For Quick Alerts
ALLOW NOTIFICATIONS  
For Daily Alerts

ನವರಾತ್ರಿಯ 6ನೇ ದಿನ: ಕಾತ್ಯಾಯಿನಿ ದೇವಿಯ ಆರಾಧನೆಗೆ ಈ ಮಂತ್ರ ಪಠಿಸಿ

|

ಅಕ್ಟೋಬರ್‌ 23ರಂದು ವಿಜಯದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ.

ನವರಾತ್ರಿ ಪೂಜೆಯ ಆರನೇ ದಿನ ಕಾತ್ಯಾಯಿನಿ ದೇವಿಗೆ ಮೀಸಲಾಗಿರುವುದು. ಅಂದರೆ ಅಕ್ಟೋಬರ್‌ 20ರಂದು ಶುಕ್ರವಾರ ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿ ಜ್ಞಾನ ಮತ್ತು ವಿವೇಕದ ದೇವತೆಯನ್ನು ಪೂಜಿಸಲಾಗುತ್ತದೆ.

ಕಾತ್ಯಾಯಿನಿ ದೇವಿಯ ಕರುಣೆ ಅಥವಾ ಆಶೀರ್ವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ. ಎಂದು ಹೇಳಲಾಗುವುದು. ದುರ್ಗಾ ದೇವಿಯ ಸ್ವರೂಪಳಾದ ಕಾತ್ಯಾಯಿನಿ ದೇವಿ ಋಷಿಮುನಿಯಾದ ಕಾತ್ಯಾಯನ್ ಮಗಳು. ಕಾತ್ಯಾಯಿನಿ ದೇವಿಯು ಸಿಂಹದ ಮೇಲೆ ಕುಳಿತು ಹತ್ತು ಆಯುಧಗಳನ್ನು ಹಿಡಿದು ಬರುತ್ತಾಳೆ. ಕಾತ್ಯಾಯಿನಿ ದೇವಿಯು ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧ ಚಂದ್ರಾಕ್ರತಿಯ ಅಲಂಕಾರವನ್ನು ಹೊಂದಿರುತ್ತಾಳೆ.

worship goddess Katyayani Devi on 6th Day of Navratri Puja

ನವರಾತ್ರಿಯ ಆರನೇ ದಿನ ದೇವಿಯ ಆರಾಧನೆ ಹಾಗೀ ವಿಶೇಷ ಮಂತ್ರಗಳಿಂದ ಪೂಜೆ ಮಾಡಲಾಗುವುದು. ಸೂಕ್ತ ರೀತಿಯಲ್ಲಿ ಶುದ್ಧ ಮನಸ್ಸಿನಿಂದ ಪೂಜೆ ಮಾಡುವುದರ ಮೂಲಕ ದೇವಿಯ ಕೃಪೆಗೆ ಒಳಗಾಗಬಹುದು. ನಿಮಗೂ ದೇವಿಯ ಆರಾಧನೆಗೆ ಹೇಳಬೇಕಾದ ಮಂತ್ರ ಹಾಗೂ ಪ್ರಾರ್ಥನೆಯ ಕುರಿತು ತಿಳಿದುಕೊಳ್ಳಬೇಕು ಎನಿಸಿದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಕಾತ್ಯಾಯಿನಿ ಮಾತೆಯ ಕಥೆ

ಕಾತ್ಯಾಯಿನಿ ಮಾತೆಯ ಕಥೆ

ಒಮ್ಮೆ ಕಾತ್ಯಾಯನ್ ಎನ್ನುವ ಋಷಿ ಪಾರ್ವತಿ ದೇವಿಯಂತಹ ಮಗಳನ್ನು ಹೊಂದಬೇಕು ಎಂದು ಆಶಿಸಿದ್ದನು. ಈ ಹಿನ್ನೆಲೆಯಲ್ಲಿಯೇ ಭಕ್ತಿಯಿಂದ ತಪಸ್ಸನ್ನು ಕೈಗೊಂಡಿದ್ದನು. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ದೇವಿಯು ಆಶೀರ್ವಾದ ಮಾಡಿದಳು. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಟ್ಟರು. ಅವಳು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದು ದುಷ್ಕøತ್ಯ ಎಸಗುವ ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸನ ಸಂಹಾರಕ್ಕಾಗಿ ದುರ್ಗಾ ದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ.

