For Quick Alerts
ALLOW NOTIFICATIONS  
For Daily Alerts

ನವರಾತ್ರಿಯ ಮೂರನೇ ದಿನ: ಚಂದ್ರಘಂಟ ದೇವಿಯ ಆರಾಧನೆ ಹಾಗೂ ಪೂಜಾ ಮಂತ್ರಗಳು

|
3rd Day of Navaratri 2018 : ಚಂದ್ರಘಂಟ ದೇವಿಯ ಮಹಿಮೆ ಹಾಗು ಪೂಜಾ ವಿಧಾನ

ನವರಾತ್ರಿಯ ಮೂರನೇ ದಿನದಂದು ಮಾ ಚಂದ್ರಘಂಟ ದೇವಿಯನ್ನು ಪೂಜಿಸಲಾಗುವುದು. ಆಕೆ ಹುಲಿಯ ಮೇಲೆ ಸವಾರಿ ಮಾಡಿಕೊಂಡು ಬರುವರು ಮತ್ತು ಹಣೆಯಲ್ಲಿ ಚಂದ್ರನ ಘಂಟೆಯ ಆಕೃತಿಯಿರುವುದು. ಚಂದ್ರಘಂಟವೆಂದರೆ ಹಣೆಯಲ್ಲಿ ಚಂದ್ರನಿರುವುದು ಎಂದು ಹೇಳಬಹುದು.

ನವರಾತ್ರಿಯ ಮೂರನೇ ದಿನದಲ್ಲಿ ಚಂದ್ರಘಂಟ ದೇವಿಯ ಕಥೆ

ನವರಾತ್ರಿಯ ಮೂರನೇ ದಿನದಲ್ಲಿ ಚಂದ್ರಘಂಟ ದೇವಿಯ ಕಥೆ

ಚಂದ್ರಘಂಟ ದೇವಿಯು ದುರ್ಗಾದೇವಿಯ ವಿವಾಹಿತ ರೂಪವಾಗಿದೆ. ಆಕೆಯು ಹತ್ತು ಆಯುಧಗಳನ್ನು ಕೈಗಳಲ್ಲಿ ಹಿಡಿದುಕೊಂಡಿರುವಳು ಮತ್ತು ದುಷ್ಟಶಕ್ತಿಗಳು ಹಾಗೂ ರಾಕ್ಷಸರೊಂದಿಗೆ ಯುದ್ಧಕ್ಕೆ ತಯಾರಾಗಿ ನಿಂತಿರುವಳು. ಈ ಮಾತೆ ತನ್ನ ಭಕ್ತರ ನೆರವಿಗೆ ಕ್ಷಣಮಾತ್ರದಲ್ಲಿ ಆಗಮಿಸಿ, ಅವರ ಕಷ್ಟಗಳನ್ನು ನಿವಾರಣೆ ಮಾಡುವರು. ಚಂದ್ರನ ಘಂಟೆಯ ನಾದವು ಭಕ್ತರ ಮಾರ್ಗದಲ್ಲಿ ಬರುವಂತಹ ಹಲವಾರು ದುಷ್ಟಶಕ್ತಿಗಳನ್ನು ನಿವಾರಣೆ ಮಾಡಿ ಸಂತೋಷ ಹಾಗೂ ಶಾಂತಿಯ ಜೀವನ ನೀಡುವುದು.

ಚಂದ್ರಘಂಟ ತಾಯಿಯ ಮಹತ್ವ

ಚಂದ್ರಘಂಟ ತಾಯಿಯ ಮಹತ್ವ

ಚಂದ್ರಘಂಟ ದೇವಿಯು ಶುಕ್ರಗ್ರಹದ ಅಧಿಪತಿಯಾಗಿರುವರು. ಇದರಿಂದಾಗಿ ಚಂದ್ರಘಂಟ ದೇವಿಯು ಜಗತ್ತಿನ ಸುಖ ಹಾಗೂ ಜೀವನದಲ್ಲಿ ಸಂತೋಷವನ್ನು ನೀಡುವರು. ಚಂದ್ರಘಂಟ ದೇವಿಯು ನಿಮಗೆ ಆಶೀರ್ವದಿಸಿದರೆ ಆಗ ನಿಮಗೆ ಎಲ್ಲಾ ರೀತಿಯ ಸಂಪತ್ತು ಹಾಗೂ ಸಮೃದ್ಧಿಯು ಸಿಗುವುದು. ಮನೆಯಲ್ಲಿ ಯಾವತ್ತಿಗೂ ಆಹಾರದ ಕೊರತೆಯಾಗದು.

