For Quick Alerts
ALLOW NOTIFICATIONS  
For Daily Alerts

ಏಕಾದಶಿಗೆ ಅನ್ನ ತಿನ್ನಬಾರದೆಂದು ಏಕೆ ಹೇಳುತ್ತಾರೆ?

|

ಏಕಾದಶಿ ವ್ರತ ಪಾಲಿಸುವವರು ಆ ದಿನ ಉಪವಾಸ ಇರುತ್ತಾರೆ. ಉಪವಾಸ ಇರಲು ಸಾಧ್ಯವಾಗದಿದ್ದರೆ ಆ ದಿನ ಅನ್ನದ ಆಹಾರವನ್ನಂತೂ ಸೇವಿಸುವುದಿಲ್ಲ. ಗೋಧಿ, ಸಾಬುದಾನದಿಂದ ಮಾಡಿದ ಪದಾರ್ಥಗಳು, ಹಣ್ಣುಗಳು ಇವುಗಳನ್ನು ತಿನ್ನುತ್ತಾರೆ.

Why We Should Not Eat Rice On Ekadashi

ಏಕಾದಶಿ ದಿನ ಅನ್ನ ಏಕೆ ತಿನ್ನಬಾರದು? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು? ಏಕಾದಶಿಯಂದು ಅನ್ನ ತಿನ್ನದಿದ್ದರೆ ದೊರೆಯುವ ಪ್ರಯೋಜನಗಳೇನು, ಇದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು ಎಂಬುವುದರ ಬಗ್ಗೆ ಈ ಈ ಲೇಖನದಲ್ಲಿ ತಿಳಿಯೋಣ:

 ಏಕಾದಶಿ ದಿನ ಅಕ್ಕಿ ಪದಾರ್ಥಗಳನ್ನು ಬಳಸಲ್ಲ

ಏಕಾದಶಿ ದಿನ ಅಕ್ಕಿ ಪದಾರ್ಥಗಳನ್ನು ಬಳಸಲ್ಲ

ಏಕಾದಶಿಯಂದು ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ತಿನ್ನುವುದು, ಅದರಿಂದ ಮಾಡಿದ ಆಹಾರ ವಸ್ತುಗಳನ್ನು ನೈವೇದ್ಯವಾಗಿ ಇಡುವುದು ಮಾಡಬಾರದು. ಏಕೆಂದರೆ ಈ ದಿನ ಅನ್ನವನ್ನು ತಿಂದರೆ ಹುಳವನ್ನು ತಿಂದಿದ್ದಕ್ಕೆ ಸಮ ಎಂದು ಪರಿಗಣಿಸಲಾಗಿದೆ.

ಇನ್ನು ಅನ್ನ ಏಕೆ ತಿನ್ನಬಾರದು ಎಂಬುವುದಕ್ಕೆ ಪೌರಾಣಿಕ ಕತೆಯೂ ಇದೆ.

ಪೌರಾಣಿಕ ಕತೆ

ಪೌರಾಣಿಕ ಕತೆ

ಮಹಾಭಾರತದಲ್ಲಿ ಒಂದು ಕತೆಯಿದೆ. ಶಕ್ತಿ ಮಾತೆಯ ಕೋಧ್ರದಿಂದ ಬಚವಾಗಲು ಮಹರ್ಷಿ ಮೇದರು ಶರೀರವನ್ನು ತ್ಯಾಗ ಮಾಡುತ್ತಾರೆ, ಅದರ ಅಂಶವು ಭೂಮಿಯಲ್ಲಿ ಲೀನವಾಗಿದೆ. ಋಷಿ ಮೇದರು ಶರೀರ ತ್ಯಾಗ ಮಾಡಿದ ದಿನ ಏಕಾದಶಿ ದಿನವಾಗಿತ್ತು. ಆದ್ದರಿಂದ ಏಕಾದಶಿಯಂದು ಅಕ್ಕಿಯಿಂದ ಮಾಡಿದ ಪದಾರ್ಥ ಅಥವಾ ಅನ್ನವನ್ನು ತಿನ್ನಬಾರದು. ಈ ದಿನ ಅನ್ನ ತಿಂದರೆ ಮಹರ್ಷಿ ಮೇದರ ಮಾಂಸ ತಿಂದಂತಾಗುವುದು ಎಂದು ಈ ದಿನ ಅನ್ನ ವರ್ಜಿತ ಎಂದು ಹೇಳಲಾಗಿದೆ.

