For Quick Alerts
ALLOW NOTIFICATIONS  
For Daily Alerts

ಬೀರ್ ಬಗ್ಗೆ ಕೆಲ ಆಸಕ್ತಿಕರ ವಿಷಯಗಳು

By ವಿವೇಕ್
|

ಬೀರ್ ಒಂದು ಬಗೆಯ ಮದ್ಯವಾದರೂ, ಇದನ್ನು ಮಿತಿಯಲ್ಲಿ ಕುಡಿದರೆ ಆರೊಗ್ಯಕ್ಕೆ ಒಳ್ಳೆಯದು ಅನ್ನುವ ಅಂಶ ಈಗಾಗಲೇ ತಿಳಿದಿರುತ್ತೀರಿ. ಕೆಲ ಮದ್ಯ ಪ್ರಿಯರಿಗೆ ಈ ಪಾಯಿಂಟ್ ವರದಾನವಾಗಿದೆ. ಬೀರ್ ಕುಡಿದರೆ ಒಳ್ಳೆಯದೆಂದು ಕೂತಲ್ಲಿಯೇ 3-4 ಬಾಟಲ್ ಬೀರ್ ಕುಡಿಯುತ್ತಾರೆ. ಆದರೆ ಹೀಗೆ ಮಾಡಿದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ. ಅದೇನೆ ಇರಲಿ, ಇವತ್ತು ನಾವು ಬೀರ್ ನ ಗುಣ, ಅವಗುಣಗಳ ಬಗ್ಗೆ ಇಲ್ಲಿ ಚರ್ಚಿಸುತ್ತಿಲ್ಲ.

ಇಲ್ಲಿ ನಾವು ಬೀರ್ ನ ಕೆಲವೊಂದು ಆಸಕ್ತಿಕರ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಅದೇನೆಂದು ತಿಳಿಯುವ ಕುತೂಹಲ ನಿಮ್ಮಲ್ಲಿಯೂ ಇದೆ ತಾನೆ? ಹಾಗಾದರೆ ಮುಂದೆ ಓದಿ:

ಬೀರ್ ಬ್ರ್ಯಾಂಡ್

ಬೀರ್ ಬ್ರ್ಯಾಂಡ್

ಸುಮಾರು 400 ಬಗೆಯ ಬೀರ್ ಬ್ರ್ಯಾಂಡ್ ಗಳಿವೆ. ಅದರಲ್ಲೂ ನೀವು ಬೆಲ್ಜಿಯಂಗೆ ಹೋದರೆ ಅಲ್ಲಿ ಎಲ್ಲಾ ಬಗೆಯ ಬ್ರ್ಯಾಂಡ್ ನ ಬೀರುಗಳು ದೊರೆಯುವುದಂತೆ.

ಬೀರ್ ಫೋಬಿಯಾ

ಬೀರ್ ಫೋಬಿಯಾ

ಈ ರೀತಿಯ ಕಾಯಿಲೆಯ ಬಗ್ಗೆ ಕೇಳಿದ್ದೀರಾ, ಇದನ್ನು ವೈಜ್ಞಾನಿಕವಾಗಿ Cenosillicaphobia ಎಂದು ಕರೆಯುತ್ತಾರೆ. ಇಂಥವರಿಗೆ ಖಾಲಿ ಬೀರ್ ಬಾಟಲಿ ಕಂಡರೆ ಭಯವಂತೆ. ಈ ಕಾಯಿಲೆ ಇರುವವರು ಕುಡುಕರಾಗುತ್ತಾರೆ.

ಮೂಲ ಬೀರ್

ಮೂಲ ಬೀರ್

ಮೊದಲಿಗೆ ಬೀರ್ ಅನ್ನು Chicha ಎಂಬ ವಸ್ತುವಿನಿಂದ ತಯಾರಿಸಲಾಯಿತು.

ಶೀತದ ವಿರುದ್ಧ ಹೋರಾಡುತ್ತದೆ

ಶೀತದ ವಿರುದ್ಧ ಹೋರಾಡುತ್ತದೆ

ಬೀರ್ ನಲ್ಲಿ ಆಂಟಿ ಸೆಪ್ಟಿಕ್ ಗುಣವಿದ್ದು ಇದು ಶೀತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಶೀತಕ್ಕೆ ಮನೆ ಮದ್ದಾಗಿ ಬಳಸಲು ಬಯಸುವುದಾದರೆ ಮಿತಿಯಲ್ಲಿ ಕುಡಿಯಿರಿ.

