For Quick Alerts
ALLOW NOTIFICATIONS  
For Daily Alerts

ಇವು ಅಂತಿಂತ ಚೆಲುವಿನ ಕಾಟನ್ ಸೀರೆಗಳಲ್ಲ!

|

ಬೇಸಿಗೆಯಲ್ಲಿ ಕಾಟನ್ ಸೀರೆಯಷ್ಟು ಕಂಫರ್ಟ್ ಆದ ಸೀರೆ ಮತ್ತೊಂದಿಲ್ಲ. ಕಾಟನ್ ಸೀರೆಯನ್ನು ಐರನ್ ಹಾಕಿ ನೀಟಾಗಿ ಉಟ್ಟರೆ ನೋಡಲು ತುಂಬಾ ಆಕರ್ಷಕವಾಗಿ ಕಾಣುವುದು.

ಕಾಟನ್ ಸೀರೆಯಲ್ಲಿ ಅನೇಕ ಬಗೆಯ ಸೀರೆಗಳಿವೆ. ಆಫೀಸ್ ಗೆ ಹೋಗುವಾಗ ಸಿಂಪಲ್ ಕಾಟನ್ ಸೀರೆ ಸಾಕು, ಅದೇ ಮದುವೆ, ಮತ್ತಿತರ ಸಮಾರಂಭಗಳಿಗೆ ಹೋಗುವಾಗ ಸ್ವಲ್ಪ ಗ್ರ್ಯಾಂಡ್ ಆಗಿ ಡ್ರೆಸ್ ಮಾಡಲು ಇಷ್ಟಪಡುತ್ತೇವೆ. ಕಾಟನ್ ಸೀರೆಯಲ್ಲೂ ದುಬಾರಿಯಾದ ಗ್ರ್ಯಾಂಡ್ ಸೀರೆಯಿದೆ. ಅದನ್ನು ಆಯ್ಕೆ ಮಾಡಬಹುದು.

ಇಲ್ಲಿ ನಾವು ಭಾರತೀಯರ ಮಹಿಳೆಯರ ಮನಗೆದ್ದ ಫೇಮಸ್ ಕಾಟನ್ ಸೀರೆಗಳ ಬಗ್ಗೆ ಹೇಳಿದ್ದೇವೆ ನೋಡಿ:

 ತಾಂತ್

ತಾಂತ್

ತಾಂತ್ ಸೀರೆಯನ್ನು ಬೆಂಗಾಳಿ ಹೆಣ್ಣು ಮಕ್ಕಳು ಹೆಚ್ಚಾಗಿ ಉಡುತ್ತಾರೆ. ಇದರಲ್ಲಿ ಅನೇಕ ವಿನ್ಯಾಸದಲ್ಲಿ ದೊರೆಯುತ್ತದೆ. ಈ ಸೀರೆಯನ್ನು ಒಗೆದರೆ ಗಂಜಿ ಮುಳುಗಿಸಿ ಒಣಗಿಸಿ ಉಟ್ಟರೆ ಮಾತ್ರ ಈ ಸೀರೆ ತುಂಬಾ ಆಕರ್ಷಕವಾಗಿ ಕಾಣುವುದು.

ಖಾದಿ

ಖಾದಿ

ಖಾದಿ ಸೀರೆ ಉಡುವುದು ಈಗೀನ ಟ್ರೆಂಡ್ ಕೂಡ ಹೌದು. ಬಿಳಿ ಖಾದಿಗೆ ಬಾರ್ಡರ್ ಡಿಸೈನ್ ಇದ್ದರೆ ನೋಡಲು ತುಂಬಾ ಆಕರ್ಷಕವಾಗಿ ಕಾಣುವುದು.

