For Quick Alerts
ALLOW NOTIFICATIONS  
For Daily Alerts

ಶಿವನಿಗೂ ಹುಲಿಯ ಚರ್ಮಕ್ಕೂ ಇರುವ ಬಾಂಧವ್ಯವೇನು?

By Divya Pandith
|

ಮಂಗಳರೂಪ ಶಿವನು ಹಿಂದೂ ದೇವರಲ್ಲಿ ಒಬ್ಬನು. ಇವನಿಗೆ ರುದ್ರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಸೇರಿದಂತೆ ಇನ್ನೂ ಅನೇಕ ನಾಮಗಳಿಂದ ಕರೆಯುತ್ತಾರೆ. ಶಿವನೆಂದರೆ ಮಾಯಾ, ನಿರಹಂಕಾರ, ಬಂಧರಹಿತ ಎಂಬ ಅರ್ಥವನ್ನು ಕೊಡುತ್ತದೆ. ಶಕ್ತಿದೇವನು, ಅಲಂಕಾರ ರಹಿತನು ಎಂದು ಕರೆಯುವ ಶಿವನಿಗೆ ಸಂಬಂಧಿಸಿದ ಅನೇಕ ಪ್ರಸಿದ್ಧ ಪವಿತ್ರ ಕ್ಷೇತ್ರಗಳಿರುವುದನ್ನು ನಾವು ಕಾಣಬಹುದು.

ಲಯ ಕರ್ತನು ಎಂದು ಕರೆಯುವ ಶಿವ ದೇವನಿಗೆ ಕೆಲವು ವಿಶೇಷತೆಯಿದೆ. ಮುಡಿಯಲ್ಲಿ ಚಂದ್ರ, ಕುತ್ತಿಗೆಯಲ್ಲಿ ಹಾವು, ಕೈಯಲ್ಲಿ ತ್ರಿಶೂಲ ಮತ್ತು ಡಮರು ಹಿಡಿದಿರುತ್ತಾನೆ. ಹುಲಿಯ ಚರ್ಮವೇ ಆತನ ಉಡುಗೆ ಹಾಗೂ ಕುಳಿತುಕೊಳ್ಳುವ ಆಸನವೂ ಹುಲಿಯ ಚರ್ಮವೇ... ಇವುಗಳೆಲ್ಲದಕ್ಕೂ ಅದರದ್ದೇ ಆದ ಹಿನ್ನೆಲೆ ಹಾಗೂ ಕಥೆ ಪುರಾಣಗಳಿರುವುದು ವಿಶೇಷ. ನಿಮಗೆ ಈಗ ಹೌದಲ್ಲವೇ ಎನ್ನುವ ಭಾವನೆ ಮೂಡಿರಬಹುದು. ಯಾಕೆ ಹುಲಿಯ ಚರ್ಮವನ್ನು ಶಿವ ಧರಿಸುತ್ತಾನೆ? ಎನ್ನುವ ವಿಚಾರವನ್ನು ತಿಳಿದುಕೊಳ್ಳಬೇಕು ಎನ್ನುವ ಮನಸ್ಸಾದರೆ ಮುಂದಿರುವ ವಿವರಣೆಯನ್ನು ನೋಡಿ....

 Lord Shiva

ಶಿವನೇಕೆ ಹುಲಿಯ ಚರ್ಮ ಧರಿಸುತ್ತಾನೆ?
ಹುಲಿಯ ಚರ್ಮವನ್ನು ಧರಿಸುವ ದೇವರು ಶಿವನು. ನಾವು ಎಲ್ಲಿಯೇ ಶಿವನ ಚಿತ್ರ ನೋಡಿದರೂ ಆತ ಹುಲಿಯ ಚರ್ಮವನ್ನೇ ಧರಿಸಿರುತ್ತಾನೆ. ಮತ್ತು ಹುಲಿಯ ಚರ್ಮದ ಮೇಲೆಯೇ ಕುಳಿತಿರುತ್ತಾನೆ.

