ಈ 'ದೇವಸ್ಥಾನದ' ಆವರಣದಲ್ಲಿ ಮಲಗಿದರೆ ಮಕ್ಕಳ ಭಾಗ್ಯ ಲಭಿಸುವುದು!

By: manu
Subscribe to Boldsky

ಪ್ರತಿಯೊಬ್ಬ ಮಹಿಳೆಯೂ ತಾನು ತಾಯ್ತನವನ್ನು ಅನುಭವಿಸಬೇಕು, ಮಡಿಲಲ್ಲಿ ಪುಟ್ಟ ಕಂದನ್ನು ಆಡಿಸಬೇಕು ಎನ್ನುವ ಬಯಕೆಯನ್ನು ಹೊಂದಿರುತ್ತಾಳೆ. ಆದರೆ ಕೆಲವರು ನತದೃಷ್ಟದಿಂದ ಮಗುವಿನ ಭಾಗ್ಯ ಪಡೆಯದೇ ಸಂಕಷ್ಟದಲ್ಲಿ ಇರುತ್ತಾರೆ. ಇಂತಹ ದುಃಖಿಗಳಿಗಾಗಿ ಸಂತಸ ನೀಡುವ ಸ್ಥಳವೊಂದಿದೆ.

ಈ ಪುಣ್ಯ ಸ್ಥಳಕ್ಕೆ ಬಂದರೆ ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯವನ್ನು ಕಲ್ಪಿಸಿ, ಬಾಳಿನ ಜ್ಯೋತಿಯನ್ನು ಬೆಳಗಿಸುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಇದು ಕೆಲವರಿಗೆ ಮೂಢನಂಬಿಕೆ ಎನಿಸಬಹುದು. ಆದರೆ ಇದು ಸತ್ಯ. ಈಗಾಗಲೇ ಎಲ್ಲಾ ಬಗೆಯ ಚಿಕಿತ್ಸೆ ಪಡೆದುಕೊಂಡಿದ್ದರೂ ಮಗುವಿನ ಭಾಗ್ಯ ಇಲ್ಲವೆಂದವರು ಇಲ್ಲಿಗೆ ಬರಬಹುದು. ಈ ಪವಿತ್ರ ದೇವಸ್ಥಾನದ ನೆಲದ ಮೇಲೆ ಮಲಗಿಕೊಂಡರೆ ಗರ್ಭಿಣಿಯಾಗುವ ಶಕ್ತಿಯು ದೇಹಕ್ಕೆ ಆವರಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಕ್ಷೇತ್ರ ಎಲ್ಲಿದೆ? ಎನ್ನುವ ಪ್ರಶ್ನೆ ಕಾಡುತ್ತಿದ್ದರೆ ಮುಂದಿರುವ ವಿವರಣೆ ಓದಿ....

ಎಲ್ಲಿದೆ ಈ ಪವಿತ್ರ ಕ್ಷೇತ್ರ?

ಎಲ್ಲಿದೆ ಈ ಪವಿತ್ರ ಕ್ಷೇತ್ರ?

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಲಾಡ್ ಭರೋಲ್ ಸಮೀಪದ ಸಿಮಾಸ್ ಗ್ರಾಮದಲ್ಲಿದೆ. ಇಲ್ಲಿರುವ ಈ ದೇವಾಲಯಕ್ಕೆ ಸಿಮ್ಸಾ ದೇವಸ್ಥಾನ ಎಂದು ಕರೆಯುತ್ತಾರೆ. ಇಲ್ಲಿ ಸಿಮ್ಸಾ ದೇವಿಯನ್ನು ಆರಾಧಿಸಲಾಗುತ್ತದೆ. ಈ ದೇವಿಗೆ "ಸಂತಾನ್-ದಾತ್ರಿ'' ಎಂದೂ ಸಹ ಕರೆಯುತ್ತಾರೆ.

ಬಹಳ ಪ್ರಸಿದ್ಧಿ ಪಡೆದಿದೆ

ಬಹಳ ಪ್ರಸಿದ್ಧಿ ಪಡೆದಿದೆ

ಹಿಮಾಚಲದ ಹತ್ತಿರದ ರಾಜ್ಯಗಳಾದ ಪಂಜಾಬ್, ಹರಿಯಾಣ, ಚಂಡೀಗಢಗಳಿಂದ ಭಕ್ತರ ಹರಿವು ಜೋರಾಗಿದೆ. ಇಲ್ಲಿ ಮಕ್ಕಳಿಲ್ಲದ ಮಹಿಳೆಯರು ಹರಕೆ, ಪೂಜೆಗಳ ಪ್ರಾರ್ಥನೆ ಮಾಡಿಕೊಂಡು ಇಲ್ಲಿಗೆ ಬರುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಎಂದಿಗಿಂತ ಹೆಚ್ಚಿರುತ್ತದೆ.