ಧಾಕೈ

ಧಾಕೈ

ಧಾಕೈ ಸೀರೆ ಮೂಲತಃ ಬಾಂಗ್ಲಾದೇಶದ ಸೀರೆಯಾಗಿದೆ. ಈ ಆಕರ್ಷಕ ವಿನ್ಯಾಸದ ಸೀರೆ ಕೋಲ್ಕತಾದ ನಾರಿಯರ ಮೆಚ್ಚಿನ ಸೀರೆಯಾಗಿದೆ. ಸಾಮಾನ್ಯ ದಾಕೈ ಸೀರೆ ನೋಡಲು ಸಿಂಪಲ್ ಆಗಿದ್ದರೆ ಜಾಮ್ದಾನಿ ದಾಕೈ ಸೀರೆಯಲ್ಲಿ ಗೋಲ್ಡನ್ ಥ್ರೆಡ್ ವಿನ್ಯಾಸವಿದ್ದು ನೋಡಲು ಆಕರ್ಷಕವಾಗಿ ಕಾಣುವುದು.

 ಲಕ್ನೋವಿ ಚಿಕನ್ (lucknowi chikan)

ಲಕ್ನೋವಿ ಚಿಕನ್ (lucknowi chikan)

ಈ ಸೀರೆಗೆ ತನ್ನದೇ ಆದ ಎಂಬ್ರಾಯ್ಡ್ ಶೈಲಿಯಿದೆ. ಈ ಎಂಬ್ರಾಯ್ಡ್ ಅನ್ನು ಸೀರೆಗೆ ವಿರುದ್ಧವಾದ ಬಣ್ಣದ ನೂಲಿನಿಂದ ತಯಾರಿಸಲಾಗುವುದು.

ಸಂಬಾಲ್ ಪುರಿ

ಸಂಬಾಲ್ ಪುರಿ

ಇದು ಒಡಿಸ್ಸಾದ ಫೇಮಸ್ ಸೀರೆಯಾಗಿದೆ. ಈ ಸೀರೆಯ ಪ್ರಮುಖ ಆಕರ್ಷಣೆ ಅದರ ಸೆರಗು.

 ಕಾಂಜಿವರಂ

ಕಾಂಜಿವರಂ

ಇದು ತಮಿಳುನಾಡಿನಲ್ಲಿ ತುಂಬಾ ಫೇಮಸ್. ಕರ್ನಾಟಕದಲ್ಲೂ ಈ ಸೀರೆ ಪ್ರಸಿದ್ಧಿಯನ್ನು ಪಡೆದಿದೆ. ಕಾಂಜೀವರಂ ಸಿಲ್ಕ್ ನಲ್ಲಿ ದೊರೆಯುವಂತೆ ಕಾಟನ್ ನಲ್ಲೂ ನಾನಾ ಬಗೆಯ ಸೀರೆಗಳು ದೊರೆಯುತ್ತದೆ.

 ಕೋಟ್ಕಿ

ಕೋಟ್ಕಿ

ಈ ಸೀರೆಯ ಬಾರ್ಡರ್ ನಲ್ಲಿ ದೇಗುಲಗಳ ಚಿತ್ರಣವಿರುತ್ತದೆ. ಈ ಸೀರೆಗಳು ಸ್ವಲ್ಪ ಶೇಡ್ ಬಣ್ಣದಲ್ಲಿದ್ದು ನೋಡಲು ಅತ್ಯಾಕರ್ಷಕವಾಗಿರುತ್ತದೆ.

ಬೊಂಕೈ

ಬೊಂಕೈ

ಇದು ಕೂಡ ಒಡಿಸ್ಸಾದ ಫೇಮಸ್ ಕಾಟನ್ ಸೀರೆಯಾಗಿದೆ. ಈ ಸೀರೆಯ ಸೆರಗಿನ ಡಿಸೈನ್ ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿದೆ, ಅದಲ್ಲದೆ ಸೀರೆಯಲ್ಲಿ ಚಿಕ್ಕ ಚಿಕ್ಕ ಚುಕ್ಕಿಗಳಿರುತ್ತದೆ.

ಪೋಚಂಪಲ್ಲಿ

ಪೋಚಂಪಲ್ಲಿ

ಪೋಚಂಪಲ್ಲಿ ಕಾಟನ್ ಸೀರೆ ಅದರ ಪ್ಯಾಟರ್ನ್ ಗೆ ಹಾಗೂ ಬಣ್ಣದ ಕಾಂಬಿನೇಷನ್ ಗೆ ಪ್ರಸಿದ್ಧಿಯನ್ನು ಪಡೆದಿದೆ.