ಕುತೂಹಲಕಾರಿ ಕಥೆ
ಶಿವನಿಗೆ ಪ್ರಾಣಿಗಳೆಂದರೆ ಇಷ್ಟ. ಶಿವನು ಏಕೆ ಹುಲಿಯ ಚರ್ಮವನ್ನು ಧರಿಸುತ್ತಾನೆ ಎನ್ನುವುದಕ್ಕೆ ಶಿವ ಪುರಾಣದಲ್ಲಿ ಕುತೂಹಲಕಾರಿ ಕಥೆಯಿದೆ. ಆ ಕಥೆಯಲ್ಲಿ ಶಿವ ಏಕೆ ಹುಲಿಯ ಚರ್ಮದ ಮೇಲೆ ಕುಳಿತುಕೊಳ್ಳುತ್ತಾನೆ? ಏಕೆ ಧರಿಸುತ್ತಾನೆ? ಎನ್ನುವುದ ವಿವರಣೆಯಿದೆ.

ಋಷಿಗಳ ಆಶ್ರಮಕ್ಕೆ ಭೇಟಿ
ಶಿವ ಪುರಾಣದ ಪ್ರಕಾರ ಶಿವನು ಸಂಚಾರ ಪ್ರಿಯನಾಗಿದ್ದನು. ಸದಾಕಾಲ ಪ್ರಪಂಚವನ್ನು ಸುತ್ತುತ್ತಿದ್ದನು. ಒಮ್ಮೆ ಅತ್ಯಂತ ಶಕ್ತಿವಂತರಾದ ಋಷಿಗಳ ಆಶ್ರಮವನ್ನು ಹೊಂದಿರುವ ಅರಣ್ಯವೊಂದರೊಳಗೆ ಹೋದನು. ಆ ಸಮಯದಲ್ಲಿ ಋಷಿಗಳು ತಮ್ಮ ಹೆಂಡತಿಯರ ಆಶ್ರಯಲ್ಲಿ ವಾಸಿಸುತ್ತಿದ್ದರು.

ಶಿವನ ಆಕರ್ಷಣೆಯ ಶರೀರ
ಋಷಿಗಳ ಪತ್ನಿಯರು ಶಿವನ ಆಕರ್ಷಕ ಶರೀರಕ್ಕೆ ಆಕರ್ಷಕರಾದರು. ತಮ್ಮ ಅಸ್ತಿತ್ವದ ಬಗ್ಗೆ ಅರಿವಿಲ್ಲದವರಂತೆ ಆದರು. ಇದರಿಂದ ಅರಣ್ಯದಲ್ಲಿರುವ ಆಶ್ರಮದ ಶಾಂತಿಯು ಛಿದ್ರವಾಯಿತು.

ಮುನಿಗಳು ಶಿವನಿಗೆ ಪಾಠ ಕಲಿಸಲು ಮುಂದಾದರು
ತಮ್ಮ ಹೆಂಡತಿಯರು ಆಕರ್ಷಣೆಗೆ ಒಳಗಾದ ವ್ಯಕ್ತಿಗೆ ಸೂಕ್ತ ಪಾಠಕಲಿಸಬೇಕೆಂದು ನಿರ್ಧರಿಸಿದರು. ಅದರಂತೆ ಮುನಿಗಳು ಕುಪಿತರಾಗಿದ್ದರು.

ಹೊಂಡದಲ್ಲಿ ಬೀಳಿಸಿದರು
ಕೋಪ ಗೊಂಡ ಮುನಿಗಳು ಶಿವನು ನಿತ್ಯ ಓಡಾಡುವ ದಾರಿಯಲ್ಲಿ ಒಂದು ಹೊಂಡವನ್ನು ತೆಗೆದರು. ನಂತರ ಅದರಲ್ಲಿ ಶಿವನು ಬೀಳುವಂತೆ ಮಾಡಿದರು. ನಂತರ ಹುಲಿಯನ್ನು ಆ ಹೊಂಡಕ್ಕೆ ನೂಕಿದರು.

ಶಿವನು ಹುಲಿಯ ಚರ್ಮ ಹರಿದನು
ಶಿವನು ಯಾವುದೇ ಭಯಕ್ಕೆ ಒಳಗಾಗದೆ ಹುಲಿಯನ್ನು ಕೊಂದನು. ನಂತರ ಅದರ ಚರ್ಮವನ್ನು ಹರಿದನು. ವಿಜಯದ ಸಂಕೇತವಾಗಿ ಆ ಚರ್ಮವನ್ನು ತನ್ನ ದೇಹದ ಮೇಲೆ ಹಾಕಿಕೊಂಡನು.

