For Quick Alerts
ALLOW NOTIFICATIONS  
For Daily Alerts

Shravan Shukravar Vrat : ಶ್ರಾವಣ ಶುಕ್ರವಾರ: ಸಂಪತ್ತು ವೃದ್ಧಿಗಾಗಿ ಪೂಜಾ ವಿಧಿಗಳು ಹಾಗೂ ಮಹತ್ವ

|

ಶ್ರಾವಣ ಶುಕ್ರವಾರವನ್ನು ಸಂಪತ್ತಿನ ಶುಕ್ರವಾರ ಎಂದು ಕೂಡ ಕರೆಯುತ್ತಾರೆ. ಶ್ರಾವಣ ಮಾಸದ ಎಲ್ಲಾ ಶುಕ್ರವಾರ ಲಕ್ಷ್ಮಿ ದೇವಿ ಅಥವಾ ಗೌರಿ ದೇವಿಯನ್ನು ಪೂಜಿಸಲಾಗುವುದು.

ಶ್ರಾವಣ ಶುಕ್ರವಾರ ವ್ರತವನ್ನು ಮುತ್ತೈದೆಯರು ಮಾಡುತ್ತಾರೆ. ಈ ವ್ರತ ಮಾಡುವುದರಿಂದ ಗಂಡನ ಆಯುಸ್ಸು ಹೆಚ್ಚುವುದು ಹಾಗೂ ಲಕ್ಷ್ಮಿಯ ಕೃಪೆಯಿಂದ ಸಂಪತ್ತು ಕೂಡ ವೃದ್ಧಿಯಾಗುವುದು.

ಶ್ರಾವಣ ಶುಕ್ರವಾರವನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಆಚರಿಸಲಾಗುವುದು.

