For Quick Alerts
ALLOW NOTIFICATIONS  
For Daily Alerts

ಶಿವಲಿಂಗವನ್ನು ಪೂಜಿಸುವ ವೇಳೆ ಅರಿಶಿನವನ್ನು ಬಳಸಬಾರದಂತೆ! ಯಾಕೆ ಗೊತ್ತೇ?

|

ನಮ್ಮ ಬಯಕೆಗಳನ್ನು ಈಡೇರಿಸಿ, ಜೀವನದಲ್ಲಿ ಸಂತೋಷ ಹಾಗೂ ಸದ್ಗತಿಯನ್ನು ನೀಡುವ ದೇವರಲ್ಲಿ ಶಿವನೂ ಒಬ್ಬ. ಮಹಾನ್ ಶಕ್ತಿಯನ್ನು ಹೊಂದಿರುವ ಶಿವನು ಸೃಷ್ಟಿಯ ಲಯ ಕರ್ತ ಎಂದು ಕರೆಯಲಾಗುವುದು. ಪುರಾಣ ಇತಿಹಾಸದಲ್ಲಿ ವಿಶೇಷ ಕಥೆ ಹಾಗೂ ಹಿನ್ನೆಲೆಯನ್ನು ಬಿತ್ತರಿಸುವುದರ ಮೂಲಕ ಶಿವನ ಲೀಲೆಯನ್ನು ಜನತೆಗೆ ತೋರಿಸಿ ಕೊಟ್ಟಿದೆ. ಯೋಗಿಯಾಗಿದ್ದ ಶಿವನು ಪಾರ್ವತಿಯನ್ನು ವಲಿಸಿದನು. ನಂತರ ಸುಬ್ರಹ್ಮಣ್ಯ ಮತ್ತು ಗಣೇಶ ಎನ್ನುವ ಮಕ್ಕಳನ್ನು ಪಡೆಯುವುದರ ಮೂಲಕ ಸಂಸಾರಿಯಾಗಿದನು.

ಅತ್ಯಂತ ಸರಳ ಹಾಗೂ ಅಗಾಧ ಶಕ್ತಿಯನ್ನು ಹೊಂದಿರುವ ದೇವ ಶಿವ. ಶಿವನು ಅತ್ಯಂತ ಶಕ್ತಿಶಾಲಿ ಆಗಿರುವುದರಿಂದ ಅವನ ಆಶೀರ್ವಾದಕ್ಕೆ ಒಳಗಾದರೆ ಜೀವನದಲ್ಲಿ ಎಂತಹ ಸನ್ನಿವೇಶವನ್ನು ಸಹ ಎದುರಿಸಬಹುದು. ಜೊತೆಗೆ ಜೀವನದಲ್ಲಿ ಸಂತೋಷ ಹಾಗೂ ಪರಿಪೂರ್ಣತೆ ಭಾವನೆಯನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಶಿವನು ಸರಳ ಹಾಗೂ ನಿರ್ಮಲವಾದ ಭಕ್ತಿಗೆ ಬಹು ಬೇಗ ಕರಗುವನು. ಜೊತೆಗೆ ತನ್ನ ಭಕ್ತರ ಇಷ್ಟಾರ್ಥವನ್ನು ನೆರವೇರಿಸುವನು. ಅವರ ಬದುಕಲ್ಲಿ ನೆಮ್ಮದಿಯ ಕಿರಣವನ್ನು ಬೀರುವನು.

