For Quick Alerts
ALLOW NOTIFICATIONS  
For Daily Alerts

ನವರಾತ್ರಿಯ 4ನೇ ದಿನ: ಕೂಷ್ಮಾಂಡಾ ದೇವಿಯ ಆರಾಧನೆ ಮಾಡುವಾಗ ಈ ಮಂತ್ರ ತಪ್ಪದೆ ಪಠಿಸಿ

|

ನವರಾತ್ರಿಯೆಂದರೆ ದೇವಿಯ ನವರೂಪಗಳನ್ನು ಪೂಜಿಸುವುದು ಎಂದು ಅರ್ಥ. ಹಿಂದೂಗಳಿಗೆ ತುಂಬಾ ಪವಿತ್ರವಾಗಿರುವಂತಹ ಈ ಒಂಭತ್ತು ದಿನಗಳಲ್ಲಿ ದೇವಿಯ ಒಂದೊಂದು ರೂಪಕ್ಕೆ ಪೂಜೆ ಹಾಗೂ ಪುನಸ್ಕಾರ ಮಾಡಲಾಗುವುದು. ದೇವಿಯ ಭಕ್ತರು ಈ ಒಂಭತ್ತು ದಿನಗಳ ಕಾಲ ಉಪವಾಸ ಕೂಡ ಮಾಡುವರು.

worship goddess Kushmanda Devi on 4rd Day of Navratri Puja

ನವರಾತ್ರಿಯ ನಾಲ್ಕನೇ ದಿನದಂದು ತಾಯಿ ಕೂಷ್ಮಾಂಡಾರನ್ನು ಪೂಜಿಸಲಾಗುವುದು. ಕೂಷ್ಮಾಂಡಾವೆಂದರೆ ಭೂಮಿಯನ್ನು ಸೃಷ್ಟಿಸಿದ ದೇವಿ ಎಂದರ್ಥ. ಸಿಂಹರೂಪಿಣಿಯಾಗಿರುವ ದೇವಿಗೆ ಎಂಟು ಹಸ್ತುಗಳಿದ್ದು, ಇದರಲ್ಲಿ ಏಳರಲ್ಲಿ ಆಯುಧಗಳಿವೆ ಮತ್ತು ಒಂದರಲ್ಲಿ ಜಪಮಾಲೆ.

ಕೂಷ್ಮಾಂಡಾ ದೇವಿಯ ಕಥೆ

ಕೂಷ್ಮಾಂಡಾ ದೇವಿಯ ಕಥೆ

ಕೂಷ್ಮಾಂಡಾ ದೇವಿಯನ್ನು ಆದಿಶಕ್ತಿಯೆಂದು ಕರೆಯಲಾಗುವುದು. ಯಾಕೆಂದರೆ ಭೂಮಿಯ ಸೃಷ್ಟಿಕರ್ತೆಯೇ ಆಕೆ ಎನ್ನಲಾಗುತ್ತದೆ. ಆಕೆ ಸೂರ್ಯದೇವರ ವಾಸಸ್ಥಾನದಲ್ಲಿ ವಾಸಿಸುವ ಕಾರಣದಿಂದಾಗಿ ಭೂಮಿ ಮೇಲಿರುವ ಎಲ್ಲಾ ಅಂಧಕಾರವನ್ನು ನಿವಾರಣೆ ಮಾಡುವಳು. ಕೂಷ್ಮಾಂಡಾ ದೇವಿಯು ಮೊದಲ ಮೊಟ್ಟೆಯನ್ನು ಸೃಷ್ಟಿಸಿ, ಅದರಿಂದ ಸಂಪೂರ್ಣ ಜೀವಸಂಕುಲಗಳಿಗೆ ಜೀವ ನೀಡಿದರು ಎನ್ನುವ ಪ್ರತೀತಿ ಇದೆ. ಈ ದೇವಿಯು ಸೂರ್ಯನಿಗೆ ಬೆಳಕು ನೀಡುವರು. ಆಕೆಯ ನಗು ಜೀವನದಲ್ಲಿ ಧನಾತ್ಮಕತೆ ಉಂಟು ಮಾಡುವುದು, ಶಕ್ತಿ ನೀಡಿ ಎಲ್ಲಾ ರೀತಿಯಿಂದಲೂ ಒಳ್ಳೆಯದನ್ನು ಮಾಡುವುದು.

