For Quick Alerts
ALLOW NOTIFICATIONS  
For Daily Alerts

ವಾವ್! ಇಲ್ಲಿದೆ ಅದ್ಭುತ ಸ್ಯಾರಿ ಕಲೆಕ್ಷನ್

|

ಯಾವುದೇ ಮಾಡರ್ನ್ ಡ್ರೆಸ್ ಬರಲಿ ಸೀರೆಗೆ ಮಾತ್ರ ಸಮವಾಗಲೂ ಸಾಧ್ಯವೇ ಇಲ್ಲ. ಭಾರತಿಯರಲ್ಲಿ ಸೀರೆ ಎಂದಿಗೂ ಮಾಸದ ಫ್ಯಾಷನ್ . ಕಾಲದಿಂದ ಕಾಲಕ್ಕೆ ಸೀರೆಯ ವಿನ್ಯಾಸದಲ್ಲಿ ಟ್ರೆಂಡ್ ಗೆ ತಕ್ಕಂತೆ ಬದಲಾವಣೆಯಾಗುತ್ತಿರುತ್ತದೆ, ಆದರೆ ಸೀರೆ ಫ್ಯಾಷನ್ ಮಾತ್ರ ಎಂದಿಗೂ ಬದಲಾಗುವುದಿಲ್ಲ.

ಸೀರೆ ಸಾಂಪ್ರದಾಯಕವಾದ ಉಡುಗೆ ಮಾತ್ರವಲ್ಲ, ಭಾರತೀಯ ನಾರಿ ಅತ್ಯಾಕರ್ಷಕವಾಗಿ ಕಾಣುವುದು ಕೂಡ ಸ್ಯಾರಿಯಲ್ಲೇ, ಹೌದಲ್ವಾ?

ಹಬ್ಬ, ಫಂಕ್ಷನ್ ಗಳಲ್ಲಿ ಗ್ರ್ಯಾಂಡ್ ಸ್ಯಾರಿ ಕೊಳ್ಳುತ್ತೇವೆ. ಆದರೆ ರೇಷ್ಮೆ, ಜರಿ ಸ್ಯಾರಿಗಳ ನಿರ್ವಹಣೆ ಸ್ವಲ್ಪ ಕಷ್ಟ. ಫಂಕ್ಷನ್ ಗೆ ಸೀರೆ ನೋಡಲು ಗ್ರ್ಯಾಂಡ್ ಆಗಿ ಆಕರ್ಷಕವಾಗಿ ಕಾಣಬೇಕು, ಆದರೆ ಅದರ ನಿರ್ವಹಣೆ ಕಷ್ಟವಾಗಬಾರದೆಂದು ಬಯಸುವುದಾದರೆ ಇಲ್ಲಿ ನೀಡಿದಂತಹ ಫ್ಯಾಬ್ರಿಕ್, ಕಾಟನ್ ಸೀರೆಗಳನ್ನು ಕೊಳ್ಳುವುದು ಬೆಸ್ಟ್.

ಬ್ಲೂ ಮತ್ತು ಪಿಂಕ್ ಕಾಂಬಿನೇಷನ್

ಬ್ಲೂ ಮತ್ತು ಪಿಂಕ್ ಕಾಂಬಿನೇಷನ್

ಈ ಫ್ಯಾಬ್ರಿಕೆ ಸೀರೆ ನೋಡಿ, ನೀಲಿ ಬಣ್ಣಕ್ಕೆ ಪಿಂಕ್ ಚುಕ್ಕಿಯಿಂದ ವಿನ್ಯಾಸಗೊಳಿಸಿರುವ ಈ ಸೀರೆ ಮನಮೋಹಕವಾಗಿದೆ. ಫಂಕ್ಷನ್ ಗೆ ಲೈಟ್ ಆಗಿರುವ, ಗ್ರ್ಯಾಂಡ್ ಆಗಿರುವ ಸೀರೆ ಬೇಕೆಂದು ಬಯಸುವುದಾದರೆ ಈ ರೀತಿಯ ಸೀರೆ ಕೊಳ್ಳುವುದು ಬೆಸ್ಟ್.

ಬ್ಲೌಸ್

ಬ್ಲೌಸ್

ಈ ರೀತಿಯ ಸೀರೆಗೆ ಮೆಗಾ ಬ್ಲೌಸ್ ಗಿಂತ ಮುಕ್ಕಾಲು ತೋಳಿನ ಬ್ಲೌಸ್ ತುಂಬಾ ಆಕರ್ಷಕವಾಗಿ ಕಾಣುತ್ತದೆ.

