For Quick Alerts
ALLOW NOTIFICATIONS  
For Daily Alerts

ಶಿವಲಿಂಗದ ಮುಂದೆ ನಂದಿಯ ಮೂರ್ತಿ ಇದ್ದೇ ಇರುತ್ತದೆ ಏಕೆ ಗೊತ್ತಾ? ಕಾಯಿಲೆಯಿಂದ ಮುಕ್ತಿಗೆ ನಂದಿಯನ್ನು ಹೇಗೆ ಪೂಜಿಸಬೇಕು?

|

ಹಿಂದೂ ಧರ್ಮದಲ್ಲಿ ನಂದಿಗೆ ಪೂಜನೀಯ ಸ್ಥಾನವಿದೆ. ಶಿವಲಿಂಗ ಇರುವ ದೇವಾಲಯದಲ್ಲಿ ಶಿವ ಲಿಂಗಕ್ಕೆ ಎದುರಾಗಿ ಒಂದು ನಂದಿಯ ಮೂರ್ತಿ ಇದ್ದೇ ಇರುತ್ತದೆ. ಶಿವನ ದೇವಾಲಯಕ್ಕೆ ಬರುವ ಭಕ್ತರು ಮೊದಲು ನಂದಿಗೆ ನಮಸ್ಕರಿಸಿ ನಂತರ ಶಿವ ದೇವಾಲಯದ ಒಳಗಡೆ ಹೋಗುತ್ತಾರೆ, ಶಿವ ದೇವಾಲಯ ಅಂದ ಮೇಲೆ ಅಲ್ಲಿ ನಂದಿಗೂ ಒಂದು ಮಂಟಪ ಇರಲೇಬೇಕು, ಇದ್ದೇ ಇರುತ್ತದೆ. ನಂದಿಯನ್ನು ಶಿವನ ವಾಹನ ಎಂದು ಕೂಡ ಹೇಳಲಾಗುವುದು.

ಶಿವನಿಗೂ-ನಂದಿಗೂ ಇರುವ ನಂಟೇನು? ಶಿವ ದೇವಾಲಯದ ಮುಂದೆ ನಂದಿಯ ಮೂರ್ತಿ ಶಿವಲಿಂಗದ ಎದುರು ಇರುವುದೇಕೆ? ಇದರ ಹಿಂದಿರುವ ಪೌರಾಣಿಕ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:

ನಂದಿ ಶಿವನಿಗೆ ತುಂಬಾ ಪ್ರಿಯ

ನಂದಿ ಶಿವನಿಗೆ ತುಂಬಾ ಪ್ರಿಯ

ಪೌರಾಣಿಕ ಕತೆಯ ಪ್ರಕಾರ ಸಮುದ್ರ-ಮಂಥನ ಸಮಯದಲ್ಲಿ ಅಮೃತಕ್ಕೂ ಮುನ್ನ ಹಾಲಾಹಲ ಅಂದರೆ ವಿಷು ಉಕ್ಕುತ್ತೆ. ಆ ಹಾಲಾಹಾಲ ವಿಶ್ವದಲ್ಲಿ ಹರಡಿ ಸರ್ವನಾಶವಾಗುವುದನ್ನು ತಡೆಯಲು ಶಿವನು ಆ ವಿಷವನ್ನು ಕುಡಿಯುತ್ತಾನೆ ಎಂದು ಪೌರಾಣಿಕ ಕತೆಗಳು ಹೇಳುತ್ತವೆ. ಶಿವನಿಗೆ ವಿಷವನ್ನು ಸೇವಿಸುವಾಗ ಕೆಲವು ಹನಿ ವಿಷ ಭೂಮಿಗೆ ಬೀಳುತ್ತೆ, ಅದರಿಂದ ಯಾವುದೇ ಅನಾಹುತವಾಗದಿರಲಿ ಎಂದು ನಂದಿ/ಬಸವ ಅದನ್ನು ನೆಕ್ಕುತ್ತಾನೆ.