ಹಿಂದೂ ಧರ್ಮದಲ್ಲಿ ಶಿವನಿಗೆ ವಿಶೇಷ ಸ್ಥಾನ

ಹಿಂದೂ ಧರ್ಮದಲ್ಲಿ ಶಿವನಿಗೆ ವಿಶೇಷ ಸ್ಥಾನ

ಹಿಂದೂ ಧರ್ಮದಲ್ಲಿ ಶಿವನಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಭೂಮಿಯ ಮೇಲೆ ಜೀವ ಸಂಕುಲಕ್ಕೆ ವಿಶೇಷವಾದ ರಕ್ಷಣೆ ಹಾಗೂ ಪಾಲನೆಯನ್ನು ಮಾಡುವುದರ ಮೂಲಕ ಜನರ ಭಕ್ತಿ ಹಾಗೂ ಪ್ರೀತಿಗೆ ಪಾತ್ರನಾಗಿದ್ದಾನೆ. ಸೃಷ್ಟಿಯನ್ನು ಕಾಪಾಡುವ ಮೂರು ಪ್ರಮುಖ ದೈವ ಶಕ್ತಿಯಲ್ಲಿ ಶಿವನು ಒಬ್ಬ. ಅದಕ್ಕೆ ಒಂದು ಚಿಕ್ಕ ಉದಾಹರಣೆ ಎಂದರೆ, ಒಮ್ಮೆ ರಾಕ್ಷಸರು ಹಾಗೂ ದೇವತೆಗಳ ನಡುವೆ ಶಕ್ತಿಯ ಬಗ್ಗೆ ಜಗಳ ಉಂಟಾಗಿತ್ತು. ಆ ಸಂದರ್ಭದಲ್ಲಿ ಯಾರು ಹೆಚ್ಚು ಪ್ರಮುಖರು? ಹಾಗೂ ಯಾರು ಅಮರರಾಗಿ ಇರಬೇಕು ಎನ್ನುವುದರ ಬಗ್ಗೆಯೂ ತರ್ಕಗಳು ಏರ್ಪಟ್ಟವು. ನಂತರ ಸಮುದ್ರ ಮಂಥನ ಮಾಡಬೇಕು, ಆಗ ಅಮೃತ ಸಿಗುವುದು, ಅದನ್ನು ಕುಡಿಯುವುದರ ಮೂಲಕ ಅಮರರಾಗಿ ಅಥವಾ ಶಾಶ್ವತವಾದ ಶಕ್ತಿಯನ್ನು ಪಡೆದುಕೊಳ್ಳಬಹುದು ಎನ್ನುವ ನಿರ್ಧಾರಕ್ಕೆ ಬಂದರು.

ಸಮುದ್ರ ಮಂಥನ

ಸಮುದ್ರ ಮಂಥನ

ರಾಕ್ಷಸರು ಮತ್ತು ದೇವತೆಗಳು ಸಮುದ್ರ ಮಂಥನ ನಡೆಸಿದಾಗ ಸಾಕಷ್ಟು ಸಂಗತಿಗಳು ಹಾಗೂ ವಸ್ತುಗಳು ಒಂದೊಂದಾಗಿಯೇ ಹೊರ ಬಂದವು. ಅವುಗಳನ್ನು ದೇವತೆಗಳು ಹಾಗೂ ರಾಕ್ಷಸರು ಹಂಚಿಕೊಂಡರು. ಕೆಲವೊಂದನ್ನು ಲೋಕ ಕಲ್ಯಾಣಕ್ಕೆ ಹಾಗೂ ಜೀವ ಸಂಕುಲಕ್ಕಾಗಿ ಭೂಮಿಗೆ ಕಳುಹಿಸಿಕೊಟ್ಟರು. ಅವುಗಳಲ್ಲಿ ಗೋವು, ನೀರು ಹಾಗೂ ಕೆಲವು ಔಷಧೀಯ ಸಸ್ಯಗಳು ಒಂದು. ಅಂತಹ ಸಂದರ್ಭದಲ್ಲಿ ಜಗತ್ತನ್ನು ನಾಶ ಮಾಡುವಂತಹ ವಿಷವು ಹೊರ ಹೊಮ್ಮಿತು. ಅದನ್ನು ಭೂಮಿಗೆ ಕಳುಹಿಸಿದರೆ ಅಥವಾ ಯಾವುದೇ ಗಣಕ್ಕೆ ಕಳುಹಿಸಿದರೂ ಅದು ವಿನಾಶವನ್ನು ಕಾಣುತ್ತಿತ್ತು. ಆಗ ಶಿವನು ಅದನ್ನು ಕುಡಿದನು.

Most Read: ಅಚ್ಚರಿಯ ಲೋಕ: ಕನಸಿನಲ್ಲಿ ತ್ರಿಶೂಲ, ಶಿವಲಿಂಗ ಕಂಡುಬಂದರೆ...

