For Quick Alerts
ALLOW NOTIFICATIONS  
For Daily Alerts

ದೀಪಾವಳಿ ದಿನ ಮನೆಗೆ ಉಪ್ಪು ತರಬೇಕೆಂದು ಹೇಳುತ್ತಾರೆ, ಯಾಕೆ ಗೊತ್ತೇ?

By Divya Pandith
|
Deepavali 2018 : ದೀಪಾವಳಿ ಹಬ್ಬದ ದಿನ ಉಪ್ಪನ್ನ ಮನೆಗೆ ತಪ್ಪದೇ ತನ್ನಿ | Oneindia Kannada

ಅಂಧಕಾರ ದೂರ ಮಾಡಿ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬವೇ ದೀಪಾವಳಿ. ದೀಪಾವಳಿಯು ಬೆಳಕಿನ ಹಬ್ಬ, ಪ್ರತಿಯೊಂದು ಮನೆ, ಓಣಿ, ಬೀದಿ, ರಸ್ತೆ ಹೀಗೆ ಪ್ರತಿಯೊಂದು ಕಡೆಯಲ್ಲೂ ಬೆಳಕು ಕಂಡುಬರುವುದು. ದೀಪಾವಳಿ ಸಮಯದಲ್ಲಿ ಹಗಲು ಮತ್ತು ರಾತ್ರಿ ಮಧ್ಯೆ ವ್ಯತ್ಯಾಸವೇ ತಿಳಿದುಬರಲ್ಲ. ಈ ಹಬ್ಬದಲ್ಲಿ ಬೆಳಕಿಗೆ ವಿಶೇಷ ಮಹತ್ವವಿದೆ.

ಅದರದ್ದೇ ಆದ ಸಂಪ್ರದಾಯವಿದೆ. ಸುಳ್ಳಿನ ವಿರುದ್ಧ ಸತ್ಯದ ಗೆಲುವು, ಅನ್ಯಾಯದ ವಿರುದ್ಧ ನ್ಯಾಯ ಮತ್ತು ದುಷ್ಟರ ವಿರುದ್ಧ ಒಳ್ಳೆಯವರ ಗೆಲುವು ಎನ್ನಲಾಗುತ್ತದೆ. ಅಂಧಕಾರ ಎಷ್ಟೇ ಇದ್ದರೂ ಬೆಳಕಿನ ಒಂದು ಕಿರಣ ಕೂಡ ಈ ಅಂಧಕಾರವನ್ನು ಸಂಪೂರ್ಣವಾಗಿ ತೊಡೆದು ಹಾಕಬಲ್ಲದು.

ಬೆಳಕನ್ನು ಪ್ರತೀ ಮೂಲೆಯಲ್ಲೂ ಬೆಳಗಿ ಅಂಧಕಾರ ದೂರ ಮಾಡಲಾಗುವುದೇ ಈ ದೀಪಾವಳಿ ಮಹತ್ವ. ನಮಗೆ ಒಳ್ಳೆಯ ಆರೋಗ್ಯ, ಸಂಪತ್ತು ಮತ್ತು ಸುಖ ನೀಡಿದ ದೇವರಿಗೆ ಕೃತಜ್ಞತಾಪೂರ್ವಕವಾಗಿ ಈ ದೀಪಗಳನ್ನು ಹಚ್ಚಲಾಗುವುದು. ದೀಪಾವಳಿ ಸಂದರ್ಭದಲ್ಲಿ ಸಂಪತ್ತಿನ ದೇವತೆ ಲಕ್ಷ್ಮೀ ಮಾತೆಯನ್ನು ಪೂಜಿಸಲಾಗುವುದು. ನಮ್ಮ ಮನೆಗೆ ಬರುವ ಲಕ್ಷ್ಮೀಯನ್ನು ಸ್ವಾಗತಿಸಲು ದೀಪಗಳನ್ನು ಹಚ್ಚಿಡಲಾಗುತ್ತದೆ ಎನ್ನುವ ಪ್ರತೀತಿಯಿದೆ.