Most Read: ನವರಾತ್ರಿಯ ನಾಲ್ಕನೇ ದಿನ: ಕೂಷ್ಮಾಂಡಾ ದೇವಿಯ ಆರಾಧನೆ ಹಾಗೂ ಪೂಜಾ ಮಂತ್ರಗಳು

ಕಾತ್ಯಾಯನಿ ದೇವಿಯ ಪ್ರಾಮುಖ್ಯತೆ:

ಕಾತ್ಯಾಯನಿ ದೇವಿಯ ಪ್ರಾಮುಖ್ಯತೆ:

ಕಾತ್ಯಾಯಿನಿ ದೇವಿಯು ಗುರು ಅಥವಾ ಬ್ರಹಸ್ಪತಿ ಗ್ರಹವನ್ನು ಆಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬ್ರಹಸ್ಪತಿ ಅತ್ಯಂತ ಪ್ರಮುಖವಾದ ಗ್ರಹವಾಗಿದೆ. ಗುರು ಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಅಪಾರ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗುವುದು. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದರೆ ಪರಿಹಾರ ಕಾಣುವುದು.

ನವರಾತ್ರಿಯ ಆರನೇ ದಿನ ಕಾತ್ಯಾಯನಿ ದೇವಿಯ ಆರಾಧನೆ

ನವರಾತ್ರಿಯ ಆರನೇ ದಿನ ಕಾತ್ಯಾಯನಿ ದೇವಿಯ ಆರಾಧನೆ

ಕಾತ್ಯಾಯಿನಿ ದೇವಿಗೆ ಕೆಂಪು ಗುಲಾಬಿಯು ಹೆಚ್ಚು ಶ್ರೇಷ್ಠವಾದದ್ದು. ದೇವಿಯ ಪೂಜೆ ಕೈಗೊಳ್ಳುವ ಮೊದಲು ಗಣೇಶನ ಪ್ರಾರ್ಥನೆ ಮಾಡಬೇಕು. ದೇವಿಗೆ ಷೋಡೋಸೋಪಚಾರ ಅರ್ಪಿಸಿದ ನಂತರ ಮಂಗಳಾರತಿಯ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಲಾಗುವುದು.

ಕಾತ್ಯಾಯಿನಿ ದೇವಿಯ ಮಂತ್ರ

ಕಾತ್ಯಾಯಿನಿ ದೇವಿಯ ಮಂತ್ರ

"ಓಂ ದೇವಿ ಕಾತ್ಯಾಯಿನಿ ನಮಃ

ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ

ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ."

Most Read: ಈ ವರ್ಷದ ನವರಾತ್ರಿ ಯಾಕೆ ಇಷ್ಟೊಂದು ಮಂಗಳಕರ ಗೊತ್ತೇ? ಇಲ್ಲಿದೆ ಕಾರಣಗಳು

ಕಾತ್ಯಾಯಿನಿ ದೇವಿಯ ಪ್ರಾರ್ಥನೆ

ಕಾತ್ಯಾಯಿನಿ ದೇವಿಯ ಪ್ರಾರ್ಥನೆ

"ಚಂದ್ರಹಾಸೋಜ್ವಲಕಾರ ಶರ್ದೂಲವರವಾಹನ

ಕಾತ್ಯಾಯಿನಿ ಶುಭಂ ದದ್ಯಾದ್ ದೇವಿ ದಾನವಘಟಿನಿ."