ಅಂದು ವಿಷ ಕುಡಿದು ಮನು ಕುಲವನ್ನು ರಕ್ಷಿಸಿದ ಶಿವ

ಅಂದು ವಿಷ ಕುಡಿದು ಮನು ಕುಲವನ್ನು ರಕ್ಷಿಸಿದ ಶಿವ

ವಿಷವನ್ನು ಕುಡಿದ ಶಿವನ ಆರೋಗ್ಯವು ಬದಲಾವಣೆಯನ್ನು ಕಂಡಿತು. ವಿಷವನ್ನು ಕುಡಿದು, ತನ್ನ ಗಂಟಲಿನಲ್ಲಿಯೇ ಇರಿಸಿಕೊಂಡನು. ಅದು ಆಗ ಶಿವನ ದೇಹದಲ್ಲಿ ನಿಧಾನವಾಗಿ ಪಸರಿಸಿ ನೀಲಿ ಮೈಬಣ್ಣಕ್ಕೆ ತಿರುಗಿತು. ಅಂತಹ ಪರಿಸ್ಥಿತಿಯಲ್ಲಿಯೂ ಶಿವನು ಜೀವ ಸಂಕುಲದ ರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ಹಾಗೂ ಪಾಲನೆಗೆ ಮಹತ್ವ ನೀಡಿದನು. ಹಾಗಾಗಿಯೇ ಮನು ಕುಲವು ಶಿವನನ್ನು ಭಕ್ತಿಯಿಂದ ಆರಾಧಿಸುವುದರ ಮೂಲಕ ಅವನ ಪ್ರೀತಿ ಹಾಗೂ ಆಶೀರ್ವಾದಕ್ಕೆ ಒಳಗಾದರು. ಇಂತಹ ಅನೇಕ ಘಟನೆಗಳು ಹಾಗೂ ಕಾರಣಗಳಿಂದಾಗಿ ಶಿವನು ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಶಾಲಿ ದೇವನಾದನು. ಜೊತೆಗೆ ವಿಭಿನ್ನ ಆಚರಣೆ ಹಾಗೂ ಪೂಜೆಯನ್ನು ಸಲ್ಲಿಸುವುದರ ಮೂಲಕ ಶಿವನನ್ನು ಸಂತೋಷ ಗೊಳಿಸಲು ಮುಂದಾದರು. ಹಾಗಾಗಿ ಹಿಂದೂ ಧರ್ಮ ಎನ್ನುವ ವಿಶಾಲವಾದ ಧರ್ಮದಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ವಿಶೇಷ ಬಗೆಯ ಪೂಜೆ, ಹಬ್ಬಳ ಆಚರಣೆಯನ್ನು ಕೈಗೊಳ್ಳುತ್ತಾರೆ. ಆಚರಣೆಯು ವಿಭಿನ್ನತೆಯಿಂದ ಕೂಡಿದ್ದರೂ ಅದರ ಉದ್ದೇಶ ಹಾಗೂ ನಿಲುವು ಒಂದೇ ಆಗಿರುತ್ತದೆ. ಅದು ಶಿವನಿಗೆ ಸಂತೋಷಗೊಳಿಸುವ ಮೂಲ ಉದ್ದೇಶ ಆಗಿರುತ್ತದೆ.

