For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಅಂದ್ರೆ ಸ್ವರ್ಗ ಮತ್ತು ನರಕ!

By ಮಂಜು
|
Why I Like Bangalore
ಬೆಂಗಳೂರು ಅಂದ ಕ್ಷಣ ಏನೊ ಒಂದು ಸೆಳೆತ. ಈ ಮಾಯಾನಗರಿಯ ಸೊಬಗನ್ನು ಟಿವಿಯಲ್ಲಿ ನೋಡಿದವರಿಗೆ ಇದನ್ನು ನೋಡ ಬೇಕೆಂದು, ಇಲ್ಲಿ ಬಂದು ಜೀವನ ನಡೆಸಿದರೆ ಎಷ್ಟೊಂದು ಚೆಂದ ಅಂತ ಅನಿಸುವುದು ಸಹಜ. ದೆಹಲಿ, ಮುಂಬಯಿಯಂತಹ ಸಿಟಿಗಳಲ್ಲಿ ಜನಿಸಿದವರು ಕೂಡ ಬೆಂಗಳೂರಿಗೆ ಬಂದು ಜೀವನ ನಡೆಸಲು ಇಷ್ಟ ಪಡುತ್ತಾರೆ. ಅಂತಹದರಲ್ಲಿ ನನ್ನಂತಹ ಹಳ್ಳಿಯಲ್ಲಿ ಜನಿಸಿದವಳಿಗೆ ಒಮ್ಮೆಯಾದರೂ ಇಲ್ಲಿಗೆ ಬರಬೇಕೆಂಬ ಆಸೆ ಉಂಟಾದದು ಆಶ್ಚರ್ಯವಲ್ಲ.

ನನ್ನ ಹಾಗೆ ಬೆಂಗಳೂರಿಗೆ ಬಂದು ಇಲ್ಲಿ ರೂಮ್, ಪ್ಲಾಟ್, ಪಿಜಿಯಲ್ಲಿ ವಾಸಿಸುತ್ತಾ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬೆಂಗಳೂರು ಕೆಲವೊಂದು ಕಾರಣಗಳಿಗೆ ತುಂಬಾ ಇಷ್ಟವಾಗುತ್ತದೆ, ಮತ್ತೆ ಕೆಲವೊಂದು ಕಾರಣಗಳಿಂದ ಇಷ್ಟವಾಗುವುದಿಲ್ಲ. ಬೆಂಗಳೂರಿನ ಬಗ್ಗೆ ನನ್ನ ಅಭಿಪ್ರಾಯ ನೋಡಿ ಇಲ್ಲಿದೆ. ನೀವು ನಿಮ್ಮ ಅಭಿಪ್ರಾಯ ತಿಳಿಸಬಹುದು.

ಈ ಕೆಳಗಿನ ಕಾರಣಗಳಿಂದ ಬೆಂಗಳೂರು ಅಂದರೆ ನನಗೆ ಇಷ್ಟ:

1. ಬೆಳೆಯಲು ಅವಕಾಶ: ಬೆಂಗಳೂರಿನಲ್ಲಿ ಬೆಳೆಯುವ ಅವಕಾಶ ತುಂಬಾ ಇದೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಗುರಿಯಿಟ್ಟುಕೊಂಡು ಬೆಂಗಳೂರಿಗೆ ಬಂದರೆ ಅದು ಇಲ್ಲಿ ಸಾಧ್ಯವಾಗುತ್ತದೆ. ಏಕೆಂದರೆ ನೀನು ಅದು ಮಾಡ ಬೇಡ , ಇದು ಮಾಡ ಬೇಡ ಎಂದು ಹೇಳುವವರು ಯಾರೂ ಇರುವುದಿಲ್ಲ. ಅರ್ಹತೆ ಇದ್ದರೆ ಕೆಲಸದ ಅವಕಾಶಗಳು ತುಂಬಾ ಇದೆ. ಆದ್ದರಿಂದ ಈ ಬೆಂಗಳೂರು ನನಗೆ ಇಷ್ಟವಾಗುತ್ತದೆ.

