಸ್ಯೆಯಾಗಿರಬಹುದು, ಆ ಕ್ಷಣದಲ್ಲಿ ಮನಸ್ಸು ಸಂಪೂರ್ಣ ಬೇರೆ ಕಡೆಗೆ ಇರುತ್ತದಂತೆ.

ಮಾತನಾಡುವ ಸಮಯದಲ್ಲಿ ವ್ಯಕ್ತಿಯ ಕಾಲುಗಳು ಬಾಗಿಲಿನ ಕಡೆಗೆ ಇದ್ದರೆ ಅಥವಾ ನೀವು ಮಾತನಾಡುವ ವ್ಯಕ್ತಿಯಿಂದ ದೂರ ಕುಳಿತುಕೊಂಡಿದ್ದರೆ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಸಂಭಾಷಣೆಯಲ್ಲಿ ನಿರಾಸಕ್ತಿಯನ್ನು ತೋರಿಸುತ್ತದೆ.ಕೆಲವೊಮ್ಮೆ ಬ್ಯುಸಿನೆಸ್‌ ಮೀಟಿಂಗ್‌ಗಳಲ್ಲಿ ನಿಮ್ಮ ಎದುರಿಗಿರುವ ವ್ಯಕ್ತಿಯು ಕಾಲ ಮೇಲೆ ಕಾಲು ಹಾಕಿಕುಳಿತುಕೊಂಡಿದ್ದರೆ ನಿಮ್ಮ ಆಲೋಚನೆಗಳನ್ನು ತಿರಸ್ಕರಿಸುವ, ನಿಮ್ಮ ಮಾತುಗಳಿಗೆ ಗಮನ ಕೊಡದಿರುವ ಸಾಧ್ಯತೆ ಹೆಚ್ಚು.

ಪಾದಗಳನ್ನು ಒಂದರ ಮೇಲೊಂದು ಹಾಕಿ ಕುಳಿತುಕೊಳ್ಳುವುದು

ಪಾದಗಳನ್ನು ಒಂದರ ಮೇಲೊಂದು ಹಾಕಿ ಕುಳಿತುಕೊಳ್ಳುವುದು

ಪಾದಗಳನ್ನು ಒಂದರ ಮೇಲೋಂದು ಹಾಕಿ ಕುಳಿತಿದ್ದರೆ ಆ ವ್ಯಕ್ತಿಯು ರಾಜ ಭೋಗವನ್ನು ಹೊಂದಿದ್ದಾನೆಂದು ಹೇಳಬಹುದು. ಜೊತೆಗೆ ಇವರು ಭೂಮಿತೂಕದ ವ್ಯಕ್ತಿ. ಈ ರೀತಿ ಕುಳಿತುಕೊಳ್ಳುವುದು ಆತ್ಮವಿಶ್ವಾಸ ಹಾಗೂ ಆರಾಮದಾಯಕತೆಯನ್ನು ಸೂಚಿಸುತ್ತದೆ. ಇಂಥವರಲ್ಲಿ ಭಯವನ್ನು ಕಾಣುವುದು ಅಪರೂಪ. ವಾಸ್ತವವಾಗಿ ಇವರು ಸುತ್ತಮುತ್ತಲಿರುವವರಲ್ಲೂ ಆತ್ಮವಿಶ್ವಾಸವನ್ನು ತುಂಬುತ್ತಾರೆ.

ಈ ರೀತಿಯಾಗಿ ಕುಳಿತುಕೊಳ್ಳುವವರು ತಮ್ಮ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮವನ್ನು ಪಡುತ್ತಾರೆ, ವಿಶ್ರಾಂತಿಯನ್ನೂ ಪಡೆಯುವುದಿಲ್ಲ. ಇವರ ಮಹತ್ವಾಕಾಂಕ್ಷೆಗಳು ಮುಗಿಯುವುದೇ ಇಲ್ಲ. ತಮ್ಮ ಶ್ರಮಕ್ಕೆ ಪ್ರತಿಫಲ ಸಿಗುವುದೆಂದ ದೃಢವಾದ ನಂಬಿಕೆ ಇವರಲ್ಲಿರುತ್ತದೆ. ಇಷ್ಟೇ ಅಲ್ಲ ಇವರು ಉತ್ತಮ ಕೇಳುಗರೂ ಹೌದು. ಪ್ರತಿಯೊಬ್ಬರ ಮಾತನ್ನೂ ಆಲಿಸುತ್ತಾರೆ. ಆದರೆ ತಮ್ಮ ಮನಸ್ಸಿನ ರಹಸ್ಯವನ್ನು ಮಾತ್ರ ಯಾರೊಂದಿಗೂ ಹಂಚಿಕೊಳ್ಳಲಾರರು.ಮನಃಶಾಸ್ತ್ರಜ್ಞರು ಈ ರೀತಿಯಾಗಿ ಕೆಲವೊಮ್ಮೆ ಕುಳಿತುಕೊಳ್ಳುವುದನ್ನು ಅಭದ್ರತೆಯ ಸೂಚನೆಯೆಂದೂ ಹೇಳುತ್ತಾರೆ.

