For Quick Alerts
ALLOW NOTIFICATIONS  
For Daily Alerts

ಕೆಲಸದ ಸಂದರ್ಶನದಲ್ಲಿ ಆಡಬಾರದ ಮಾತುಗಳಿವು!

|
Don't Say These At A Job Interview
ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಕೈಯಲ್ಲಿ ಪದವಿ ಸರ್ಟಿಫಿಕೆಟ್ ಮತ್ತು ಹಿಂದೆ ಕೆಲಸ ಮಾಡಿದ ಜಾಗದ ಕೆಲಸದ ಅನುಭವ ಮಾತ್ರ ಸಾಲದು. ನಮ್ಮ ನಡೆ-ನುಡಿ, ನಮ್ಮ ಡ್ರೆಸ್ಸಿಂಗ್ ಎಲ್ಲವೂ ಅಚ್ಚುಕಟ್ಟಾಗಿ ಇದ್ದರೆ ಮಾತ್ರ ಒಳ್ಳೆಯ ಕಂಪನಿಯಲ್ಲಿ ಕೆಲಸ ಪಡೆಯಲು ಸಾಧ್ಯ.

ಕೆಲಸದ ಸಂದರ್ಶನಕ್ಕೆ ಹೋಗುವಾಗ ಅಲ್ಲಿಯ HR ನಮ್ಮ ಜೊತೆ ಮಾತನಾಡಿಸಿ ಕೆಲವೊಂದು ವಿಷಯವನ್ನು ನಮ್ಮಿಂದ ತಿಳಿಯಲು ಪ್ರಯತ್ನಿಸುತ್ತಾರೆ. ಆದ್ದರಿಂದ ತುಂಬ ಚಾಣಕ್ಷತನದಿಂದ ಉತ್ತರ ನೀಡಬೇಕಾಗುತ್ತದೆ. ಅದಲ್ಲದೆ ಕೆಲವೊಂದು ವಿಷಯಗಳನ್ನು ತಿಳಿಯುವುದು ಅವಶ್ಯಕವಾದರೂ ಅದನ್ನು ಸಂದರ್ಶನದ ಸಮಯದಲ್ಲಿ ಕೇಳುವುದು ಸರಿಯಲ್ಲ. ಆ ವಿಷಯಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.

ರಜೆ: ರಜೆಯಿಲ್ಲದೆ ಕೆಲಸ ಮಾಡಲು ಯಾವ ವ್ಯಕ್ತಿಯೂ ಸಿದ್ಧವಿರುವುದಿಲ್ಲ. ಹಾಗಂತ ವರ್ಷಕ್ಕೆ ಎಷ್ಟು ರಜೆ ಸಿಗುತ್ತದೆ ಎಂದು ಸಂದರ್ಶನದ ಸಮಯದಲ್ಲಿ ಕೇಳುವುದು ಒಳ್ಳೆಯದಲ್ಲ. ಕಂಪನಿಯಲ್ಲಿ ಎಷ್ಟು ರಜೆಗಳಿರುತ್ತದೆಯೋ ಅದು ಸಿಕ್ಕೇ ಸಿಗುತ್ತದೆ, ಆದ್ದರಿಂದ ಅದರ ಬಗ್ಗೆ ಕೇಳಲು ಹೋಗಬಾರದು.

ನನ್ನ ಹಿಂದಿನ ಕೆಲಸ ಇಷ್ಟವಿರಲಿಲ್ಲ: ಹಿಂದೆ ಕೆಲಸ ಮಾಡುತ್ತಿದ್ದ ಜಾಗದಿಂದ ಬಿಡಲು ಕಾರಣವೇನು ಎಂದು ಸಂದರ್ಶನಕಾರರು ಕೇಳಿದರೆ ಆ ಕೆಲಸ ನನಗೆ ಇಷ್ಟವಿರಲಿಲ್ಲ ಅಂತ ಹೇಳಬೇಡಿ. ನಿಮ್ಮ ಹಳೆಯ ಕಂಪನಿಯ ಬಗ್ಗೆ ಹೇಳುವಾಗ ಗೌರವದಿಂದ ಹೇಳಿ.

