For Quick Alerts
ALLOW NOTIFICATIONS  
For Daily Alerts

ನಾವು ಧರಿಸಿದ ಪಾದರಕ್ಷೆ ನಮ್ಮ ವ್ಯಕ್ತಿತ್ವ ಬಿಂಬಿಸುವುದೇ?

|

ನಾವು ಧರಿಸಿದ ಉಡುಗೆಯೇ ನಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಕೆಲವೊಮ್ಮೆ ಇದು ಸತ್ಯ ಅನಿಸಿದರೂ, ಕೆಲವೊಮ್ಮೆ ಉಡುಗೆ ನೋಡಿ ವ್ಯಕ್ತಿಯ ಗುಣ ಅರಿಯಲು ಆಗುವುದಿಲ್ಲ ಎಂಬ ಅನುಭವವೂ ನಮಗುಂಟಾಗುವುದು.

ಆದರೂ ನಾವು ವ್ಯಕ್ತಿಯ ಡ್ರೆಸ್ಸಿಂಗ್ ನೋಡಿ ಅವನ/ಳ ಗುಣವನ್ನು ಅಳೆಯುವುದನ್ನು ನಿಲ್ಲಿಸುವುದಿಲ್ಲ ಅಲ್ಲವೇ? ವ್ಯಕ್ತಿಯ ಡ್ರೆಸ್ಸಿಂಗ್ ನೋಡಿ ಮಾತ್ರವಲ್ಲ, ಆ ವ್ಯಕ್ತಿ ಧರಿಸಿದ ಪಾದರಕ್ಷೆ ನೋಡಿದರೆ ವ್ಯಕ್ತಿಯ ಗುಣ ತಿಳಿಯಬಹುದೆಂದು ಹೇಳುತ್ತಾರೆ. ಕೆಲವರಿಗೆ ಪ್ಲಾಟ್ ಶೂ ಇಷ್ಟ, ಮತ್ತೆ ಕೆಲವರಿಗೆ ಹೀಲ್ಡ್ ಶೂ ಇಷ್ಟ, ಮತ್ತೆ ಕೆಲವರಿಗೆ ಶೂ ಇಷ್ಟವಾಗುವುದಿಲ್ಲ ಸ್ಲಿಪ್ಪರ್ ಅಂದರೆ ಕಂಫರ್ಟ್ ಹೀಗೆ ಪಾದರಕ್ಷೆ ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಇಷ್ಟಗಳಿರುತ್ತದೆ. ನೀವು ಇಷ್ಟ ಪಡುವ ಬಗೆಯ ಪಾದರಕ್ಷೆ ನಿಮ್ಮ ಬಗೆ ಏನು ಹೇಳುತ್ತದೆ ಎಂದು ತಿಳಿಯುವ ಕುತೂಹಲವೇ ಹಾಗಾದರೆ ಮುಂದೆ ಓದಿ..

ಆದರೆ ಒಂದು ವಿಷಯ ವ್ಯಕ್ತಿಯ ಶೂ ಅಥವಾ ಡ್ರೆಸ್ಸಿಂಗ್ ನಿಂದ ಆ ವ್ಯಕ್ತಿಯ ವ್ಯಕ್ತಿತ್ವ ಅಳೆಯುತ್ತೀರೋ ಅಥವಾ ಗುಣದಿಂದ ಅಳೆಯುತ್ತೀರೋ ಅನ್ನುವುದು ನಿಮಗೆ ಬಿಟ್ಟದ್ದು:

ಪ್ಲಾಟ್ ಶೂ

ಪ್ಲಾಟ್ ಶೂ

ಪ್ಲಾಟ್ ಶೂ ಧರಿಸುವವರು ತುಂಬಾ ಮೃದು ಸ್ವಭಾವದವರು ಮತ್ತು ಸಂಪ್ರದಾಯಸ್ಥರು ಆಗಿರುತ್ತಾರೆ ಎಂದು ಹೇಳುತ್ತಾರೆ.