Most Read: ನವರಾತ್ರಿಗಳಲ್ಲಿ 'ನವದುರ್ಗೆ'ಯನ್ನು ಪೂಜಿಸುವ ಆ ಒಂಬತ್ತು ರೂಪಗಳು...

ಚಂದ್ರಘಂಟ ದೇವಿಯ ಪೂಜೆ ಹೇಗೆ?

ಚಂದ್ರಘಂಟ ದೇವಿಯ ಪೂಜೆ ಹೇಗೆ?

ಚಂದ್ರಘಂಟ ದೇವಿಗೆ ಮಲ್ಲಿಗೆ ಹೂ ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ನವರಾತ್ರಿಯ ಮೂರನೇ ದಿನದಂದು ಮಲ್ಲಿಗೆ ಹೂವಿನಿಂದ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜೆ ಮಾಡಿದರೆ ಚಂದ್ರಘಂಟ ದೇವಿಯು ಒಲಿಯುವರು. 16 ರೀತಿಯ ಅರ್ಪಣೆಗಳನ್ನು ಮಾಡಿ ಮತ್ತು ಅಂತಿಮವಾಗಿ ಆರತಿಯೊಂದಿಗೆ ಪೂಜೆ ಕೊನೆಗೊಳಿಸಿ. ಇದರಿಂದ ಕುಟುಂಬಕ್ಕೆ ಸುಖ, ಸಮೃದ್ಧಿ ಸಿಗುವುದು.

ಮೂರನೇ ದಿನ ಪಠಿಸಬೇಕಿರುವ ಮಂತ್ರಗಳು

ಮೂರನೇ ದಿನ ಪಠಿಸಬೇಕಿರುವ ಮಂತ್ರಗಳು

ಓಂ ದೇವಿ ಚಂದ್ರಘಂಟಾಯೈ ನಮಃ

ಓಂ ದೇವಿ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವಾರುಧ್ ಚಂಡಕೊಪಸ್ತ್ರಕೈರ್ಯುತ

ಪ್ರಸಾದಂ ತನುತೆ ಮಧ್ಯಮ ಚಂದ್ರಘಂಟತಿ ವಿಶ್ರೂತಾ

ಮೂರನೇ ದಿನ ಮಾ ಚಂದ್ರಘಂಟಾ ಪ್ರಾರ್ಥನೆ

ಮೂರನೇ ದಿನ ಮಾ ಚಂದ್ರಘಂಟಾ ಪ್ರಾರ್ಥನೆ

ಪಿಂದಾಜ ಪ್ರವಾರುಧ್ ಚಂಡಕೊಪಸ್ತ್ರಕೈರ್ಯುತ

ಪ್ರಸಾದಂ ತನುತೆ ಮಧ್ಯಮ ಚಂದ್ರಘಂಟೇತಿ ವಿಶ್ರೂತಾ

ನವರಾತ್ರಿ ಮೂರನೇ ದಿನ ಮಾ ಚಂದ್ರಘಂಟ ಸ್ತುತಿ

ನವರಾತ್ರಿ ಮೂರನೇ ದಿನ ಮಾ ಚಂದ್ರಘಂಟ ಸ್ತುತಿ

ಯಾ ದೇವಿ ಸರ್ವಭುತೇಶ್ ಮಾ ಚಂದ್ರಘಂಟ ರೂಪನೆ ಸಂಷ್ಠಿತಾ

ನಮಸ್ತಾಸ್ಯೈ ನಮಸ್ತಾಸಾಯಿ ನಮಸ್ತಾಸ್ಯೈ ನಮೋ ನಮಃ

Most Read: ನಿಮಗೆ ತಿಳಿದಿರಲೇಬೇಕಾದ ಅತಿ ಶಕ್ತಿಯುತ ನಾಲ್ಕು 'ದುರ್ಗಾ ಮಂತ್ರಗಳು'

