Just In
Don't Miss
- News
ರೇಸ್ಕೋರ್ಸ್ ಮೇಲೆ ಸಿಸಿಬಿ ದಾಳಿ: 96 ಲಕ್ಷ ರೂ ನಗದು ಜಪ್ತಿ
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Technology
ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ರಿಕವರ್ ಮಾಡುವುದು ಹೇಗೆ?
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ನಿಮ್ಮ ಶ್ವಾಸಕೋಶದ ಸ್ವಾಸ್ಥ್ಯ ಕಾಪಾಡಲು ಇಲ್ಲಿದೆ ನೋಡಿ ಮ್ಯಾಜಿಕ್ ಟೀ
ಭಾರತದ ಅನೇಕ ನಗರಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ನೋಡುತ್ತಿದ್ದರೆ ಭವಿಷ್ಯದ ದಿನಗಳಲ್ಲಿ ಮಾಸ್ಕ್ ಹಾಕಿ ಓಡಾಡುವ ದಿನಗಳು ದೂರವಿಲ್ಲ ಬಿಡಿ, ಈಗಾಗಲೇ ದೆಹಲಿಯಲ್ಲಿ ಮಾಸ್ಕ್ ಇಲ್ಲದೆ ಉಸಿರಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.
ಪಟಾಕಿ ಸಿಡಿತ, ವಾಹನ ಹಾಗೂ ಕಾರ್ಖಾನೆಗಳಿಂದ ಬರುತ್ತಿರುವ ಹೊಗೆ ಪರಿಸರವನ್ನು ಕಲುಷಿತಗೊಳಿಸುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತಿದೆ. ಉಸಿರಾಟದ ತೊಂದರೆ ಇರುವವರ ಸ್ಥಿತಿ ಶೋಚನೀಯವಾದರೆ, ಇತರರ ಆರೋಗ್ಯ ಕೂಡ ಹದಗೆಡುತ್ತಿದೆ.
ಚಳಿಗಾಲವಾಗಿರುವುದರಿಂದ ಶೀತ, ಕೆಮ್ಮು, ಅಲರ್ಜಿ ಸಮಸ್ಯೆ ಕುಡ ಹೆಚ್ಚಾಗಿಯೆ ಕಂಡು ಬರುತ್ತಿದೆ. ಇಲ್ಲಿ ಗಂಟಲಿನ ಆರೋಗ್ಯ ಕಾಪಾಡಲು ಲೈಫ್ಸ್ಟೈಲ್ ಕೋಚ್ ಆಗಿರುವ ಲುಕೆ ಕೌಂಟಿನೊ ತುಂಬಾ ಪರಿಣಾಮಕಾರಿಯಾದ ಮ್ಯಾಜಿಕ್ ಲಂಗ್ ಟೀ ರೆಸಿಪಿ ಶೇರ್ ಮಾಡಿದ್ದಾರೆ.
ಈ ಟೀ ಮಾಡಿ ಕುಡಿಯುವುದರಿಂದ ಶ್ವಾಸಕೋಶದ ಅಲರ್ಜಿ, ಉಸಿರಾಟದ ತಂದರೆಯನ್ನು ತಡೆಗಟ್ಟಬಹುದು ನೋಡಿ.
ಬೇಕಾಗುವ ಸಾಮಗ್ರಿ
1 ಇಂಚಿನಷ್ಟು ದೊಡ್ಡದಿರುವ ಶುಂಠಿ/ಒಂದು ಚಮಚ ಒಣ ಶುಂಠಿ
1 ಚಕ್ಕೆ
ಅರ್ಧ ಚಮಚ ತುಳಸಿ ಎಲೆ ತಾಜಾ/ಒಣಗಿದ್ದು
1 ಚಮಚ ದೊಡ್ಡ ಪತ್ರೆ ಒಣಗಿದ್ದು (ತಾಜಾ ಕೂಡ ಬಳಸಬಹುದು)
3 ಕಾಳು ಮೆಣಸು
2 ಏಲಕ್ಕಿ
1/4 ಚಮಚ ಸೋಂಪು
ಚಿಟಿಕೆಯಷ್ಟು ಅಜ್ವೈನ್
1/4 ಚಮಚ ಜೀರಿಗೆ
(1-2 ಬೆಳ್ಳುಳ್ಳಿ ಎಸಳು ಹಾಗೂ ಲವಂಗ ಬೇಕಿದ್ದರೆ ಸೇರಿಸಬಹುದು)
ಮಾಡುವ ವಿಧಾನ
ಮೇಲೆ ಹೇಳಿರುವ ಸಾಮಗ್ರಿಯನ್ನು ಒಂದು ಪಾತ್ರೆಗೆ ಹಾಕಿ, ಎರಡು ಲೋಟ ನೀರು ಹಾಕಿ 10 ನಿಮಿಷ ಕುದಿಸಿ, ನಂತರ ಸೋಸಿ ಅದಕ್ಕೆ ಬೆಲ್ಲ ಅಥವಾ ಜೇನು ಸೇರಿಸಿ ಬಿಸಿ ಬಿಸಿಯಾಗಿ ಕುಡಿಯಿರಿ.
ಈ ಮ್ಯಾಜಿಕ್ ಲಂಗ್ ಟೀ ಕುಡಿಯಲು ತುಂಬಾ ಹಿತವೆನಿಸುವುದು ಹಾಗೂ ಗಂಟಲು ಕೆರೆತ ಕಡಿಮೆಯಾಗಿ ಕೆಮ್ಮು ಕಡಿಮೆಯಾಗುವುದು. ರಾತ್ರಿ ಹೊತ್ತು ಉಸಿರಾಟದ ತೊಂದರೆಯೂ ಕಾಡದೆ ಚೆನ್ನಾಗಿ ನಿದ್ದೆ ಮಾಡಬಹುದು.
View this post on InstagramA post shared by Luke Coutinho (@luke_coutinho) on Oct 28, 2019 at 1:33am PDT