ಸಂಬಳ: ಸಂದರ್ಶನದಲ್ಲಿ ನೀವು ಆಯ್ಕೆ ಆದರೆ ನಿಮ್ಮ ಸಂಬಳ ಮಾತ್ರ ಕೇಳಿ, ಈ ಕಂಪನಿಯಲ್ಲಿ ಬೇರೆಯವರೆಗೆ ಎಷ್ಟು ಕೊಡುತ್ತಿದ್ದೀರಾ? ಎಂದು ಕೇಳಬಾರದು. ನೀವು ನಿಮ್ಮ ಬೇಡಿಕೆ ಬಗ್ಗೆ ಮಾತ್ರ ಮಾತನಾಡಬೇಕು.

ಡ್ರೆಸ್ ಕೋಡ್: ಪ್ರತಿಯೊಂದು ಕಂಪನಿಯಲ್ಲಿ ಡ್ರೆಸ್ ಕೋಡ್ ಇರುತ್ತದೆ. ಫಾರ್ಮಲ್ ಹಾಕಲು ಇಷ್ಟವಿಲ್ಲದಿದ್ದರೂ ಫಾರ್ಮಲ್ ಡ್ರೆಸ್ ಹಾಕಲೇಬೇಕಾ? ಅಂತ ಕೇಳಲು ಹೋಗಬಾರದು. ಅಲ್ಲಿ ಇತರ ಉದ್ಯೋಗಿಗಳು ಹೇಗೆ ಇರುತ್ತಾರೋ ಅದೇ ರೀತಿ ಇರಬೇಕಾಗುತ್ತದೆ, ಆದ್ದರಿಂದ ಅನಗತ್ಯ ಪ್ರಶ್ನೆ ಕೇಳಲು ಹೋಗಬಾರದು.

ದೃಢತೆ ಇರಬೇಕು: ನಿಮ್ಮ ಮಾತಿನಲ್ಲಿ ದೃಢತೆ ಇರಬೇಕು. ಅವರು ನಿಮಗೆ ಈ ಕೆಲಸ ನಿಭಾಯಿಸಿಕೊಂಡು ಹೋಗಲು ಸಾಧ್ಯನಾ ಎಂದು ಕೇಳಿದರೆ ಯೋಚಿಸುವ ಬದಲು ಸಾಧ್ಯ ಎಂದು ನಿಖರವಾಗಿ ಹೇಳಿ.

ಸಂದರ್ಶನದಲ್ಲಿ ನಿಮ್ಮ ಪ್ರತಿಯೊಂದು ಉತ್ತರ ಸಂದರ್ಶನಕಾರರನ್ನು ಆಕರ್ಷಿಸುವಂತೆ ಇರಬೇಕು. ಅದಕ್ಕಾಗಿ ಮಾತಿನಲ್ಲಿ ತುಂಬಾ ಕೃತಕತೆ ಕೂಡ ಒಳ್ಳೆಯದಲ್ಲ.

Read more about: ಕೆಲಸ ಜೀವನ work life
English summary

Don't Say These At A Job Interview | Tips For Interviewee | ಕೆಲಸದ ಸಂದರ್ಶನದ ಸಮಯದಲ್ಲಿ ಈ ಮಾತುಗಳನ್ನು ಆಡಬಾರದು | ಸಂದರ್ಶನಕ್ಕೆ ಹೋಗುವವರೆಗೆ ಕೆಲ ಸಲಹೆಗಳು

In this competitive market of more and more job hunters, you have to be the best so as to beat the rest. Here are few things that you must never say at a job interview. Keep these points in mind and never utter them out of your mouth when you are sitting with the interviewer.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more