ಅಂದು ವಿಷ ಕುಡಿದು ಮನು ಕುಲವನ್ನು ರಕ್ಷಿಸಿದ ಶಿವ

ಅಂದು ವಿಷ ಕುಡಿದು ಮನು ಕುಲವನ್ನು ರಕ್ಷಿಸಿದ ಶಿವ

ಹಾಗಾಗಿ ಶಿವನ ಪೂಜೆಯನ್ನು ನಾವು ಮಾಡುವಾಗ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅದು ಶಿವನ ಪ್ರೀತಿಗೆ ಕಾರಣವಾಗುವುದು. ಸರಳ ವಸ್ತುಗಳನ್ನು ಆಶಿಸುವ ಶಿವನು ಆಡಂಬರದ ಪೂಜೆ ಹಾಗೂ ವೈಕರಿಯನ್ನು ಬಯಸನು. ಬಿಲ್ವ ಪತ್ರೆ, ವಿಭೂತಿ, ಹಾಲಿನಂತಹ ಸರಳ ವಸ್ತುಗಳನ್ನು ಆಶಿಸುತ್ತಾನೆ. ಅವನಿಗೆ ಇಷ್ಟ ಇರದ ಕಾರ್ಯ ಹಾಗೂಪೂಜೆಯ ವಿಧಾನವನ್ನು ಬಯಸುವುದಿಲ್ಲ. ಹಾಗಾಗಿ ಮನೆಯಲ್ಲಿ ಮತ್ತು ದೇವಸ್ಥಾನದಲ್ಲಿ ಶಿವನ ಪೂಜೆಯನ್ನು ಕೈಗೊಳ್ಳುವಾಗ ವಿಶೇಷ ಕಾಳಜಿ ಹಾಗೂ ಕ್ರಮವನ್ನು ಅನುಸರಿಸಬೇಕು. ಇಲ್ಲವಾದರೆ ಶಿವನ ಪ್ರೀತಿಗಿಂತ ಕೋಪಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಶಿವನಿಗೆ ಅವನ ಪೂಜೆಯನ್ನು ಮಾಡುವಾಗ ಅರಿಶಿನವನ್ನು ಬಳಸ ಬಾರದು. ಅರಿಶಿನವು ಶಿವನಿಗೆ ಇಷ್ಟವಾಗದ ವಸ್ತು ಅರಿಶಿನ. ಅರಿಶಿನ ಲೇಪನ, ಅರಿಶಿನ ಅಭಿಷೇಕ, ಅರಿಶಿನ ಅಲಂಕಾರವನ್ನು ಅನುಸರಿಸಿದರೆ ಶಿವನಿಗೆ ಇಷ್ಟವಾಗದು. ಜೊತೆಗೆ ಅರಿಶಿನವನ್ನು ಬಳಸಿದರೆ ಶಿವನಿಗೆ ಇಷ್ಟವಾಗದು. ನೀವು ಶಿವನ ಪೂಜೆಯನ್ನು ಕೈಗೊಳ್ಳುವಾಗ ಅರಿಶಿನವನ್ನು ದೂರ ಇರಿಸಿ. ಏಕೆ? ಏನು? ಎನ್ನುವ ವಿಷಯದ ಬಗ್ಗೆ ತಿಳಿಯಲು ಲೇಖನದ ಮುಂದಿನ ಭಾಗವನ್ನು ವಿವರಿಸಿ.

ಸರಳ ಆರಾಧನೆಯನ್ನು ಬಯಸುವವ

ಸರಳ ಆರಾಧನೆಯನ್ನು ಬಯಸುವವ

ವಿವಿಧ ನಾಮಗಳಿಂದ ಕರೆಯಲ್ಪಡುವ ಶಿವನು ಜಗತ್ತನ್ನು ಕಾಯುವ ದೈವ. ಭೋಲೇನಾಥ್ ನು ಅತ್ಯಂತ ಸರಳ ಪೂಜೆಯನ್ನು ಇಷ್ಟಪಡುವನು. ಇವನಿಗೆ ವಿವಿಧ ನೈವೇದ್ಯ, ಹಣ್ಣುಗಳು ಹಾಗೂ ಹೂವಿನ ಅಲಂಕಾರವನ್ನು ಇಷ್ಟಪಡುವುದಿಲ್ಲ. ಪರಿಶುದ್ಧವಾದ ಭಕ್ತಿ ಹಾಗೂ ಆರಾಧನೆಯೇ ಅವನಿಗೆ ಪ್ರಿಯವಾದದ್ದು.

ಶಿವನಿಗೆ ಸರಳ ಪೂಜಾ ವಿಧಾನ

ಶಿವನಿಗೆ ಸರಳ ಪೂಜಾ ವಿಧಾನ

ಅತ್ಯಂತ ಸರಳ ಜೀವನ ಹಾಗೂ ಪೂಜಾ ವಿಧಾನವನ್ನು ಬಯಸುವ ಶಿವನಿಗೆ ಬಿಲ್ವ ಪತ್ರೆ, ವೀಳ್ಯದ ಎಲೆ, ಭಾಂಗ್, ತಾಜಾ ಹಸುವಿನ ಹಾಲು, ಶ್ರೀಗಂಧದ ಲೇಪನ ಹಾಗೂ ವಿಭೂತಿಯನ್ನು ಬಯಸುತ್ತಾನೆ. ಶಿವನಿಗೆ ಇವುಗಳ ಬಳಸಿ ಆರಾಧನೆ ಮಾಡಿದರೆ ಅತ್ಯಂತ ಸಂತುಷ್ಟನಾಗುವನು. ಜೊತೆಗೆ ಭಕ್ತರ ಮನಸ್ಸಿನ ಬಯಕೆಯನ್ನು ಈಡೇರಿಸುವನು ಎಂದು ಪುರಾತನ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

