For Quick Alerts
ALLOW NOTIFICATIONS  
For Daily Alerts

ಮಹಾಬಲಿಯನ್ನು ನೆನೆಪಿಸುವ ಓಣಂ ಹಬ್ಬ

|
Onam Festival
ಓಣಂ ಕೇರಳದ ಪ್ರಸಿದ್ಧ ಹಬ್ಬ. ಪ್ರತಿವರ್ಷ ಆಗಸ್ಟ್ ಅಥವಾ ಸೆಪ್ಟಂಬರ್ ನಲ್ಲಿ ಬರುವ ಈ ಹಬ್ಬದಂದು ಹೂಗಳ ರಂಗೋಲಿ ಹಾಕಿ ತುಂಬಾ ಸಡಗರದಿಂದ ಆಚರಿಸಲಾಗುವುದು. ಈ ಓಣಂ ಹಬ್ಬವನ್ನು ವಾಮನ ಜಯಂತಿ ಅಂತಲೂ ಕರೆಯುತ್ತಾರೆ. ಇದು ಕೇರಳದ ನಾಡಹಬ್ಬವಾಗಿದ್ದು ಎಲ್ಲಾ ಧರ್ಮದವರು ಕೂಡಿ ಈ ಹಬ್ಬವನ್ನು ಆಚರಿಸಲಾಗುವುದು.

ಈ ಹಬ್ಬದಲ್ಲಿ ಮಹಾಬಲಿ ಚಕ್ರವರ್ತಿಯನ್ನು ಆರಾಧಿಸಲಾಗುವುದು. ಪ್ರತಿ ಮನೆಯ ಮುಂದೆ ಹೂಗಳಿಂದ ರಂಗೋಲಿ ಹಾಕಿ ಈ ಹಬ್ಬವನ್ನು ಆಚರಿಸಲಾಗುವುದು. ಪ್ರತಿಯೊಂದು ಹಬ್ಬಕ್ಕೆ ಒಂದೊಂದು ಹಿನ್ನಲೆ ಇರುವಂತೆ ಓಣಂ ಹಬ್ಬಕ್ಕೂ ಇದೆ. ಈ ಓಣಂ ಹಬ್ಬದ ಹಿನ್ನಲೆಯ ಬಗ್ಗೆ ತಿಳಿಯೋಣ ಬನ್ನಿ.

ಬಲಿಚಕ್ರವರ್ತಿಯೆಂಬ ಮಹಾರಾಜನಿದ್ದ. ತನ್ನ ಉದಾರತೆ ಮತ್ತು ತ್ಯಾಗಮಯಿ ಗುಣದಿಂದ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದ. ಕಳ್ಳತನ, ವಂಚನೆ, ಸುಳ್ಳು ಇವುಗಳ ಸುಳಿವೂ ಇರಲಿಲ್ಲವೆಂಬ ಎಂಬ ವಿಷಯ ಮೂರು ಲೋಕಕ್ಕೆ ಹಬ್ಬಿತು . ಈ ಚಕ್ರವರ್ತಿಯು ಬ್ರಹ್ಮನಿಂದ ವರ ಪಡೆದು, ಇಡೀ ಭೂ ಲೋಕವನ್ನೇ ಗೆದ್ದಿದ್ದ. ಅವನನ್ನು ಗೆಲ್ಲಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಮಹಾಬಲಿಯ ಆಳ್ವಿಕೆಯನ್ನು ನೋಡಿ ದೇವತೆಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ.

ಇವನ ರಾಜ್ಯದಲ್ಲಿ ಸಂತೋಷ ಮತ್ತು ಸಮೃದ್ಧಿ ದೇವಲೋಕಕ್ಕಿಂತ ತುಂಬಿ ತುಳಕಾಡುತ್ತಿತ್ತು. ಇದು ದೇವೇಂದ್ರನಿಗೆ ಸಹಿಸದಾಯಿತು. ಮಹಾಬಲಿಯನ್ನು ಹೀಗೆ ಬಿಟ್ಟರೆ ಸರ್ವಶಕ್ತನಾಗಿ ದೇವಲೋಕವನ್ನೂ ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಾನೆ ಎಂದು ಭಯಪಟ್ಟ ದೇವತೆಗಳು ಮತ್ತು ಭೂಮಿಯ ದೇವತೆಯಾದ ಅಧಿತಿಯು ವಿಷ್ಣುವಿನ ಮೊರೆ ಹೋದರು.

ಮಹಾಬಲಿಯು ಭಿಕ್ಷೆ ಬೇಡಿ ಬಂದವರಿಗೆ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಆದ್ದರಿಂದ ವಾಮನಮೂರ್ತಿಯಾಗಿ ಬ್ರಾಹ್ಮಣ ಬಾಲಕನ ರೂಪದಲ್ಲಿ ಬಂದು ಬಲಿ ಚಕ್ರವರ್ತಿ ಹತ್ತಿರ ಭಿಕ್ಷೆಯನ್ನು ಕೇಳಿದ. ಆಗ ಚಕ್ರವರ್ತಿಯು ನಿನಗೆ ಏನು ಬೇಕೊ ಕೇಳು, ನಾನು ನೀಡಲು ಕೊಡುವೆ ಎಂದು ಹೇಳಿದನು. ಆಗ ಅಸುರ ಗುರು ಶುಕ್ರಚಾರ್ಯರು 'ಈ ಬಾಲಕನನ್ನು ಸಾಮಾನ್ಯ ಬಾಲಕವೆಂದು ಪರಿಗಣಿಸಬೇಡ. ವರ ಕೊಡುವಾಗ ಹುಷಾರು' ಅಂದರು. ಆದರೆ ಬಲಿ ಚಕ್ರವರ್ತಿ ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ವಾಮನ ಮೂರ್ತಿ ಬೇರೇನು ಬೇಡ ನನ್ನ 3 ಹೆಜ್ಜೆಯಷ್ಟು ಸ್ಥಳ ನನಗೆ ಕೊಡು ಸಾಕು ಎಂದನು.