ಶ್ರಾವಣ ಶುಕ್ರವಾರದ ದಿನಾಂಕಗಳು 2021

ಶ್ರಾವಣ ಶುಕ್ರವಾರದ ದಿನಾಂಕಗಳು 2021

ಆಗಸ್ಟ್‌ 13, 2021

ಆಗಸ್ಟ್‌ 20, 2021,

ಆಗಸ್ಟ್ 27, 2021

ಸೆಪ್ಟೆಂಬರ್ 3, 2021

ಲಕ್ಷ್ಮಿ ಪೂಜೆಗೆ ಶುಭ ಸಮಯ

ಲಕ್ಷ್ಮಿ ಪೂಜೆಗೆ ಶುಭ ಸಮಯ

ಆಗಸ್ಟ್‌ 13, 2021

ಅಭಿಜಿತ್‌ ಮುಹೂರ್ತ: ಬೆಳಗ್ಗೆ 11:59ರಿಂದ ಮಧ್ಯಾಹ್ನ 12:50

ಅಮೃತ ಕಾಲ: ಮಧ್ಯಾಹ್ನ 12:49ರಿಂದ ರಾತ್ರಿನ 02:21ರವರೆಗೆ

ಗೋಧೂಳಿ ಮುಹೂರ್ತ ಸಂಜೆ 06: 29ರಿಂದ 06:53ರವರೆಗೆ

ಆಗಸ್ಟ್‌ 20, 2021,

ಅಭಿಜಿತ್‌ ಮುಹೂರ್ತ 11:58ರಿಂದ 12:48ರವರೆಗೆ

ಗೋಧೂಳಿ ಮುಹೂರ್ತ ಸಂಜೆ 06:25ರಿಂದ 06:49ರವರೆಗೆ

ಅಮೃತ ಕಾಲ: ಮಧ್ಯಾಹ್ನ 03:21ರಿಂದ ಸಂಜೆ 04:52ರವರೆಗೆ

ಆಗಸ್ಟ್ 27, 2021

ಅಭಿಜಿತ್‌ ಮುಹೂರ್ತ: ಬೆಳಗ್ಗೆ 11:56ರಿಂದ ಮಧ್ಯಾಹ್ನ 12:46ರವೆರೆಗೆ

ಗೋಧೂಳಿ ಮುಹೂರ್ತ: ಸಂಜೆ 06:21ರಿಂದ 06:45ರವರೆಗೆ

ಅಮೃತ ಕಾಲ: ಸಂಜೆ 04:54ರಿಂದ 06:39ರವರೆಗೆ

ಸೆಪ್ಟೆಂಬರ್ 3, 2021

ಅಭಿಜಿತ್‌ ಮುಹೂರ್ತ: ಬೆಳಗ್ಗೆ 11:54ರಿಂದ ಮಧ್ಯಾಹ್ನ 12:44ರವರೆಗೆ

ಗೋಧೂಳಿ ಮುಹೂರ್ತ: ಸಂಜೆ 06:17ರಿಂದ 06:41ರವೆರೆಗ

ಅಮೃತ ಕಾಲ: ಮಧ್ಯಾಹ್ನ 02:08ರಿಂದ 03:51ರವರೆಗೆ

ಶ್ರಾವಣ ಶುಕ್ರವಾರ ಪೂಜೆ ವಿಧಿ-ವಿಧಾನ

ಶ್ರಾವಣ ಶುಕ್ರವಾರ ಪೂಜೆ ವಿಧಿ-ವಿಧಾನ

* ಬೆಳಗ್ಗೆ ಎದ್ದು ಎಣ್ಣೆ ಸ್ನಾನ ಮಾಡಬೇಕು

* ಬೆಳ್ಳಿ ಅಥವಾ ತಾಮ್ರದ 5 ಗಡಿಗೆ ತೆಗೆದು ಅದರಲ್ಲು ಶಂಖ, ಚಕ್ರ, ಎರಡು ಲಕ್ಷ್ಮಿಯ ಚಿತ್ರ, ಹಸು ಹಾಗೂ ಕರುವಿನ ಚಿತ್ರ, ಆನೆಯ ಚಿತ್ರ ಬಿಡಿಸಬೇಕು.

* ಗಡಿಗೆಯ ಮುಚ್ಚಳದ ಮೇಲೆ ಹೂವಿನ ಚಿತ್ರ ಬಿಡಿಸಿ, ಇದನ್ನು ಸಂಪತ್ತು ಗೌರಿ ಗಡಿಗೆಯೆಂದು ಹೇಳಲಾಗುವುದು.

* ನೀವು ಪ್ರತೀ ಗಡಿಕೆಯಲ್ಲಿ ಅಕ್ಕಿ, ಅರಿಶಿಣ ಕೊಂಬು, ಡ್ರೈ ಫ್ರೂಟ್ಸ್, ವೀಳ್ಯೆದೆಲೆ, ಅಡಿಕೆ ಇಟ್ಟು ಅವುಗಳನ್ನು ಪೂಜಾ ಸ್ಥಾನದಲ್ಲಿ ಇಡಿ.

* ಹಿಟ್ಟಿನಿಂದ ಹಣತೆಯನ್ನು ಮಾಡಿ ತುಪ್ಪದ ದೀಪ ಹಚ್ಚಿ.

* ಈಗ ನೀವು ಲಕ್ಷ್ಮಿ ಮಂತ್ರ ಅಥವಾ ಹಾಡುಗಳನ್ನು ಹೇಳುತ್ತಾ ಅವಳನ್ನು ಗಡಿಗೆಗೆ ಆಹ್ವಾನಿಸಿ, ಗಡಿಗೆಗೆ ಕಮಲದ ಹೂ, ಹೂ, ಹಣ್ಣುಗಳನ್ನು ಅರ್ಪಿಸಿ.

* ಲಕ್ಷ್ಮಿ ಮಂತ್ರಗಳನ್ನು ಹೇಳುತ್ತಾ ಮಂತ್ರಗಳನ್ನು ಪಠಿಸಿ.

* ನಂತರ ಮನೆಗೆ ಸುಮಂಗಲಿರನ್ನು ಕರೆದು ತಾಂಬೂಲ ನೀಡಿ.

ಲಕ್ಷ್ಮಿ ಮಂತ್ರ

ಲಕ್ಷ್ಮಿ ಮಂತ್ರ

"ಓಂ ಹ್ರೀಮ್ ಶ್ರೀಮ್ ಕ್ಲೀಮ್ ಮಹಾಲಕ್ಷ್ಮಿ ನಮಃ"

English summary

Shravan Shukravar Vrat 2021 Dates, Significance and Importance of Friday Puja in Shravan Month

Shravan Shukravar Vrat 2021 Dates, Significance and Importance of Friday Puja in Shravan Month, read on..
X
Desktop Bottom Promotion