ದೀಪಾವಳಿ ವಿಶೇಷ: ಈ ಪವಿತ್ರ ವಸ್ತುಗಳಿದ್ದರೆ ಲಕ್ಷ್ಮಿ ನಿಮ್ಮ ಮನೆಗೆ ಬರುವಳು!

ಎಲ್ಲಾ ದೇವದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನದಲ್ಲಿ ತೊಡಗಿದ್ದಾಗ ಕಾರ್ತಿಕ ಮಾಸದ ಹುಣ್ಣಿಮೆಯಂದು ಲಕ್ಷ್ಮೀಯ ಜನನವಾಯಿತು. ಲಕ್ಷ್ಮೀ ದೇವಿಯು ತುಂಬಾ ಸ್ವಚ್ಛ ಹಾಗೂ ಬೆಳಕಿನಿಂದ ಕಂಗೊಳಿಸುವ ಮನೆಗೆ ಭೇಟಿ ನೀಡುವಳು ಎಂದು ಹೇಳಲಾಗುತ್ತದೆ. ಲಕ್ಷ್ಮೀ ದೇವಿಯು ತನ್ನ ಭಕ್ತರಿಗೆ ಸುಖ-ಸಂಪತ್ತು ಕರುಣಿಸುವಳು. ಸುಖಸಂಪತ್ತು ಪ್ರತಿಯೊಬ್ಬರಿಗೂ ಬೇಕಿರುವುದು. ಅದು ಬೇಡವೆನ್ನುವವರು ಈ ಜಗತ್ತಿನಲ್ಲೇ ಇಲ್ಲ.

ಪ್ರತಿ ವರ್ಷಕ್ಕೊಮ್ಮೆ ಆಚರಿಸಲಾಗುವ ಈ ವಿಶೇಷ ಹಬ್ಬವು ಈ ಬಾರಿ 25ರಿಂದ ಆರಂಭವಾಗಿ 29ರವರೆಗೆ ಐದು ದಿನಗಳ ಕಾಲ ನಡೆಯುತ್ತದೆ. ಅಕ್ಟೋಬರ್ 27ರಂದು ನರಕ ಚತುರ್ದಶಿ ಹಾಗೂ 28ರಂದು ಲಕ್ಷ್ಮೀಪೂಜೆಯನ್ನು ಕರ್ನಾಟಕದಲ್ಲಿ ಪ್ರಮುಖವಾಗಿ ಹಬ್ಬವಾಗಿ ಆಚರಿಸಲಾಗುತ್ತದೆ. ದೀಪಾವಳಿಗೆ ಲಕ್ಷ್ಮೀ ದೇವಿಯನ್ನು ಮನೆಗೆ ಆಹ್ವಾನಿಸಲು ನೀವು ಏನು ಮಾಡಬೇಕು ಮತ್ತು ಮಾಡಬಾರದು ಎಂದು ಈ ಲೇಖನದಲ್ಲಿ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.

ದೀಪಾವಳಿ ವಿಶೇಷ: ಲಕ್ಷ್ಮೀ ಪೂಜೆ ಹೀಗಿರಲಿ, ಸಕಲ ಸಂಕಷ್ಟಗಳು ನಿವಾರಣೆಯಾಗಲಿದೆ

ಕೆಲವೊಂದು ವಿಚಾರಗಳು ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ದೇವಿಯ ಒಲೈಸಲು ನೆರವಾಗುವುದು. ಇದರಲ್ಲಿ ಪ್ರಮುಖವಾಗಿ ಉಪ್ಪು. ಉಪ್ಪು ಲಕ್ಷ್ಮೀ ದೇವಿಯ ಪ್ರತಿರೂಪವೆಂದು ಪರಿಗಣಿಸಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಉಪ್ಪು ಮನೆಗೆ ತಂದರೆ ತುಂಬಾ ಶುಭವೆನ್ನಲಾಗಿದೆ. ಇದರ ಬಗ್ಗೆ ಮತ್ತಷ್ಟು ತಿಳಿಯಲು ಮುಂದ ಓದುತ್ತಾ ಸಾಗಿ....

