For Quick Alerts
ALLOW NOTIFICATIONS  
For Daily Alerts

ಹೊಸ ವರ್ಷದಲ್ಲಿ ಒಳಿತಾಗಲು ಸೂರ್ಯಗ್ರಹಣದ ವೇಳೆ ಏನು ಮಾಡಬೇಕು?

|

ಈ ಬಾರಿ ವರ್ಷಾಂತ್ಯದಲ್ಲಿ ಡಿಸೆಂಬರ್‌ 26ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಪ್ರಕಾರ ಸುರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು, ಏನು ಮಾಡಬೇಕು ಎಂಬ ಕೆಲವೊಂದು ನಿಯಮಗಳಿವೆ. ಸೂರ್ಯಗ್ರಹಣ ಕಳೆದ ಕೆಲವೇ ದಿನಗಳಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದ್ದೇವೆ.

Surya Grahan 2019

ಈ ಬರುವ ಹೊಸ ವರ್ಷ ನಮ್ಮ ಜೀವನದಲ್ಲಿ ನೆಮ್ಮದಿ, ಖುಷಿ ನೀಡಬೇಕು, ಕಷ್ಟಗಳು ದೂರವಾಗಬೇಕು ಎಂಬ ನಿರೀಕ್ಷೆಯಲ್ಲಿಯೇ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತೇವೆ. ಹೊಸ ವರ್ಷದಲ್ಲಿ ಸೂರ್ಯ ಗ್ರಹಣದ ದೋಷ ಉಂಟಾಗದಿರಲು ಈ ಧಾರ್ಮಿಕ ನಂಬಿಕೆಗಳನ್ನು ಪಾಲಿಸಿದರೆ ಒಳಿತಾಗುವುದು.

ಸೂರ್ಯಗ್ರಹಣ ಸಮಯದಲ್ಲಿ ಮಂತ್ರವನ್ನು ಹೇಳಿ

ಸೂರ್ಯಗ್ರಹಣ ಸಮಯದಲ್ಲಿ ಮಂತ್ರವನ್ನು ಹೇಳಿ

ಗ್ರಹಣಪರ್ವದಲ್ಲಿ ಮಂತ್ರಗಳನ್ನು ಹೇಳುವುದರಿಂದ ಉತ್ತಮ ಫಲ ಸಿಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ ಈ ಸಮಯದಲ್ಲಿ ತುಪ್ಪದ ದೀಪವನ್ನು ಹಚ್ಚಿಟ್ಟು ದೇವರ ನಾಮ ಹೇಳುವುದು, ಮಂತ್ರ ಪಠಣ ಮಾಡುವುದು ಮಾಡಿದರೆ ಜಾತಕದಲ್ಲಿರುವ ಗ್ರಹ ದೋಷಗಳು ಪರಿಹಾರವಾಗುತ್ತದೆ ಹಾಗೂ ಹೊಸ ವರ್ಷದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಂತಾಗುವುದು.

ರಾಹು-ಕೇತುವನ್ನು ಶಾಂತಗೊಳಿಸಿ

ರಾಹು-ಕೇತುವನ್ನು ಶಾಂತಗೊಳಿಸಿ

ಈ ವರ್ಷಕ್ಕಿಂತದಿನ ವರ್ಷ ಉತ್ತಮವಾಗಬೇಕೆಂದು ಬಯಸುವುದಾದರೆ ರಾಹು-ಕೇತು ದೋಷವನ್ನು ಪರಿಹಾರ ಮಾಡಬೇಕು. ಸೂರ್ಯಗ್ರಹಣ ಸಮಯದಲ್ಲಿ ಮಂತ್ರ ಪಠಣ ಮಾಡುವುದರಿಂದ ರಾಹು-ಕೇತು ಶಾಂತವಾಗುವುದು.ರಾಹು-ಕೇತು ಶಾಂತವಾದರೆ ಜೀವನದಲ್ಲಿ ಅನಗತ್ಯ ಸಮಸ್ಯೆಗಳು ದೂರವಾಗುತ್ತದೆ.

ಪವಿತ್ರ ಸ್ನಾನ

ಪವಿತ್ರ ಸ್ನಾನ

ಸೂರ್ಯಗ್ರಹಣ ನಂತರ ನೀವು ಪವಿತ್ರ ನದಿಯಲ್ಲಿ ಸ್ನಾನ ಮಾಡಿ. ಇದನ್ನು ಮಾಡಲು ಸಾಧ್ಯವಾಗದಿದ್ದರೆ, ನೀವು ಸ್ನಾನ ಮಾಡುವ ನೀರಿನಲ್ಲಿ ಗಂಗಾ ನೀರನ್ನು ಬೆರೆಸಿ ಸ್ನಾನ ಮಾಡಬಹುದು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಲಭಿಸುವುದು.

ದಾನ ಮಾಡಿ

ದಾನ ಮಾಡಿ

ಸೂರ್ಯಗ್ರಹಣ ನಂತರ ವ್ಯಕ್ತಿಯು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡುವುದರಿಂದ ಪುಣ್ಯ ಸಿಗುವುದು. ಆಹಾರ, ಬಟ್ಟೆ, ಹಣ ಇತ್ಯಾದಿಗಳ ದೇಣಿಗೆ ಜೀವನದ ತೊಂದರೆಗಳನ್ನು ಕೊನೆಗೊಳಿಸುತ್ತದೆ. ಈ ಪರಿಹಾರದೊಂದಿಗೆ, ಹೊಸ ವರ್ಷದಲ್ಲಿ, ಗ್ರಹಗಳ ಸಂಕಟದಿಂದ ಸ್ವಾತಂತ್ರ್ಯದೊಂದಿಗೆ, ಬಡ್ತಿ ಮತ್ತು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆಗಳೂ ಹೆಚ್ಚಾಗುತ್ತವೆ. ಇದರಿಂದ ಶನಿದೇವನ ಕೃಪೆಗೆ ಪಾತ್ರರಾಗುವಿರಿ, ಒಳಿತು ಉಂಟಾಗುವುದು.

ಅರಳಿ ಮರಕ್ಕೆ ನೀರು ಹಾಕಿ

ಅರಳಿ ಮರಕ್ಕೆ ನೀರು ಹಾಕಿ

ಸೂರ್ಯಗ್ರಹಣದ ಬಳಿಕ ಆಲದ ಮರಕ್ಕೆ ನೀರು ಹಾಕುವುದು ಒಳ್ಳೆಯದು. ಇದರಿಂದ ನಕಾರಾತ್ಮಕ ಶಕ್ತಿಯನ್ನು ದೂರವಿಡಬಹುದು ಕುಟುಂಬದಲ್ಲಿ ಶಾಂತಿ ನೆಲೆಸುವುದು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.

ಸೂರ್ಯಗ್ರಹಣದ ವೇಳೆ ಆಹಾರ ಸೇವಿಸುವುದು, ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆಗೆ ಹೋಗುವುದು ಮಾಡಿದರೆ ಇದರಿಂದ ದಾರಿದ್ರ್ಯ ಉಂಟಾಗುವುದು.

English summary

For Better 2020 What To Do During Surya Grahan

We all ready ti say bid to 2019, but year end we are going to witness fire ring solar eclipse on December 26.As per astrology following these things is good for life.
X
Desktop Bottom Promotion