For Quick Alerts
ALLOW NOTIFICATIONS  
For Daily Alerts

ಭೀಮನ ಅಮಾವಾಸ್ಯೆಯ ಮಹತ್ವ ಹಾಗೂ ರೋಚಕ ಕಥೆ...

By Staff
|

ಹಿಂದೂ ಧರ್ಮದಲ್ಲಿರುವಷ್ಟು ಹಬ್ಬಗಳು ಮತ್ತು ಆಚರಣೆಗಳು ಬೇರೆ ಯಾವ ಧರ್ಮದಲ್ಲೂ ನಮಗೆ ಕಾಣಲು ಸಿಗುವುದಿಲ್ಲ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಹೀಗೆ ಪ್ರತಿಯೊಂದರಲ್ಲೂ ಆಗುವ ಬದಲಾವಣೆಗಳು ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರತೀ 15 ದಿನಕ್ಕೊಮ್ಮೆ ಹುಣ್ಣಿಮೆ ಮತ್ತು ಅಮವಾಸ್ಯೆ ಬರುತ್ತಾ ಇರುತ್ತದೆ. ಇದೆರಡಕ್ಕೂ ತಮ್ಮದೇ ಆದಂತಹ ವಿಶೇಷತೆಗಳಿವೆ. ಅದರಲ್ಲೂ ಭೀಮನ ಅಮಾವಾಸ್ಯೆಯನ್ನು ಆಷಾಢ ತಿಂಗಳಿನಲ್ಲಿ ಬರುವ ಅಮವಾಸ್ಯೆಗೆ ಆಚರಿಸಲಾಗುವುದು. ಈ ವರ್ಷ ಆಗಸ್ಟ್‌ 8ಕ್ಕೆ ಆಚರಿಸಲಾಗುವುದು.

ಭೀಮನ ಅಮಾವಾಸ್ಯೆಯನ್ನು ಆಚರಿಸುವುದು ಯಾಕೆ?

ಯಾವುದೇ ಆಚರಣೆಯಾಗಿರಲಿ ಅದರ ಹಿಂದಿನ ಅರ್ಥ ತಿಳಿದಿದ್ದರೆ ಹಬ್ಬ ಮತ್ತು ಆಚರಣೆಯು ಹೆಚ್ಚು ಫಲಪ್ರದವಾಗಿರುತ್ತದೆ. ಭೀಮನ ಅಮಾವಾಸ್ಯೆಯ ಮಹತ್ವವೇನೆಂದು ನಿಮಗೆ ತಿಳಿದಿದೆಯಾ? ಪೂರ್ಣ ಚಂದ್ರನಾಗಲು ಚಂದ್ರನು ತನ್ನ ತಿರುಗಾಟವನ್ನು ಆರಂಭಿಸುವ ದಿನವನ್ನು ಅಮಾವಾಸ್ಯೆ ಎನ್ನುತ್ತೇವೆ. ಮಹಾಲಯ ಅಮಾವಾಸ್ಯೆಯ ವಿಶೇಷತೆ

ಆಕಾಶದಲ್ಲಿ ಚಂದ್ರ ಕಾಣಿಸಿಕೊಳ್ಳುವ ಈ ದಿನವನ್ನು ಹಿಂದೂಗಳು ತುಂಬಾ ಪವಿತ್ರವೆಂದು ಭಾವಿಸುತ್ತಾರೆ. ನಿಮ್ಮ ಇಹಲೋಕ ತ್ಯಜಿಸಿರುವ ಹಿರಿಯರಿಗೆ ಈ ದಿನ ಏನಾದರೂ ಅರ್ಪಣೆ ಮಾಡಿದರೆ ಅಥವಾ ಪ್ರಾರ್ಥನೆ ಮಾಡಿದರೆ ನಮಗೆ ಅವರಿಂದ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