ಕಾತ್ಯಾಯಿನಿ ದೇವಿಯ ಸ್ತುತಿ

ಕಾತ್ಯಾಯಿನಿ ದೇವಿಯ ಸ್ತುತಿ

"ಯಾ ದೇವಿ ಸರ್ವಭೂತೇಶ್ ಮಾ ಕಾತ್ಯಾಯನಿ ರೂಪೇನ ಸಂಸ್ಥಿತಾ

ಸಮಸ್ತಸ್ತೈ ಸಮಸ್ತಸ್ತೈ ಸಮಸ್ತಸ್ತೈ ನಮೋ ನಮಃ"

ಕಾತ್ಯಾಯಿನಿ ದೇವಿಯ ಧ್ಯಾನ

ಕಾತ್ಯಾಯಿನಿ ದೇವಿಯ ಧ್ಯಾನ

"ವಂದೇ ವಂಚಿತ ಮನೋರಥಾರ್ಥ ಚಂದ್ರಾದ್ರಕೃತಾಶೇಖರಂ

ಸಿಂಹರುದ್ಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನಿಮ್

ಸ್ವರ್ಣವರ್ಣ ಅಜ್ನಾಚಕ್ರ ಸ್ಥಿತಂ ಶಷ್ಟಮಾ ದುರ್ಗಾ ತ್ರಿನೇತ್ರಂ

ವರಭೀತ ಕರಮ್ ಶಂಗಪದಾಧಾರಂ ಕಾತ್ಯಾಯನಸುತಂ ಭಜಾಮಿ

ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ

ಮಾಜಿರ, ಹರಾ, ಕೇಯುರಾ, ಕಿನಿಕಿನಿ, ರತ್ನಕುಂಡಲ ಮಂಡಿತಂ

ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೂಲಮ್ ತುಂಗಮ್ ಕುಂಚಮ್

ಕಾಮನಿಯಮ್ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಭೀಮ್."

