For Quick Alerts
ALLOW NOTIFICATIONS  
For Daily Alerts

ಓ ಮೈ ಗಾಡ್! ಸೀರೆಯನ್ನೂ ಹೀಗೂ ಉಡಬಹುದೇ?

|

ಭಾರತೀಯ ನಾರಿ ಅಂದ ತಕ್ಷಣ ಕಣ್ಣ ಮುಂದೆ ಬರುವುದು ಸೀರೆಯುಟ್ಟ ನಾರಿಯರ ಚಿತ್ರಣ. ಸೀರೆ ನಮ್ಮ ಸಾಂಪ್ರದಾಯಿಕವಾದ ಉಡುಗೆ. ಈ ಸೀರೆಯನ್ನೂ ಅನೇಕ ರೀತಿಯಲ್ಲಿ ಉಡುವುದನ್ನು ಕಾಣುತ್ತೇವೆ. ಅವರ ಉಟ್ಟ ಸೀರೆಯ ರೀತಿಯಿಂದ ಅವರು ಯಾವ ಪ್ರದೇಶಕ್ಕೆ ಸೇರಿದವರು, ಯಾವ ಪಂಗಡಕ್ಕೆ ಸೇರಿದವರು ಎಂದು ಗುರುತಿಸಬಹುದು. ಉದಾಹರಣೆಗೆ ಕೊಡವ ಸೀರೆ ಉಟ್ಟವರನ್ನು ನೋಡಿದರೆ ಇವರು ಕೊಡಗಿನವರು ಎಂದು ತಿಳಿಯುತ್ತದೆ. ಇನ್ನು ತಮಿಳು ನಾಡಿನ ಸಾಂಪ್ರಾದಾಯಕವಾಗಿ ಸೀರೆ ಉಡುವ ರೀತಿಯೆಂದರೆ ಕಚ್ಚೆ ರೀತಿ ಉಡುವುದು, ಕೇರಳದಲ್ಲಿ ಸೆಟ್ ಮುಂಡ್ , ಲಂಬಾಣಿ ಸ್ಟೈಲ್, ಅಸ್ಸಾಂ ಸ್ಟೈಲ್ ಹೀಗೆ ಸೀರೆಯನ್ನು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ಉಡಬಹುದು.

ಸೀರೆಯ ವಿನ್ಯಾಸದಲ್ಲಿ ಹೊಸ-ಹೊಸ ಫ್ಯಾಷನ್ ಸೀರೆ ಬರಬಹುದು ಆದರೆ ಸೀರೆ ಉಡುಗೆ ಮಾತ್ರ ಭಾರತದಲ್ಲಿ ಯಾವತ್ತಿಗೂ ಔಟ್ ಆಫ್ ಫ್ಯಾಷನ್ ಆಗುವುದೇ ಇಲ್ಲ. ಈ ಸೀರೆಯ ಮತ್ತೊಂದು ವಿಶೇಷತೆ ಅಂದರೆ ಇದನ್ನು ಗರತಿ ಗೌರಮ್ಮನಂತಲೂ ಉಡಬಹುದು, ಅತ್ಯಂತ ಸೆಕ್ಸಿಯಾಗಿ ಕಾಣುವಂತೆಯೂ ಉಡಬಹುದು. ಸೀರೆಯನ್ನು ಹೇಗೆ ಉಡಬೇಕು ಅನ್ನುವುದು ಅವರವರ ಅಭಿರುಚಿಗೆ ಬಿಟ್ಟದ್ದು.

