For Quick Alerts
ALLOW NOTIFICATIONS  
For Daily Alerts

ಕೆಲವರು ನಿರ್ದಿಷ್ಟ ದಿನಗಳಲ್ಲಿ ಮಾಂಸಹಾರವನ್ನು ಸೇವಿಸುವುದಿಲ್ಲ ಏಕೆ?

|

ಜೀವ ಸಂಕುಲದಲ್ಲಿ ಮಾಂಸಾಹಾರಿಗಳು ಹಾಗೂ ಸಸ್ಯಹಾರಿಗಳು ಎನ್ನುವ ಎರಡು ವಿಭಿನ್ನತೆ ಇರುವುದನ್ನು ಕಾಣಬಹುದು. ಮಾಂಸಾಹಾರಿಗಳ ಗುಂಪಿಗೆ ಬರುವ ಜೀವಿಗಳಿಗೆ ನಿಯಮಿತವಾಗಿ ಮಾಂಸಾಹಾರವನ್ನು ಸೇವಿಸಬೇಕಾಗುವದು. ಮನಸ್ಸು ಮಾಂಸದ ಭಕ್ಷ್ಯಗಳನ್ನು ಸೇವಿಸಲು ಹಾತೊರೆಯುತ್ತಿರುತ್ತವೆ. ವ್ಯನ್ಯ ಜೀವಿಗಳು ಮಾಂಸಾಹಾರಿಗಳು ಎಂದು ಗುರುತಿಸಿಕೊಂಡವರು ಎಂದಿಗೂ ಸಸ್ಯಹಾರವನ್ನು ಸೇವಿಸುವುದಿಲ್ಲ. ಆದರೆ ಮನುಷ್ಯ ಕುಲದಲ್ಲಿ ಹಾಗಲ್ಲ. ಸಸ್ಯಹಾರಿಗಳು ಮಾಂಸವನ್ನು ಸೇವಿಸುವುದಿಲ್ಲ. ಅದೇ ಮಾಂಸಾಹಾರಿಗಳು ಸಸ್ಯಹಾರ ಹಾಗೂ ಮಾಂಸಾಹಾರ ಎರಡನ್ನೂ ಸೇವಿಸುತ್ತಾರೆ.

ಮಾಂಸಾಹಾರದಲ್ಲಿ ಕಬ್ಬಿಣ, ವಿಟಮಿನ್ ಬಿ 12, ಕೊಬ್ಬಿನಂಶಗಳು ಹೇರಳವಾಗಿ ಇರುತ್ತವೆ. ಹಾಗಾಗಿ ಮಾಂಸಾಹಾರ ಸೇವಿಸುವ ವ್ಯಕ್ತಿಗಳ ದೇಹದಲ್ಲಿ ವಿಟಮಿನ್ ಬಿ12, ಕಬ್ಬಿಣಂಶ ಹಾಗೂ ಕೊಬ್ಬಿನ ಪ್ರಮಾಣವು ಅಧಿಕವಾಗಿರುತ್ತವೆ. ಅತಿಯಾದ ಮಾಂಸ ಸೇವಕರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳಾದ ರಕ್ತದೊತ್ತಡ, ಸಾಮಾನ್ಯವಾಗಿ ಬಂದೇ ಬರುತ್ತದೆ ಎಂದು ಸಹ ಹೇಳಲಾಗುವುದು. ಅಲ್ಲದೆ ಮಾನಸಿಕ ಚಿಂತನೆಗಳು ಅತ್ಯಂತ ಕಠಿಣತೆಯಿಂದ ಕೂಡಿರುತ್ತವೆ ಎಂದು ಸಹ ಹೇಳುತ್ತಾರೆ.

non veg

ಸಸ್ಯಹಾರವು ಮಾಂಸಾಹಾರಗಳಿಗಿಂತ ಅತ್ಯಂತ ಸರಳ ಎಂದು ಪರಿಗಣಿಸಲಾಗುವುದು. ಆದರೆ ಸಸ್ಯಹಾರವು ಅತ್ಯಂತ ಔಷಧೀಯ ಹಾಗೂ ಆರೋಗ್ಯಕರವಾದ ಆಹಾರವಾಗಿರುತ್ತದೆ. ಯಾವ ಜೀವಿಯ ಹಿಂಸೆ ಮಾಡದೆ ಪಡೆಯಬಹುದಾದ ಆಹಾರ ಉತ್ಪನ್ನ ಸಸ್ಯಹಾರ. ಹಾಗಾಗಿ ಸಸ್ಯ ಹಾರಿಗಳ ಬುದ್ಧಿ ಅತ್ಯಂತ ತೀಕ್ಷ್ಣ ಹಾಗೂ ಬುದ್ಧಿವಂತಿಕೆಯಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ಅಲ್ಲದೆ ದೇವರ ಕೆಲಸ ಮಾಡುವಾಗ ಹಾಗೂ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವಾಗ ಸಸ್ಯಹಾರ ಸೇವನೆ ಮಾಡಿದ್ದರೆ ಯಾವುದೇ ಅಶುದ್ಧತೆ ಅಥವಾ ಪವಿತ್ರತೆಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಲಾಗುವುದು.