ಸಾಮಾನ್ಯ ಮನುಷ್ಯನಲ್ಲ
ಆಗ ಋಷಿ ಮುನಿಗಳು ಈತ ಸಾಮಾನ್ಯ ವ್ಯಕ್ತಿಯಲ್ಲ ಎಂದು ಅರಿತರು. ಜೊತೆಗೆ ಅವನ ಶಕ್ತಿಯನ್ನು ಅರಿಯಲು ಪಾದಕ್ಕೆ ಎರಗಿದರು.

ಸಂಕೇತದ ಪ್ರಾಮುಖ್ಯತೆ
ಈ ಹಿನ್ನೆಲೆಯಲ್ಲಿಯೇ ಶಿವನು ಹುಲಿಯ ಚರ್ಮವನ್ನು ಧರಿಸುವುದು ಮುಂದುವರಿಸಿದನು. ಅವನ ವಿಜಯ ಉಗ್ರ ಪ್ರಾಣಿಗಳ ಮೇಲೊಂದೆ ಅಲ್ಲದೆ ಮೂರು ಲೋಕದಲ್ಲೂ ಅವನ ಶಕ್ತಿಯನ್ನು ತೋರಿಸುವುದರ ಪ್ರತೀಕವಾಯಿತು.

ಹುಲಿಯ ಸಂಕೇತ
ಹುಲಿಯು ಕೇವಲ ಶಿವನ ಕಥೆಗೆ ಮಾತ್ರ ಸೀಮಿತವಾಗಿಲ್ಲ. ಪುರಾಣದಲ್ಲಿ ಅನೇಕ ದೇವತೆಗಳು ಹುಲಿಯನ್ನು ಉಪಯೋಗಿಸಿದ್ದಾರೆ. ಮಹಿಷಾಸುರನನ್ನು ಕೊಲ್ಲುವಾಗ ದೇವಿಯು ಹುಲಿಯ ಮೇಲೆ ಕುಳಿತಿದ್ದಳು ಎನ್ನುವುದನ್ನು ತಿಳಿಯಬಹುದು.

ಔಷಧಗಳಲ್ಲಿ ಬಳಕೆ
ಚೀನಿಯರ ಜನಪದ ಕಥೆಗಳಲ್ಲಿ ಹುಲಿಗಳ ಪಾತ್ರವಿದೆ. ಅವರು ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅಲ್ಲದೆ ಅವರ ವರ್ಣ ಚಿತ್ರಗಳಲ್ಲೂ ಹುಲಿ ಇರುವುದನ್ನು ಗಮನಿಸಬಹುದು.

ಪ್ರಾಚೀನ ನಾಗರೀಕತೆ
ಹರಪ್ಪನ್ ನಾಗರೀಕತೆಯ ಚಿತ್ರಕಲೆಗಳಲ್ಲಿ ಹುಲಿಗಳು ವಿಶಿಷ್ಟವಾಗಿರುವುದನ್ನು ಕಾಣಬಹುದು. ಈ ಪ್ರಾಣಿಯನ್ನು ಶಕ್ತಿಯ ಸಂಕೇತವನ್ನಾಗಿ ನೋಡಲಾಗುತ್ತದೆ.

ಹುಲಿಯ ಬೇಟೆ
ಭಾರತದ ರಾಜ ಮಹರಾಜರುಗಳಿಗೆ ಹುಲಿ ಬೇಟೆ ಹೋಗುವುದು ಒಂದು ರೂಢಿಯಾಗಿತ್ತು. ನಂತರ ಬ್ರಿಟಿಷ್ ಆಡಳಿತಲ್ಲೂ ಅವರು ಅಳವಡಿಸಿಕೊಂಡಿದ್ದರು ಎನ್ನಲಾಗುತ್ತದೆ.

ಪವಿತ್ರದ ಪ್ರತೀಕ
ಹುಲಿಯ ಚರ್ಮದ ಮೇಲೆ ಶಿವ ಕುಳಿತಿರುವುದು ಪವಿತ್ರತೆಯ ಪ್ರತೀಕವಾಗಿರುತ್ತದೆ ಎಂದು ಹೇಳಲಾಗುವುದು.

English summary

Why Lord Shiva Sits On Tiger Skin?

One of the most well-liked images of Hindu god Shiva is that of him sitting on a tiger skin. Another popular image is that of him wearing a tiger skin or walking with a tiger skin wrapped around him.
X
Desktop Bottom Promotion