Just In
- 10 hrs ago
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- 12 hrs ago
ಭಾನುವಾರದ ದಿನ ಭವಿಷ್ಯ (15-12-2019)
- 22 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 24 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
Don't Miss
- News
ಜನರಲ್ಲಿ ಹೊಸ ಕನಸು ಬಿತ್ತಿದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
- Finance
ಅಸ್ಸಾಂನಲ್ಲಿ ಚಿಕನ್ ಕೇಜಿಗೆ 500 ರುಪಾಯಿ, ಈರುಳ್ಳಿಗೆ 250 ರುಪಾಯಿ
- Technology
ಎಂಆಧಾರ್ ಆಪ್ ಅಪ್ಡೇಟ್ ಮಾಡಿ, ಹೆಚ್ಚಿನ ಸೇವೆ ಆನಂದಿಸಿ..!
- Movies
'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಶುಭಾರಂಭ
- Sports
ಏಕದಿನ ಸರಣಿ; ಭಾರತದ ಟಾಪ್ ಆರ್ಡರ್ ವಿಕೆಟ್ ಕಿತ್ತು ಸಂಭ್ರಮಿಸಿದ ವಿಂಡೀಸ್ ಬೌಲರ್ಸ್; live ಸ್ಕೋರ್
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
30 ನಿಮಿಷಲ್ಲಿ ಮಾಡಬಹುದು ಚಿಕನ್ ಮಶ್ರೂಮ್ ಸೂಪ್
ಚಳಿಗಾಲದಲ್ಲಿ ನಾವು ತೆಗೆದುಕೊಳ್ಳುವ ಆಹಾರಕ್ರಮ ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಚಳಿಯಿಂದ ರಕ್ಷಣೆ ಮಾಡುವ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಟಿಕಾಂಶಗಳಿರುವ ಆಹಾರವನ್ನು ಸೇವಿಸಬೇಕು. ಚಳಿಯಲ್ಲಿ ತಣ್ಣನೆಯ ಆಹಾರದ ಬದಲು ಸ್ವಲ್ಪ ಬೆಚ್ಚಗಿನ ಆಹಾರ ಸೇವಿಸಿ. ಆಹಾರದ ಜತೆ ಸೂಪ್ ತೆಗೆದುಕೊಳ್ಳುವುದರಿಂದ ಆರೋಗ್ಯವೂ ಹೆಚ್ಚುವುದು, ಮೈ ಫಿಟ್ನೆನೆಸ್ ಕೂಡ ಕಾಪಾಡಬಹುದು.
ಇಲ್ಲಿ ಅಣಬೆ ಹಾಗೂ ಚಿಕನ್ ಹಾಕಿ ಮಾಡುವ ಸೂಪ್ ರೆಸಿಪಿ ನೀಡಿದ್ದೇವೆ, ನೀವು ಅಣಬೆ ಹಾಗೂ ಚಿಕನ್ ಹಾಕಿ ಮಾಡುವ ಅನೇಕ ರುಚಿಯ ಸೂಪ್ ಟೇಸ್ಟ್ ಮಾಡಿದ್ದರೆ ಈ ಸೂಪ್ ಟ್ರೈ ಮಾಡಿ ನೋಡಿ, ಈ ಸೂಪ್ ರುಚಿ ಸ್ವಲ್ಪ ಭಿನ್ನವಾಗಿದ್ದು ನಿಮಗೆ ಇಷ್ಟವಾಗುವುದು. ಈ ಸೂಪ್ ಮಾಡಲು 30 ನಿಮಿಷ ಸಾಕಾಗಿದ್ದು ರುಚಿಕರವಾದ ಚಿಕನ್-ಮಶ್ರೂಮ್ ಸೂಪ್ ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಗ್ರಿ
1 ಚಮಚ ಅಡುಗೆ ಎಣ್ಣೆ
1 ಈರುಳ್ಳಿ
ಸ್ವಲ್ಪ ಸೆಲೆರಿ
1 ಕ್ಯಾರೆಟ್
ಒಂದು ಆಲೂಗಡ್ಡೆ
1 ಚಮಚ ಉಪ್ಪು
ಅರ್ಧ ಚಮಚ ಕಾಳು ಮೆಣಸಿನ ಪುಡಿ
ಅರ್ಧ ಚಮಚ ಒರೆಗ್ನೋ(ಒಣಗಿದ ದೊಡ್ಡಪತ್ರೆ)
2 ಎಸಳು ಬೆಳ್ಳುಳ್ಳಿ
ಸ್ವಲ್ಪ ಬಿಳಿ ಅಣಬೆ
1ಪಲಾವ್ ಎಲೆ
1/4 ಕೆಜಿ ಚಿಕನ್ ಬ್ರೆಸ್ಟ್
ಅರ್ಧ ಕಪ್ ಹಾಫ್ & ಹಾಫ್ (ಬೇರೆ ಬೇರೆ ತರಕಾರಿ ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸಿ ಮಾಡುವ ಸಾಮಗ್ರಿ ಇದಾಗಿದ್ದು, ಮಾರುಕಟ್ಟೆಯಲ್ಲಿ ದೊರೆಯುತ್ತದೆ.