ಹಿಂದೂ ಧರ್ಮದಲ್ಲಿ ಒಂದು ಜೀವಿಯನ್ನು ಹಿಂಸಿಸುವುದು ಅತ್ಯಂತ ಪಾಪ ಕೃತ್ಯ ಎಂದು ಪರಿಗಣಿಸಲಾಗುವುದು. ಪೂಜೆ ಹಾಗೂ ದೇವರ ಧ್ಯಾನ ಮಾಡುವಾಗ ಮಾಂಸಾಹಾರವನ್ನು ಮಾಡಿರಬಾರದು ಎನ್ನುವ ಪದ್ಧತಿ ಅಥವಾ ಸಂಪ್ರದಾಯವನ್ನು ಹೊಂದಲಾಗಿದೆ. ಅಲ್ಲದೆ ಕೆಲವು ಪ್ರಮುಖ ದಿನಗಳಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ಹಾಗಾದರೆ ಆ ದಿನಗಳು ಯಾವವು? ಏಕೆ ಅಂದು ಮಾಂಸಾಹಾರದಿಂದ ದೂರ ಉಳಿಯುತ್ತಾರೆ ಎನ್ನುವ ಸಂಗತಿಯನ್ನು ಮುಂದಿನ ವಿವರಣೆಯಲ್ಲಿ ಪರಿಶೀಲಿಸೋಣ.

Most Read: ಹಿಂದೂ ಧರ್ಮದಲ್ಲಿ ಮದುವೆಯ ಮುಂಚೆ ನಡೆಯುವ ಶಾಸ್ತ್ರ ಸಂಪ್ರದಾಯಗಳೇನು?

ಮಾಂಸಾಹಾರಿಗಳು ಸಾಮಾನ್ಯವಾಗಿ ಕೋಳಿ, ಮೀನು, ಕುರಿ, ಮೇಕೆಯ ಮಾಂಸವನ್ನು ಸೇವಿಸುತ್ತಾರೆ. ಅವುಗಳನ್ನು ಮನೆಯಲ್ಲಿಯೇ ಕಡಿದು ಮಾಡುವ ಪದ್ಧತಿಯನ್ನು ಸಹ ಹೊಂದಿದ್ದಾರೆ. ಹಾಗಾಗಿ ಹಿಂದೂ ಪಂಚಾಂಗದಲ್ಲಿ ಬರುವ ಸೋಮವಾರ, ಗುರುವಾರ, ಶನಿವಾರ, ಏಕಾದಶಿ, ಸಂಕ್ರಾಂತಿ, ದಸರಾ, ಸಂಕಷ್ಟಿ ಸೇರಿದಂತೆ ಪ್ರಮುಖವಾದ ಶುಭ ದಿನಗಳು ಹಾಗೂ ಹಬ್ಬ ಹರಿ-ದಿನಗಳಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ ಎನ್ನಲಾಗುವುದು.

ಹಿಂದೂ ದೇವತೆಗಳಲ್ಲಿ ಭಗವಾನ್ ಶಿವ, ಹನುಮಾನ್, ದತ್ತಾತ್ರೇಯ, ಸಾಯಿಬಾಬ, ವೆಂಕಟೇಶ್ವರ ದೇವರು ಅತ್ಯಂತ ಶಕ್ತಿವಂತರು. ಈ ದೇವತೆಗಳ ಮುನಿಸಿಗೆ ಕಾರಣವಾದರೆ ಅವರು ಅಷ್ಟು ಸುಲಭವಾಗಿ ಕ್ಷಮಿಸುವುದಿಲ್ಲ ಎಂದು ಹೇಳಲಾಗುವುದು. ಹಾಗಾಗಿಯೇ ಆ ದೇವರುಗಳಿಗೆ ಮೀಸಲಾದ ವಾರಗಳು ಹಾಗೂ ಹಬ್ಬಗಳ ದಿನದಂದು ಒಂದು ಜೀವಿಯನ್ನು ಕೊಂದು ತಿನ್ನಬಾರದು. ಬದಲಿಗೆ ದೇವರ ಕೃಪೆಗೆ ಒಳಗಾಗಬೇಕು ಎನ್ನುವ ಉದ್ದೇಶದಿಂದ ಕೆಲವು ವಿಶೇಷ ದಿನಗಳಲ್ಲಿ ಪ್ರಾಣಿಗಳ ಹತ್ಯೆ ಹಾಗೂ ಮಾಂಸಾಹಾರವನ್ನು ಸೇವಿಸುವುದಿಲ್ಲ ಎಂದು ಹೇಳಲಾಗುವುದು.