ಶಿವನ ಮೇಲೆ ನಂದಿಗಿರುವ ಪ್ರೀತಿ, ನಂದಿಯ ಶ್ರಮವನ್ನು ಮೆಚ್ಚಿದ ಶಿವ

ಶಿವನ ಮೇಲೆ ನಂದಿಗಿರುವ ಪ್ರೀತಿ, ನಂದಿಯ ಶ್ರಮವನ್ನು ಮೆಚ್ಚಿದ ಶಿವ

ನಂದಿ ತುಂಬಾ ಶ್ರಮ ಜೀವಿ ಜೊತೆಗೆ ಸಮುದ್ರ ಮಂಥನ ಸಮಯದಲ್ಲಿ ನೆಲಕ್ಕೆ ಬಿದ್ದ ಕೆಲ ಹನಿ ವಿಷವನ್ನು ನಂದಿ ನೆಕ್ಕುವುದನ್ನು ನೋಡಿದಾಗ ಶಿವನಿಗೆ ನಂದಿ ಮೇಲೆ ಪ್ರೀತಿ ಉಕ್ಕುತ್ತೆ. ನಂದಿಯನ್ನು ಪರಮ ಆಪ್ತ ಭಕ್ತ ಎಂದು ಸ್ವೀಕರಿಸುತ್ತಾನೆ. ತಾನೆಲ್ಲಿರುತ್ತೇನೋ ಅಲ್ಲಿ ನಂದಿಗೂ ಸ್ಥಾನವಿರುತ್ತದೆ ಎಂದು ಹೇಳುತ್ತಾನೆ. ಆದ್ದರಿಂದ ಎಲ್ಲೆಲ್ಲಿ ಶಿವನ ದೇವಾಲಯವಿರುತ್ತದೋ ಅಲ್ಲಿ ಶಿವಲಿಂಗಕ್ಕೆ ಎದುರಿಗೆ ನಂದಿಯ ಮೂರ್ತಿ ಇದ್ದೇ ಇರುತ್ತದೆ.

 ನಂದಿ ಕಿವಿಯಲ್ಲಿ ಹೇಳಿದ ಕೋರಿಕೆ ಶಿವನಿಗೆ ತಲುಪುವುದು

ನಂದಿ ಕಿವಿಯಲ್ಲಿ ಹೇಳಿದ ಕೋರಿಕೆ ಶಿವನಿಗೆ ತಲುಪುವುದು

ಜನರು ಶಿವ ದೇವಾಲಯಕ್ಕೆ ಬರುವಾಗ ನಂದಿಗೂ ನಮಸ್ಕರಿಸುತ್ತಾರೆ. ನಂದಿ ಕಿವಿಯಲ್ಲಿ ಹೇಳುವ ಕೋರಿಕೆಗಳು ಶಿವನಿಗೆ ತಲುಪುತ್ತದೆ ಎಂಬ ನಂಬಿಕೆ ಇದೆ. ನಂದಿಗೆ ಸಮನಾಗಿ ನಿಂತು ಶಿವನಿಗೆ ನಮಸ್ಕರಿಸಬಾರದು.

ನಂದಿ ಮೂರ್ತಿಯ ಹಿಂದೆ ನಿಂತು ಶಿವಲಿಂಗಕ್ಕೆ ನಮಸ್ಕರಿಸಬೇಕು.

 ನಂದಿ ಪೂಜೆಗೆ ವಿಶೇಷವಾದ ದಿನಗಳಾವುವು

ನಂದಿ ಪೂಜೆಗೆ ವಿಶೇಷವಾದ ದಿನಗಳಾವುವು

* ಶಿವ ದೇವಾಲಯಕ್ಕೆ ಹೋದಾಗ ನಂದಿಗೆ ನಮಸ್ಕರಿಸಿ ಪೂಜಿಸಿ.

* ನಂದಿಗೆ ಈ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸಬಹುದು

* ಶುಕ್ಲ ಪಕ್ಷದ ಸಪ್ತಮಿ ತಿಥಿಗೆ

* ಪೂರ್ವಭದ್ರ ನಕ್ಷತ್ರದಂದು

* ಸಪ್ತಮಿ ತಿಥಿ ಹಾಗೂ ಪೂರ್ವಭದ್ರ ನಕ್ಷತ್ರ ಜೊತೆಗೆ ಬಂದರೆ ಆ ದಿನ ನಂದಿ ಪೂಜೆಗೆ ತುಂಬಾನೇ ಶ್ರೇಷ್ಠ.