2. ಸ್ವತಂತ್ರ: ಬೆಂಗಳೂರಿಗೆ ಬಂದ ಮೇಲೆ ಸ್ವತಂತ್ರ ಮನೋಭಾವ ಬೆಳೆಯುತ್ತದೆ. ಪಕ್ಕದ ಮನೆಯಲ್ಲಿ ಏನು ಆಗುತ್ತಿದೆ ಎಂದು ನೋಡಲು ಯಾರಿಗೂ ಪುರುಸೊತ್ತು ಇರುವುದಿಲ್ಲ.

3. ಪಾರ್ಕ್: ಗಲ್ಲಿ-ಗಲ್ಲಿಯಲ್ಲಿ ಪಾರ್ಕ್ ಗಳಿರುವುದರಿಂದ ಬೆಂಗಳೂರು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಒಂಟಿಯಾಗಿರುವಾಗ ಈ ಪಾರ್ಕ್ ನಲ್ಲಿ ಹೋಗಿ ಕೂತರೆ ಅವುಗಳು ನಮ್ಮ ಮನಸ್ಸಿಗೆ ತುಂಬಾ ಆಪ್ತವಾಗುತ್ತವೆ.

4. ಜೀವನ ಶೈಲಿ: ಯಾವ ಸಿನಿಮಾ ತಾರೆಗಿಂತ ನಾನೇನು ಕಮ್ಮಿಯಿಲ್ಲ ಅಂತ ಅಲಂಕಾರ ಮಾಡಿಕೊಂಡು ಗಾಡಿಯಲ್ಲಿ ಕಾಲೇಜ್ ಹೋಗುವ ಯುವ ಜನಾಂಗ, ಸೂಟ್, ಮಾಡರ್ನ್ ಡ್ರೆಸ್ ಹಾಕಿದ ಐಟಿ ಉದ್ಯೋಗಿಗಳು, ಯಾರ ಭಯವಿಲ್ಲದೆ ಕೈಕೈ ಹಿಡಿದು ನಡೆಯುವ ಪ್ರೇಮಿಗಳು, ರಜಾ ದಿನದಲ್ಲಿ ಮನೆ ಮಂದಿ ಜೊತೆ ರೆಸ್ಟೋರೆಂಟ್ ಗೆ ಹೋಗುವ ಕುಟುಂಬಗಳನ್ನು ನೋಡುವಾಗ ಈ ಸೌಲಭ್ಯಗಳು ನಮ್ಮ ಹಳ್ಳಿಯಲ್ಲಿ ಇಲ್ಲ, ಇಲ್ಲಿಯ ಜೀವನ ಎಷ್ಟು ಚೆಂದ ಅನಿಸುತ್ತದೆ.

5. ವೀಕೆಂಡ್: ವೀಕೆಂಡ್ ಗೆ ಡ್ರೆಸ್ ಮಾಡಿಕೊಂಡು ಶಾಪಿಂಗ್ ಮಹಲ್ ಗಳಿಗೆ ಹೋಗುವುದು, ಸಿನಿಮಾ ನೋಡುವುದು, ದೊಡ್ಡ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡಿ, ಸಾಯಾಂಕಾಲ ಬೀದಿ ಬದಿಯಲ್ಲಿ ದೊರೆಯುವ ರುಚಿಯಾದ ಚಾಟ್ಸ್ ತಿಂದು ಗೆಳೆಯರೊಂದಿಗೆ ಒಂದು ಸಿನಿಮಾ ನೋಡಿ ಬರುವುದು ನೋಡುವಾಗ ಸ್ವರ್ಗ ಅಂದರೆ ಇದೇನಾ ಅನಿಸುವುದು.

English summary

Why I Like Bangalore | Life Of Bangalore | ನನಗೆ ಬೆಂಗಳೂರು ಅಂದ್ರೆ ಏಕೆ ಇಷ್ಟ ಗೊತ್ತಾ? | ಬೆಂಗಳೂರಿನ ಜೀವನ ಶೈಲಿ

For some reason i love this Banglore life. This my personal view. I hope this is personal experience of being a Bangalorean.
Story first published: Friday, March 30, 2012, 18:28 [IST]
X
Desktop Bottom Promotion