For Quick Alerts
ALLOW NOTIFICATIONS  
For Daily Alerts

ಮಹಿಳಾ ಸಮಾನತೆಯ ದಿನ 2022: ಪ್ರಸ್ತುತ ಸಮಾಜದಲ್ಲಿ ಮಹಿಳಾ ಸಮಾನತೆ ಇದೆಯೇ?

|

ಆಗಸ್ಟ್‌ 26, ಮಹಿಳಾ ಸಮಾನತೆಯ ದಿನ... ಮಹಿಳೆಯರ ಹಕ್ಕು, ಸ್ವಾತಂತ್ರ್ಯ ಇವುಗಳ ದೃಷ್ಟಿಯಿಂದ ನೋಡುವುದಾದರೆ ಈ ದಿನ ತುಂಬಾ ಮಹತ್ವದ್ದಾಗಿದೆ. ಇಂದು ಮಹಿಳೆಯರು ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಮಹಿಳೆಯರಿಂದ ಅಸಾಧ್ಯ ಎಂದು ಹೇಳುತ್ತಿದ್ದ ಎಷ್ಟೋ ಕಾರ್ಯಗಳನ್ನು ಸಾಧಿಸಿ ತೋರಿಸಿದ್ದಾರೆ. ಆದರೆ ಮಹಿಳಾ ಸಮಾನತೆ ಎಂಬುವುದು ಇಂದಿಗೂ ಬಿಸಿಲು ಕುದುರೆಯಾಗಿದೆ.

Womens Equality Day 2021

ಕೆಲ ಮಹಿಳೆಯರ ಸಾಧನೆ ನೋಡುವಾಗ ಮಹಿಳೆಯರಿಗೆ ಈ ಸಮಾಜದಲ್ಲಿ ಸಿಕ್ಕಿದೆ ಎಂದು ಅನಿಸಬಹುದು, ಆದರೆ ಸಮಾನತೆ ಎಂಬುವುದು ಎಷ್ಟೋ ಮಹಿಳೆಯರಿಗೆ ಇಂದಿಗೂ ಕನಸಾಗಿದೆ. ಲೈಂಗಿಕ, ಮಾನಸಿಕ, ಕೌಟಂಬಿಕ ಶೋಷಣೆಗೆ ಎಷ್ಟೋ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ.

ಹೆಣ್ಣು-ಗಂಡು ಎಂಬ ತಾರತಮ್ಯ ಎಷ್ಟೋ ಕುಟುಂಬಗಳಿವೆ. ಕೆಲವರು ಗಂಡು ಅಂದರೆ ಶ್ರೇಷ್ಠ ಹೆಣ್ಣೆಂದರೆ ಶೋಷಣೆಗೇ ಹುಟ್ಟಿದವಳು ಎಂಬ ದೃಷ್ಟಿಯಿಂದ ನೋಡುತ್ತಿದ್ದಾರೆ, ಇಂಥ ದೃಷ್ಟಿಕೋನಕ್ಕೆ ಹೆಣ್ಣಿನಿಂದಲೇ ಬೆಂಬಲ ಸಿಗುತ್ತಿರುವುದು ಮತ್ತೊಂದು ದುರಂತ.

ಹೆಣ್ಣು ನೀ ಹೆಚ್ಚು ಓದಬೇಕಾಗಿಲ್ಲ ಎಂದು ಗಂಡು ಸಮಾಜ ಹೇಳಿದರೆ ಅದುವೇ ನಿಯಮವೆಂಬುವುದನ್ನು ಆ ಹೆಣ್ಣನ್ನು ಒಪ್ಪಿಸಲು ಮಹಿಳೆಯರೇ ಮುಂದಾಗುತ್ತಾರೆ (ಅಮ್ಮ, ಅಜ್ಜಿ, ಕುಟುಂಬದ ಅಥವಾ ನೆರೆಹೊರೆಯ ಮಹಿಳೆಯರು). ಹೀಗಾಗಿ ತುಂಬಾ ಹೆಣ್ಣು ಮಕ್ಕಳಿಗೆ ತಮ್ಮ ಕಾಲಿನ ಮೇಲೆ ನಿಲ್ಲಲು ಸಾಧ್ಯವಾಗುವುದಿಲ್ಲ. ಮದುವೆಯಾಗಿ ಒಂದು ರುಪಾಯಿಗೂ ಗಂಡನ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ಇದೆ. ಗಂಡ ಒಳ್ಳೆಯವನಾದರೆ ಹೆಂಡತಿಗೆ ಚಿಂತೆ ಕಾಡುವುದಿಲ್ಲ, ಅದೇ ಅವನು ಸರಿಯಿಲ್ಲದಿದ್ದರೆ ಅಥವಾ ಅವನು ಅಕಾಲಿಕ ಮರಣವೊಂದಿದರೆ ಒಣಂದು ಒಳ್ಳೆಯ ಶಿಕ್ಷಣ ಇಲ್ಲ, ಕೈಯಲ್ಲಿ ಕೆಲಸವಿಲ್ಲದೆ ಆ ಹೆಣ್ಣು ನರಕ ನೋಡಬೇಕಾಗುತ್ತದೆ.