ನವರಾತ್ರಿಯಲ್ಲಿ ಜನಜಂಗುಳಿ ಹೆಚ್ಚು

ನವರಾತ್ರಿಯಲ್ಲಿ ಜನಜಂಗುಳಿ ಹೆಚ್ಚು

ನವರಾತ್ರಿಯ ಸಂದರ್ಭದಲ್ಲಿ ಸಾವಿರಾರು ಜೋಡಿಗಳು ಇಲ್ಲಿಗೆ ಬರುತ್ತಾರೆ. ದೇವಾಲಯದ ಆವರಣದಲ್ಲಿ ವಾಸಿಸುತ್ತಾರೆ. ರಾತ್ರಿ-ಹಗಲು ಎರಡು ಹೊತ್ತು ಇಲ್ಲಿ ನೆಲದ ಮೇಲೆ ಮಲಗುತ್ತಾರೆ.

ಕನಸಲ್ಲಿ ದೇವರ ದರ್ಶನ

ಕನಸಲ್ಲಿ ದೇವರ ದರ್ಶನ

ದೇವಸ್ಥಾನದ ಬಗ್ಗೆ ಭಕ್ತಿ ಹಾಗೂ ನಂಬಿಕೆ ಇರುವವರ ಕನಸಿನಲ್ಲಿ ಸಿಮ್ಸಾ ದೇವರು ಮನುಷ್ಯರ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಮಗುವನ್ನು ಹೊಂದಲು ಆಶೀರ್ವದಿಸುತ್ತಾಳೆ. ಕನಸಿನಲ್ಲಿ ಮಹಿಳೆ ಹಣ್ಣು ಅಥವಾ ಹೂವನ್ನು ಪಡೆದಂತೆ ಕಂಡರೆ ಆಕೆಗೆ ಮಗು ಆಗುವ ಫಲ ದೊರೆತಂತೆ ಎಂದು ಹೇಳಲಾಗುವುದು.

ನಂಬಿಕೆಯ ಪ್ರಕಾರ

ನಂಬಿಕೆಯ ಪ್ರಕಾರ

ಈ ದೇವತೆಯು ಮಗುವಿನ ಲಿಂಗವನ್ನು ಬಹಿರಂಗ ಪಡಿಸುತ್ತದೆ ಎಂದು ನಂಬಲಾಗುತ್ತದೆ. ಕನಸಿನಲ್ಲಿ ಸೀಬೆಹಣ್ಣು ಪಡೆದಂತೆ ಕನಸುಕಂಡರೆ ಗಂಡು ಮಗು ಹುಟ್ಟುವುದು, ಮಹಿಳೆಯರ ಬೆರಳನ್ನು ಕನಸಲ್ಲಿ ಕಂಡರೆ ಅವಳಿ ಹೆಣ್ಣು ಮಗುವೆಂದು ತಿಳಿಸಿದಂತೆ ಎಂಬ ನಂಬಿಕೆ ಇದೆ.

ಹೀಗೂ ಆಗುವುದು

ಹೀಗೂ ಆಗುವುದು

ಮಹಿಳೆಗೆ ಕಲ್ಲು, ಮರ, ಲೋಹದಂತಹ ವಸ್ತುಗಳು ಕನಸಲ್ಲಿ ಕಂಡರೆ ಅವಳಿಗೆ ಮಗುವಿನ ಭಾಗ್ಯವಿಲ್ಲ ಎಂದು ತಿಳಿಯಬಹುದು. ಮಗು ಪಡೆಯುವ ಭಾಗ್ಯ ಇಲ್ಲ ಎನ್ನುವ ಕನಸು ಬಿದ್ದಮೇಲೂ ಅಲ್ಲಿಯೇ ಇದ್ದರೆ ದೇಹದಲ್ಲಿ ನವೆ, ಕೆಂಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಆಗ ದೇವಸ್ಥಾನವನ್ನು ಬಿಡಬೇಕು ಎಂಬ ನಂಬಿಕೆಯಿದೆ.

ವಿಶೇಷವಾದ ಕಲ್ಲು

ವಿಶೇಷವಾದ ಕಲ್ಲು

ಸಿಮ್ಸಾ ದೇವಸ್ಥಾನದ ಹತ್ತಿರ ಒಂದು ದೊಡ್ಡ ಕಲ್ಲಿದೆ. ಅದು ಅತ್ಯಂತ ಪವಿತ್ರವಾದದ್ದು ಎಂದು ಪರಿಗಣಿಸಲಾಗುತ್ತದೆ. ಈ ಕಲ್ಲುಗಳನ್ನು ಎರಡು ಕೈಗಳಿಂದ ಚಲಿಸಿದರೆ, ಅದು ಚಲಿಸದಂತೆ ಹೇಳುತ್ತದೆ. ನಿಮ್ಮ ಕೈಗಿಂತ ಕಲ್ಲು ಚಿಕ್ಕದಾಗಿದ್ದರೆ, ಆ ಸ್ಥಳದಿಂದ ಸುಲಭವಾಗಿ ಚಲಿಸುವಂತೆ ಹೇಳುತ್ತದೆ ಎನ್ನಲಾಗುವುದು.

All Image Source

English summary

Women Get Pregnant By Just Sleeping On The Floor For A Night In This Temple!

There are many superstitions that people believe in. Getting to the depth of any belief is not something that we would do on a regular basis. When a woman tries on the different ways to get pregnant and fails, there are many chances that she would turn to these superstitious beliefs. Check out the case of the temple where women are said to get pregnant by just sleeping on the floor of the temple.
Subscribe Newsletter