ಕೂಷ್ಮಾಂಡಾ ದೇವಿಯ ಮಹತ್ವ

ಕೂಷ್ಮಾಂಡಾ ದೇವಿಯ ಮಹತ್ವ

ಕೂಷ್ಮಾಂಡಾ ದೇವಿಯು ಸೂರ್ಯ ದೇವನಿಗೆ ಬೆಳಕನ್ನು ನೀಡುವರು. ಆಕೆ ಸೂರ್ಯನಿಗೂ ಅಧಿಪತಿಯಾಗಿರುವ ಕಾರಣದಿಂದಾಗಿ ಕೂಷ್ಮಾಂಡಾ ದೇವಿಯನ್ನು ಪೂಜಿಸುವುದರಿಂದಾಗಿ ನಿಮ್ಮ ಜಾತಕದಲ್ಲಿ ಸೂರ್ಯನಿಂದಾಗಿರುವ ಕೆಡುಕನ್ನು ನಿವಾರಣೆ ಮಾಡಬಹುದು. ಇದರೊಂದಿಗೆ ಕೂಷ್ಮಾಂಡಾ ದೇವಿಯ ಪೂಜಿಸುವ ಜನರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಮತ್ತು ಸಮಾಜದಲ್ಲಿ ಪ್ರಸಿದ್ಧಿ ಪಡೆಯುವರು.

ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ

ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ

ಕೂಷ್ಮಾಂಡಾ ದೇವಿಯ ಪೂಜೆಗೆ ಕೆಂಪು ಬಣ್ಣದ ಹೂಗಳನ್ನು ಬಳಸಿದರೆ ತುಂಬಾ ಒಳ್ಳೆಯದು. ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ ಮಾಡಬೇಕು. ಕೂಷ್ಮಾಂಡಾ ದೇವಿಯ ಕಾಂತಿಯುತ ರೂಪದ ಬಗ್ಗೆ ಚಿಂತಿಸಿ ಮತ್ತು ಶೋಡಷಚೋಪಚಾರ ಪೂಜೆ ಮಾಡಿ. ಕುಟುಂಬದ ಸಮೃದ್ಧಿ ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಲು ಪ್ರಾರ್ಥಿಸಿ ಮತ್ತು ಆರತಿಯೊಂದಿಗೆ ಪೂಜೆ ಕೊನೆಗೊಳಿಸಿ.