ಲಕ್ಷ್ಮೀಯ ಪ್ರತಿರೂಪ ಉಪ್ಪು

ಲಕ್ಷ್ಮೀಯ ಪ್ರತಿರೂಪ ಉಪ್ಪು

ಕುಟುಂಬದಲ್ಲಿ ಹಿರಿಯರು ಯಾವುದೇ ಕಾರಣವಿಲ್ಲದೆಯೂ ಕೆಲವೊಂದು ಸಲ ಉಪ್ಪು ತರುವುದುನ್ನು ನೀವು ನೋಡಿರಬಹುದು. ಇದು ಮನೆಗೆ ಲಕ್ಷ್ಮೀಯನ್ನು ಆಹ್ವಾನಿಸುವ ರೀತಿ. ಹಣ ಚಲಾವಣೆಗೆ ಬರುವ ಮೊದಲು ಉಪ್ಪನ್ನು ಚಲಾವಣೆಯ ನಾಣ್ಯವಾಗಿ ಬಳಸಲಾಗುತ್ತಾ ಇತ್ತು. ಇದರಿಂದ ಉಪ್ಪನ್ನು ದೀಪಾವಳಿ ಸಮಯದಲ್ಲಿ ಮನೆಗೆ ತಂದರೆ ಲಕ್ಷ್ಮೀ ದೇವಿಯ ಆಹ್ವಾನಿಸಿದಂತೆ.

ನರಕಚತುದರ್ಶಿ ದಿನ ಎಣ್ಣೆ ಸ್ನಾನ ಮಾಡುವುದು

ನರಕಚತುದರ್ಶಿ ದಿನ ಎಣ್ಣೆ ಸ್ನಾನ ಮಾಡುವುದು

ದೀಪಾವಳಿ ಸಂದರ್ಭದಲ್ಲಿ ನರಕಚತುದರ್ಶಿ ದಿನ ಎಣ್ಣೆಸ್ನಾನ ಮಾಡುವುದರಿಂದ ದೇಹದಲ್ಲಿರುವ ಎಲ್ಲಾ ಕೊಳೆ ಮತ್ತು ದುಷ್ಟಶಕ್ತಿಯು ದೂರವಾಗಿ ಲಕ್ಷ್ಮೀ ದೇವಿಯ ಆಹ್ವಾನಿಸಲು ದೇಹವು ಪರಿಶುದ್ಧವಾಗಿರುವುದು. ನರಕಾಸುರನ ವಧೆ ಮಾಡಿ ಮನೆಗೆ ಬಂದ ಶ್ರೀಕೃಷ್ಣ ಪರಮಾತ್ಮನ ಮೇಲೆ ಅಂಟಿಕೊಂಡಿದ್ದ ರಕ್ತದ ಕಲೆ ತೆಗೆಯಲು ಮಹಿಳೆಯರು ಕೃಷ್ಣನಿಗೆ ಎಣ್ಣೆ ಮತ್ತು ಶ್ರೀಗಂಧದಿಂದ ಸ್ನಾನ ಮಾಡಿಸಿದರು. ಶ್ರದ್ಧಾಪೂರ್ವಕವಾಗಿ ಯಾರು ಎಣ್ಣೆಸ್ನಾನ ಮಾಡುತ್ತಾರೆಯಾ ಅವರು ನರಕದಿಂದ ಮುಕ್ತಿ ಪಡೆಯುತ್ತಾರೆ ಎಂದು ನಂಬಲಾಗಿದೆ.