ವಾಮನ ಮೂರ್ತಿಯೂ3 ಹೆಜ್ಜೆಯಷ್ಟು ಭೂಮಿ ಸಾಕೆಂದು ಹೇಳಿದ್ದನ್ನು ಕೇಳಿ ಮಹಾಬಲಿಗೆ ನಗು ಉಕ್ಕಿ ಬರುತ್ತೆ. ಉಕ್ಕಿ ಬರುತ್ತಿರುವ ನಗು ಸಹಿಸಿಕೊಂಡು ನಂತರ ಸರಿ ನಿನಗೆ 3 ಹೆಜ್ಜೆ ಭೂಮಿ ಕೊಡುತ್ತಿದ್ದೇನೆ ಎಂದು ಹೇಳಿದ. ಆಗ ವಾಮನ ಮೂರ್ತಿಯು ಆಕಾಶದೆತ್ತರಕ್ಕೆ ಬೆಳೆದು ತನ್ನ ಪಾದವನ್ನೇ ಅಳೆತೆ ಕೋಲನ್ನಾಗಿ ಮಾಡಿಕೊಂಡು ಮೊದಲನೆ ಹೆಜ್ಜೆಯನ್ನು ಆಕಾಶದಲ್ಲಿನ ಇಟ್ಟನು. ಎರಡನೇ ಹೆಜ್ಜೆಯನ್ನು ಭೂಮಿಮತ್ತು ಪಾತಾಳದ ಮೇಲೆ ಇಟ್ಟು ಇಡೀ ಪ್ರಪಂಚವನ್ನು ತನ್ನದಾಗಿಸಿಕೊಂಡನು.

ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ವಿಷ್ಣು ಮಹಾಬಲಿ ಬಳಿ ಕೇಳಿದಾಗ ತನ್ನ ತಲೆಯ ಮೇಲೆ ಇಡು ಎಂದು ಹೇಳುತ್ತಾನೆ. ಮಹಾವಿಷ್ಣು ಮಹಾಬಲಿಯ ತಲೆಯ ಮೇಲೆ ಕಾಲಿಟ್ಟ ತಕ್ಷಣ ಮಹಾಬಲಿಯು ಪಾತಾಳವನ್ನು ಸೇರಿದನು. ಆಗ ಮಹಾಬಲಿಯು ತನ್ನ ಊರಾದ ಕೇರಳಕ್ಕೆ ವರ್ಷಕ್ಕೆ ಒಮ್ಮೆಯಾದರೂ ಬರುವ ಅವಕಾಶ ಕೊಡು ಎಂದಾಗ ಮಹಾವಿಷ್ಣು ಆ ವರವನ್ನು ನೀಡಿ, ಓಣಂ ಹಬ್ಬದಂದು ಜನರು ನಿನ್ನನ್ನು ಹೂಗಳಿಂದ ಅಲಂಕರಿಸಿ ಬರಮಾಡಿಕೊಳ್ಳುತ್ತಾರೆ ಎಂಬ ವರವನ್ನು ವಿಷ್ಣುವು ಕರುಣಿಸುತ್ತಾನೆ.

ಮಹಾಬಲಿ ವರ್ಷಕ್ಕೊಮ್ಮೆ ಬರುತ್ತಾನೆ ಎಂಬ ಅಚಲ ನಂಬಿಕೆ ಮಲಯಾಳಿಗಳಲ್ಲಿದೆ. ಆ ನಂಬಿಕೆಯಿಂದ ಓಣಂ ಹಬ್ಬದಂದು ಹೂಗಳಿಂದ ರಂಗೋಲಿ ಹಾಕಿ, ವಿಶೇಷ ಅಡುಗೆ ಮಾಡಿ ಮಹಾಬಲಿಯನ್ನು ಬರಮಾಡಿಕೊಳ್ಳಲಾಗುವುದು (ತಮ್ಮ ನಂಬಿಕೆಯಲ್ಲಿ).

ಓಣಂ ರೆಸಿಪಿ ತಿಳಿಯಲು ಮುಂದೆ ಓದಿ.

English summary

Kerala's Onam Festival | Festival And Lifestyle | ಕೇರಳದ ಓಣಂ ಹಬ್ಬ | ಹಬ್ಬ ಮತ್ತು ಜೀವನ ಶೈಲಿ

Onam is a state festival of Onam. Onam celebrates the visit of King Mahabali to the state of Kerala every year. The festival is celebrated with fervour as King Mahabali is greatly respected by his subjects.
X
Desktop Bottom Promotion