 ಬ್ಲ್ಯಾಕ್ ಸ್ಯಾರಿ

ಬ್ಲ್ಯಾಕ್ ಸ್ಯಾರಿ

ಬ್ಲ್ಯಾಕ್ ಸೀರೆಗೆ ಗೋಲ್ಡನ್ ಎಂಬ್ರಾಯ್ಡ್ ಇದ್ದರೆ ಆ ಸೀರೆ ತುಂಬಾ ಆಕರ್ಷಕವಾದ ಸೀರೆ ಅನ್ನುವುದರಲ್ಲಿ ನೋ ಡೌಟ್. ಈಗ ಫುಲ್ ಕೈ, ಮುಕ್ಕಾಲು ಕೈ ಬ್ಲೌಸ್ ಫ್ಯಾಷನ್ ಆಗಿದೆ.

ಪ್ರಿಂಟ್ ಇರುವ ಸ್ಯಾರಿ

ಪ್ರಿಂಟ್ ಇರುವ ಸ್ಯಾರಿ

ಶಿಫಾನ್ ಸೀರೆಯಲ್ಲಿ ಪ್ರಿಂಟ್ ಇರುವ ಸೀರೆ ನಿಮ್ಮ ಚೆಲುವನ್ನು ಇಮ್ಮಡಿಸಿಗೊಳಿಸುತ್ತದೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಸೀರೆಯ ಪ್ರಮುಖ ಅಡಗಿರುವುದು ಬ್ಲೌಸ್ ಡಿಸೈನ್ ನಲ್ಲಿ, ಆದ್ದರಿಂದ ಬ್ಲೌಸ್ ಅನ್ನು ಸಿಂಪಲ್ ಆಗಿ ಹೊಲಿಸುವ ಬದಲು ಡಿಸೈನ್ ಅಧಿಕವಿರುವಂತೆ ಬ್ಲೌಸ್ ಸ್ಟಿಚ್ ಮಾಡಿಸಿ.

ಕಾಟನ್ ಸೀರೆ

ಕಾಟನ್ ಸೀರೆ

ಕಾಟನ್ ಸೀರೆ ಎಲ್ಲಾ ಕಾಲಕ್ಕೂ, ಎಲ್ಲಾ ಸಮಯಕ್ಕೂ ಉಡಲು ಸೂಕ್ತವಾದ ಸೀರೆಯೆಂದೇ ಹೇಳಬಹುದು. ಫಂಕ್ಷನ್ ಗೆ ಕಾಟನ್ ಸೀರೆ ಉಡಬಯಸುವುದಾದರೆ ಸೀರೆಯ ಬಾರ್ಡರ್ ಸ್ವಲ್ಪ ಗ್ರ್ಯಾಂಡ್ ಆಗಿದ್ದರೆ ಹೆಚ್ಚು ಆಕರ್ಷಕವಾಗಿ ಕಾಣಬಹುದು.

ಝಾರಿ ಸೀರೆ

ಝಾರಿ ಸೀರೆ

ಸೀರೆ ಸಿಂಪಲ್ ಆಗಿರಬೇಕು, ಆದರೆ ತುಂಬಾ ಸ್ಟೈಲಿಶ್ ಆಗಿರಬೇಕೆಂದು ಬಯಸುವುದಾದರೆ ಝಾರಿ ಸೀರೆ ಬೆಸ್ಟ್.

ಕಾಟನ್ ಸಿಲ್ಕ್

ಕಾಟನ್ ಸಿಲ್ಕ್

ಕಾಟನ್ ಸಿಲ್ಕ್ ಸೀರೆಯ ನಿರ್ವಹಣೆ ತುಂಬಾ ಸುಲಭ. ಡ್ರೆಸ್ ಗಿಂತ ಸೀರೆ ಹೆಚ್ಚಾಗಿ ಬಳಸುವವರು ಈ ರೀತಿಯ ಸೀರೆಗಳನ್ನು ಕೊಂಡರೆ ನೋಡಲು ಆಕರ್ಷಕವಾಗಿ ಕಾಣುವುದರ ಜೊತೆ ನಿರ್ವಹಣೆಯೂ ಸುಲಭ.

ಕಚ್ಛಾ ಕಾಟನ್ ಸೀರೆ

ಕಚ್ಛಾ ಕಾಟನ್ ಸೀರೆ

ಬಿಳಿ ಪ್ರಿಂಟ್ ಇರುವ, ಕಲರ್ ಫುಲ್ ಬಾರ್ಡರ್ ಇರುವ ಈ ಕಾಟನ್ ಸೀರೆ ನೋಡಲು ಸ್ಟೈಲಿಶ್ ಆಗಿದ್ದು, ಆಫೀಸ್ ಗೂ ಹಾಕಬಹುದು, ಚಿಕ್ಕ-ಪುಟ್ಟ ಫಂಕ್ಷನ್ ಗಳಿಗೂ ಹಾಕಿಕೊಂಡು ಹೋಗಬಹುದು.

