For Quick Alerts
ALLOW NOTIFICATIONS  
For Daily Alerts

ವೈಕುಂಠ ಏಕಾದಶಿ ೨೦೨೦: ಉಪವಾಸ ವೃತಾಚರಣೆ ಹೀಗಿರಬೇಕು..

|

ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿಡಲಾಗಿದ್ದು, ಒಂದಲ್ಲ ಒಂದು ವಿಧದಲ್ಲಿ ಅವು ಹೆಚ್ಚಿನ ಪುಣ್ಯವನ್ನು ನೀಡುವಂತಹುದು. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿ ಅಂದ್ರೆ ವೈಕುಂಠ ಏಕಾದಶಿ ಕೂಡ ಒಂದು. ಇದನ್ನು ಶಯನಿ ಅಂತಲೂ, ಕ್ರಮವಾಗಿ ಪ್ರಥಮೇಕಾದಶಿ ಅಂತಲೂ ಕರೆಯಲಾಗುತ್ತದೆ. ಈ ದಿನ ವೈಕುಂಠದ ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದೂ ಈ ಬಾಗಿಲಿನಿಂದ ಪ್ರವೇಶಿಸಿದರೆ ಏಳು ಜನ್ಮಗಳಲ್ಲಿ ಮಾಡಿರುವ ಪಾಪಗಳು ನಿವಾರಣೆಯಾಗಿ ಮೋಕ್ಷವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ekadashi

ಈ ಸಲ ಡಿಸೆಂಬರ್ 25ಕ್ಕೆ ವೈಕುಂಠ ಏಕಾದಶಿ ಆಚರಿಸಲಾಗುವುದು. ಏಕಾದಶಿ ಎಂದರೆ ಅಲ್ಲಿ ಉಪವಾಸಕ್ಕೆ ಎಲ್ಲಿಲ್ಲದ ಮಹತ್ವ. ಕೆಲವರು ಆ ದಿನ ಒಂದು ತೊಟ್ಟು ನೀರು ಸಹ ಮುಟ್ಟದೆ ಉಪವಾಸ ಮಾಡಿದರೆ ಇನ್ನು ಕೆಲವರು ಆ ದಿನ ಬರೀ ಹಣ್ಣು-ಹಂಪಲು ಅಷ್ಟೇ ಸೇವಿಸುತ್ತಾರೆ. ಈ ಉಪವಾಸ ಮಾಡುವುದರಿಂದ ನಂಬಿಕೆಯ ಜೊತೆಗೆ ಆರೋಗ್ಯವೂ ವೃದ್ದಿಯಾಗುತ್ತದೆ. ಅಂದಹಾಗೆ ಏಕಾದಶಿಯಂದು ಉಪವಾಸ ವೃತಾಚರಣೆ ಮಾಡುವುದು ಹೇಗೆ ಎಂಬುದರ ಕುರಿತು ಸಾಕಷ್ಟು ಜನರಲ್ಲಿ ಗೊಂದಲವಿದೆ. ಈ ಎಲ್ಲಾ ಗೊಂದಲಗಳಿಗೆ ಇಂದು ನಾವು ಪರಿಹಾರ ನೀಡಲಿದ್ದೇವೆ.

ವೈಕುಂಠ ಏಕಾದಶಿ ವೃತ:

ವೈಕುಂಠ ಏಕಾದಶಿ ವೃತ:

ಸಾಮಾನ್ಯವಾಗಿ ಏಕಾದಶಿ ವ್ರತ ಮಾಡುವಂತೆ ವೈಕುಂಠ ಏಕಾದಶಿ ವ್ರತಾಚರಣೆಯನ್ನು ಮಾಡಲಾಗುತ್ತದೆ. ಏಕಾದಶಿಯ ದಿನ ಉಪವಾಸವಿದ್ದು ರಾತ್ರಿಯಿಡೀ ಜಾಗರಣೆ ಮಾಡಬೇಕು. ಧ್ಯಾನ, ಜಪ ಹಾಗೂ ಹರಿಕೀರ್ತನೆಗಳನ್ನೂ ಹಾಡಬಹುದು. ಏಕಾದಶಿಯ ಮರುದಿನ ಮುಕ್ಕೋಟಿ ದ್ವಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಹೀಗೆ ಉಪವಾಸ ಮಾಡಿ ವಿಷ್ಣುವನ್ನು ಆರಾಧಿಸುವುದರಿಂದ ಸರ್ವಪಾಪಗಳೂ ಕಳೆಯುತ್ತವೆ ಎಂಬ ನಂಬಿಕೆ ಭಕ್ತರದ್ದು.

ಏಕಾದಶಿ ವೃತ ನಿಯಮ:

ಏಕಾದಶಿ ವೃತ ನಿಯಮ:

ಏಕಾದಶಿಯ ದಿನ ಕಠಿಣ ಉಪವಾಸ ಮಾಡಿ, ಯಾವ ಆಹಾರವನ್ನೂ ಸೇವಿಸಬಾರದು. ಮರುದಿನ ದ್ವಾದಶಿಯಂದು ತುಳಸಿ ನೀರನ್ನು ಸೇವಿಸುವ ಮೂಲಕ ಉಪವಾಸವನ್ನು ಕೈಬಿಡಬೇಕು

ಉಪವಾಸ ತ್ಯಜಿಸಿದ ನಂತರ ಉದ್ದಿನ ಬೇಳೆ, ಅಗಸೆ ಸೊಪ್ಪು, ನೆಲ್ಲಿಕಾಯಿ, ಮೊಸರು ಬೆರೆಸಿ ಮಾಡಿದಂತಹ ರಾಯತವನ್ನು ಸೇವಿಸಬೇಕು.