ಆದರೆ ಈ ರೀತಿಯಲ್ಲೂ ಸೀರೆ ಉಡಬಹುದು ಅನ್ನುವುದು ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ, ನೋಡಿರಲಿಕ್ಕಿಲ್ಲ. ಸೀರೆಯನ್ನು ಸ್ವಲ್ಪ ಭಿನ್ನವಾಗಿ, ಫ್ಯಾಷನಬಲ್ ಆಗಿ ಯಾವ ರೀತಿ ಉಟ್ಟಿದ್ದಾರೆ ಎಂದು ತಿಳಿಯಲು ಕೆಳಗಿನ ಸ್ಲೈಡ್ ನೋಡಿ:

ಸೀರೆಯನ್ನು ಸುತ್ತಿದ್ದಲ್ಲ, ಉಟ್ಟಿದ್ದೇ

ಸೀರೆಯನ್ನು ಸುತ್ತಿದ್ದಲ್ಲ, ಉಟ್ಟಿದ್ದೇ

ಇದನ್ನು ನೋಡಿದಾಗ ಸೀರೆ ತೆಗೆದು ಸುಮ್ಮನೆ ಸುತ್ತಿದ್ದಂತೆ ಕಾಣುತ್ತದೆ ಅಲ್ಲವೇ? ಸೀರೆಯನ್ನು ಫ್ಯಾಷನಬಲ್ ಆಗಿ ಕಾಣುವಂತೆ ಸುತ್ತುವುದು ಕೂಡ ಒಂದು ಕಲೆ. ಏನಂತೀರಿ?

 ಲಂಗ ದಾವಣಿಯ ರೀತಿಯಲ್ಲಿ ಉಟ್ಟ ಸೀರೆ

ಲಂಗ ದಾವಣಿಯ ರೀತಿಯಲ್ಲಿ ಉಟ್ಟ ಸೀರೆ

ತಕ್ಷಣ ನೋಡಿದಾಗ ಲಂಗ ದಾವಣಿ ಉಟ್ಟಂತೆ ಕಾಣುತ್ತದೆ. ಆದರೆ ಇದು ಸೀರೆಯನ್ನು ಆ ರೀತಿ ಉಟ್ಟಿದ್ದು.

ಚೂಡಿದಾರ್ ಅಲ್ಲ, ಸೀರೆ ಇದು

ಚೂಡಿದಾರ್ ಅಲ್ಲ, ಸೀರೆ ಇದು

ಇದು ಕೂಡ ಅನಾರ್ಕಲಿ ಫ್ಯಾಷನ್ ಚೂಡಿಯಂತೆ ಕಂಡರೂ ಚೂಡಿಯಲ್ಲ. ಈ ಉಡುಗೆಯಲ್ಲಿ ಸೀರೆಗೆ ನೆರಿಗೆ ತೆಗೆದಿಲ್ಲ. ಸೆರಗನ್ನು ದುಪ್ಪಟ ರೀತಿ ಹಾಕಲಾಗಿದೆ ಅಷ್ಟೇ.

ಈ ವೇಷ ಹೇಗಿದೆ?

ಈ ವೇಷ ಹೇಗಿದೆ?

ಈ ಮಾಡಲ್ ನೋಡಿ. ಸೀರೆಯನ್ನು ಮಾಮೂಲಿ ರೀತಿ ಉಟ್ಟಿದ್ದಾಳೆ. ಆದರೆ ಸೆರಗಿನಲ್ಲಿ ಸ್ವಲ್ಪ ವ್ಯತ್ಯಾಸ ಕಾಣುತ್ತಿದೆ ಅಲ್ಲವೇ? ಸೆರಗನ್ನು ಶಾಲ್ ರೀತಿ ಹಾಕಲಾಗಿದೆ. ಈ ರೀತಿ ಟ್ರೈ ಮಾಡಿದರೆ ಫ್ಯಾಷನ್ ಡಿಸೈನರ್ ಸಹಾಯವಿಲ್ಲದೆ ನಾವೂ ಉಡಬಹುದು ಅನಿಸುತ್ತಿದೆ ಅಲ್ಲವೇ?

