For Quick Alerts
ALLOW NOTIFICATIONS  
For Daily Alerts

ಗೊತ್ತಿದ್ದೂ ಲೇಟಾಗಿ ಬರುವ ಸ್ವಭಾವವೇ? ಕಾದಿದೆ ಅಪಾಯ

|

ತಲುಪಬೇಕಾದ ಸ್ಥಳಕ್ಕೆ ಸರಿಯಾದ ಹೊತ್ತಿನಲ್ಲಿ ತಲುಪಲು ಎಲ್ಲಾ ಸಮಯದಲ್ಲಿ ನಮಗೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಈ ರೀತಿಯಾದರೆ ಓಕೆ, ಆದರೆ ಎಲ್ಲಾ ಸಮಯದಲ್ಲೂ ನಾವೇ latecomer ಆಗಿಬಿಟ್ಟರೆ? ಅದು ಒಳ್ಳೆಯ ಲಕ್ಷಣವಲ್ಲ ಎಂಬುದನ್ನು ತಿಳಿದುಕೊಂಡು ಬೇಗನೆ ಎಚ್ಚೆತ್ತುಕೊಳ್ಳಿ.

ನಮ್ಮ ಈ ಗುಣದಿಂದ ನಮಗೆ ನಷ್ಟವಾಗುವುದು ಅನ್ನುವುದಕ್ಕಿಂತ ನಮ್ಮಿಂದ ಇತರರಿಗೆ ತುಂಬಾ ಕಿರಿಕಿರಿಯಾಗುವುದು ಅನ್ನುವುದು ವಾಸ್ತವ. ಫ್ರೆಂಡ್ಸ್ ಎಲ್ಲಾ ಸೇರಿ ಟ್ರಿಪ್ ಹೋಗುವ ಪ್ಲಾನ್ ಹಾಕಿ, ಎಲ್ಲಾ ಸರಿಯಾದ ಸಮಯಕ್ಕೆ ಬಂದು ಸೇರಿ, ನೀವು ಮಾತ್ರ ತಲುಪದಿದ್ದರೆ ನಿಮ್ಮಿಂದಾಗಿ ಅವರಿಗೆ ಮೂಡ್ ಹಾಳಾಗುವುದು. ಒಂದು ಬಾರಿ ಓಕೆ.. ಪ್ರತೀಬಾರಿ ಹೀಗೆ ಮಾಡುತ್ತಿದ್ದರೆ ಅವರು ನಿಮ್ಮ ಜೊತೆ ಬರಲು ಹಿಂಜರಿಯುವುದಂತು ದಿಟ.

ಇನ್ನೂ ಆಫೀಸ್ ಗೆ ಲೇಟಾಗಿ ಹೋಗುತ್ತಿದ್ದರೆ ಸ್ವಲ್ಪ ದಿನ ನೋಡುತ್ತಾರೆ, ನಂತರ ಕರೆದು ನೀ ಬರಬೇಡಪ್ಪಾ ಎಂದು ಹೇಳಿ ಬಿಡುತ್ತಾರೆ. ಆದ್ದರಿಂದ 5 ನಿಮಿಷ ಮುಂಚಿತವಾಗಿ ತಲುಪಿದರೂ ಪರ್ವಾಗಿಲ್ಲ, ಲೇಟಾಗಿ ಹೋಗುವ ಅಭ್ಯಾಸ ಮಾತ್ರ ಬೆಳೆಸಿಕೊಳ್ಳಬೇಡಿ. ನೀವು ಕ್ರೋನಿಕ್ ಲೇಟನಸ್ ಹಂತದಲ್ಲಿದ್ದೀರಿ ಎಂದು ಈ ಕೆಳಗಿನ ಲಕ್ಷಣಗಳಿಂದ ಗುರುತಿಸಬಹುದು:

3-4 ಸಲ ಅಲಾರಾಂ ಸೆಟ್ ಮಾಡುವುದು

3-4 ಸಲ ಅಲಾರಾಂ ಸೆಟ್ ಮಾಡುವುದು

3 ಸಲ ಅಲಾರಾಂ ಶಬ್ದ ಮಾಡಿದಾಗಲೂ ನೀವು ಎದ್ದೇಳದೆ ಕೊನೆಯ ಅಲಾರಾಂಗೆ ದಡಬಡಿಸಿ ಎದ್ದರೆ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳದಿದ್ದರೆ ನಿಮಗೇ ತೊಂದರೆ.