 ಜಂದಾನಿ

ಜಂದಾನಿ

ಇದು ವಿಶಿಷ್ಠವಾದ ಎಂಬ್ರಾಯ್ಡ್ ಸೀರೆಯಾಗಿದೆ. ಇದರ ಎಂಬ್ರಾಯ್ಡ್ ಗೆ ಗೋಲ್ಡನ್ ಥ್ರೆಡ್ (ಚಿನ್ನದ ಬಣ್ಣದ ನೂಲನ್ನು) ಬಳಸಲಾಗುವುದು. ಇದರಲ್ಲಿ ಸಿಂಪಲ್ ಸೀರೆಗೆ ಪ್ಲೇನ್ ನೂಲನ್ನು ಬಳಸಲಾಗುವುದು.

 ಪಾಸಾಪಲ್ಲಿ

ಪಾಸಾಪಲ್ಲಿ

ಇದು ಕೂಡ ಒಡಿಸ್ಸಾದ , ಭಾರತದಲ್ಲಿ ಪ್ರಸಿದ್ಧಿಯನ್ನು ಪಡೆದಂತಹ ಕಾಟನ್ ಸೀರೆಯಾಗಿದೆ. ಇದನ್ನು ಕೈಯಲ್ಲಿಯೇ ನೇಯಲಾಗುವುದು.

ಚಾಂದೆರಿ

ಚಾಂದೆರಿ

ಈ ಸೀರೆ ಸ್ವಲ್ಪ ತೆಳುವಾದ ಸೀರೆಯಾಗಿದೆ. ಚಾಂದೆರಿ ಕಾಟನ್ ಸೀರೆ ತುಂಬಾ ಲೈಟ್ ಬಣ್ಭದಲ್ಲಿರುತ್ತದೆ, ಅದರಲ್ಲಿ ಹೊಳೆಯುವ ವಿನ್ಯಾಸವಿರುತ್ತದೆ.

ಕೋಟಾ

ಕೋಟಾ

ಇದು ರಾಜಾಸ್ಥಾನದ ಕಡೆಯ ಸೀರೆಯಾಗಿದೆ. ಫಂಕ್ಷನ್ ಗೆ ಹೋಗುವಾಗ ಧರಿಸಲು ಸೂಕ್ತವಾದ ಗ್ರ್ಯಾಂಡ್ ಲುಕ್ ನ ಕಾಟನ್ ಸೀರೆ ಇದಾಗಿದೆ.

ಸೂಪರ್ ನೆಟ್

ಸೂಪರ್ ನೆಟ್

ಈ ಸೀರೆ ಕೂಡ ಸ್ವಲ್ಪ ತೆಳುವಾದ ಕಾಟನ್ ಸೀರೆಯಾಗಿದೆ. ಈ ಸೀರೆ ಇತ್ತೀಚಿನ ದಿನಗಳಲ್ಲಿ ತುಂಬಾ ಜನಪ್ರಿಯತೆಯನ್ನು ಪಡೆಯುತ್ತಿದೆ, ಚಿತ್ರದಲ್ಲಿಯೇ ಒಮ್ಮೆ ನೋಡಿ, ಈ ರೀತಿಯ ಸೀರೆಯ ವಿನ್ಯಾಸಕ್ಕೆ ಮನಸೋಲದ ನೀರೆ ಯಾರು? ಇದು ಫ್ಯಾಷನಬಲ್ ಸೀರೆಯಾಗಿದೆ.

English summary

14 Famous Cotton Sarees In India | Fashion And Lifestyle | ನೀರೆಯರ ಮನಗೆದ್ದ ಪ್ರಸಿದ್ಧ 14 ಕಾಟನ್ ಸೀರೆಗಳು | ಫ್ಯಾಷನ್ ಮತ್ತು ಜೀವನ ಶೈಲಿ

Cotton saree makes really comfortable clothing for summers. As summer in India is famous for being brutally hot, there are many varieties of Indian cotton sarees to combat the heat. Almost every state in India has its own variety of traditional cotton sarees.
X
Desktop Bottom Promotion