ಭೀಮನ ಅಮಾವಾಸ್ಯೆಯ ಮಹತ್ವವನ್ನು ತಿಳಿದುಕೊಳ್ಳಬೇಕಾದರೆ ಇದರ ವಿವರಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಅಗಸ್ಟ್ ತಿಂಗಳಲ್ಲಿ ಕಾಣಿಸುವಂತಹ ಮೊದಲ ಚಂದ್ರನನ್ನು ಭೀಮನ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ಹಿಂದೂಗಳಿಗೆ ತುಂಬಾ ಪವಿತ್ರ ಮತ್ತು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಇದನ್ನು ಆಚರಿಸಲಾಗುತ್ತದೆ. ಭೀಮನ ಅಮಾವಾಸ್ಯೆ ಮತ್ತು ಶಿವನಿಗೂ ಏನು ಸಂಬಂಧ ಎಂದು ಈ ಲೇಖನದಲ್ಲಿ ಓದುತ್ತಾ ತಿಳಿದುಕೊಳ್ಳಿ.

ಆಪ್ತರಿಗಾಗಿ ಪ್ರಾರ್ಥನೆ

ಆಪ್ತರಿಗಾಗಿ ಪ್ರಾರ್ಥನೆ

ಭೀಮನ ಅಮಾವಾಸ್ಯೆಯನ್ನು ಜ್ಯೋತಿ ವೀಮೇಶ್ವರ ವ್ರತ ಎಂದೂ ಕರೆಯಲಾಗುತ್ತದೆ. ಈ ದಿನದಂದು ಮಹಿಳೆಯರು ತಮ್ಮ ಆಪ್ತೇಷ್ಟರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಲ್ಲೂ ತಮ್ಮ ಪತಿ ಮತ್ತು ಸೋದರನಿಗಾಗಿ ಮಹಿಳೆಯರು ಪ್ರಾರ್ಥಿಸುತ್ತಾರೆ.

ಶಿವ ಮತ್ತು ಪಾರ್ವತಿಯ ಆರಾಧನೆ

ಶಿವ ಮತ್ತು ಪಾರ್ವತಿಯ ಆರಾಧನೆ

ಈ ದಿನದಂದು ಮದುವೆಯಾಗಿರುವ ಮತ್ತು ಮದುವೆಯಾಗದ ಮಹಿಳೆಯರು ಶಿವ ಹಾಗೂ ಪಾರ್ವತಿಯಲ್ಲಿ ತಮ್ಮ ಕುಟುಂಬದ ಪುರುಷರಿಗೆ ಸುಖ, ಸಮೃದ್ಧಿ ಮತ್ತು ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತಾರೆ. ಮದುವೆಯಾಗಿರುವ ಮಹಿಳೆಯರು ತಮ್ಮ ಸಂಬಂಧವು ಶಿವ-ಪಾರ್ವತಿಯಷ್ಟೇ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಾರೆ.

ತಂಬಿಟ್ಟು ದೀಪದ ಮಹತ್ವ

ತಂಬಿಟ್ಟು ದೀಪದ ಮಹತ್ವ

ಈ ವಿಶೇಷ ದಿನದಂದು ಗೋಧಿಯಿಂದ ಮಾಡಿದ ಹಣತೆಯಲ್ಲಿ ದೀಪವನ್ನು ಉರಿಸಿದರೆ ಮನಸ್ಸಿನಲ್ಲಿರುವ ಕೆಟ್ಟ ಭಾವನೆಗಳನ್ನು ಇದು ತೆಗೆದುಹಾಕುವುದು. ಎಲ್ಲಾ ಕತ್ತಲೆಯನ್ನು ದಾಟಿ ಹೊಸ ಚಂದ್ರನು ಉದಯಿಸುವಂತೆ ಮಾನವನು ಕೂಡ ತನ್ನ ಆತ್ಮದ ಸುಂದರತೆಯಿಂದ ದೀಪದಂತೆ ಪ್ರಜ್ಞಲಿಸಬೇಕೆಂಬುವುದು ಇದರರ್ಥ.