ಗಂಬೂಟ್ ಧರಿಸುವವರು

ಗಂಬೂಟ್ ಧರಿಸುವವರು

ಈ ರೀತಿಯ ಪಾದರಕ್ಷೆ ಧರಿಸಲು ಇಷ್ಟ ಪಡುವವರು ತುಂಬಾ ಮಹತ್ವಾಕಾಂಕ್ಷಿಗಳಾಗಿರುತ್ತಾರೆ, ಹಾಸ್ಯ ಸ್ವಭಾವದವರಾಗಿರುತ್ತಾರೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಮಂಡಿಯವರೆಗಿನ ಶೂ ಧರಿಸಿದರೆ ಅವರು ಸ್ವಲ್ಪ ಕ್ರೂರ ಪ್ರವೃತ್ತಿಯವರಾಗಿರುತ್ತಾರೆ ಎಂದು ಹೇಳುತ್ತಾರೆ.

ಮಂಡಿಯವರೆಗಿನ ಬೂಟ್

ಮಂಡಿಯವರೆಗಿನ ಬೂಟ್

ಮಂಡಿಯವರೆಗಿನ ಶೂ ಧರಿಸಲು ಇಷ್ಟ ಪಡುವವರು ತುಂಬಾ ಓಪನ್ ಮೈಂಡ್ ನವರು, ಯಾವುದೇ ವಿಷಯವನ್ನು ಮುಚ್ಚು ಮರೆಯಿಲ್ಲದೆ ಮಾತನಾಡುತ್ತಾರೆ ಅನ್ನುತ್ತಾರೆ.

ಹೈ ಹೀಲ್ಡ್

ಹೈ ಹೀಲ್ಡ್

ಹೈ ಹೀಲ್ಡ್ ಧರಿಸಿದರೆ ಅವರು ಫ್ಯಾಷನ್ ಪ್ರಿಯರಷ್ಟೇ ಅಲ್ಲ, ಆತ್ಮವಿಶ್ವಾಸ ಇರುವ ವ್ಯಕ್ತಿಗಳೆಂದು ಗುರುತಿಸಬಹುದು. ಆದರೆ ಹೈ ಹೀಲ್ಡ್ ಧರಿಸಿ ಸರಿಯಾಗಿ ನಡೆಯಲು ಬಾರದೆ ಒದ್ದಾಡುವವರು ಪೋಸ್ ರಾಣಿಗಳಂತೆ.

ಕಾನವರ್ಸ್ (Converse)

ಕಾನವರ್ಸ್ (Converse)

ಈ ರೀತಿಯ ಶೂ ಧರಿಸಲು ಇಚ್ಛೆ ಪಡುವವರು ತಮ್ಮ ಭೂತಕಾಲವನ್ನು ಮರೆಯಲು ಇಷ್ಟ ಪಡದವರು, ಅದರಲ್ಲೂ ಆದಂತಹ ಕಹಿ ನೆನಪನ್ನು ಮರೆಯಲು ಇಚ್ಚಿಸದವರು ಎಂದು ಅರ್ಥ.

ಬಣ್ಣದ ಶೂ

ಬಣ್ಣದ ಶೂ

ಬಣ್ಣದ ಶೂ ಧರಿಸಲು ಇಷ್ಟ ಪಡುವವರು ಎರಡು ಮುಖದ( ಮೋಸ ಮಾಡುವವರು) ವ್ಯಕ್ತಿಗಳಂತೆ.

ಜಾಗಿಂಗ್ ಮಾಡಲು ಬಳಸುವ ಶೂ

ಜಾಗಿಂಗ್ ಮಾಡಲು ಬಳಸುವ ಶೂ

ನೀವು ವ್ಯಾಯಾಮ ಮಾಡುತ್ತಿಲ್ಲ, ಆದರೆ ವ್ಯಾಯಾಮ ಮಾಡುವಾಗ ಬಳಸುವಂತಹ ಶೂ ಧರಿಸಿದ್ದರೆ ಅದು ನಿಮ್ಮನ್ನು ಶುದ್ಧ ಸೋಮಾರಿಯೆಂಬಂತೆ ಬಿಂಬಿಸುತ್ತದೆಯಂತೆ.