ಸಾ೦ಪ್ರದಾಯಿಕವಾದ ಎಣ್ಣೆಸ್ನಾನದ ಹಿನ್ನೆಲೆ

ಸಾ೦ಪ್ರದಾಯಿಕವಾದ ಎಣ್ಣೆಸ್ನಾನದ ಹಿನ್ನೆಲೆ

ಸಾ೦ಪ್ರದಾಯಿಕವಾದ ಎಣ್ಣೆಸ್ನಾನದ ಹಿನ್ನೆಲೆ ಏನು ಎ೦ದು ನೀವು ಕೇಳಬಹುದು. ಒಳ್ಳೆಯದು... ಏಕೆ೦ದರೆ, ನಸುಕಾಗುವುದರೊಳಗೆ ಕೃಷ್ಣ ಹಾಗೂ ಸತ್ಯಭಾಮೆಯರು ಯುದ್ಧಭೂಮಿಯಿ೦ದ ಮರಳಿ ಬ೦ದಾಗ, ಅವರ ಶರೀರಗಳೆಲ್ಲವೂ ರಕ್ತ ಹಾಗೂ ಧೂಳಿನಿ೦ದ ಹೊಲಸಾಗಿದ್ದು, ಅವುಗಳನ್ನು ಶ್ರೀಗ೦ಧದ ಮಾರ್ಜಕ ಹಾಗೂ ಪರಿಮಳಯುಕ್ತವಾದ ಎಣ್ಣೆಯನ್ನು ಬಳಸಿಕೊ೦ಡು ಸ್ವಚ್ಛಗೊಳಿಸಿಕೊಳ್ಳುವುದು ಅವಶ್ಯವಾಗಿತ್ತು. ಈ ಕಾರಣಕ್ಕಾಗಿಯೇ ನೀವೂ ಕೂಡ ಎಣ್ಣೆಸ್ನಾನವನ್ನು ಮಾಡಿಕೊ೦ಡು ಜಗಮಗಿಸುವ ದೀಪದ ಹಬ್ಬವನ್ನು ಆಚರಿಸುತ್ತೀರಿ.

ದೀಪಾವಳಿ ವಿಶೇಷ: ನರಕ ಚತುರ್ದಶಿ ಹಬ್ಬದ ಹಿನ್ನೆಲೆ

ಕುಂಕುಮ

ಕುಂಕುಮ

ಹಿಂದೂ ಧರ್ಮದಲ್ಲಿ ಕುಂಕುಮ ಮತ್ತು ಅರಿಶಿನಕ್ಕೆ ಪವಿತ್ರ ಸ್ಥಾನವಿದ್ದು ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇವುಗಳನ್ನು ವಿಶೇಷವಾಗಿ ಬಳಸಿಕೊಳ್ಳುತ್ತಾರೆ ಮತ್ತು ಪೂಜನೀಯ ಸ್ಥಾನವನ್ನು ನೀಡುತ್ತಾರೆ. ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತ್ತೈದೆತನವನ್ನು ಸಂಕೇತಿಸುತ್ತಾರೆ. ಅನಾದಿ ಕಾಲದಿಂದಲೂ, ವಿವಾಹಿತ ಮಹಿಳೆಯರು ಕುಂಕುಮವನ್ನು ಸಿಂಧೂರ ಮತ್ತು ತಿಲಕದಂತೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪತಿಯ ದೀರ್ಘಾಯುಷ್ಯದ ಸಂಕೇತವಾಗಿ ಇವರುಗಳು ಕುಂಕುಮದಿಂದ ಬೈತಲೆಯ ನಡುವೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾರೆ. ಹಿಂದೂ ವಿವಾಹ ಪದ್ಧತಿಗಳಲ್ಲಿ ಅರಿಶಿನ ಶಾಸ್ತ್ರ ಇದ್ದೇ ಇರುತ್ತದೆ. ಮದುಮಗಳಿಗೆ ಅರಶಿನದ ಮಿಶ್ರಣವನ್ನು ಹಚ್ಚುತ್ತಾರೆ. ವಿವಾಹದಂತಹ ಪರಿಶುದ್ಧ ಶಾಸ್ತ್ರದಲ್ಲಿ ಹುಡುಗಿಯನ್ನು ಎಲ್ಲಾ ಬಗೆಯಲ್ಲೂ ಪುನೀತಳನ್ನಾಗಿ ಮಾಡಲು ಅರಿಶಿನ ಶಾಸ್ತ್ರವನ್ನು ಇಟ್ಟುಕೊಳ್ಳುತ್ತಾರೆ

