For Quick Alerts
ALLOW NOTIFICATIONS  
For Daily Alerts

ಮಹಾಶಿವರಾತ್ರಿಗೆ ಉಪವಾಸ ಮಾಡುವುದೇಕೆ? ಇದರ ಮಹತ್ವವೇನು?

|

ಮಾರ್ಚ್‌ 1ಕ್ಕೆ ಮಹಾ ಶಿವರಾತ್ರಿ. ಈ ದಿನ ಶಿವನ ಭಕ್ತರು ಉಪವಾಸವಿದ್ದು ಅವನಿಗೆ ಪೂಜೆಯನ್ನು ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಇದ್ದು ಪೂಜೆಯನ್ನು ಮಾಡುತ್ತಾರೆ. ಶಿವರಾತ್ರಿಗೆ ಬೆಳಗ್ಗೆಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನದಂದು ಕೆಲ ಭಕತರು ನೀರು ಕೂಡ ಸೇವಿಸದೆ ಕಟ್ಟು ನಿಟ್ಟಿನ ಉಪವಾಸ ಮಾಡಿದರೆ, ಇನ್ನು ಕೆಲವರು ಬರೀ ಹಾಲು, ಹಣ್ಣುಗಳನ್ನಷ್ಟೇ ಸೇವಿಸುತ್ತಾರೆ.

ಉಪವಾಸವಿದ್ದು ಶಿವನ ಆರಾಧನೆ ಮಾಡಿದರೆ ಶಿವ ಪೂಜೆ ಫಲ ನೀಡುವುದು ಎಂದು ಹೇಳಲಾಗುವುದು. ಶಿವರಾತ್ರಿಯಂದು ಶಿವನ ಆರಾಧನೆ ಮಾಡುವುದರಿಂದ ಮನಸ್ಸಿಗೆ-ದೇಹಕ್ಕೆ ತುಂಬಾ ಒಳ್ಳೆಯದು.

ಶಿವರಾತ್ರಿಗೆ ಉಪವಾಸ ಏಕೆ ಮಾಡುತ್ತಾರೆ, ಇದರಿಂದ ದೊರೆಯುವ ಪ್ರಯೋಜನವೇನು ಎಂದು ಗೊತ್ತಾ? ಇಲ್ಲಿದೆ ನೋಡಿ ಹೆಚ್ಚಿನ ವಿವರ:
ಶಿವರಾತ್ರಿಗೆ ಉಪವಾಸ ಆಚರಣೆಯ ಮಹತ್ವ:

ಮನಸ್ಸನ್ನು ಶಿವನ ಮೇಲೆ ಕೇಂದ್ರೀಕರಿಸಿ ಧ್ಯಾನ ಮಾಡಲು ಸಹಕಾರಿ

ಮನಸ್ಸನ್ನು ಶಿವನ ಮೇಲೆ ಕೇಂದ್ರೀಕರಿಸಿ ಧ್ಯಾನ ಮಾಡಲು ಸಹಕಾರಿ

ಉಪವಾಸ ಮಾಡಿದಾಗ ದೇಹ ಶುದ್ಧವಾಗುವುದು, ಮನಸ್ಸು ಶುದ್ಧವಾಗುವುದು. ನಮ್ಮ ಮನಸ್ಸು ತುಂಬಾ ವಿಶ್ರಾಂತಿಯ ಅನುಭವ ಪಡೆಯುವುದು. ಅಲ್ಲದೆ ಮನಸ್ಸು ತುಂಬಾ ಎಚ್ಚರದಿಂದ ಇರುತ್ತದೆ, ಆಗ ಮನಸ್ಸನ್ನು ಧ್ಯಾನ ಕಡೆ ಗಮನ ಕೊಡಲು ಸಹಕಾರಿಯಾಗುವುದು. ಮನಸ್ಸು ಹಾಗೂ ದೇಹವನ್ನು ಶುದ್ಧ ಮಾಡಿ, ಆ ದಿನಪೂರ್ತಿ ಶಿವ ಜಪ ಮಾಡುತ್ತಾ ಕಳೆಯಲು ಉಪವಾಸ ಆಚರಣೆ ಮಾಡಲಾಗುವುದು.

ತುಂಬಾ ಹೊತ್ತು ಧ್ಯಾನದಲ್ಲಿ ಕೂರಲು ಸಾಧ್ಯವಾಗುವುದು

ತುಂಬಾ ಹೊತ್ತು ಧ್ಯಾನದಲ್ಲಿ ಕೂರಲು ಸಾಧ್ಯವಾಗುವುದು

ಉಪವಾಸ ಮಾಡಿದಾಗ ದೇಹ ಡಿಟಾಕ್ಸ್ ಆಗುವುದರಿಂದ ಒಮ್ಮೆ ಪೂಜೆಗೆ ಕೂತರೆ ತುಂಬಾ ಹೊತ್ತು ಪೂಜೆಯಲ್ಲಿ ಕಳೆಯಬಹುದು. ಅಂದರೆ ಮೂತ್ರವಿಸರ್ಜನೆಗೆ, ಮಲವಿಸರ್ಜನೆಗೆ ಹೋಗುವುದು ಕಡಿಮೆಯಾಗುತ್ತೆ, ಇದರಿಂದ ದೇವರ ಧ್ಯಾನದಲ್ಲಿ ಹೆಚ್ಚು ಹೊತ್ತು ತೊಡಗಿಸಿಕೊಳ್ಳಬಹುದು.

