For Quick Alerts
ALLOW NOTIFICATIONS  
For Daily Alerts

ಹೋಳಿ 2023: ಮನೆಯಲ್ಲಿಯೇ ಬಣ್ಣಗಳನ್ನು ತಯಾರಿಸುವುದು ಹೇಗೆ?

|

ದೇಶದಲ್ಲಿ ಆಚರಿಸುವ ಅತ್ಯಂತ ವರ್ಣರಂಜಿತ ಹಬ್ಬ ಅಂದ್ರೆ ಅದು ಹೋಳಿ ಹಬ್ಬ. ಎಲ್ಲರೂ ಖುಷಿಯಿಂದ ಬಣ್ಣಗಳನ್ನು ಎರೆಚೋ ಹಬ್ಬ. ಈ ಹಿಂದೆ ವಸಂತಕಾಲದಲ್ಲಿ ಅರಳಿದ ಪ್ರಕಾಶಮಾನವಾದ ಹೂವುಗಳನ್ನು ಬಳಸಿ ಹೋಳಿ ಬಣ್ಣಗಳನ್ನು ತಯಾರಿಸಲಾಗುತ್ತಿತ್ತು.

Holi 2023: How To Make Natural Herbal Holi Colours At Home In Kannada

ಆದರೆ ಕಾಲ ಕಳೆದಂತೆ ಎಲ್ಲವೂ ರಾಸಾಯನಿಕ ಯುಕ್ತವಾಯಿತು. ಈ ರಾಸಾಯನಿಕ ತುಂಬಿದ ಬಣ್ಣಗಳು ಆರೋಗ್ಯಕ್ಕೂ, ಪರಿಸರಕ್ಕೂ ಹಾನಿಕಾರಕವಾಗಿದೆ. ಹಾಗಾಗಿ ಇಂದು ನಾವು ಹೋಳಿ ಹಬ್ಬಕ್ಕಾಗಿ ನೈಸರ್ಗಿಕ ಬಣ್ಣಗಳನ್ನು ಮನೆಯಲ್ಲಿಯೇ ಹೇಗೆ ತಯಾರಿಸುವುದು ಎಂಬುದನ್ನು ಹೇಳಿದ್ದೇವೆ.

ಹಳದಿ ಬಣ್ಣ:

ಹಳದಿ ಬಣ್ಣ:

ಇದು ತುಂಬಾ ಪ್ರಕಾಶಮಾನವಾದ ಬಣ್ಣವಾಗಿದ್ದು, ಶಕ್ತಿ, ಸಂತೋಷ ಮತ್ತು ಜೀವನವನ್ನು ಸೂಚಿಸುತ್ತದೆ. ಅರಿಶಿನ ಪುಡಿಯನ್ನು ಕಡೆಲೆ ಹಿಟ್ಟಿನೊಂದಿಗೆ 1: 2 ಅನುಪಾತದಲ್ಲಿ ಬೆರೆಸಿ ಒಣ ಹಳದಿ ಬಣ್ಣವನ್ನು ತಯಾರಿಸಬಹುದು. ಅಥವಾ ನೀವು ಯಾವುದೇ ಹಳದಿ ಬಣ್ಣದ ಹೂವುಗಳನ್ನು ಪುಡಿಮಾಡಿ ನೀರಿನಲ್ಲಿ ಬೆರೆಸಿ, ದ್ರವರೂಪದ ಬಣ್ಣಗಳನ್ನು ಪಡೆಯಬಹುದು.

ಕೆಂಪು ಬಣ್ಣ:

ಕೆಂಪು ಬಣ್ಣ:

ಒಣಗಿದ ಕೆಂಪು ದಾಸವಾಳದ ಹೂವುಗಳನ್ನು ಬಳಸಿ ಕೆಂಪು ಬಣ್ಣವನ್ನು ತಯಾರಿಸಬಹುದು. ಸರಿಯಾಗಿ ಒಣಗಿದ ದಾಸವಾಳ ಅಥವಾ ಗುಲಾಬಿ ಹೂಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಪುಡಿ ಮಾಡಿ. ಇದರ ಬದಲು ಕೆಂಪು ಶ್ರೀಗಂಧವನ್ನು ಸಹ ಬಳಸಬಹುದು. ಪುಡಿ ಕೆಂಪು ಬಣ್ಣವನ್ನು ಪಡೆಯಲು ಅಕ್ಕಿ ಹಿಟ್ಟನ್ನು ಸಮಪ್ರಮಾಣದಲ್ಲಿ ಸೇರಿಸಬಹುದು. ದ್ರವರೂಪದ ಬಣ್ಣವನ್ನು ಪಡೆಯಲು ನೀವು ದಾಳಿಂಬೆಯ ಸಿಪ್ಪೆಯನ್ನು ಕುದಿಸಿ, ಸೇರಿಸಬಹುದು.

