For Quick Alerts
ALLOW NOTIFICATIONS  
For Daily Alerts

ಕೇರಳ ಸ್ಯಾರಿಗೆ ಬೆಸ್ಟ್ ಮ್ಯಾಚಿಂಗ್ ಬ್ಲೌಸ್ ಡಿಸೈನ್

|

ಗಂಧ ಬಣ್ಣದ , ಗೋಲ್ಡನ್ ಜರಿ ಇರುವ ಕೇರಳ ಸೀರೆ ನೋಡಿದರೆ ಯಾವ ಹೆಣ್ಣಿಗೆ ತಾನೇ ಅದು ಇಷ್ಟವಾಗುವುದಿಲ್ಲ? ಈ ಸೀರೆಯ ಮತ್ತೊಂದು ವಿಶೇಷತೆವೆಂದರೆ ಎಲ್ಲಾ ಮೈ ಬಣ್ಣದವರೆಗೂ ಚೆನ್ನಾಗಿ ಒಪ್ಪುತ್ತೆ. ಕೇರಳಿಗರಿಗೆ ಈ ಸೀರೆ ತಮ್ಮ ಸಂಪ್ರದಾಯದ ಒಂದು ಭಾಗವಾಗಿದೆ. ಹಬ್ಬ, ಮದುವೆ ಸಂದರ್ಭಗಳಲ್ಲಿ ಈ ಸೀರೆಯನ್ನು ಹೆಚ್ಚಾಗಿ ಧರಿಸುತ್ತಾರೆ. ಇನ್ನು ಅಲ್ಲಿಯ ಸ್ತ್ರೀಯರು ದೇವಾಲಯಕ್ಕೆ ಹೋಗುವಾಗ ಹೆಚ್ಚಾಗಿ ಸೆಟ್ ಸ್ಯಾರಿ(ಕೇರಳ ಸೀರೆಯನ್ನೇ) ಧರಿಸುತ್ತಾರೆ.

ಈ ಸೀರೆಯಲ್ಲೂ ಎರಡು ವಿಧ ಇರುತ್ತದೆ. 1. ಸೆಟ್ ಮುಂಡು(ಅಂದರೆ 2 ಪಂಚೆ ಇರುತ್ತದೆ, ಒಂದನ್ನು ಪಂಚೆ ರೀತಿ ಉಟ್ಟು, ಮತ್ತೊಂದು ಪಂಚೆಯನ್ನು ನಮ್ಮಲ್ಲಿ ಧಾವಣಿ ಹಾಕುವ ರೀತಿ ಹಾಕುತ್ತಾರೆ) 2. ಸೆಟ್ ಸ್ಯಾರಿ. ಸೆಟ್ ಸ್ಯಾರಿ ಅಥವಾ ಸೆಟ್ ಮುಂಡ್ ಧರಿಸುವಾಗ ಆ ಸೀರೆಯಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಲು ಬ್ಲೌಸ್ ನ ಬಣ್ಣದ ಆಯ್ಕೆ ಬಗ್ಗೆ ಕೇರ್ ಫುಲ್ ಆಗಿರಬೇಕು. ಎಲ್ಲಾ ಬಣ್ಣದ ಬ್ಲೌಸ್ ಇದಕ್ಕೆ ಸರಿಹೊಂದುವುದಿಲ್ಲ. ಕೆಂಪು, ಹಸಿರು ಮತ್ತು ಗೋಲ್ಡನ್ ಬಣ್ಣದ ಬ್ಲೌಸ್ ಗಳು ಈ ರೀತಿಯ ಸೀರೆಗೆ ತುಂಬಾ ಆಕರ್ಷಕ.

ಇಲ್ಲಿ ನಾವು ಕೇರಳ ಸ್ಯಾರಿಗೆ ಸೂಕ್ತವಾಗುವ ಕೆಲ ಬ್ಲೌಸ್ ಡಿಸೈನ್ ಬಗ್ಗೆ ಹೇಳಿದ್ದೇವೆ ನೋಡಿ:

 ಗ್ರೀನ್ ಕಲರ್ ಬ್ಲೌಸ್

ಗ್ರೀನ್ ಕಲರ್ ಬ್ಲೌಸ್

ಚಿನ್ನದ ಬಣ್ಣದ ಜರಿ ಇರುವ ಗಂಧದ ಬಣ್ಣದ ಸೀರೆಗೆ ಕಡು ಹಸಿರು ಬಣ್ಣದ ಬ್ಲೌಸ್ ಹಾಕಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ತುಂಬಾ ಗ್ರ್ಯಾಂಡ್ ಕಾಣಿಸಲು ಬ್ಲೌಸ್ ಡಿಸೈನ್ ಗ್ರ್ಯಾಂಡ್ ಆಗಿರಲಿ.

 ಗ್ರೀನ್ ಕಲರ್ ಬ್ಲೌಸ್

ಗ್ರೀನ್ ಕಲರ್ ಬ್ಲೌಸ್

ಇಲ್ಲವೆಂದರೆ ಸಿಂಪಲ್ ಆಗಿರುವ ಹಸಿರು ಬಣ್ಣದ ಬ್ಲೌಸ್ ಧರಿಸಿದರೆ ಸಾಕು, ಅದರಲ್ಲೂ ಸರಳವಾಗಿ, ಆಕರ್ಷಕವಾಗಿ ಕಾಣುವಿರಿ.

 ಗ್ರೀನ್ ಕಲರ್ ಬ್ಲೌಸ್

ಗ್ರೀನ್ ಕಲರ್ ಬ್ಲೌಸ್

ಗ್ರ್ಯಾಂಡ್ ಕೇರಳ ಸ್ಯಾರಿಗೆ ಸಿಂಪಲ್ ಗ್ರಿನ್ ಕಲರ್ ಬ್ಲೌಸ್.