Most Read: ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ

ಅರಿಶಿನ ಬಳಸಿ ಪೂಜೆ

ಅರಿಶಿನ ಬಳಸಿ ಪೂಜೆ

ಅರಿಶಿನವು ಅತ್ಯಂತ ಪವಿತ್ರ ಹಾಗೂ ಔಷಧೀಯ ಗುಣವನ್ನು ಒಳಗೊಂಡಿದೆ. ಅರಿಶಿನವನ್ನು ಬಳಸುವುದರಿಂದ ಅನೇಕ ರೋಗ ರುಜಿನೆಯನ್ನು ದೂರ ಇಡಬಹುದು. ಸೌಂದರ್ಯಗಳ ವೃದ್ಧಿಗೆ ಹಾಗೂ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಉತ್ತಮವಾದ ನೈಸರ್ಗಿಕ ಉತ್ಪನ್ನ. ಇದನ್ನು ಬಳಸುವುದರಿಂದ ಅನೇಕ ನಕಾರಾತ್ಮಕ ಶಕ್ತಿಯನ್ನು ದೂರ ಇಡಬಹುದು. ಈ ಹಿನ್ನೆಲೆಯಿಂದಲೇ ಅನೇಕ ದೇವತೆಗಳಿಗೆ ಅರಿಶಿನ ಬಳಸಿ ಪೂಜೆಯನ್ನು ಮಾಡಲಾಗುವುದು. ಅಲ್ಲದೆ ಧಾರ್ಮಿಕ ಹಿನ್ನೆಲೆಯಲ್ಲಿಯೂ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೆ ಮಹಿಳಾ ದೇವತೆಗಳಿಗೆ ಹಾಗೂ ಪುರುಷ ದೇವತೆಗಳಿಗೂ ವಿಶೇಷ ಅರಿಶಿನ ಲೇಪನ ಹಾಗೂ ಪೂಜೆಗೆ ಬಳಸುವುದರ ಮೂಲಕ ಸಂತುಷ್ಟರನ್ನಾಗಿ ಮಾಡಬಹುದು. ಮಂಗಳ ಹಾಗೂ ಶುಭ ಸಂಕೇತವನ್ನು ನೀಡುವುದು ಅರಿಶಿನ. ಆದರೆ ಶಿವನ ಪೂಜೆಗೆ ಅದು ನಿಷಿದ್ಧ ಎನ್ನಲಾಗುತ್ತದೆ. ಅದನ್ನು ಬಳಸಿದರೆ ಶಿವನಿಗೆ ಇಷ್ಟವಾಗದು.