ನಂದಿ ಪೂಜೆಯಿಂದ ದೊರೆಯುವ ಪ್ರಯೋಜನಗಳು

ನಂದಿ ಪೂಜೆಯಿಂದ ದೊರೆಯುವ ಪ್ರಯೋಜನಗಳು

* ಮೈಕೈ ನೋವು ಕಡಿಮೆಯಾಗುತ್ತೆ

* ಕಾಯಿಲೆಯಿಂದ ಮುಕ್ತಿ ಸಿಗುವುದು

* ಕೋರಿಕೆ ಈಡೇರುವುದು

* ವೃತ್ತಿ ಜೀವನದಲ್ಲಿ ಬೆಳವಣಿಗೆ ಉಂಟಾಗುವುದು.

 ನಂದಿ ಪೂಜೆಯ ವಿಧಿ-ವಿಧಾನಗಳು

ನಂದಿ ಪೂಜೆಯ ವಿಧಿ-ವಿಧಾನಗಳು

* ನಂದಿ ಪೂಜೆಯನ್ನು ಸೂರ್ಯೋದಯಕ್ಕೆ ಮುನ್ನ ಅಂದರೆ ಪ್ರದೋಷ ಕಾಲದಲ್ಲಿ ಮಾಡಬೇಕು.

* ನಂದಿ ಪೂಜೆಯನ್ನು ಶಿವನ ದೇವಾಲಯದಲ್ಲಿ ಮಾಡಬೇಕು.

* ನಂದಿಯ ಮೂರ್ತಿ ಬಿಳಿ ಅಥವಾ ಕಪ್ಪು ಬಣ್ಣದಾಗಿರಬೇಕು.

* ನಂದಿ ಉತ್ತರ ಕಡೆ ಮುಖ ಮಾಡಿರಬೇಕು

* ಪೂಜೆ ಮಾಡುವವರು ಬಿಳಿ ವಸ್ತ್ರ ಧರಿಸಬೇಕು

* ಎಳ್ಳೆಣ್ಣೆಯ ದೀಪ ಹಚ್ಚಲಾಗುವುದು

* ನಂದಿಗೆ ಬಿಳಿ ಹೂಗಳನ್ನು ಅರ್ಪಿಸಿ

* ಹಸುವಿನ ಹಾಲನ್ನು ಅರ್ಪಿಸಲಾಗುವುದು

* ನಂದಿಗೆ ಖೀರ್‌ ಅನ್ನು ನೈವೇದ್ಯವಾಗಿ ಅರ್ಪಿಸಿ.

ನಂದಿ ಮಂತ್ರ

ನಂದಿ ಮಂತ್ರ

ಓಂ ತತ್ಪುರುಷಾಯ ವಿದ್ಮಹೇ ಚಕ್ರತುಂಡಾಯ ಧೀಮಹಿ । ತನ್ನೋ ನಂದಿ: ಪ್ರಚೋದಯಾತ್॥

 ನಂದಿಗೆ ವಿಶೇಷ ಪೂಜೆ

ನಂದಿಗೆ ವಿಶೇಷ ಪೂಜೆ

* ಮೈಕೈ ನೋವು ಹೋಗಲಾಡಿಸಲುಒಂದು ಚೊಂಬಿನಲ್ಲಿ ನೀರು ತೆಗೆದುಕೊಂಡು ಅದರಲ್ಲಿ ನಿಮ್ಮ ಪ್ರತಿಬಿಂಬ ನೋಡಿ ನಂದಿಗೆ ಮೂರ್ತಿಯ ಮೇಲೆ ಹಾಕಬೇಕು.

* ಶಿವ ದೇವಾಲಯಕ್ಕೆ ಪಂಚಾಮೃತ ಅರ್ಪಿಸಿ

* ಶ್ರೀ ನಂದೀಶ್ವರಾಯ ನಮಃ ಮಂತ್ರ 108 ಬಾರಿ ಪಠಿಸಿ.

English summary

Why Nandi Will Be There In Front Of Shiva linga, How To Worship Nandi

Why Nandi Will Be There In Front Of Shivaling, How To Worship Nandi, Read on...
X
Desktop Bottom Promotion