ಪದ್ಮ ಪುರಾಣ

ಪದ್ಮ ಪುರಾಣ

ಚಂದ್ರ ಜಲರಾಶಿಯ ಗ್ರಹವಾಗಿದೆ, ಚಂದ್ರನು ಅಷ್ಟಮಿಯ ತಿಥಿಯಂದು ನೀರನ್ನು ಹೆಚ್ಚು ಆಕರ್ಷಿಸುತ್ತಾನೆ. ಇದರ ಅರ್ಥ ಏಕಾದಶಿಯ ದಿನ ನೀರನ್ನು ಹೆಚ್ಚು ಸೆಳೆಯುವ ಪ್ರಯತ್ನ ಮಾಡುತ್ತದೆ. ಜಲ, ರಸ, ಭಾವನೆಯು ಚಂದ್ರನ ತತ್ತ್ವಗಳಾಗಿವೆ. ಜಲ ತತ್ತ್ವ ದೇಹದಲ್ಲಿ ಹೆಚ್ಚಾದರೆ ವ್ರತ ಮಾಡಲು ಏಕಾಗ್ರತೆ ಮೂಡುವುದಿಲ್ಲ, ಏಕದಶಿಯಂದು ದೇಹದಲ್ಲಿ ನೀರಿನಂಶ ಎಷ್ಟು ಕಡಿಮೆ ಇರುತ್ತದೋ ಅಷ್ಟು ಒಳ್ಳೆಯದು.

ಏಕಾದಶಿಯಂದು ಉಪವಾಸ ಮಾಡದವರು ಸಾತ್ವಿಕ ಆಹಾರ ಸೇವಿಸಬೇಕು

ಏಕಾದಶಿಯಂದು ಉಪವಾಸ ಮಾಡದವರು ಸಾತ್ವಿಕ ಆಹಾರ ಸೇವಿಸಬೇಕು

ಸಾತ್ವಿಕ ಆಹಾರ ಎಂದರೆ ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ, ಮಾಂಸ ಸೇವನೆ ಮಾಡದಿರುವುದು. ಈ ದಿನ ಹಣ್ಣುಗಳನ್ನು ತಿನ್ನಬಹುದು. ಇನ್ನು ಉಪವಾಸ ಮಾಡುವವರು ಪಾರಣೆ ಸಮಯ ನೋಡಿ ಸೇವಿಸಬೇಕು. ಸಾಮಾನ್ಯವಾಗಿ ಸೂರ್ಯಾಸ್ತದ ಬಳಿಕ ಉಪವಾಸ ಮುರಿಯುವುದು ಒಳ್ಳೆಯದು.

ಏಕಾದಶಿ ಉಪವಾಸ ಆರೋಗ್ಯಕ್ಕೂ ಒಳ್ಳೆಯದು

ಏಕಾದಶಿ ಉಪವಾಸ ಆರೋಗ್ಯಕ್ಕೂ ಒಳ್ಳೆಯದು

ವೈಜ್ಞಾನಿಕವಾಗಿ ನೋಡುವುದಾದರೆ ಏಕಾದಶಿಯಂದು ಉಪವಾಸ ಮಾಡುವುದರಿಂದ ಆರೋಗ್ಯ ಕೂಡ ವೃದ್ಧಿಯಾಗುವುದು. ವ್ಯಕ್ತಿಯು ಉಪವಾಸ ಮಾಡಿದಾಗ ಜೀರ್ಣಾಂಗದ ಶ್ರಮವು ಕಡಿಮೆಯಾಗಿ ಜೀರ್ಣಾಂಗವು ಬಲಿಷ್ಠಗೊಂಡು ದೇಹದಲ್ಲಿ ಉತ್ಪತ್ತಿಯಾದ ಕಶ್ಮಲಗಳನ್ನು ಹೊರಹಾಕಿ ರೋಗ ಶಮನಕ್ಕೆ ಸಹಕರಿಸುತ್ತದೆ. ಮನುಷ್ಯನ ಆರೋಗ್ಯದ ಹಿತಕ್ಕಾಗಿ ಈ ರೀತಿಯ ಉಪವಾಸ ಒಳ್ಳೆಯದು. ಅಲ್ಲದೆ ಈ ದಿನ ದೇವರ ಧ್ಯಾನ ಕೂಡ ಮಾಡುವುದರಿಂದ ಮಾನಸಿಕ ಆರೋಗ್ಯ ಕೂಡ ವೃದ್ಧಿಯಾಗುತ್ತದೆ

English summary

Why We Should Not Eat Rice On Ekadashi

Here we have explained why we have not eat rice on ekadashi, read on.
X
Desktop Bottom Promotion