ವಿಶೇಷವಾದ ವಾರಗಳು

* ವಿಶೇಷ ವಾರಗಳಾದ ಸೋಮವಾರವು ಶಿವನಿಗೆ ಮೀಸಲಾದ ವಾರ.

* ಮಂಗಳ ವಾರವು ಭಗವಾನ್ ಹನುಮಂತನಿಗೆ,

* ಗುರುವಾರವು ದತ್ತಾತ್ರೇಯ ಮತ್ತು ಸಾಯಿಬಾಬ ದೇವರಿಗೆ,

* ಶನಿವಾರ ಭಗವಾನ್ ಹನುಮಂತ ಹಾಗೂ ವೆಂಕಟೇಶ್ವರ ದೇವರಿಗೆ ಮೀಸಲಾದ ದಿನಗಳು ಎಂದು ಹೇಳಲಾಗುವುದು. ವಾರಗಳಲ್ಲಿ ಈ ಪ್ರಮುಖ ದಿನಗಳಂದು ಮಾಂಸಾಹಾರಿಗಳು ಮಾಂಸಾಹಾರ ಭಕ್ಷ್ಯಗಳಿಂದ ದೂರ ಸರಿಯುತ್ತಾರೆ. ಜೊತೆಗೆ ಆ ದಿನಗಳಲ್ಲಿ ಯಾವ ಜೀವಿಯನ್ನೂ ಸಹ ಕತ್ತರಿಸುವುದಿಲ್ಲ ಎನ್ನಲಾಗುವುದು. ಅದರಲ್ಲೂ ಈ ವಾರಗಳಿಗೆ ಸಂಬಂಧಿಸಿದಂತೆ ಮನೆ ದೇವರು ಅಥವಾ ಕುಲದೇವರು ಇದ್ದರೆ ಆಗ ಅವರು ಇನ್ನಷ್ಟು ಮಡಿಯನ್ನು ಅನುಸರಿಸುತ್ತಾರೆ.

non veg

ಏಕಾಗ್ರತೆಗೆ ಅತ್ಯಗತ್ಯ

ಮಾಂಸಹಾರವನ್ನು ಸೇವಿಸಿ ದೇವಸ್ಥಾನಕ್ಕೆ ಹೋಗುವುದು ಒಂದು ಬಗೆಯ ಅಪವಿತ್ರತೆ ಎಂದು ಪರಿಗಣಿಸಲಾಗುವುದು. ಮಾಂಸದ ಸೇವನೆ ಮಾಡಿರುವಾಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಮೃದು ಹಾಗೂ ಸರಳ ಭಾವನೆಗಳಿಂದ ಕೂಡಿರುವುದಿಲ್ಲ. ಸಾಕಷ್ಟು ಗೊಂದಲಗಳು ಹಾಗೂ ಸೋಮಾರಿಯ ವರ್ತನೆಯು ತುಂಬಿಕೊಂಡು ಇರುತ್ತವೆ. ದೇವಸ್ಥಾನಕ್ಕೆ ಹೋಗುವಾಗ ನಮ್ಮ ಶರೀರ ಹೊಗುರ ಹಾಗೂ ಏಕಾಗ್ರತೆಯ ಮನಃಸ್ಥಿತಿ ಇರಬೇಕು. ಆಗಲೇ ಮನಸ್ಸು ಪ್ರಸನ್ನತೆಯನ್ನು ಪಡೆದುಕೊಳ್ಳುವುದು. ಹಾಗಾಗಿ ದೇವರ ದರ್ಶನ ಹಾಗೂ ಧಾರ್ಮಿಕ ಕಾರ್ಯಗಳ ಸಂದರ್ಭದಲ್ಲಿ ಆದಷ್ಟು ಮಾಂಸಾಹಾರ ಭಕ್ಷ್ಯಗಳನ್ನು ತ್ಯಜಿಸಿರಬೇಕು ಎನ್ನಲಾಗುವುದು.

Most Read: ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಧರ್ಮವಾಗಿರುವ ಹಿಂದೂ ಧರ್ಮದ ಮಹತ್ವವೇನು?

