Just In
Don't Miss
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Technology
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ಚಳಿಗಾಲಕ್ಕೆ ಬೆಸ್ಟ್ ಈ ಬಾರ್ಲಿ ಸೂಪ್
ಚಳಿಗಾಲದಲ್ಲಿ ನಾವು ಪಾಲಿಸುವ ಆಹಾರಕ್ರಮ ಕಾಯಿಲೆ ಬೀಳುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಸೇವಿಸಲೇಬೇಕಾದ ಆಹಾರಗಳಲ್ಲಿ ಸೂಪ್ ಕೂಡ ಒಂದು. ಇಲ್ಲಿ ನಾವು ಬಾರ್ಲಿ ಹಾಗೂ ತರಕಾರಿ, ಧಾನ್ಯ ಹಾಕಿ ಮಾಡುವ ಸೂಪ್ ರೆಸಿಪಿ ನೀಡಿದ್ದೇವೆ.
ಬೇಕಾಗುವ ಸಾಮಗ್ರಿ
100 ಗ್ರಾಂ ಬಾರ್ಲಿ
2 ಚಮಚ ಅಡುಗೆ ಎಣ್ಣೆ
ಅರ್ಧ ಚಮಚ ಸಾಸಿವೆ
1 ಚಮಚ ಜೀರಿಗೆ
2 ಹಸಿ ಮೆಣಸಿನಕಾಯಿ (ಬೀಜ ತೆಗೆದಿರುವುದು)
1 ಪಲಾವ್ ಎಲೆ
2 ಲವಂಗ
1 ಇಂಚಿನಷ್ಟು ದೊಡ್ಡದಿರುವ ಚಕ್ಕೆ
1 ಪಾರ್ಸ್ನಿಪ್ ಎಲೆ
1 ದೊಡ್ಡ ಈರುಳ್ಳಿ
3-4 ಎಸಳು ಬೆಳ್ಳುಳ್ಳಿ (ಚಿಕ್ಕದಾಗಿಕತ್ತರಿಸಿದ್ದು)
200ಗ್ರಾಂ ಸಿಹಿ ಕುಂಬಳಕಾಯಿ (ಬಲಿತ)
ಕ್ಯಾರೆಟ್
ಅರ್ದ ಚಮಚ ಅರಿಶಿಣ ಪುಡಿ
200ಗ್ರಾಂ ಸಿಹಿ ಗೆಣಸು
1 ಚಮಚ ಕಾಳುಮೆಣಸು
1 ಚಮಚ ಕೊತ್ತಂಬರಿ ಪುಡಿ
225 ಗ್ರಾಂ ಧಾನ್ಯಗಳು
2 ಟೊಮೆಟೊ
ಸ್ವಲ್ಪ ಕೊತ್ತಂಬರಿ ಸೊಪ್ಪು
1 ಚಮಚ ತುರಿದ ಶುಂಠಿ
1 ಚಮಚ ನಿಂಬೆರಸ
ಮಾಡುವ ವಿಧಾನ:
* ಬಾರ್ಲಿಯನ್ನು ಬೇಯಿಸಿ ಅದರ ನೀರು ಸೋಸಿ ಇಡಿ.
* ಈಗ ಪ್ಯಾನ್ ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ, ಹಸಿಮೆಣಸಿನಕಾಯಿ, ಪಲಾವ್ ಎಲೆ, ಚಕ್ಕೆ, ಲವಂಗ, ಅರಿಶಿಣ ಹಾಕಿ, ಈಗ ಈರುಳ್ಳಿ, ಬೆಳ್ಳುಳ್ಳಿ ಹಾಕಿ 4-5 ನಿಮಿಷ ಹುರಿಯಿರಿ.
* ಈರುಳ್ಳಿ ಮೆದುವಾದ ಬಳಿಕ ಬಲಿತ ಸಿಹಿ ಕುಂಬಳಕಾಯಿ, ಸಿಹಿ ಗೆಣಸು, ಪಾರ್ಸ್ನಿಪ್ ಹಾಕಿ ಮಿಕ್ಸ್ ಮಾಡಿ. ಈಗ ಕಾಳು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಮಿಕ್ಸ್ ಮಾಡಿ.
* ಈಗ ಧಾನ್ಯಗಳು, ಬಾರ್ಲಿ, ಟೊಮೆಟೊ ಹಾಕಿ ಅದಕ್ಕೆ 1.7 ಲೀಟರ್ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ತರಕಾರಿ ಹಾಗೂ ಧಾನ್ಯಗಳು ಬೇಯುವವರೆಗೆ ಬೇಯಿಸಿ.ಧಾನ್ಯಗಳು ಬೆಂದ ಬಳಿಕ ಕೊತ್ತಂಬರಿ ಸೊಪ್ಪು, ಶುಂಠಿ ಹಾಗೂ ನಿಂಬೆರಸ ಹಾಕಿ ಮಿಕ್ಸ್ ಮಾಡಿದರೆ ಸೂಪ್ ರೆಡಿ.
ಚಳಿಗಾಲದಲ್ಲಿ ಬಾರ್ಲಿ ಸೂಪ್ ಮಾಡಿ ಕುಡಿಯುವುದರ ಪ್ರಯೋಜನಗಳು:
* ಚಳಿಗಾಲದಲ್ಲಿ ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟುವಲ್ಲಿ ಈ ಸೂಪ್ ಸಹಕಾರಿ.
* ಸೂಪ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
* ಸೂಪ್ ಒಮ್ಮೆ ಮಾಡಿದರೆ ಆ ದಿನದಲ್ಲಿ ಯಾವಾಗ ಬೇಕಾದರೂ ಬಳಸಬಹುದು.
* ಬಿಸಿ ಬಿಸಿಯಾದ ಸೂಪ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ.
* ಸೂಪ್ನಲ್ಲಿ ಬಳಸುವ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವಲ್ಲಿ ಸಹಕಾರಿ.