ಸೊಂಟದ ಪಟ್ಟಿ

ಸೊಂಟದ ಪಟ್ಟಿ

ಸೊಂಟದ ಪಟ್ಟಿ ಇಂದಿನ ಕಾಲದಿಂದಲೂ ಇದೆ. ಇತ್ತೀಚಿನ ದಿನಗಳಲ್ಲಿ ಯಾರೂ ಹಾಕಲು ಇಷ್ಟಪಡುತ್ತಿಲ್ಲವಷ್ಟೇ. ಹಳೆ ಸ್ಟೈಲ್, ಹೊಸ ವಿನ್ಯಾಸದಲ್ಲಿ ಹೇಗೆ ಗಮನ ಸೆಳೆಯುತ್ತದೆ ನೋಡಿ?

ಪ್ಯಾಂಟ್ ರೀತಿಯಲ್ಲೂ ಸೀರೆ ಉಡಬಹುದೇ?

ಪ್ಯಾಂಟ್ ರೀತಿಯಲ್ಲೂ ಸೀರೆ ಉಡಬಹುದೇ?

ಇಲ್ಲಿ ನೋಡಿ ಸೀರೆಯನ್ನು ಪ್ಯಾಂಟ್ ರೀತಿ ಉಡಲಾಗಿದೆ.

 ಸೆರಗಿನ ಸ್ಟೈಲ್ ಸ್ವಲ್ಪ ಭಿನ್ನವಾಗಿದೆ

ಸೆರಗಿನ ಸ್ಟೈಲ್ ಸ್ವಲ್ಪ ಭಿನ್ನವಾಗಿದೆ

ಈ ಸೀರೆಯನ್ನು ಮಾಮೂಲಿ ರೀತಿ ಉಟ್ಟು ಸೆರಗನ್ನು ಕುತ್ತಿಗೆಯ ಹಿಂದುಗಡೆಯಿಂದ, ಮುಂದೆಕ್ಕೆ ತಂದು ಅದನ್ನು ಫ್ಯಾಷನಬಲ್ ಟಾಪ್ ರೀತಿ ಮಾಡಲಾಗಿದೆ.

ಅಪ್ಸರಾ ಸ್ಟೈಲ್

ಅಪ್ಸರಾ ಸ್ಟೈಲ್

ಈ ರೀತಿಯಲ್ಲಿ ಸೀರೆ ಉಟ್ಟರೆ ಅದು ಅಪ್ಸರೆ ಸ್ಟೈಲ್ ಅಂತೆ. ಈ ರೀತಿಯ ಉಡುಗೆ ನೋಡಲು ಆಕರ್ಷಕವಾಗಿದೆ. ಆದರೆ ಸೀರೆಯನ್ನು ಈ ರೀತಿ ಉಡುವುದು ದೇವಾರಣೆಗೂ ನಂಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ..

ಕೌಲ್ ನೆಕ್ ಸೀರೆ

ಕೌಲ್ ನೆಕ್ ಸೀರೆ

ಈ ಸೀರೆ ಮೇಲೆರುವ ಜಾಕೆಟ್ ಈ ಉಡುಗೆಯ ಪ್ರಮುಖ ಆಕರ್ಷಣೆಯಾಗಿದೆ. ಬೇಸಿಗೆಗೆ ತುಂಬಾ ಸುಕ್ತವಾದ ಉಡುಗೆ ರೀತಿ ತೋರುತ್ತಿದೆ ಅಲ್ಲವೇ?

ಲಂಗದ ರೀತಿಯ ಸೀರೆ

ಲಂಗದ ರೀತಿಯ ಸೀರೆ

ಇಲ್ಲಿ ನೆರಿಗೆಯನ್ನು ಸ್ವಲ್ಪ ಭಿನ್ನವಾಗಿ ತೆಗೆಯಲಾಗಿದೆ. ಆದ್ದರಿಂದ ಇದು ಫ್ರಿಲ್ ಇರುವ ಮಿಡಿ ರೀತಿ ಕಾಣುತ್ತದೆ.