 ಗ್ರೀನ್ ಕಲರ್ ಬ್ಲೌಸ್

ಗ್ರೀನ್ ಕಲರ್ ಬ್ಲೌಸ್

ಇನ್ನು ಸೀರೆಯ ಬಾರ್ಡರ್ ಗ್ರೀನ್ ಕಲರ್ ಇದ್ದರೆ ಅದೇ ಬಣ್ಣದ ಬ್ಲೌಸ್ ಆಕರ್ಷಕವಾಗಿ ಕಾಣುವುದು. ಬಾರ್ಡರ್ ಗ್ರೀನ್ ಇದ್ದು, ಬ್ಲೌಸ್ ರೆಡ್ ಇದ್ದರೆ ಅಷ್ಟೊಂದು ಆಕರ್ಷಕವಾಗಿ ಕಾಣುವುದಿಲ್ಲ.

 ಗ್ರೀನ್ ಕಲರ್ ಬ್ಲೌಸ್

ಗ್ರೀನ್ ಕಲರ್ ಬ್ಲೌಸ್

ಕೆಂಪು ಬಣ್ಣದ ಬ್ಲೌಸ್ ಕೆಂಪು ಬಾರ್ಡರ್ ಇರುವ ಸೀರೆಗೆ ಮಾತ್ರವಲ್ಲ, ಗೋಲ್ಡನ್ ಬಾರ್ಡರ್ ಇರುವ ಸೀರೆಗೂ ಸೂಪರ್ ಮ್ಯಾಚಿಂಗ್.

ಗೋಲ್ಡನ್ ಕಲರ್ ಬ್ಲೌಸ್

ಗೋಲ್ಡನ್ ಕಲರ್ ಬ್ಲೌಸ್

ತರುಣಿಯರಿಗೆ ಗೋಲ್ಡನ್ ಬಣ್ಣದ ಬಣ್ಣದ ಬ್ಲೌಸ್ ಅನ್ನು ಈ ರೀತಿ ಫಫ್ ರೀತಿ ಹೊಲಿಸಿದರೆ ತುಂಬಾ ಆಕರ್ಷಕವಾಗಿ ಕಾಣುವುದು.

ಗೋಲ್ಡನ್ ಕಲರ್ ಬ್ಲೌಸ್

ಗೋಲ್ಡನ್ ಕಲರ್ ಬ್ಲೌಸ್

ಇದು ಸೆಟ್ ಮುಂಡ್ ಆಗಿದ್ದು ಬಿಳಿ ಬಣ್ಣದ ಬ್ಲೌಸ್ ಗೆ ಗೋಲ್ಡನ್ ಬಣ್ಣದ ತೋಳುಗಳು ಸೆಟ್ ಮುಂಡ್ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ಗೋಲ್ಡನ್ ಕಲರ್ ಬ್ಲೌಸ್

ಗೋಲ್ಡನ್ ಕಲರ್ ಬ್ಲೌಸ್

ಸೆಟ್ ಮುಂಡ್ ಗೆ ಫಫ್ ರೀತಿಯ ಬ್ಲೌಸ್ ಹೆಚ್ಚು ಆಕರ್ಷಕ. ಮಧ್ಯ ವಯಸ್ಸು ದಾಟಿದವರೆಗೆ ಕೆಂಪು ಮತ್ತು ಹಸಿರು ಬಣ್ಣದ ಬ್ಲೌಸ್ ಸರಳವಾಗಿ, ಆಕರ್ಷಕವಾಗಿ ಕಾಣುವುದು.

ಗೋಲ್ಡನ್ ಕಲರ್ ಬ್ಲೌಸ್

ಗೋಲ್ಡನ್ ಕಲರ್ ಬ್ಲೌಸ್

ಗೋಲ್ಡನ್ ಜರಿಯ ಸೀರೆಗೆ ಗೋಲ್ಡನ್ ಬ್ಲೌಸ್ ಮ್ಯಾಚಿಂಗ್ ನಲ್ಲಿ ಮಿಂಚಿದ ನೀರೆ.

ಗೋಲ್ಡನ್ ಕಲರ್ ಬ್ಲೌಸ್

ಗೋಲ್ಡನ್ ಕಲರ್ ಬ್ಲೌಸ್

ಬರೀ ಬಿಳಿ ಬ್ಲೌಸ್ ಬದಲು ಗೋಲ್ಡನ್ ಮಿಕ್ಸ್ ಗಂಧ ಬಣ್ಣದ ಬ್ಲೌಸ್ ಆಕರ್ಷಕವಾಗಿ ಕಾಣುವುದು.

ಬಿಳಿ ಕಲರ್ ಬ್ಲೌಸ್

ಬಿಳಿ ಕಲರ್ ಬ್ಲೌಸ್

ಕೇರಳ ಸ್ಯಾರಿಗೆ ಡಿಸೈನ್ ಇಲ್ಲದ ಬಿಳಿ ಬ್ಲೌಸ್ ಆಕರ್ಷಕವಾಗಿ ಕಾಣುವುದಿಲ್ಲ, ಆದರೆ ಗೋಲ್ಡನ್ ಬಾರ್ಡರ್ ಇರುವ ಡ್ರೆಸ್ ಆಕರ್ಷಕವಾಗಿ ಕಾಣುವುದು.

English summary

Right Clour Blouse For Kerala Saree

Kerala saree are characterised by their serene white colour and simple borders. There is not much you need to do in order to look classy in a Kerala saree. They are so unique in their simplicity that they will make you look gorgeous anyway.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more