ಥಿಯೇಟರ್ ಗೆ ಲೇಟ್ ಎಂಟ್ರಿ

ಥಿಯೇಟರ್ ಗೆ ಲೇಟ್ ಎಂಟ್ರಿ

ಥಿಯೇಟರ್ ನಲ್ಲಿ ಯಾವುದೇ ಮೂವಿ ಪುರ್ಣವಾಗಿ ನೋಡಲು ಸಾಧ್ಯವಾಗದೇ ಹೋಗುವುದು ನೀವು ಬರುವಷ್ಟರಲ್ಲಿ ಮೂವಿ ಪ್ರಾರಂಭವಾಗಿದ್ದರೆ ನೆಕ್ಟ್ಸ್ ಟೈಮ್ ಗೆ ಆನ್ ಟೈಮ್ ನಲ್ಲಿ ಇರಿ. ನೆಕ್ಸ್ಟ್ ಟೈಮ್ ಕೂಡ ಹೀಗೆ ಆದರೆ ಇದರ ಬಗ್ಗೆ ಯೋಚಿಸುವುದು ಒಳ್ಳೆಯದು.

ಮೈ ಗಾಡ್ ಇಂಟರ್ ವ್ಯೂಗೆ ಲೇಟ್ ಹೋಗುವುದಾ?

ಮೈ ಗಾಡ್ ಇಂಟರ್ ವ್ಯೂಗೆ ಲೇಟ್ ಹೋಗುವುದಾ?

ಕೆಲವರಲ್ಲಿ ಈ ಗುಣ ಇರುತ್ತದೆ. ಇಂಟರ್ ವ್ಯೂಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಾರೆ, ಆದರೆ ಸರಿಯಾದ ಸಮಯಕ್ಕೆ ತಲುಪುವುದಿಲ್ಲ. ಈ ರೀತಿ ಮಾಡಿದರೆ ಮ್ಯಾನೇಜ್ ಮೆಂಟ್ ನವರಿಗೆ ಆ ವ್ಯಕ್ತಿಯ ಮೇಲಿನ ಇಂಪ್ರೆಷನ್ ಕಡಿಮೆಯಾಗುವುದು.

ಲಂಚ್ ಗೆ ಬ್ರೇಕ್ ಟೈಮ್ ಗೆ ಬರಹೇಳಿದರೆ

ಲಂಚ್ ಗೆ ಬ್ರೇಕ್ ಟೈಮ್ ಗೆ ಬರಹೇಳಿದರೆ

ಈ ರೀತಿಯ ಗುಣವಿದ್ದರೆ ಲಂಚ್ ಗೆ ಕರೆಯುವ ಬದಲು ನಿಮ್ಮನ್ನು ಬ್ರೇಕ್ ಫಾಸ್ಟ್ ಕರೆಯುತ್ತಾರೆ, ಆಗ ನೀವು ಲಂಚ್ ಹೊತ್ತಿಗೆ ತಲುಪುತ್ತೀರಾ ಎನ್ನುವುದು ಅವರಿಗೇ ಗೊತ್ತಿರುವುದರಿಂದಲೇ ಹಾಗೇ ಮಾಡುತ್ತಾರೆ. ಈ ರೀತಿ ಜನರು ನಮ್ಮ ಮೇಲೆ ಯೋಚಿಸುವುದು ಎಷ್ಟೊಂದು ಅವಮಾನಕರವಲ್ಲ.

ಕೊನೆಯ ಕ್ಷಣಕ್ಕೆ ನಿಲ್ದಾಣ ತಲುಪುವುದು

ಕೊನೆಯ ಕ್ಷಣಕ್ಕೆ ನಿಲ್ದಾಣ ತಲುಪುವುದು

ಈ ಗುಣ ತುಂಬಾ ಜನರಲ್ಲಿ ಇರುತ್ತದೆ. ಎಷ್ಟು ಹೊತ್ತಿಗೆ ಅವರು ಹೋಗಬೇಕಾದ ವಾಹನ ಬರುತ್ತದೆ ಎಂದ ಸಮಯ ಗೊತ್ತಿರುತ್ತದೆ. 5 ಗಂಟೆಗೆ ಅಂದರೆ 4.59ಕ್ಕೆ ನಿಲ್ದಾಣಕ್ಕೆ ಓಡುತ್ತಾ ಬರುವುದು. ಈ ಅಭ್ಯಾಸದಿಂದ ಸುಮ್ಮನೆ ನಿಮ್ಮ ಬಿಪಿ ಹೆಚ್ಚಾಗುವುದು. ಒಂದು ವೇಳೆ ಆ ಗಾಡಿ 5 ನಿಮಿಷ ಬೇಗ ಹೊರಟಿದ್ದರೆ ನಿಮ್ಮ ಪ್ಲಾನ್ ಉಲ್ಟಾ ಪಲ್ಟಾ ಆಗುವುದು. ಆದ್ದರಿಂದ ಪ್ರಯಾಣ ಮಾಡುವುದಾದರೆ 10 ನಿಮಿಷ ಮೊದಲು ನಿಲ್ದಾಣ ತಲುಪುವಂತೆ ನೋಡಿಕೊಳ್ಳಿ.