ಮೂರನೇ ದಿನ ಮಾ ಚಂದ್ರಘಂಟ ದೇವಿ ಧ್ಯಾನ

ಮೂರನೇ ದಿನ ಮಾ ಚಂದ್ರಘಂಟ ದೇವಿ ಧ್ಯಾನ

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ

ಸಿಂಹರೂಢ ಚಂದ್ರಘಂಟ ಯಾಶಸ್ವಿನೀಮ್

ಮಣಿಪುರಾ ಸ್ಠಿತಂ ತೃತಿಯಾ ದುರ್ಗಾ ತ್ರಿನೇತ್ರಂ

ಶಂಖ, ಗಧಾ, ತ್ರಿಶುಲಾ, ಚಪಶರ, ಪದ್ಮ ಕಮಂಡಲು ಮಾಲಾ ವರಭಿತಕರಂ

ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕರಾ ಭೂಷಿತಂ

ಮಂಜೀರಾ, ಹರಾ, ಕೆಯುರಾ, ಕಿಂಕಿನಿ, ರತ್ನಾಕುಂಡಲ ಮಂಡಿಯಮ್

ಪ್ರಫುಲ್ಲಾ ವಂದನಾ ಬಿಬಾಧಾರ ಕಾಂತಾ ಕಪೋಲಮ್ ತುಗಮ್ ಕುಚಮ್

ಕಾಮನಿಯಮ್ ಲವಣ್ಯಂ ಕ್ಷಿನಾಕತಿ ನಿತಂಬನಿಮ್

ನವರಾತ್ರಿ ಮೂರನೇ ದಿನ ಚಂದ್ರಘಂಟ ದೇವಿಯ ಸ್ತೋತ್ರ

ನವರಾತ್ರಿ ಮೂರನೇ ದಿನ ಚಂದ್ರಘಂಟ ದೇವಿಯ ಸ್ತೋತ್ರ

ಅಪಾದುದ್ದರಿಣಿ ತುವಹಿ ಆದಿ ಶಕ್ತಿ ಶುಭಪರಂ

ಅನಿಮದಿ ಸಿದ್ದಿದಾತ್ರಿ ಚಂದ್ರಘಂಟೆ ಪ್ರಾಣಮಾಮಯಂ

ಚಂದ್ರಮುಖಿ ಇಶತಾ ದತ್ತಿ ಇಶ್ಯಾಂ ಮಂತ್ರ ಸ್ವರೂಪಿಣಿಮ್

ಧನದಾತ್ರಿ, ಆನಂದದಾದ್ರಿ ಚಂದ್ರಘಂಟೆ ಪ್ರಣಮಮಯಂ

ನನರುಪಧರಿಣಿ ಇಚ್ಚಾಮಾಯಿ ಐಶ್ವರ್ಯಾಯದಿಂ

ಸೌಭಾಗ್ಯಾರೋಗ್ಯದೈನಿ ಚಂದ್ರಘಂಟೆ ಪ್ರಾಣಮಾಮಯಂ

Most Read: ಈ ಊರಿನಲ್ಲಿ 'ನವರಾತ್ರಿ' ದಿನ ದೇವಿಗೆ ಪ್ರಾಣಿ ಬಲಿ ಕೊಡುತ್ತಾರಂತೆ!