ಕುಂಕುಮ ಬಳಸುವುದು

ಕುಂಕುಮ ಬಳಸುವುದು

ಕುಂಕುಮ ಅಥವಾ ಸಿಂಧೂರವು ನಮ್ಮ ದೇಹದಲ್ಲಿರುವ ರಕ್ತದ ಪ್ರತೀಕ. ಮೂರ್ತಿಗೆ ಕುಂಕುಮ ಹಚ್ಚುವುದರಿಂದ ನಾವು ದೇವರಿಂದ ಹೆಚ್ಚಿನ ಶಕ್ತಿ ಮತ್ತು ಹುರುಪು ನೀಡಲಿ ಎಂದು ದೇವರನ್ನು ಪ್ರಾರ್ಥಿಸುವುದು. ವಿಷ್ಣು ದೇವರ ನೆಚ್ಚಿನ ಪತ್ನಿಯಾಗಿರುವ ಲಕ್ಷ್ಮೀ ದೇವಿಗೆ ಕುಂಕುಮ ಇಡುವುದು ಅತೀ ಅಗತ್ಯವಾಗಿದೆ. ಇದರಿಂದ ಆಕೆ ಒಲಿದು ಬರುವಳು ಎಂದು ನಂಬಲಾಗಿದೆ.ಹಣೆಯ ಮೇಲೆ ಕುಂಕುಮ ಹಚ್ಚಿಕೊಳ್ಳುವ ವಿವಾಹಿತ ಮಹಿಳೆಯರಿಂದ ಲಕ್ಷ್ಮೀಯು ತುಂಬಾ ಆಕರ್ಷಿತಳಾಗುವಳು ಎನ್ನಲಾಗಿದೆ. ಇದು ಅವರ ವೈವಾಹಿಕ ಜೀವನದ ಸಂಕೇತವಾಗಿದೆ ಮತ್ತು ಲಕ್ಷ್ಮೀಯು ಇಂತಹ ಮಹಿಳೆಯರ ಪತಿಯಂದಿರಿಗೆ ದೀರ್ಘಾಯುಷ್ಯ ನೀಡುವಳು.

ಅರಿಶಿನ ಬಳಕೆ

ಅರಿಶಿನ ಬಳಕೆ

ಅರಿಶಿನವು ಮಾನವ ದೇಹದ ಸತ್ವದ ಸಂಕೇತವಾಗಿದೆ. ಅರಿಶಿನವು ಸಕಾರಾತ್ಮಕ ಅಂಶಗಳನ್ನು ಭೂಮಿ ಮೇಲೆ ತರುತ್ತದೆ ಎನ್ನಲಾಗಿದೆ. ಇದನ್ನು ದೇವರಿಗೆ ಅರ್ಪಿಸುವ ಮೂಲಕ ಪೂಜೆ ಮಾಡುವವರಿಗೆ ಇದರ ಫಲ ಸಿಗುವುದು. ಅರಿಶಿನವು ಫಲವತ್ತತೆ, ಅದೃಷ್ಟ ಮತ್ತು ಪರಿಶುದ್ಧತೆಯ ಸಂಕೇತ.