ದೇವರ ಪೂಜೆಯಲ್ಲಿ ತಲ್ಲೀನರಾಗಬಹುದು

ದೇವರ ಪೂಜೆಯಲ್ಲಿ ತಲ್ಲೀನರಾಗಬಹುದು

ದೇವರಿಗಾಗಿ ನಾವು ಉಪವಾಸವಿದ್ದಾಗ ಆ ದಿನವಿಡೀ ದೇವರ ಜಪದಲ್ಲಿಯೇ ಕಳೆಯುತ್ತೇವೆ, ಉಪವಾಸವಿದ್ದು ಮಾಡುವ ಪೂಜೆಗೆ ಬೇಗ ಫಲ ಸಿಗುವುದು, ಆದ್ದರಿಂದ ನಾವು ಅಂದುಕೊಂಡಿದ್ದ ಸಂಕಲ್ಪ ನೆರವೇರುವುದು.

ಪಾಪ -ಕರ್ಮಗಳಿಂದ ಮುಕ್ತಿ ಸಿಗುವುದು

ಪಾಪ -ಕರ್ಮಗಳಿಂದ ಮುಕ್ತಿ ಸಿಗುವುದು

ಉಪವಾಸವಿದ್ದು ಶಿವನ ಆರಾಧನೆ ಮಾಡುವುದರಿಂದ ಬೇಗನೆ ಪಾಪಕರ್ಮಗಳಿಂದ ಮುಕ್ತರಾಗುವವರು ಎಂದು ಹೇಳಲಾಗುವುದು. ಅಲ್ಲದೆ ಮತ್ಸರ, ಕಾಮ, ಕ್ರೋಧ ಇವುಗಳೆನ್ನೆಲ್ಲಾ ನಿಯಂತ್ರಿಸುವ ಶಕ್ತಿ ಮನಸ್ಸಿಗೆ ದೊರೆಯುವುದು.

ಅಲ್ಲದೆ ಶಿವರಾತ್ರಿಗೆ ಏಕೆ ಉಪವಾಸ ಮಾಡುತ್ತಾರೆ ಎಂಬುವುದಕ್ಕೆ ಪೌರಾಣಿಕ ಕತೆಯೂ ಇದೆ:

ಅಲ್ಲದೆ ಶಿವರಾತ್ರಿಗೆ ಏಕೆ ಉಪವಾಸ ಮಾಡುತ್ತಾರೆ ಎಂಬುವುದಕ್ಕೆ ಪೌರಾಣಿಕ ಕತೆಯೂ ಇದೆ:

ಅಮೃತಗಾಗಿ ದಾನವರು ಹಾಗೂ ದೇವತೆಗಳು ಸಮುದ್ರ ಮಂಥನ ಮಾಡುವಾಗ ಮೊದಲಿಗೆ ಹಾಲಾಹಲ ಉಕ್ಕುತ್ತೆ, ಆಗ ದೇವತೆಗಳು ಹಾಗೂ ಅಸುರರು ಶಿವನಲ್ಲಿ ಪ್ರಾರ್ಥಿಸಿದಾಗ ಶಿವನು ಆ ವಿಷವನ್ನು ಕುಡಿಯುತ್ತಾನೆ, ಆಗ ಪಾರ್ವತಿಯು ಶಿವ ಕುಡಿದ ವಿಷ ಅವನ ದೇಹಕ್ಕೆ ಹರಡಬಾರದು ಎಂದು ಶಿವನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಏನೂ ತಿನ್ನದೆ ಒಂದು ರಾತ್ರಿ- ಒಂದು ಹಗಲು ನಿಲ್ಲುತ್ತಾರೆ, ಆಗ ಶಿವ ನೀಲಕಂಠನಾಗುತ್ತಾನೆ ಎಂದು ಪೌರಾಣಿಕ ಕತೆ ಹೇಳುತ್ತದೆ. ಅಲ್ಲಿಂದ ಶಿವರಾತ್ರಿಗೆ ಉಪವಾಸ ಆಚರಣೆ ಮಾಡಲಾಗುವುದು ಎಂದು ಹೇಳಲಾಗುವುದು.

English summary

Why should we Fast on Mahashivratri and How to do Shivratri Vrat in Kannada

Why should we Fast on Mahashivratri and How to do Shivratri Vrat in Kannada,read on...
Story first published: Monday, February 28, 2022, 16:49 [IST]
X
Desktop Bottom Promotion