ಮಹಿಳೆಯರ ಸಮಾನತೆಯ ಅವಶ್ಯಕತೆ ಬಗ್ಗೆ ಅರಿವು ಮೂಡಿಸಲು ಮಹಿಳಾ ಸಮಾನತೆ ದಿನ ಆಚರಿಸಲಾಗುವುದು. ಈ ದಿನ ಈ ಕುರಿತು ಹಲವು ಚರ್ಚೆಗಳನ್ನು ನಡೆಸಲಾಗುವುದು. ಹೆಣ್ಣು ಮಕ್ಕಳಿಗೆ ನಿಮ್ಮ ಹಕ್ಕು ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಎಂದಿಗೂ ಬಿಡಬೇಡಿ ಎಂಬ ಅರಿವು ಮೂಡಿಸಲು ಈ ದಿನ ಆಚರಿಸಲಾಗುವುದು.

 ಮಹಿಳಾ ದಿನದ ಮಹತ್ವ

ಮಹಿಳಾ ದಿನದ ಮಹತ್ವ

ಸಾಮಾಜಿಕವಾಗಿ-ಆರ್ಥಿಕವಾಗಿ ಮಹಿಳಾ ಸಮಾನತೆಯ ಅರಿವು ಮೂಡಿಸಲು ಈ ದಿನ ಆಚರಿಸಲಾಗುವುದು. ಅನೇ ಸಂಸ್ಥೆಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ, ಎನ್‌ಜಿಓಗಳಲ್ಲಿ, ಮಹಿಳಾ ಕಲ್ಯಾಣ ಇಲಾಖೆ ಅಥವಾ ಸಂಸ್ಥೆಗಳಲ್ಲಿ ಈ ದಿನವನ್ನು ಆಚರಿಸಲಾಗುವುದು. ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು, ಸ್ವಾತಂತ್ರ್ಯಗಳನ್ನು ಕಳೆದುಕೊಳ್ಳಬೇಡಿ ಎಂಬ ಅರಿವು ಮೂಡಿಸಲಾಗುವುದು. ಇಂದು ನಾವು ಸಾಕಷ್ಟು ಮುಂದುವರೆದಿದ್ದೇವೆ, ಹಳೆಯ ಗೊಡ್ಡು ಸಂಪ್ರದಾಯಕ್ಕೆ (ಸತಿ ಪದ್ಧತಿ ಮುಂತಾದವು) ತಿಲಾಂಜಲಿ ಇಟ್ಟಿದ್ದೇವೆ ಎಂದು ಅನಿಸಿದರೂ ಇನ್ನೂ ಮಹಿಳೆಯರು ಶೋಷಣೆ ಅನುಭವಿಸುತ್ತಿದ್ದಾರೆ ಎನ್ನುವುದು ಅಷ್ಟೇ ಕ್ರೂರ ಸತ್ಯ.

ಮಹಿಳಾ ಮೇಲೆ ಶೋಷಣೆ ನಿಲ್ಲಬೇಕಾಗಿದೆ

ಮಹಿಳಾ ಮೇಲೆ ಶೋಷಣೆ ನಿಲ್ಲಬೇಕಾಗಿದೆ

ಹೆಣ್ಣು ಭ್ರೂಣ ಹತ್ಯೆ ಹೊರ ಜಗತ್ತಿಗೇ ತಿಳಿಯದೇ ನಡೆಯುತ್ತಿದೆ, ಹೆಣ್ಣು ಮಗವೆಂದು ಎಸೆದು ಹೋಗುವ ಮೃಗ ಮನಸ್ಸಿನ ಪೋಷಕರಿದ್ದಾರೆ, ಹೆಣ್ಣು ಮನೆ ಕೆಲಸಕ್ಕೆ ಮಾತ್ರ ಸೀಮಿತ ಎಂದು ನೋಡುತ್ತಿರುವ ಗಂಡಸರು ಇದ್ದಾರೆ, ಎಷ್ಟೋ ಹೆಣ್ಣು ಮಕ್ಕಳ ಮೇಲೆ ಪ್ರತಿನಿತ್ಯ ಲೈಂಗಿಕ ದೌರ್ಜನ್ಯ ಎಸಲಾಗುತ್ತಿದೆ, ಕೆಲಸದ ಸ್ಥಳದಲ್ಲಿ ಒಂದು ಉನ್ನತ ಸ್ಥಾನದಲ್ಲಿದ್ದರೆ ಅದನ್ನು ಹೊಟ್ಟೆಕಿಚ್ಚಿನಿಂದ ನೋಡುವ ಗಂಡಸರಿದ್ದಾರೆ ಹೀಗೆ ಹೆಣ್ಣನ್ನು ಪ್ರತಿಯೊಂದು ಹಂತದಲ್ಲಿ ತುಳಿಯುವ ರಾಕ್ಷಸರು ಈ ಸಮಾಜದಲ್ಲಿ ಇದ್ದಾರೆ. ಇಂಥವರ ನಡುವೆ ಹೆಣ್ಣು ಬೆಳೆಯಬೇಕಾಗಿದೆ.

