For Quick Alerts
ALLOW NOTIFICATIONS  
For Daily Alerts

ಚಂಡಮಾರುತಕ್ಕೆ ಚಂದದ ಹೆಸರು ನೀಡುವವರು ಯಾರು?

|

ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗಿದೆ, ಮಳೆಯ ಆರ್ಭಟ ಮುಗಿಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಚಂಡ ಮರುತಗಳ ಆರ್ಭಟ ಶುರುವಾಗಿದೆ. ಇದೀಗ ಬಿಪರ್ಜೋಯ್ ಚಂಡಾಮಾರುತದ ಆರ್ಭಟಕ್ಕೆ ಭಾರತ ತತ್ತರಿಸುತ್ತಿದೆ. ಗುಜರಾತ್‌ನಲ್ಲಿ ಈ ಚಂಡಾಮಾರುತದಿಂದಾಗಿ ಜನರ ಬದುಕು ಅತಂತ್ರವಾಗಿದೆ.

ಭೀಕರ ವೇಗದಲ್ಲಿ ಬಂದಪ್ಪಳಿಸುವ ಚಂಡಾಮಾರುತ ತುಂಬಾ ಜನರ ಬದುಕನ್ನೇ ಅಲುಗಾಡಿಸುತ್ತಿದೆ, ಆದರೆ ಇಂಥ ಭೀಕರ ಚಂಡಾಮಾರುತಗಳ ಹೆಸರನ್ನು ನೀವು ಗಮನಿಸಿದರೆ ತುಂಬಾನೇ ಆಕರ್ಷಕವಾಗಿರುತ್ತದೆ ಅಲ್ವ? ಈಗಲೇ ನೋಡಿ ಬಿಪರ್ಜೋಯ್ ಹೆಸರು ಕೇಳಿದರೆ ಆಹಾ ಎಷ್ಟು ಚೆನ್ನಾಗಿದೆ ಅನಿಸುತ್ತೆ ಅಲ್ವಾ? ಇಷ್ಟೊಂದು ಭೀಕರತೆ ಉಂಟು ಮಾಡುವ ಚಂಡಾಮಾರುತಗಳಿಗೆ ಚೆಂದದ ಹೆಸರು ಇಡುವವರು ಯಾರು?

Cyclones

ಈ ಹಿಂದೆ ಆರ್ಭಟಿಸಿದ ಚಂಡಮಾರುಗಳ ಹೆಸರನ್ನೇ ನೋಡಿ ಅಂಫಾನ್‌, ನಿಸರ್ಗ,ಬುರೇವಿ, ಲೈಲಾ, ಫೇಟ್, ಐಲಾ, ಫಾನ್, ಕತ್ರೀನಾ, ಹರಿಕೇನ್‌ ಹೀಗೆ ಇವುಗಳ ಹೆಸರುಗಳು ಒಂದಕ್ಕೊಂದು ಸೊಗಸಾಗಿದೆ. ಈ ಹೆಸರುಗಳನ್ನು ನೋಡುವಾಗ ಚಂಡಮಾರುತಕ್ಕೆ ಹೆಸರನ್ನು ಹೇಗೆ ಆಯ್ಕೆ ಮಾಡುತ್ತಾರೆ ಎಂಬ ಕುತೂಹಲ ಮೂಡುವುದು ಅಲ್ವಾ? ಬನ್ನಿ ಚಂಡಮಾರುತಕ್ಕೆ ಹೆಸರನ್ನು ಹೇಗೆ ಇಡುತ್ತಾರೆ ಎಂದು ನೋಡೋಣ:

ಮೊದಲಿಗೆ ಚಂಡಮಾರುತ ಹೇಗೆ ಉಂಟಾಗುತ್ತದೆ ನೋಡೋಣ:

ಮೊದಲಿಗೆ ಚಂಡಮಾರುತ ಹೇಗೆ ಉಂಟಾಗುತ್ತದೆ ನೋಡೋಣ:

ಚಂಡಮಾರುತ ಎನ್ನುವುದು ಹವಾಮಾನಕ್ಕೆ ಸಂಬಂಧಿಸಿದ ವಿದ್ಯಾಮಾನ. ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದಾಗ ಗಾಳಿ ಜೋರಾಗಿ ಪ್ರದಕ್ಷಿಣೆ ಇಲ್ಲವೇ ಅಪ್ರದಕ್ಷಿಣಾ ಪಥದಲ್ಲಿ ಸುರುಳಿ ಸುತ್ತುತ್ತಾ ಕಡಿಮೆ ಒತ್ತಡ ಇರುವ ಪ್ರದೇಶದತ್ತ ವೇಗವಾಗಿ ಮುನ್ನುಗ್ಗುವುದೇ ಚಂಡಮಾರುತ.