ಮೂರನೇ ದಿನ ಮಾ ಚಂದ್ರಘಂಟ ಕವಚ

ಮೂರನೇ ದಿನ ಮಾ ಚಂದ್ರಘಂಟ ಕವಚ

ರಹಸ್ಯಂ ಶ್ರೀನು ವಕ್ಷ್ಯಾಮಿ ಶೈವೇಶಿ ಕಮಲನನೆ

ಶ್ರೀ ಚಂದ್ರಘಾಂಟ್ಯ ಕವಚಮ್ ಸರ್ವಶಿಧದಕಂ

ಬೈನಾ ನೈಸಾಮ್ ಬಿನಾ ವಿನಿಯೋಗಂ ಬಿನಾ ಶಾಪೋಧಾ ಬಿನಾ ಹೋಮಮ್

ಸ್ನಾನಂ ಶೌಚಾದಿ ನಾಸ್ತಿ ಶ್ರದ್ಧಾಮಾತ್ರೇನಾ ಸಿದ್ಧಿಂಮ್

ಕುಶಿಶ್ಯಾಮ್ ಕುಟಿಲಾಯ ವಂಚಕಾಯ ನಿಂದಾಕಾಯ ಚಾ

ನಾ ದಾತವ್ಯಂ ನಾ ದಾತವ್ಯಂ ನಾ ದಾತವ್ಯಂ ಕದಾಚಿಮ್

ಮೂರನೇ ದಿನದ ನವರಾತ್ರಿ ಪೂಜೆಯ ಮಹತ್ವ

ಮೂರನೇ ದಿನದ ನವರಾತ್ರಿ ಪೂಜೆಯ ಮಹತ್ವ

*ನವರಾತ್ರಿಯ ಮೂರನೇ ದಿನದ ಪೂಜೆಯು ಭಕ್ತರ ಮನಸ್ಸಿನಲ್ಲಿ ಇರುವಂತಹ ಎಲ್ಲಾ ರೀತಿಯ ಭೀತಿಯನ್ನು ನಿವಾರಣೆ ಮಾಡಿ ಆಶಯ ಮತ್ತಯ ಧೇಯ್ಯ ಸ್ಥಾಪಿಸುವುದು.

*ಹಣೆಯಲ್ಲಿ ಇರುವಂತಹ ಚಂದ್ರನ ಘಂಟೆಯಿಂದಾಗಿ ಎಲ್ಲಾ ರೀತಿಯ ದುಷ್ಟಶಕ್ತಿಗಳು ನಿವಾರಣೆಯಾಗುವುದು. ಚಂದ್ರಘಂಟ ಪೂಜೆಯು ಮನೆ ಹಾಗೂ ಸುತ್ತಲಿನ ದುಷ್ಟಶಕ್ತಿಗಳನ್ನು ನಿವಾರಣೆ ಮಾಡುವುದು.

*ಜೀವನದಲ್ಲಿ ಆಶಯವನ್ನು ಕಳೆದುಕೊಂಡಿರುವವರು, ವೃತ್ತಿಯಲ್ಲಿ ಹೊಸ ದಾರಿಗಾಗಿ ಕಾಯುತ್ತಿರುವವರು ಮತ್ತು ಹೊಸ ಉದ್ಯೋಗ ಸ್ಥಾಪಿಸಲು ಬಯಸುವವರು ಚಂದ್ರಘಂಟ ಪೂಜೆಯು ತುಂಬಾ ಲಾಭಕಾರಿಯಾಗಲಿದೆ. ಇದು ಜೀವನದ ಹಾದಿಯಲ್ಲಿ ಹೊಸ ಬೆಳಕು ಮೂಡಿಸುವುದು.

*ಸಂಪ್ರದಾಯದಂತೆ ಮೊದಲ ಮೂರು ದಿನ ತಾಯಿಯ ಮೂರು ರೂಪವನ್ನು ಪೂಜಿಸಲಾಗುವುದು.

English summary

worship goddess Chandraghanta Devi on 3rd Day of Navratri Puja

On the third day of the Navratri puja, it is customary to worship Ma Chandraghanta Devi. She rides on a tiger and there is a crescent moon decorating her forehead. The name Chandraghanta means the one with a moon in her forehead.
Story first published: Friday, October 12, 2018, 7:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more