ಮಾಡುವ ವಿಧಾನ:
* ದಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ.
* ಎಣ್ಣೆ ಬಿಸಿಯಾದಾಗ ಈರುಳ್ಳಿ, ಕ್ಯಾರೆಟ್, ಅಲೂಗಡ್ಡೆ, ಸ್ವಲ್ಪ ಉಪ್ಪು, ಕಾಳು ಮೆಣಸಿನ ಪುಡಿ, ಒರೆಗ್ನೋ , ಥೈಮ್ ಹಾಕಿ 5 ನಿಮಿಷ ಬೇಯಿಸಿ.
* ಈಗ ಅಣಬೆ ಹಾಕಿ ಎರಡು ನಿಮಿಷನ ಸೌಟ್ನಿಂದ ಆಡಿಸುತ್ತಾ ಬೇಯಿಸಿ.
*ಪಲಾವ್ ಎಲೆ ಹಾಗೂ ಚಿಕನ್ ಹಾಕಿ 2 ನಿಮಿಷ ಸೌಟ್ನಿಂದ ಆಡಿಸುತ್ತಾ ಇರಿ,
* ಈಗ ಆಲೂಗಡ್ಡೆ ಹಾಕಿ ಬೇಯಿಸಿ, ಆಲೂಗಡ್ಡೆ ಬೆಂದ ಮೇಲೆ ಹಾಫ್ ಅಂಡ್ ಹಾಫ್ ಸೇರಿಸಿ, ಬೇಯಿಸಿ, ಕೊತ್ತಂಬರಿ ಅಥವಾ ಪಾರ್ಸ್ಲೆ ಸೊಪ್ಪಿನಿಂದ ಅಲಂಕರಿಸಿ ಬಿಸಿ-ಬಿಸಿ ಇರುವಾಗಲೇ ಸರ್ವ್ ಮಾಡಿ.
ಗಮನಿಸಬೇಕಾದ ಅಂಶಗಳು
ನೀವು ಈ ಸೂಪ್ ಮಾಡಲು ಚಿಕನ್ ಅನ್ನು ತುಂಬಾ ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ, ನಂತರ ಪ್ಯಾನ್ಗೆ ಒಂದು ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಚಿಕನ್ ತುಂಡುಗಳನ್ನು ಹಾಕಿ ಅದರ ಹೊರಬದಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಒಂದು ಪಾತ್ರೆಯಲ್ಲಿ ಹಾಕಿ, ನಂತರ ಸೂಪ್ ಮಾಡುವಾಗ ಹಾಕಿದರೆ ಚಿಕನ್ ಬೆಂದಿರುತ್ತದೆ. ಮೊದಲೇ ಎಣ್ಣೆಯಲ್ಲಿ ಫ್ರೈ ಮಾಡಿರುವುದರಿಂದ ರುಚಿಯು ಚೆನ್ನಾಗಿರುತ್ತದೆ.