ಟೈಮ್ ಸೆನ್ಸ್ ಇರುವವರ ಬಗ್ಗೆ ಅಸೂಯೆ ಪಡುವುದು

ಟೈಮ್ ಸೆನ್ಸ್ ಇರುವವರ ಬಗ್ಗೆ ಅಸೂಯೆ ಪಡುವುದು

ಲೇಟಾಗಿ ಬರುವವರಿಗೆ ಕರೆಕ್ಟ್ ಟೈಮ್ ಗೆ ಅಲ್ಲಿರುತ್ತೇನೆ ಎಂದು ಯಾರಾದರೂ ಹೇಳಿದರೆ ತುಂಬಾ ಕೋಪ ಬರುವುದು.

ಸಾರ್ವಜನಿಕ ವಾಹನಗಳನ್ನು ಬಳಸಲಾಗುವುದಿಲ್ಲ

ಸಾರ್ವಜನಿಕ ವಾಹನಗಳನ್ನು ಬಳಸಲಾಗುವುದಿಲ್ಲ

ಲೇಟಾಗಿ ಹೊರಟರೆ ಟ್ಯಾಕ್ಸಿ ಹಿಡಿದು ಹೋಗುವುದು ಅನಿವಾರ್ಯ. ಇದರಿಂದ ವೆಚ್ಚ ಮತ್ತಷ್ಟು ಹೆಚ್ಚಾಗುವುದು.

 ಜಗಳ

ಜಗಳ

ನಿಮಗಾಗಿ ನಿಮ್ಮ ಪ್ರೇಮಿ ತುಂಬಾ ಹೊತ್ತಿನಿಂದ ಕಾಯುತ್ತಿದ್ದರೆ ನೀವು ಬಂದ ತಕ್ಷಣ ಅವರು ನಗುನಗುತ್ತಾ ನಿಮ್ಮನ್ನು ಸ್ವಾಗತಿಸುತ್ತಾರೆ ಎಂಬ ಕಲ್ಪನೆಯನ್ನು ಬಿಡಿ.

ಲಾಸ್ಟ್ ಬಸ್ ಅಥವಾ ಟ್ರೈನ್ ಅಥವಾ ಫ್ಲೈಟ್ ಮಿಸ್ ಮಾಡುವುದು

ಲಾಸ್ಟ್ ಬಸ್ ಅಥವಾ ಟ್ರೈನ್ ಅಥವಾ ಫ್ಲೈಟ್ ಮಿಸ್ ಮಾಡುವುದು

ಇದರಷ್ಟು ಕೆಟ್ಟ ಅನುಭವ ಮತ್ತೊಂದಿಲ್ಲ. ಒಂದು ಬಾರಿ ಹೀಗಾದರೆ ಓಕೆ, ಪ್ರತೀಬಾರಿ ಹೀಗೆ ಮಾಡುತ್ತಿದ್ದರೆ ನಿಮ್ಮ ಮನೆಯವರು ಮತ್ತು ಸ್ನೇಹಿತರು ನಿಮ್ಮನ್ನು ವಿಚಿತ್ರವಾಗಿ ನೋಡಲಾರಂಭಿಸುತ್ತಾರೆ.

ಆದ್ದರಿಂದ ಲೇಟ್ ಆಗಿ ಹೋಗುವ ಅಭ್ಯಾಸಕ್ಕೆ ನೀವಾಗಿಯೇ ಮುಟ್ಟಗೋಲು ಹಾಕುವುದು ಒಳ್ಳೆಯದು. ಏನಂತೀರಿ?

English summary

Signs To Recognise 'Chronic Lateness'

Chronic lateness has just been given the status of a medical disorder. While research still needs to be done if latecomers actually have a medical problem or not, the fact remains that some people are perpetually late.
X
Desktop Bottom Promotion