ಕಾತ್ಯಾಯಿನಿ ದೇವಿಯ ಸ್ತೋತ್ರ

ಕಾತ್ಯಾಯಿನಿ ದೇವಿಯ ಸ್ತೋತ್ರ

"ಕಾಂಚನಭಾ ವರಾಭಯಂ ಪದ್ಮಾಧರ ಮುಖತ್ವೋಜ್ವಲಮ್

ಸ್ಮೇರಮುಖಿ ಶಿವಪತ್ನಿ ಕಾತ್ಯಾಯನೇಸುತೇ ಸಮೋಸ್ತುತೇ

ಪತಂಭರಾ ಪರಿಧನಮ್ ನಾನಾಲಂಕಾರ ಭೂಷಿತಮ್

ಸಿಂಹಸ್ಥಿತಂ ಪದ್ಮಹಸ್ತಂ ಕಾತ್ಯಾಯನಸ್ತುತೇ ನಮೋಸ್ತುತೇ

ಪರಮಾನಂದಮಯೀ ದೇವಿ ಪರಬ್ರಹ್ಮಾ ಪರಮಾತ್ಮ

ಪರಮಶಕ್ತಿ, ಪರಮಭುಕ್ತಿ ಕಾತ್ಯಾಯನಸ್ತುತೇ ನಮೋಸ್ತುತೇ

ವಿಶ್ವಕಾರ್ತಿ, ವಿಶ್ವಭಾರತಿ, ವಿಶ್ವಹಾರ್ತಿ, ವಿಶ್ವಪ್ರತಿಮ,

ವಿಶ್ವಾಚಿಂತ, ವಿಶ್ವಾತೀತ ಕಾತ್ಯಾಯನಸ್ತುತೇ ನಮೋಸ್ತುತೇ

ಕಾಮ್ ಬಿಜಾ, ಕಾಮ್ ಜಪನಂದಕಮ್ ಬಿಜಾ ಜಪ ತೋಶೈಟ್

ಕಾಮ್ ಕಾಮ್ ಬಿಜಾಮ್ ಜಪದಾಶಕ್ತಕಾಮ್ ಕಾಮ್ ಸಂತುತಾ

ಕಾಮ್ಕರಹಾರ್ಶಿನಿಕಮ್ ಧನದಾಧಾನಮಸಾನ

ಕಾಮ್ ಬೀಜ ಜಪಕಾರಿನಿಕಾಮ್ ಬಿಜಾ ತಪ ಮಾನಸ

ಕಾಮ್ ಕರಿನಿ ಕಾಮ್ ಮಂತ್ರಪೂಜಿತಕಮ್ ಬೀಜ ಧಾರಿಣಿ

ಕಾಂ ಕಿಮ್ ಕುಮ್‍ಕೈ ಕಾಹ್ ಥಾಹ್ ಚಾಹ್ ಸ್ವರೂಪಿಣಿ."

ಕಾತ್ಯಾಯಿನಿ ದೇವಿಯ ಕವಾಚ್

ಕಾತ್ಯಾಯಿನಿ ದೇವಿಯ ಕವಾಚ್

"ಕಾತ್ಯಾಯನಮುಖ ಪತು ಕಾಮ್ ಸ್ವಾಹಸ್ವರೂಪಿಣಿ

ಲಲತೇ ವಿಜಯಾ ಪತು ಮಾಲಿನಿ ನಿತ್ಯ ಸುಂದರಿ

ಕಲ್ಯಾಣಿ ಹೃದಯಮ್ ಪತು ಜಯಾ ಭಗಮಾಲಿನಿ."

ಆರನೇ ದಿನದ ನವರಾತ್ರಿಯ ಪ್ರಾಮುಖ್ಯತೆ

ಆರನೇ ದಿನದ ನವರಾತ್ರಿಯ ಪ್ರಾಮುಖ್ಯತೆ

ಕಾತ್ಯಾಯಿನಿ ದೇವಿಗೆ ಸಮರ್ಪಿತವಾದ ಆರನೇ ದಿನದ ನವರಾತ್ರಿ ಪೂಜೆಯು ಬಹಳ ಶ್ರೇಷ್ಠವಾದದ್ದು. ಈ ದಿನವನ್ನು ಮಹಾಶಶ್ತಿ ಎಂದು ಕೂಡ ಕರೆಯಲಾಗುತ್ತದೆ. ನವರಾತ್ರಿಯ ಆಚರಣೆಯಲ್ಲಿ ಮೂರು ದಿನಗಳ ಮಹಾಲಕ್ಷ್ಮಿ ಪೂಜೆಯ ಮೂರನೇ ಮತ್ತು ಅಂತಿಮ ದಿನ ಎಂದು ಪರಿಗಣಿಸಲಾಗುವುದು. ಕಾತ್ಯಾಯನಿ ಪೂಜೆಯಿಂದ ವ್ಯಕ್ತಿಯು ಉನ್ನತ ಸಾಮಾಜಿಕ ಸ್ಥಾನಮಾನವನ್ನು ಪಡೆದುಕೊಳ್ಳುವರು. ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರೆ ಸಮೃದ್ಧಿ ಮತ್ತು ಸಂಪತ್ತನ್ನು ದೇವಿ ನೀಡುತ್ತಾಳೆ. ಜೊತೆಗೆ ಉತ್ತಮ ತಿಳಿವಳಿಕೆ ಮತ್ತು ಶಾಂತಿಯುತವಾದ ಸಂಬಂಧಗಳೊಂದಿಗೆ ಕುಟುಂಬದಲ್ಲಿ ಸೌಹಾರ್ದತೆ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.

English summary

Navratri 2022 Day 6, Colour, Katyayani Devi Puja Vidhi, Timings, Mantra, Muhurat, Vrat Katha, significance in kannada

The deity worshipped on the sixth day of Navratri puja is Katyayani. The name signifies the form of Durga which manifested as the daughter of the sage Katyayan in answer to his prayers. Katyayani rides on a lion and carries ten weapons in her hands. She has three eyes and a half moon decorating her forehead.
X
Desktop Bottom Promotion