ಬೆಳಿಗ್ಗೆ ಮತ್ತು ರಾತ್ರಿ ದೀಪ ಬೆಳಗುವುದು

ಬೆಳಿಗ್ಗೆ ಮತ್ತು ರಾತ್ರಿ ದೀಪ ಬೆಳಗುವುದು

ದೀಪ ಬೆಳಗುವುದು ದೀಪಾವಳಿಯಂದು ಪ್ರತಿನಿತ್ಯ ಮಾಡುವ ಕೆಲಸ. ದೀಪ ಬೆಳಗುವುದರಿಂದ ನಮ್ಮ ಸುತ್ತ ಧನಾತ್ಮಕ ಶಕ್ತಿಯು ಬರುತ್ತದೆ ಎನ್ನಲಾಗಿದೆ. ಲಕ್ಷ್ಮೀ ದೇವಿಯು ನಮ್ಮ ಮನೆಗೆ ಬರುವ ದಾರಿಯನ್ನು ಇದು ಬೆಳಗುವುದು. ರಾತ್ರಿ ವೇಳೆ ಕೂಡ ದೀಪ ಬೆಳಗಬೇಕು. ನಮ್ಮ ಜೀವನದಲ್ಲಿ ನಕಾರಾತ್ಮಕತೆ ದೂರ ಮಾಡಿ ಜ್ಞಾನ ತುಂಬುವುದೇ ದೀಪ ಬೆಳಗುವುದರ ಸಂಕೇತವಾಗಿದೆ. ದೀಪ ಬೆಳಗುವುದರಿಂದ ಲಕ್ಷ್ಮೀಯು ಪ್ರಸನ್ನಳಾಗುವಳು. ದೀಪ ಬೆಳಗಿನ ಮನೆಗಳಿಗೆ ಭೇಟಿ ನೀಡುವ ಆಕೆ ಸುಖ, ಸಂಪತ್ತು ಮತ್ತು ಸಮೃದ್ಧಿ ದಯಪಾಲಿಸುವಳು.

ವಿಷ್ಣುವಿಗೆ ಪ್ರಾರ್ಥನೆ

ವಿಷ್ಣುವಿಗೆ ಪ್ರಾರ್ಥನೆ

ಹಿಂದು ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎನ್ನುತ್ತದೆ ಪುರಾಣಗಳು. ಕೆಲವರು ಶಿವ ಭಕ್ತರಾಗಿದ್ದರೆ, ಇನ್ನು ಕೆಲವರು ವಿಷ್ಣುವಿನ ಭಕ್ತರಾಗಿದ್ದಾರೆ. ವಿಷ್ಣುವಿಗೆ ಹಲವಾರು ಅವತಾರಗಳು ಇವೆ ಎಂದು ಪುರಾಣಗಳಲ್ಲಿ ನಾವು ಓದಿದ್ದೇವೆ ಮತ್ತು ಕೇಳಿದ್ದೇವೆ. ವಿಷ್ಣು ದೇವರು ಮತ್ತು ಲಕ್ಷ್ಮೀ ಮಾತೆಯು ಪತಿ ಹಾಗೂ ಪತ್ನಿಯರಾಗಿರುವ ಕಾರಣ ದೀಪಾವಳಿ ಸಂದರ್ಭದಲ್ಲಿ ಇವರನ್ನು ಪ್ರಾರ್ಥಿಸಿದರೆ ದೇವರು ಒಲಿಯುವರು ಎನ್ನುವ ನಂಬಿಕೆಯಿದೆ. ದೀಪಾವಳಿ ಸಂದರ್ಭದಲ್ಲಿ ಗಣೇಶ-ಲಕ್ಷ್ಮೀ ಪೂಜೆ ಮಾಡಿದ ಬಳಿಕ ವಿಷ್ಣು ಪೂಜೆ ಮಾಡಲಾಗುತ್ತದೆ.

English summary

Why Should We Bring Salt On Diwali

Diwali is the festival of lights. There are lights everywhere and in every corner. It is in fact difficult to distinguish between day and night during Diwali. Light holds a very important significance during the festival. It symbolises the triumph of good over evil. It also denotes that no matter how much darkness prevails, it is always extinguished by light. This is the essence of the festival. The houses are lit up with decorative lamps and lightings.
X
Desktop Bottom Promotion