ಹೃದಯದ ಸ್ವಾಸ್ಥ್ಯಕ್ಕೆ

ಹೃದಯದ ಸ್ವಾಸ್ಥ್ಯಕ್ಕೆ

ಯಾವುದೇ ಬಗೆಯ ಹೃದಯದ ಸಮಸ್ಯೆ ಇದ್ದರೂ ದಿನಾ ಬೀರ್ ಕುಡಿಯುವುದು ಒಳ್ಳೆಯದಂತೆ. ಆಸಕ್ತಿಕರ ವಿಷಯವೆಂದರೆ ಇದು ಪ್ಲಾಸ್ಮಾ antioxidants ಅನ್ನು ರಕ್ಷಣೆ ಮಾಡಿ, ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ.

ಹೆಣ್ಣಿನ ಸೌಂದರ್ಯ ಮತ್ತು ಬೀರ್

ಹೆಣ್ಣಿನ ಸೌಂದರ್ಯ ಮತ್ತು ಬೀರ್

ಹಿಂದೆಯೆಲ್ಲಾ ಯಾವ ಹೆಣ್ಣು ಸುಂದರಿಯೂ ಮತ್ತು ಬುದ್ಧಿಮತಿಯೂ ಆಗಿರುತ್ತಾಳೋ ಅವಳಿಗೆ ಮಾತ್ರ ಬೀರ್ ಕುಡಿಯುವ ಅವಕಾಶವಿತ್ತು ಎಂಬ ಆಸಕ್ತಿಕರ ಪುರಾಣ ಕಥೆಗಳು ಕೂಡ ಬೀರ್ ಬಗ್ಗೆ ಇದೆ.

 ಮೂಳೆಯ ಆರೋಗ್ಯಕ್ಕೆ ಒಳ್ಳೆಯದು

ಮೂಳೆಯ ಆರೋಗ್ಯಕ್ಕೆ ಒಳ್ಳೆಯದು

ಬೀರ್ ಕುಡಿಯುವುದರಿಂದ ಮೂಳೆಗಳು ಬಲವಾಗುತ್ತದೆ ಅದಕ್ಕೆ ಕಾರಣ ಇದರಲ್ಲಿರುವ ಸಿಲಿಕಾನ್ ಅಂಶ.

ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತದೆ

ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತದೆ

ದಿನಾ ಒಂದು ಗ್ಲಾಸ್ ಬೀರ್ ಕುಡಿದರೆ ಬುದ್ಧಿ ಶಕ್ತಿ ಹೆಚ್ಚುವುದಂತೆ, ಹಾಗಂತ ಮಕ್ಕಳಿಗೆ ಕೊಡಬೇಡಿ.

 ಶಕ್ತಿವರ್ಧಕ ಪಾನೀಯ

ಶಕ್ತಿವರ್ಧಕ ಪಾನೀಯ

ನಿಶ್ಯಕ್ತಿಯಿಂದ ಬಳಲುತ್ತಿದ್ದರೆ ದಿನಾ ಸ್ವಲ್ಪ ಬೀರ್ ಕುಡಿದರೆ ಬೇಗನೆ ಚೇತರಿಸಿಕೊಳ್ಳಬಹುದೆಂದು ಸಂಶೋಧನೆಯಿಂದ ಸಾಭೀತಾಗಿದೆ.

ದುಬಾರಿಯಾದ ಬೀರ್

ದುಬಾರಿಯಾದ ಬೀರ್

Vielle Bon Secours ಎಂಬ ಬೀರ್ ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಬೀರಾಗಿದ್ದು, ಲಂಡನ್ ನ ಬಾರ್ ಗಳಲ್ಲಿ ಮಾತ್ರ ಈ ಬೀರ್ ದೊರೆಯುವುದು.

English summary

Interesting Facts About Beer

Did you know that there are multiple facts and myths about beer that have been circulating for ages now? These facts on beer are however true and if you read on, you will be amazed.
X
Desktop Bottom Promotion