ಹಸಿರು ಬಣ್ಣ:

ಹಸಿರು ಬಣ್ಣ:

ಗೋರಂಟಿ ಅಥವಾ ಮೆಹೆಂದಿ ಪುಡಿಯನ್ನು ಬಳಸಿ ಹಸಿರು ಬಣ್ಣದ ಪುಡಿಯನ್ನು ತಯಾರಿಸಬಹುದು. ಒದ್ದೆಯಾದ ಬಣ್ಣಕ್ಕಾಗಿ, ನೀವು ಪಾಲಕ ಅಥವಾ ಬೇವಿನಂತಹ ಯಾವುದೇ ಹಸಿರು ಎಲೆಗಳನ್ನು ಬಳಸಬಹುದು. ಎಲೆಗಳನ್ನು ನೀರಿನಲ್ಲಿ ಅದ್ದಿದಾಗ ಅದು ಹಸಿರು ಬಣ್ಣವನ್ನು ನೀಡುತ್ತದೆ.

ಕೆನ್ನೇರಳೆ ಬಣ್ಣ:

ಕೆನ್ನೇರಳೆ ಬಣ್ಣ:

ಬೀಟ್ರೂಟ್ ಕೆಂಪು / ಗುಲಾಬಿಯು ಕೆನ್ನೆರಳೆಯ ಉತ್ತಮ ಮೂಲವಾಗಿದೆ. ನೀವು ಸಣ್ಣಗೆ ತುರಿದ ಬೀಟ್ರೂಟ್ಗಳನ್ನು ನೀರಿನಲ್ಲಿ ನೆನೆಸಿ, ಮಿಶ್ರಣವನ್ನು ಕುದಿಸಿ ಮತ್ತು ರಾತ್ರಿಯಿಡೀ ಬಿಡಬಹುದು. ನೀವು ಡಾರ್ಕ್ ಬಣ್ಣ ಬಯಸದಿದ್ದರೆ, ಮಿಶ್ರಣವನ್ನು ಸ್ವಲ್ಪ ಹೆಚ್ಚು ದುರ್ಬಲಗೊಳಿಸಿ.

ಪರ್ಯಾಯ ಆಯ್ಕೆಗಳು:

ಪರ್ಯಾಯ ಆಯ್ಕೆಗಳು:

ಮೇಲಿನ ಪ್ರಕ್ರಿಯೆಯನ್ನು ನೀವು ಕಷ್ಟಕರವೆಂದು ಭಾವಿಸಿದರೆ, ನೀವು ಮಾರುಕಟ್ಟೆಯಿಂದ ಆಹಾರ ಬಣ್ಣವನ್ನು ಖರೀದಿಸಬಹುದು. ಹಳದಿ, ನೀಲಿ, ಕೆಂಪು, ಹಸಿರು ಮುಂತಾದ ಫುಡ್ ಕಲರ್ ಗಳನ್ನು ಸುಲಭವಾಗಿ ನೀರಿನೊಂದಿಗೆ ಬೆರೆಸಿ ದ್ರವ್ಯ ರೂಪದ ಬಣ್ಣಗಳನ್ನು ಪಡೆಯಬಹುದು.

ಈ ಮಿಶ್ರಣಕ್ಕೆ ನೀವು ಜೋಳವನ್ನು ಪ್ರಮಾಣಾನುಗುಣವಾಗಿ ಸೇರಿಸಬಹುದು ಮತ್ತು ಅದನ್ನು ಒಣಗಲು ಬಿಡಿ. ಮಿಶ್ರಣವು ಒಣಗಿದಾಗ, ನೀವು ಅದನ್ನು ಮಿಕ್ಸರ್ ಗ್ರೈಂಡರ್ ಬಳಸಿ ಉತ್ತಮ ಪುಡಿಯಾಗಿ ಪುಡಿ ಮಾಡಬಹುದು.

English summary

Holi 2023: How To Make Natural Herbal Holi Colours At Home In Kannada

Here we told about Holi 2021: How to make natural herbal holi colours at home in Kannada, read on
X
Desktop Bottom Promotion