ಏಕಾದಶಿಯಂದು ಒಂದು ಹೊತ್ತು ಆಹಾರವನ್ನು ಸೇವಿಸಬಹುದು. ರಾತ್ರಿ ಸರಳ ಉಪಹಾರ ತಿನ್ನಬಹುದು.

ಏಕಾದಶಿಯಂದು ಯಾವುದೇ ಆಹಾರವನ್ನೂ, ನೀರನ್ನೂ ಸೇವಿಸದೇ ನಿರಾಹಾರ ಉಪವಾಸವನ್ನು ಮಾಡುತ್ತಾರೆ. ಕೆಲವರು ಏಕಾದಶಿಯಂದು ಮೌನವ್ರತವನ್ನೂ ಆಚರಿಸುತ್ತಾರೆ

ವೈಕುಂಠ ಏಕಾದಶಿಯಂದು ಉಪವಾಸ ಮಾಡಿ ಮರುದಿನ ಬೆಳಗ್ಗೆ 9 ಗಂಟೆಯೊಳಗೆ ಊಟ ಮಾಡುವ ಸಂಪ್ರದಾಯವಿದೆ.

ಈ ದಿನ ವಿಷ್ಣುನಾಮ ಸ್ಮರಣೆ ಮಾಡುವ ಮೂಲಕವೂ ಮಹಾವಿಷ್ಣುವನ್ನು ಸ್ಮರಿಸಬಹುದು, ಜೊತೆಗೆ ವಿಷ್ಣುದೇವಾಲಯಗಳಿಗೂ ಭೇಟಿ ನೀಡಬಹುದು.

ಏಕಾದಶಿಯಂದು ಉಪವಾಸ ಕೈಗೊಂಡು ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಪ್ರಾಪ್ತಿಯಾಗುವುದು.

ಉಪವಾಸದೊಳಗಿನ ವಿಜ್ಞಾನ:

ಉಪವಾಸದೊಳಗಿನ ವಿಜ್ಞಾನ:

ಈ ರೀತಿ ಉಪವಾಸ ವ್ರತಾಚರಣೆ ಮಾಡಿದರೆ ದೇಹದ ಮೇಲೆ ಬೀರುವ ಪರಿಣಾಮವೇನು? ವೈದ್ಯವಿಜ್ಞಾನ ಈ ಬಗ್ಗೆ ಏನು ಹೇಳುತ್ತದೆ? ಎಂಬುದನ್ನು ನೋಡೋಣ.

ಆಂತರಿಕ ಆರೋಗ್ಯವನ್ನು ಏರುಪೇರು ಮಾಡಲು ಹೊರಗಿನ ಪರಿಸರದಿಂದ ರೋಗಾಣುಗಳು, ಕಲುಷಿತ ಹವೆ, ನೀರು, ಕಲಬೆರಕೆ ಆಹಾರ ಇತ್ಯಾದಿಗಳಿಂದ ನಿರಂತರ ದಾಳಿ ನಡೆಯುತಿರುತ್ತದೆ. ಆದರೆ ದೇಹದ ಸಂರಕ್ಷಣಾ ವಿಧಾನ ಹಾಗೂ ತಂತ್ರಗಳು ಸೂಕ್ತ ಉತ್ತರ ನೀಡಿ ತಮ್ಮ ದೇಹಾರೋಗ್ಯ ಕಾಪಾಡುತ್ತವೆ. ಈ ರೀತಿ ದೇಹದಲ್ಲಿ ರಕ್ಷಣಾತಂತ್ರಗಳು ಸುರಕ್ಷಿತವಾಗಿ ಸಾಗಬೇಕಾದರೆ - ಪ್ರತಿ ಹದಿನೈದು ದಿನಕ್ಕೊಮ್ಮೆ ಉಪವಾಸ ಮಾಡಿದರೆ ದೇಹದ ಚಕ್ರಗಳು ಸರಿಗೊಳ್ಳುತ್ತವೆ. ಹೀಗಾಗಿ ನಿಸರ್ಗಕ್ಕೂ-ದೇಹದ ಆಂತರಿಕ ಪರಿಸರಕ್ಕೂ ನಿಕಟ ಸಂಬಂಧವಿದೆ. ಈ ಉಪವಾಸದಿಂದ ದೇಹದಲ್ಲಿಯ ಜೈವಿಕ ಗಡಿಯಾರದ ಸಮಯ ಬದ್ಧತೆ, ತಾಳ, ಆಹಾರ, ಅರೆಯುವ ಜೀವದ್ರವ್ಯ ಕ್ರಿಯೆಗಳ ‘ಚಕ್ರದ ಗತಿಗಳು' ಸಮತೋಲನಗೊಳ್ಳುತ್ತವೆ.

English summary

Vaikunta Ekadashi 2020 Fasting Procedures In Kannada

Many people have confusion regarding vaikunta Ekadashi Fasting, So Here we told about Vaikunta Ekadashi 2020 Fasting Procedures In Kannada, have a look
X
Desktop Bottom Promotion