ಫ್ಲಿಪ್ ಫ್ಲಾಪ್ಸ್

ಫ್ಲಿಪ್ ಫ್ಲಾಪ್ಸ್

ಈ ರೀತಿಯ ಚಪ್ಪಲಿಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುವುದಾದರೂ, ಎಲ್ಲಾ ಸಂದರ್ಭದಲ್ಲಿ ಬಳಸಲು ಇಚ್ಛೆ ಪಡುವುದಿಲ್ಲ. ಆದರೆ ಏನೂ ಕೇರ್ ಮಾಡದೆ ಎಲ್ಲಿಗೆ ಹೋಗುವುದಾದರೂ ಆ ರೀತಿಯ ಚಪ್ಪಲಿ ಬಳಸುವುದಾದರೆ ಜೀವನದಲ್ಲಿ ಬರುವ ಘಟನೆಗಳಿಗೆ ತುಂಬಾ ತಲೆ ಕೆಡಿಸಿಕೊಳ್ಳದೆ ಕೂಲ್ ಆಗಿ ಇರುತ್ತಾರಂತೆ.

ಸ್ಯಾಂಡಲ್

ಸ್ಯಾಂಡಲ್

ನೀವು ಧರಿಸಿರುವ ಸ್ಯಾಂಡಲ್ ನಿಮ್ಮ ಅಭಿರುಚಿಯನ್ನು ಎತ್ತಿ ತೋರಿಸುತ್ತದೆಯಂತೆ.

ಮೀಡಿಯಂ ಗಾತ್ರದ ಹೀಲ್ಡ್

ಮೀಡಿಯಂ ಗಾತ್ರದ ಹೀಲ್ಡ್

ಮೀಡಿಯಂ ಗಾತ್ರ ಹೀಲ್ಡ್ ಧರಿಸಲು ಇಷ್ಟ ಪಡುವವರು ಜೀವನದಲ್ಲಿ ತುಂಬಾ ಕಂಫರ್ಟ್ ಆದ ವಿಷಯವನ್ನು ಮಾತ್ರ ಆಯ್ಕೆ ಮಾಡುತ್ತಾರಂತೆ.

Wedges

Wedges

ಈ ರೀತಿಯ ಚಪ್ಪಲಿ ಧರಿಸುವವರು ಕೂಡ ಎರಡು ರೀತಿಯ ಮುಖವುಳ್ಳವರಂತೆ.

Stiletto

Stiletto

ಈ ರೀತಿಯ ಶೂ ಧರಿಸುವ ಮಹಿಳೆಯರು ತುಂಬಾ ಕಟ್ಟು ಪಾಡಿನ ಒಳಗೆ ಇರಲು ಇಷ್ಟ ಪಡುವುದಿಲ್ಲವಂತೆ. ಹೊಸ-ಹೊಸ ವಿಷಯಗಳನ್ನು ತಿಳಿಯುವ ಕುತೂಹಲ ಇವರಲ್ಲಿ ಹೆಚ್ಚಿದ್ದು, ತಮಗೆ ಹೇಗೆ ಅನಿಸುತ್ತದೆಯೋ ಹಾಗೇ ಇರುತ್ತಾರಂತೆ.

ಪಾಯಿಂಟ್ ಹೀಲ್ಡ್ ಶೂ

ಪಾಯಿಂಟ್ ಹೀಲ್ಡ್ ಶೂ

ಪಾಯಿಂಟ್ ಹೀಲ್ಡ್ ಹಾಕುವವರು ಇನ್ನೊಬ್ಬರ ಮಾತನ್ನು ಸುಲಭವಾಗಿ ಒಪ್ಪುವುದಿಲ್ಲ, ತಾವು ಹೇಳಿದ್ದೇ ಸರಿ ಎಂದು ವಾದಿಸುವ ಪೈಕಿಯವರಂತೆ.

ಸ್ಯಾಂಡಲ್

ಸ್ಯಾಂಡಲ್

ನೀವು ಧರಿಸಿರುವ ಸ್ಯಾಂಡಲ್ ನಿಮ್ಮ ಅಭಿರುಚಿಯನ್ನು ಎತ್ತಿ ತೋರಿಸುತ್ತದೆಯಂತೆ.

English summary

Shoes Which Reveal Your Personality!

There are many stereotypical roles for the types of shoes people wear, here we have summed up a list of shoes and their personalities along with it. Lets take a look at some of the shoe personalities and know what kind of shoes you should wear.
X
Desktop Bottom Promotion