ಒಂದು ಕಾಲು ಇನ್ನೊಂದು ಮೊಣಕಾಲಿನ ಮೇಲಿಡುವುದು

ಒಂದು ಕಾಲು ಇನ್ನೊಂದು ಮೊಣಕಾಲಿನ ಮೇಲಿಡುವುದು

ಒಂದುಕಾಲನ್ನು ಇನ್ನೊಂದು ಕಾಲಿನ ಮೊಣಕಾಲಿನ ಮೇಲೆ ಇಟ್ಟು ಕುಳಿತುಕೊಳ್ಳುವುದು ನೋಡಲು ಇಂಗ್ಲೀಷ್‌ ಅಂಕೆಯ '4'ರಂತಿರುತ್ತದೆ. ಹಾಗಾಗಿ ಇದನ್ನು ಫೋರ್‌ ಲೆಗ್ಸ್‌ ಅಂತಾನೂ ಕರೆಯುತ್ತಾರೆ. ಈ ರೀತಿಯಾಗಿ ಕುಳಿತುಕೊಳ್ಳುವುದು ಆತ್ಮವಿಶ್ವಾಸ ಮತ್ತು ಪ್ರಾಬಲ್ಯವನ್ನು ಸೂಚಿಸುತ್ತದೆ. ಇತರ ಕುಳಿತುಕೊಳ್ಳುವ ವಿಧಾನಗಳಿಗೆ ಹೋಲಿಸಿದರೆ ಈ ರೀತಿಯಾಗಿ ಕುಳಿತುಕೊಳ್ಳುವುದು ಶಾಂತಚಿತ್ತ, ಆತ್ಮವಿಶ್ವಾಸ, ತಾರುಣ್ಯವನ್ನು ಸೂಚಿಸುತ್ತೆ. ಈ ರೀತಿಯಾಗಿ ಕುಳಿತುಕೊಳ್ಳುವವರು ಸುರಕ್ಷಿತ ಭಾವನೆ ಮತ್ತು ತೃಪ್ತಿಯನ್ನು ಹೊಂದಿರುತ್ತಾರೆ. ಇಂಥವರು ಜೀವನದಲ್ಲಿ ಯಾವುದರ ಕೊರತೆಯನ್ನು ಹೊಂದಿದ್ದರೂ ಸಹ, ಅದನ್ನು ಪೂರೈಸಲು ಮನಸ್ಸು ಮತ್ತು ಶಕ್ತಿಯನ್ನು ಹೊಂದಿರುತ್ತಾರೆ.

ಇಂಥವರು ಜೀವನದಲ್ಲಿ ಗುರಿಗಳನ್ನು ಹೊಂದಿರುತ್ತಾರೆ ಅದನ್ನು ಸಾಧಿಸುವವರೆಗೂ ಹಿಡಿದ ಪಟ್ಟು ಬಿಡುವುದಿಲ್ಲ. ತಮ್ಮ ವೃತ್ತಿ ಹಾಗೂ ಶಿಕ್ಷಣ ಇವರ ಮೊದಲ ಆದ್ಯತೆಯಾಗಿರುತ್ತದೆ. ಆದರೆ ಜೀವನದಲ್ಲಿ ಇತರ ಸಂಗತಿಗಳನ್ನು ಆನಂದಿಸುವುದಿಲ್ಲ ಎಂದಲ್ಲ. ಅದರ ಜೊತೆಗೆ ವೃತ್ತಿ ಜೀವನಕ್ಕಾಗಿ ಹೆಚ್ಚು ಶ್ರಮಿಸುತ್ತಾರೆ. ಅಲ್ಲದೇ ಇವರು ತಮ್ಮ ರಹಸ್ಯಗಳನ್ನು ಗೌಪ್ಯವಾಗಿಡುತ್ತಾರೆ. ಇವರು ತಾವಿರುವ ಸ್ಥಳವನ್ನು ಹೆಚ್ಚು ಪ್ರೀತಿಸುತ್ತಾರೆ. ತಮ್ಮ ರೂಮ್‌ ಆಗಲಿ, ವಾರ್ಡ್‌ರೋಬ್‌ ಆಗಲಿ ಇತರರಿಗೆ ಬಿಟ್ಟುಕೊಡುವುದಿಲ್ಲ. ಇವರು ತಮ್ಮ ಜಾಗವನ್ನು ಇತರರಿಗಾಗಿ ಬಿಟ್ಟುಕೊಡಲಾರರು.

ಈ ರೀತಿಯಾಗಿ ಕುಳಿತುಕೊಳ್ಳುವವರು ತಮ್ಮ ಡ್ರೆಸ್ಸಿಂಗ್‌ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಾರೆ. ಯಾಕೆಂದರೆ ಇವರು ಸುಂದರವಾಗಿ ಕಾಣಲು ಬಯಸುತ್ತಾರೆ. ಇನ್ನೂ ಹೆಚ್ಚಿನದಾಗಿ ಹೇಳುವುದಾದರೆ ಇವರು ವಾದ ಮಾಡುವವರು, ಪೈಪೋಟಿಯನ್ನು ನಡೆಸುವವರು.ಇದರಿಂದಾಗಿ ತಮ್ಮ ಅಭಿಪ್ರಾಯಗಳಿಗೆ ಒತ್ತು ನೀಡಿ, ಇತರರ ಅಭಿಪ್ರಾಯವನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚು.

English summary

What Your Sitting Position Says About Your Personality in Kannada

What your sitting position says about your personality. Do you sit with your knees straight? Knees apart? Ankles crossed? Crossed Legs?. Read more.
Story first published: Monday, July 4, 2022, 11:31 [IST]
X
Desktop Bottom Promotion