ಅರಿಶಿನ ಸ್ತ್ರೀ ಸೌಂದರ್ಯದ ಪ್ರತೀಕ

ಅರಿಶಿನ ಸ್ತ್ರೀ ಸೌಂದರ್ಯದ ಪ್ರತೀಕ

ಅರಿಶಿನವು ಧಾರ್ಮಿಕವಾಗಿ ಹಾಗೂ ಔಷಧೀಯ ಗುಣದಿಂದ ಅತ್ಯಂತ ಶ್ರೇಷ್ಠ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಮಂಗಳಕರ ಹಾಗೂ ಶುಭ ಸೂಚನೆಯನ್ನು ನೀಡುವ ಅರಿಶಿನವು ಮಹಿಳಾ ದೇವತೆಗಳಿಗೆ ಅಂದರೆ ಪಾರ್ವತಿ, ದುರ್ಗಾ, ಮಾಹಾದೇವಿ, ಶಾರದೆ ಹಾಗೂ ಲಕ್ಷ್ಮಿಗೆ ಅತ್ಯಂತ ಪ್ರಿಯವಾದದ್ದು. ಅರಿಶಿನದ ಅಲಂಕಾರ ಎಂದರೆ ಅದು ಮಹಿಳೆಯರ ಸೌಂದರ್ಯ ಹಾಗೂ ಅಲಂಕಾರಕ್ಕೆ ಪ್ರಸಿದ್ಧವಾದದ್ದು. ಅದನ್ನು ಮಹಿಳಾ ದೇವತೆಗಳ ಆರಾಧನೆ ಮಾಡುವಾಗ ಬಳಸಲಾಗುವುದು. ಸ್ತ್ರೀ ಸೌಂದರ್ಯವನ್ನು ಪ್ರತಿನಿಧಿಸುವ ಅರಿಶಿನವನ್ನು ಶಿವನಿಗೆ ಬಳಸಲಾಗುವುದಿಲ್ಲ. ಅದು ಶಿವನಿಗೆ ಇಷ್ಟವಿಲ್ಲದ ವಸ್ತು ಎಂದು ಹೇಳಲಾಗುವುದು.

ಶಿವನ ಆರಾಧನೆಯ ಪರಿ

ಶಿವನ ಆರಾಧನೆಯ ಪರಿ

ಸರಳ ಹಾಗೂ ಶಕ್ತಿಗೆ ಸಂಕೇತವಾದ ದೇವತೆ ಅಥವಾ ದೇವರು ಎಂದರೆ ಶಿವ. ಶಿವನನ್ನು ಆರಾಧಿಸುವಾಗ ಅವನಿಗೆ ಇಷ್ಟ ಆಗುವ ಭಸ್ಮ, ಹಾಲು, ಬಿಲ್ವ ಪತ್ರೆ, ಶ್ರೀಗಂಧಗಳನ್ನು ಬಳಸಬೇಕು. ಇವು ತಂಪು ಹಾಗೂ ಶಾಂತಿಯನ್ನು ಸಂಕೇತಿಸುತ್ತದೆ. ಅರಿಶಿನ ಸ್ತ್ರೀ ಸೌಂದರ್ಯವನ್ನು ಪ್ರತಿನಿಧಿಸುವುದರಿಂದ ಶಿವನು ಬಯಸದ ವಸ್ತು ಎಂದು ಹೇಳಲಾಗುವುದು. ಹಾಗಾಗಿಯೇ ಶಿವನ ಆರಾಧನೆ ಮಾಡುವಾಗ ಅಪ್ಪಿ ತಪ್ಪಿಯೂ ಅರಿಶಿನದ ಅಲಂಕಾರ, ಅರಿಶಿನ ಅಭಿಷೇಕ, ಅರಿಶಿನ ಲೇಪನ, ಅರಿಶಿನ ತಿಲಕಗಳನ್ನು ಇಡಬಾರದು. ಇದರಿಂದ ಶಿವನಿಗೆ ಸಂತುಷ್ಟಗೊಳಿಸಲು ಸಾಧ್ಯವಾಗದು. ಆದ್ದರಿಂದ ಶಿವನ ಆರಾಧನೆ ಮಾಡುವ ಮೊದಲು ಶಿವನಿಗೆ ಇಷ್ಟವಾಗುವ ವಸ್ತು ಹಾಗೂ ಇಷ್ವವಾಗುವ ಸಂಗತಿಯನ್ನು ಪರಿಗಣಿಸಬೇಕು. ಆಗಲೇ ಮನೆಯಲ್ಲಿ ಹಾಗೂ ಮನಸ್ಸಲ್ಲಿ ಶಿವನು ನೆಲೆಸುವನು. ಜೊತೆಗೆ ಜೀವನಕ್ಕೆ ಸಂತೋಷದ ದಾರಿಯನ್ನು ತೋರುವನು. ಬದುಕು ಖುಷಿಯಿಂದ ಕೂಡಿರುವುದು.

English summary

why we not worship Shivlinga with Haldi?

According to the scriptures, Shivlingam is a representation of a male yoni, particularly Lord Shiva’s, which is widely revered for its manifestation of his enormous energy. For this reason, it is always worshiped with elements that are endowed with cooling properties like milk, sandalwood, bhasma, etc. However, turmeric is related to inducing feminine beauty. And Lord Shiva, who had always stayed away from worldly pleasures and lived off as celibate is never worshiped with Haldi.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more