ಚೆಕ್ಸ್ ಕಾಟನ್ ಸೀರೆ

ಚೆಕ್ಸ್ ಕಾಟನ್ ಸೀರೆ

ಸಾಮಾನ್ಯವಾಗಿ ಚೆಕ್ಸ್ ಕಾಟನ್ ಸೀರೆಯನ್ನು ವಯಸ್ಸಾದವರೇ ಹೆಚ್ಚಾಗಿ ಉಡುತ್ತಾರೆ. ಆದರೆ ಈ ರೀತಿಯ ಕಾಟನ್ ಸೀರೆ ಯುವತಿಯರ ಮನ ಗೆದ್ದಿದೆ.

 ಚೆಕ್ ಬೋರ್ಡ್ ಸೀರೆ

ಚೆಕ್ ಬೋರ್ಡ್ ಸೀರೆ

ಈ ಚೆಕ್ ಬೋರ್ಡ್ ಸೀರೆ ನಿಮ್ಮ ಚೆಲುವಿಗೆ ಸಾಥ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಮಲ್ಟಿ ಬಾರ್ಡರ್ ಕಾಟನ್ ಸೀರೆ

ಮಲ್ಟಿ ಬಾರ್ಡರ್ ಕಾಟನ್ ಸೀರೆ

ಮಲ್ಟಿ ಕಲರ್ ನ ಬಾರ್ಡರ್ ಇರುವ ಈ ಕಾಟನ್ ಸೀರೆ ಈಗೀನ ಟ್ರೆಂಡ್ ಆಗಿದೆ.

ಕ್ಯಾಸ್ಯೂಯಲ್ ಲುಕ್

ಕ್ಯಾಸ್ಯೂಯಲ್ ಲುಕ್

ಈ ಸೀರೆಯಲ್ಲಿ ಜರಿ ವರ್ಕ್ಸ್ ಪ್ರಮುಖ ಆಕರ್ಷಣೆಯಾಗಿದೆ.

 ಸಿಂಪಲ್ ಕಾಟನ್ ಸೀರೆ

ಸಿಂಪಲ್ ಕಾಟನ್ ಸೀರೆ

ಈ ಸೀರೆ ನೋಡಲು ಸಿಂಪಲ್ ಆಗಿ ಕಂಡರೂ, ಸೂಕ್ಷ್ಮವಾಗಿ ನೋಡಿದ್ದರೆ, ಚಿಕ್ಕ ಚಿಕ್ಕ ಹೂವಿನ ಪ್ರಿಂಟ್ ಇದೆ. ಡೈಲಿ ವೇರ್ ಗೆ ಈ ರೀತಿಯ ಸೀರೆ ಬೆಸ್ಟ್.

 ಸಿಂಪಲ್ ಕಾಟನ್ ಸೀರೆ

ಸಿಂಪಲ್ ಕಾಟನ್ ಸೀರೆ

ಈ ಸೀರೆ ನೋಡಲು ಸಿಂಪಲ್ ಆಗಿದ್ದು, ಡೈಲಿ ವೇರ್ ಗೆ ಈ ರೀತಿಯ ಸೀರೆ ಬೆಸ್ಟ್.

ಪಾರದರ್ಶಕ ಸೀರೆ

ಪಾರದರ್ಶಕ ಸೀರೆ

ಕಳೆದ ವರ್ಷ ಸಿಲ್ಕ್ ನಲ್ಲಿ ಪಾರದರ್ಶಕ ಸೀರೆ ಫ್ಯಾಷನ್ ಆಗಿತ್ತು, ಆದರೆ ಈಗ ಅದಕ್ಕಿಂತ ಸ್ವಲ್ಪ ಭಿನ್ನವಾಗಿ ಕಾಟನ್ ಸೀರೆಯಲ್ಲಿ ಪಾರದರ್ಶಕ ಸೀರೆ ಬಂದಿದ್ದು, ಈ ಸೀರೆ ಈಗಾಗಲೇ ಫ್ಯಾಷನ್ ಪ್ರಿಯರ ಮನ ಗೆದ್ದಾಗಿದೆ.

ಸರಳ ಸೀರೆಗೆ ಗ್ರ್ಯಾಂಡ್ ಲುಕ್ ನ ಬ್ಲೌಸ್

ಸರಳ ಸೀರೆಗೆ ಗ್ರ್ಯಾಂಡ್ ಲುಕ್ ನ ಬ್ಲೌಸ್

ಕಪ್ಪು ಬಣ್ಣಕ್ಕೆ ಗೋಲ್ಡನ್ ಕಲರ್ ಬ್ಲೌಸ್ ಧರಿಸಿದರೆ ತುಂಬಾ ಆಕರ್ಷಕವಾಗಿ ಕಾಣುವಿರಿ.

English summary

Smart n Comfy Sarees For Every Day

Here are few excellent sarees that you can wear on a regular basis. The list includes few not so heavily embroidered sarees that can be worn on small occasions like birthday treats or for get together.
 
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more