ಸೈಕ್ಲೋನ್‌, ಹರಿಕೇನ್‌, ಟೈಫೂನ್‌ ಬೇರೆ ಬೇರೇನಾ?

ಸೈಕ್ಲೋನ್‌, ಹರಿಕೇನ್‌, ಟೈಫೂನ್‌ ಬೇರೆ ಬೇರೇನಾ?

ಇನ್ನು ನೀವು ಹರಿಕೇನ್‌, ಸೈಕ್ಲೋನ್, ಟೈಫೂನ್ ಬೀಸುವ ಅಪಾಯವಿದೆ ಎಂದು ಅವಮಾನ ಇಲಾಖೆ ಹೇಳುವುದನ್ನು ಕೇಳಿರಬಹುದು. ಇವೆಲ್ಲಾ ಬೇರೆ-ಬೇರೆ ಇರಬಹುದೇ ಎಂದು ನೀವು ಯೋಚಿಸಿದ್ದರೆ ಖಂಡಿತ ಅಲ್ಲ, ಎಲ್ಲವೂ ಒಂದೇ ಆದರೆ ಅದು ಎಲ್ಲಿ ಹುಟ್ಟಿತು ಆ ಭಾಗದ ಅನುಸಾರ ಬೇರೆ-.ಬೇರೆಯಾಗಿ ಹೇಳಲಾಗಿದೆ.

ಅಟ್ಲಾಂಟಿಕ್‌ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾದರೆ ಅದು ಹರಿಕೇನ್‌

ಫೆಸಿಫಿಕ್‌ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾದರೆ ಅದು ಟೈಫೂನ್‌

ಹಿಂದೂ ಮಹಾಸಾಗರದಲ್ಲಿ ಉಂಟಾದರೆ ಅದು ಸೈಕ್ಲೋನ್‌ ಎಂದು ಕರೆಯುತ್ತಾರೆ.

ಚಂಡಮಾರುತಕ್ಕೆ ಚೆಂದದ ಹೆಸರು ಹೇಗೆ ನೀಡಲಾಗುವುದು?

ಚಂಡಮಾರುತಕ್ಕೆ ಚೆಂದದ ಹೆಸರು ಹೇಗೆ ನೀಡಲಾಗುವುದು?

ವಿಶ್ವ ಹವಾಮಾನ ಸಂಸ್ಥೆಯ ಅಡಿಯಲ್ಲಿ ಬರುವ 11 ಹವಾಮಾನ ಮುನ್ನೆಚ್ಚರಿಕಾ ಕೇಂದ್ರಗಳಿಗೆ ಹೆಸರನ್ನು ಸೂಚಿಸುವ ಅವಕಾಶವಿರುತ್ತದೆ.

ಅವೆಲ್ಲವನ್ನೂ ಜಾಗತಿಕ ಹವಾಮಾನ ಸಂಘಟನೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿ(ಆಗ್ನೇಯ ಪೆಸಿಫಿಕ್‌)ಯ ಅಂತಿಮ ಒಪ್ಪಿಗೆಗೆ ಸಲ್ಲಿಸಬೇಕಾಗುತ್ತದೆ. ಈ ಸಮಿತಿಗೆ ಶಿಫಾರಸನ್ನು ಒಪ್ಪುವ, ತಿರಸ್ಕರಿಸುವ, ಬೇರೆಯದೇ ಹೆಸರು ಸೂಚಿಸುವ ಅಧಿಕಾರ ಹೊಂದಿದೆ. ಹೆಸರು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಆಯಾ ಭಾಗದ ಹಲವಾರು ರಾಷ್ಟ್ರಗಳು ಒಳಗೊಳ್ಳುತ್ತವೆ. ಅಂತಿಮವಾಗಿ ಜನಮತಗಣನೆಯ ಆಧಾರದಲ್ಲಿ ಹೆಸರು ಅಂತಿಮಗೊಳಿಸಲಾಗುತ್ತದೆ.

ಒಮ್ಮೆ ಚಂಡಮಾರುತಕ್ಕೆ ಬಳಸಿದ ಹೆಸರನ್ನು 10 ವರ್ಷಗಳವರೆಗೆ ಬಳಸುವಂತಿಲ್ಲ. ಇದು ವಿಮೆ ಹಿಂಪಡೆಯುವಿಕೆಗಾಗಿ ಸುಲಭವಾಗುವ ವ್ಯವಸ್ಥೆಯಾಗಿದೆ.

ಚಂಡಮಾರುತಕ್ಕೆ ಹೆಚ್ಚಾಗಿ ಸ್ತ್ರೀ ಹೆಸರೇ ಏಕೆ ?

ಚಂಡಮಾರುತಕ್ಕೆ ಹೆಚ್ಚಾಗಿ ಸ್ತ್ರೀ ಹೆಸರೇ ಏಕೆ ?

ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು. 60 ಮತ್ತು 70ರ ದಶಕದಲ್ಲಿ ಹಲವಾರು ಮಹಿಳಾ ಹಕ್ಕುಗಳ ಸಂಘಟನೆಗಳು ಪ್ರತಿಭಟನೆ ನಡೆಸಿದ ಫಲವಾಗಿ 1978ರಲ್ಲಿ ಚಂಡಮಾರುತಗಳಿಗೆ ಮಹಿಳೆಯರ ಜೊತೆಗೆ ಪುರುಷ ಹೆಸರುಗಳನ್ನೂ ಇಡುವುದು ರೂಢಿಗೆ ಬಂತು. ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರ್ಪಡೆಗೊಂಡವು.

ಗಂಡು-ಹೆಣ್ಣು ಹೆಸರಿನ ಲೆಕ್ಕಾಚಾರ

ಗಂಡು-ಹೆಣ್ಣು ಹೆಸರಿನ ಲೆಕ್ಕಾಚಾರ

ಮುಂಗಾರಿನ ಪ್ರಾರಂಭದಲ್ಲಿ ಚಂಡಮಾರುತ ಬಂದರೆ ಅದಕ್ಕೆ ಸಾಮಾನ್ಯವಾಗಿ ಹೆಣ್ಮಕ್ಕಳ ಹೆಸರೇ ಇಟ್ಟಿರುತ್ತಾರೆ.

ಸಮ ಸಂಖ್ಯೆಯಿಂದ ಕೊನೆಯಾಗುವ ವರ್ಷದಲ್ಲಿ ಬೆಸ ಸಂಖ್ಯೆಯ ಚಂಡಮಾರುತಗಳಿಗೆ ಗಂಡಿನ ಹೆಸರು

ಬೆಸ ಸಂಖ್ಯೆಯಿಂದ ಕೊನೆಯಾಗುವ ವರ್ಷದಲ್ಲಿ ಬೆಸ ಸಂಖ್ಯೆಯ ಚಂಡಮಾರುತಗಳಿಗೆ ಹೆಣ್ಮಕ್ಕಳ ಹೆಸರು

ಹಿಂದೂ ಸಾಗರದಲ್ಲಿ 2000ದಿಂದ ನಾಮಕರಣ

ಹಿಂದೂ ಸಾಗರದಲ್ಲಿ 2000ದಿಂದ ನಾಮಕರಣ

ಹಿಂದೂ ಮಹಾಸಾಗರದಲ್ಲಿ ಹುಟ್ಟುವ ಚಂಡಮಾರುತಗಳಿಗೆ ಹೆಸರಿಡುವ ಪ್ರಕ್ರಿಯೆ ಆರಂಭವಾಗಿದ್ದು 2000ನೇ ಇಸವಿಯಿಂದ. ಅದಕ್ಕೊಂದು ಸೂತ್ರ ರೂಪಿಸಿದ್ದು 2004ರಲ್ಲಿ.

ಹಿಂದೂ ಸಾಗರಕ್ಕೆ ಸಂಬಂಧಿಸಿದ ಭಾರತ, ಬಾಂಗ್ಲಾ ದೇಶ, ಮಾಲ್ದೀವ್ಸ್‌, ಮ್ಯಾನ್ಮಾರ್‌, ಒಮಾನ್‌, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್‌ಗಳು ನಾಮಕರಣ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಕ್ರಮ ಪ್ರಕಾರವಾಗಿ ಅವುಗಳಿಗೆ ಅಧಿಕಾರ ದೊರೆಯುತ್ತದೆ.

ಈಗ ಬಂದಿರುವ ಚಂಡಮಾರುತಕ್ಕೆ ಅಂಫಾನ್‌ ಹಾಗೂ ನಿಸರ್ಗ ಎಂದು ಹೆಸರಿಟ್ಟವರು ಯಾರು?

ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತಕ್ಕೆ ಅಂಫಾನ್, ಅರಬ್ಬಿ ಸಮುದ್ರದಲ್ಲು ಉಂಟಾದ ಚಂಡ ಮಾರುತಕ್ಕೆ ನಿಸರ್ಗ ಎಂದು ಹೆಸರಿಡಲಾಗಿದೆ. ನಿಸರ್ಗ ಅಂತ ಚಂಡಮಾರುತಕ್ಕೆ ಹೆಸರಿಟ್ಟಿದ್ದು ಬಾಂಗ್ಲಾದೇಶ. ಬಂಗಾಳಕೊಲ್ಲಿಗೆ ಅಪ್ಪಳಿಸಿದ ಚಂಡಮಾರುತಕ್ಕೆ ಹೆಸರಿಟ್ಟಿದ್ದು ಥಾಯ್ಲೆಂಡ್‌.

Read more about: rainy season ಮಳೆಗಾಲ
English summary

How Cyclones Get Their Names

Here are information about how cyclones get their names read on.
X
Desktop Bottom Promotion