ಇವೆಲ್ಲಾ ನೋಡುವಾಗ ಮಹಿಳಾ ಸಮಾನತೆ ಎಂಬುವುದು ಒಂದು ಘೋಷಣೆಯಾಗಿಯೇ ಉಳಿದಿದೆ ಎಂದು ಅನಿಸುವುದು ಅಲ್ವಾ? ಮನೆಯೇ ಮೊದಲ ಪಾಠ ಶಾಲೆ ಅಂತಾರೆ ಅಲ್ವಾ ಹಾಗೆಯೇ ಮನೆಯಲ್ಲಿ ಹೆಣ್ಣೆಂಬ ತಾರತಮ್ಯ ಮಾಡದೆ ಬೆಳೆಸಬೇಕು, ಅವಳನ್ನು ಆರ್ಥಿಕ ಸದೃಢವಾಗಿರಲು ಬೆಂಬಲಿಸಬೇಕು. ಆಗ ಅವಳಿಗೆ ಸಮಾಜ ಅವಳನ್ನು ಅಬಲೆಯೆಂದು ನೋಡುವ ದೃಷ್ಟಿ ಬದಲಾಯಿಸಲು ಸಾಧ್ಯವಾಗುವುದು. ಹೆಣ್ಣು ಮಕ್ಕಳು ತಾನು ಹೆಣ್ಣೆಂದು ಮೂಲೆ ಸರಿಯದೆ ಮುನ್ನುಗ್ಗುವ ಧೈರ್ಯ ತೋರಬೇಕು, ಆಗ ಮಾತ್ರ ಮಹಿಳಾ ಸಮಾನತೆ ಸಾಧ್ಯ.

ಮಹಿಳಾ ಸಮಾನತೆ ದಿನದ ಇತಿಹಾಸ

ಮಹಿಳಾ ಸಮಾನತೆ ದಿನದ ಇತಿಹಾಸ

ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲು, ವೇತನ ನೀಡಲು 1908 ರಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಮಿಕರ ಆಂದೋಲನನಡೆಯುತ್ತದೆ. ನ್ಯೂಯಾರ್ಕ್ನಲ್ಲಿ ಸುಮಾರು 15,000 ಮಹಿಳೆಯರು ಕಡಿಮೆ ಕೆಲಸದ ಸಮಯ, ಮತದಾನದ ಹಕ್ಕು ಹಾಗೂ ಸಮಾನ, ಉತ್ತಮ ಸಂಬಳವನ್ನು ನೀಡಬೇಕೆಂದು ಕೋರಿ ಹೋರಾಟ ನಡೆಸಿದ್ದರು. ಬಳಿಕ ಒಂದು ವರ್ಷದ ನಂತರ ಮಾರ್ಚ್‌ನಲ್ಲಿ ಅಮೆರಿಕದ ಕೋಪನ್ ಹ್ಯಾಗನ್‌ನಲ್ಲಿ ನಡೆದ ಸಮಾಜವಾದಿ ಅಂತಾರಾಷ್ಟ್ರೀಯ ಸಭೆಯಲ್ಲಿ, ಈ ಮೆರವಣಿಗೆಯನ್ನು ಸಮಾಜವಾದಿ ಪಕ್ಷದ ಅಮೆರಿಕವು ರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು.

ಇದಲ್ಲದೆ, ಈ ಪರಿಕಲ್ಪನೆಯು ಎಲ್ಲಾ ಇತರ ದೇಶಗಳಿಗೆ ವ್ಯಾಪಿಸಿತು. ಎಲ್ಲಾ ಮಹಿಳೆಯರು ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಬೇಡಿಕೆ ಇಟ್ಟರು. ಕ್ಯೂಬಾ, ಅರ್ಮೇನಿಯಾ, ಮಂಗೋಲಿಯಾ, ರಷ್ಯಾ, ಉಗಾಂಡಾ ಮತ್ತು ಉಕ್ರೇನ್‌ನಂತಹ ದೇಶಗಳು ಈ ದಿನದಲ್ಲಿ ಸಾರ್ವಜನಿಕ ರಜಾದಿನವನ್ನಾಗಿ ಆಚರಿಸುತ್ತವೆ.

ಮಹಿಳಾ ಸಮಾನತೆ ಸಿಗಬೇಕಾದರೆ ಮಹಿಳೆಯರೇ ನೀವೇ ಆ ನಿಟ್ಟಿನಲ್ಲಿ ಯೋಚಿಸಬೇಕು ಆಗ ಮಾತ್ರ ಪಡೆಯಲು ಸಾಧ್ಯ ಎಂಬುವುದನ್ನು ಮರೆಯದಿರಿ. ಮಹಿಳಾ ಸಮಾನತೆ ದಿನದ ಶುಭಾಶಯಗಳು.

English summary

Women's Equality Day 2022 : Know Date, Significance, History and More About The Special Say in kannada

Women's Equality Day 2021: Know date, significance, history and more about the special day in kannada, read on..
X
Desktop Bottom Promotion