ತೊಂದರೆ ಎದುರಾಗುವುದು

ವಾರದ ಏಳು ದಿನಗಳು ಒಂದೊಂದು ದೇವರಿಗೆ ಮೀಸಲಾದ ದಿನಗಳು. ಆಯಾ ದಿನದಲ್ಲಿ ನಮಗೆ ಆ ದೇವರ ಅನುಗ್ರಹ ಹೆಚ್ಚಾಗಿ ದೊರೆಯುವುದು. ವಿಶೇಷ ದಿನಗಳು ಹಾಗೂ ದೇವರ ದಿನಗಳಲ್ಲಿ ಮಾಂಸ ಸೇವನೆ ಮಾಡಿದರೆ ಒಂದಿಷ್ಟು, ಮಾನಸಿಕ ಚಿಂತೆ, ಆರ್ಥಿಕ ನಷ್ಟ, ನೋವು, ಮನೆಯಲ್ಲಿ ಕಷ್ಟ, ಅಶಾಂತಿ, ವಿವಾಹ ತೊಂದರೆ, ವೃತ್ತಿಯಲ್ಲಿ ಅಡೆತಡೆ, ಕೃಷಿಯಲ್ಲಿ ನಷ್ಟ, ವ್ಯಾಪಾರದಲ್ಲಿ ಹಿನ್ನಡೆ ಹೀಗೆ ಒಂದೊಂದು ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಮಸ್ಯೆಗಳಿಗೆ ಪರಿಹಾರ ಕಾಣದೆ ಚಿಂತೆಗೆ ಒಳಗಾಗಬೇಕಾಗುವುದು. ಅಲ್ಲದೆ ನಾವು ಮಾಡಿದ ತಪ್ಪುಗಳಿಂದ ನಮ್ಮ ಮುಂದಿನ ಪೀಳಿಗೆಯು ಸಾಕಷ್ಟು ಸಮಸ್ಯೆ ಹಾಗೂ ತೊಂದರೆಯನ್ನು ಅನುಭವಿಸ ಬೇಕಾಗುವುದು. ಹಾಗಾಗಿ ಬಹುತೇಕ ಜನರು ಆದಷ್ಟು ಪವಿತ್ರ ದಿನಗಳಲ್ಲಿ ಮಾಂಸ ಸೇವನೆಯಿಂದ ದೂರ ಉಳಿಯುವರು.

ಬುಧವಾರ, ಶುಕ್ರವಾರ ಹಾಗೂ ರವಿವಾರ ಸಾಮಾನ್ಯವಾಗಿ ಮಾಂಸಾಹಾರವನ್ನು ಸೇವಿಸುತ್ತಾರೆ. ವಾರದಲ್ಲಿ ಕೆಲವರು ಒಂದು ದಿನ ಮಾತ್ರ ಮಾಂಸಾಹಾರವನ್ನು ಸೇವಿಸುವವರನ್ನು ಕಾಣಬಹುದು. ಕೆಲವರು ಇವೆಲ್ಲವನ್ನೂ ಮೀರಿ ನಿತ್ಯವೂ ಮಾಂಸಾಹಾರ ಸೇವಿಸುವವರು ಇದ್ದಾರೆ. ಅವರಿಗೆ ಯಾವುದೇ ಸಂಪ್ರದಾಯ ಅಥವಾ ದೈವ ಭಕ್ತಿಯ ಬಗ್ಗೆ ನಂಬಿಕೆ ಇಲ್ಲದೆ ಇರಬಹುದು. ಆದರೆ ದೇವರಲ್ಲಿ ನಂಬಿಕೆ ಇಟ್ಟವರು ಹಾಗೂ ಸಂಪ್ರದಾಯಗಳ ಬಗ್ಗೆ ಆಸಕ್ತಿ ಹಾಗೂ ನಂಬಿಕೆಯನ್ನು ಹೊಂದಿರುವವರು ಪವಿತ್ರ ದಿನಗಳನ್ನು ಹೊರತುಪಡಿಸಿ ಮಾಂಸಾಹಾರವನ್ನು ಸೇವಿಸುತ್ತಾರೆ ಎನ್ನಲಾಗುವುದು.

English summary

Why some people not eating Non Vegetarian Food on particular days?

Killing of animals is considered as a sin in Hinduism. So, people avoid eating meat at least on those auspicious days to maintain sacredness of that particular day. The reason behind not eating meat on weekdays including Mondays, Thursdays, and Saturdays is that as a human being we need only a little amount of meat to fulfill requirements of our body such as iron, vitamin B12 and other vital nutrients. But human being basically is also like an animal and we can get addicted to eating meat. As we all know eating excessive meat is not good for health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more