ನಾಲ್ಕನೇ ದಿನಕ್ಕೆ ಕೂಷ್ಮಾಂಡಾ ದೇವಿಯ ಮಂತ್ರ

ನಾಲ್ಕನೇ ದಿನಕ್ಕೆ ಕೂಷ್ಮಾಂಡಾ ದೇವಿಯ ಮಂತ್ರ

ಓಂ ದೇವಿ ಕುಶ್ಮಾಂದೈ ನಮಃ

ಓಂ ದೇವಿ ಕುಶ್ಮಾಂದಾಯ್ಯೆ ನಮಃ ಸುರಸಂಪುರ್ನ ಕಲಾಶಂ ರುದ್ರರಾಪ್ಲುಮಾಮೇವ್ ಚಾ

ದಾಧಾನಾ ಹಸ್ತಪದ್ಮಾಭಯಂ ಕುಶ್ಮಾಂದ ಶುಭದಾತ ಮಿ

ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಪ್ರಾರ್ಥನೆ

ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಪ್ರಾರ್ಥನೆ

ಸುರಸಂಪುರ್ನ ಕಲಾಶಂ ರುದ್ರರಾಪ್ಲುಮಾಮೇವ್ ಚಾ

ದಾಧಾನಾ ಹಸ್ತಪದ್ಮಾಭಯಂ ಕುಶ್ಮಾಂದ ಶುಭದಾತ ಮಿ

ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಸ್ತುತಿ

ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಸ್ತುತಿ

ಯಾ ದೇವಿ ಸರ್ವಭೂತೇಶ ಮಾ ಕೂಷ್ಮಾಂಡಾ ರುಪೇನ ಸಂಹಿತಾ

ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮಃ

ನವರಾತ್ರಿ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಧ್ಯಾನ

ನವರಾತ್ರಿ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಧ್ಯಾನ

ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ

ಸಿಂಹರೂಢ ಅಷ್ಟಭುಜಾ ಕೂಷ್ಮಾಂಡಾ ಯಶಾಸ್ವಿನಿಂ

ಭಾಸ್ವರಾ ಭಾನು ನಿಭಾಮ್ ಅನಹತಾ ಸ್ಥಿತಿಂ ಚತುರ್ಥ ದುರ್ಗಾ ತ್ರಿನೇತ್ರಂ

ಕಾಮಂಡಲು, ಚಾಪಾ, ಬನ, ಪದ್ಮ, ಸುಧಲಶಾಶ, ಚಕ್ರ, ಗಧಾ, ಜಪವತಿಧರಂ

ಪತಂಬರಾ ಪರಿಧಿಂ ಕಾಮನಿಯಮ್ ಮೃದುಹಾಸ ನಾನಾಲಂಕರಾ ಭೂಷಿತಂ

ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ, ಮಂದಿತಮ್

ಪ್ರಫುಲ್ಲಾ ವದನಂಚಾರು ಚಿಬುಕಾಮ್ ಕಾಂತಾ ಕಪೋಲಮ್ ತುಗಮ್ ಕುಚಾಮ್

ಕೋಮಲಂಗಿ ಶೆರ್ಮಮುಖಿ ಶ್ರೀಕಾಂತಿ ನಿಮ್ನಾಭಿ ನಿತಂಬನಿಮ್

ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಸ್ತೋತ್ರ

ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಸ್ತೋತ್ರ

ದುರ್ಗತಿನಾಶಿನಿ ತುಮಹಿ ದರಿದ್ರಾದಿ ವಿನಾಶನಿಮ್

ಜಯಮಯ ದಾನದಾ ಕೂಷ್ಮಾಂಡಾ ಪ್ರಾಣಮಾಮಯಂ

ಜಗತಮಾತಾ ಜಗತಕರರಿ ಜಗದಾಧರ ರೂಪಾನಿಮ್

ಚಾರಚರೇಶ್ವರಿ ಕೂಷ್ಮಾಂಡಾೇ ಪ್ರಣಮಾಮ್ಯಾಹಂ

ತ್ರಿಲೋಕಿಯಾಸುಂದರಿ ತುವಾಹಿ ದುಖಾ ಶೋಕಾ ನಿವಾರಿನಿಮ್

ಪರಮಾನಂದಮಯಿ, ಕೂಷ್ಮಾಂಡಾ್ ಪ್ರಣಮಾಮ್ಯಾಹಂ

ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಕವಚ

ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಕವಚ

ಹಂಸರೈ ಮೇನ್ ಶಿರಾ ಪಟು ಕೂಷ್ಮಾಂಡಾೇ ಭವನಶಿನಿಮ್

ಹಸಲಾಕರಿಮ್ ನೇತ್ರಾ, ಹಸಾರೌಷ್ಚಾ ಲಲಾಟಕಮ್

ಕೌಮಾರಿ ಪಟು ಸರ್ವಗತರ್, ವರಾಹಿ ಉಟ್ಟೆ ತಥಾ,

ಪುರ್ವೆ ಪಟು ವೈಷ್ಣವಿ ಇಂದ್ರಾನಿ ದಕ್ಷಿಣ ಮಾಮಾ

ದಿಗ್ವಿದಿಕ್ಶು ಸರ್ವತ್ರೇವಾ ಕುಮ್ ಬಿಜಮ್ ಸರ್ವದಾವತು

ನಾಲ್ಕನೇ ದಿನದ ಪೂಜೆಯ ಮಹತ್ವ

ನಾಲ್ಕನೇ ದಿನದ ಪೂಜೆಯ ಮಹತ್ವ

ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಕಾಯಿಲೆಗಳು ದೂರವಾಗುವುದು ಮತ್ತು ಒಳ್ಳೆಯ ಆರೋಗ್ಯ ಸಿಗುವುದು. ವೈಯಕ್ತಿಕ ಪ್ರಗತಿಯಲ್ಲಿ ಇದು ತಂದೆ, ಸೋದರ, ಸೋದರಿ ಹಾಗೂ ಉದ್ಯೋಗದ ಕಡೆ ಹಿರಿಯರೊಂದಿಗೆ ಸಂಬಂಧವನ್ನು ಉತ್ತಮಪಡಿಸುವುದು.

ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವುದರೊಂದಿಗೆ ಒಳ್ಳೆಯ ಗುರಿ ಹಾಗೂ ಸ್ವತಂತ್ರವು ಸಿಗುವುದು.

ನಾಲ್ಕನೇ ದಿನದ ಪೂಜೆ ಲಕ್ಷ್ಮೀ ಪೂಜೆಯ ಆರಂಭವಾಗಿದ್ದು, ಇದು ಮುಂದಿನ ಮೂರು ದಿನಗಳ ಕಾಲ ನಡೆಯಲಿದೆ.

English summary

Navratri 2023 Day 4, Colour, Maa Kushmunda Puja Vidhi, Timings, Mantra, Muhurat, Vrat Katha, significance in kannada

On the fourth day of Navratri, Ma Kushmanda is worshipped with ritualistic pujas. The term Kushmanda means the one who has created the universe. This Devi rides on a lion and has eight hands with seven deadly weapons in addition to a rosary.
X
Desktop Bottom Promotion