 ಇದು ಗೌನ್ ಅಲ್ಲ

ಇದು ಗೌನ್ ಅಲ್ಲ

ಈ ಮಾಡಲ್ ಅನ್ನು ನೋಡಿ. ಸ್ಯಾರಿಯನ್ನು ಗೌನ್ ರೀತಿಯಲ್ಲಿ ಧರಿಸಿದ್ದಾಳೆ. ಈ ರೀತಿಯ ಉಡುಗೆ ತುಂಬಾ ಸ್ಟೈಲಿಷ್ ಆಗಿ ಕಾಣುತ್ತಿದೆ ಅಲ್ಲವೇ?

ಈ ವೇಷಕ್ಕೆ ಏನು ಅನ್ನಬೇಕೋ ತೋಚುತ್ತಿಲ್ಲ

ಈ ವೇಷಕ್ಕೆ ಏನು ಅನ್ನಬೇಕೋ ತೋಚುತ್ತಿಲ್ಲ

ಕನ್ನಡ ಸೀರೆ ಹಾಗೂ ಗುಜರಾತಿ ಸೀರೆ ಸ್ಟೈಲ್ ಮಿಶ್ರವಾಗಿ ಈ ವೇಷ ಕಾಣುತ್ತದೆ. ಮಾಮೂಲಿ ನೆರಿಗೆ ತೆಗೆದು, ಸೆರಗನ್ನು ಮುಂದುಗಡೆ ಹಾಕಲಾಗಿದೆ.

ಸ್ಯಾರಿಯ ಮೇಲೆ ಬ್ಲೌಸ್

ಸ್ಯಾರಿಯ ಮೇಲೆ ಬ್ಲೌಸ್

ಸಾಮಾನ್ಯವಾಗಿ ಬ್ಲೌಸ್ ಹಾಕಿ ಸ್ಯಾರಿ ಉಡಲಾಗುವುದು. ಆದರೆ ಇಲ್ಲಿ ಸ್ಯಾರಿ ಉಟ್ಟು ಅದರ ಮೇಲೆ ಕೋಟ್ ರೀತಿಯ ಬ್ಲೌಸ್ ಹಾಕಲಾಗಿದೆ.

ಗುಜರಾತಿ ಸ್ಟೈಲ್ ಅಲ್ಲ

ಗುಜರಾತಿ ಸ್ಟೈಲ್ ಅಲ್ಲ

ಗುಜರಾತಿ ಸೀರೆಯಲ್ಲಿ ಪಲ್ಲು ಬಲಭಾಗದಿಂದ ಹಾಕಲಾಗುವುದು, ಆದರೆ ಇಲ್ಲಿ ಎಡ ಭಾಗದಿಂದ ಹಾಕಲಾಗಿದೆ. ಅಷ್ಟು ಬಿಟ್ಟರೆ ಮತ್ತೇನು ವಿಷೇಷವಿಲ್ಲ ಈ ಉಡುಗೆಯಲ್ಲಿ.

 ಶಾಲ್

ಶಾಲ್

ಸೀರೆಯ ಸೆರಗನ್ನು ಶಾಲ್ ರೀತಿಯಲ್ಲಿ ಹೇಗೆ ಹಾಕಲಾಗಿದೆ ನೋಡಿ? ತಕ್ಷಣ ನೋಡಿದರೆ ರಾಜಕಾರಣಿ ವೇಷದಂತೆ, ಟೋಪಿ ನೋಡಿದರೆ ಪೋಲೀಸ್ ವೇಷದಂತೆ ಕಾಣುತ್ತದೆ.

English summary

New Saree Draping Styles |Fashion And Lifestyle | ಸೀರೆಯನ್ನೂ ಹೀಗೂ ಉಡಬಹುದೇ? | ಫ್ಯಾಷನ್ ಮತ್ತು ಜೀವನ ಶೈಲಿ

You will see many people draping their sarees differently these days. This is because fashion designers have started experimenting with different and new saree draping styles that were never seen before.
X
Desktop Bottom Promotion