ಕಡುಬಿನ ಆಚರಣೆ

ಕಡುಬಿನ ಆಚರಣೆ

ಇದು ಭೀಮನ ಅಮಾವಾಸ್ಯೆಯ ಮತ್ತೊಂದು ಆಚರಣೆಯಾಗಿದೆ. ಮಹಿಳೆಯರು ಕಡುಬು ಮಾಡಿಕೊಂಡು ಅದರಲ್ಲಿ ನಾಣ್ಯವನ್ನು ಅಡಗಿಸಿಡುತ್ತಾರೆ. ಪೂಜೆ ಕೊನೆಗೊಂಡ ಬಳಿಕ ಬಾಲಕರು ಮತ್ತು ಪುರುಷರು ಕಡುಬನ್ನು ಒಡೆದು ಅದರಲ್ಲಿನ ನಾಣ್ಯವನ್ನು ತೆಗೆಯುತ್ತಾರೆ.

ಕಡುಬಿನ ಮಹತ್ವ

ಕಡುಬಿನ ಮಹತ್ವ

ಇದರ ಹಿಂದೆ ತುಂಬಾ ಆಸಕ್ತಿದಾಯಕ ಕಥೆಯಿದೆ. ಹಿಂದಿನ ಕಾಲದಲ್ಲಿ ಹುಡುಗಿಯನ್ನು ರಾಜನ ಪ್ರೇತ್ಮತ್ಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆ ಹುಡುಗಿ ಶಿವ ಮತ್ತು ಪಾರ್ವತಿಯನ್ನು ತುಂಬಾ ಪೂಜಿಸುತ್ತಿದ್ದಳು. ಇದರಿಂದ ಶಿವ ಮತ್ತು ಪಾರ್ವತಿ ಆಕೆಯ ಭಕ್ತಿಗೆ ಒಲಿದು ಪ್ರತ್ಯಕ್ಷರಾಗಿ ರಾಜನಿಗೆ ಪುನರ್ಜೀವ ನೀಡುತ್ತಾರೆ. ಶಿವನು ಈ ಸಂದರ್ಭದಲ್ಲಿ ಮಣ್ಣಿನ ಕಡುಬನ್ನು ತುಂಡು ಮಾಡುತ್ತಾನೆ. ಇದನ್ನು ದೀರ್ಘಾಯುಷ್ಯ ಮತ್ತು ಸಮೃದ್ಧಿಯ ಸಂಕೇತವೆನ್ನಲಾಗುತ್ತದೆ.

ಭಕ್ತಿಭಾವದ ದಿನ

ಭಕ್ತಿಭಾವದ ದಿನ

ಇನ್ನೊಂದು ಕಥೆಯ ಪ್ರಕಾರ, ಪಾರ್ವತಿಯ ಭಕ್ತಿಯನ್ನು ಸಂಪೂರ್ಣವಾಗಿ ಮೆಚ್ಚಿದ ಶಿವನು ಆಕೆಯನ್ನು ಮದುವೆಯಾಗಲು ಒಪ್ಪಿಕೊಂಡ ಎಂದು ಪುರಾಣಗಳಲ್ಲಿದೆ. ಈ ದಿನ ಶಿವನ ಭಕ್ತಿ ಮಾಡುವವರಿಗೆ ಬೇಗನೆ ಶಿವ ಒಲಿಯುತ್ತಾನಂತೆ.

ಆಹಾರದ ತಯಾರಿ

ಆಹಾರದ ತಯಾರಿ

ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೆ ಆಹಾರವನ್ನು ತಯಾರಿಸಬೇಕಾಗಿದೆ. ಮಸಾಲೆ ಮತ್ತು ಕರಿದ ಆಹಾರವನ್ನು ಭೀಮನ ಅಮಾವಾಸ್ಯೆ ದಿನ ಸಂಪೂರ್ಣವಾಗಿ ವರ್ಜಿಸಬೇಕು.

English summary

Why Is Bheemana Amavasya Celebrated?

In the Hindu religion, there are lots of occasions and the celebration styles for each of these are different. On every fortnight, Purnima and Amavasya occur. Each full moon and new moon has a different significance. Bheemana Amavasya is one of those special new moon days that is celebrated in the month of Ashada, according to the Hindu Calender. Why is Bheemana Amavasya celebrated? To know in detail about this, you should concentrate on the significance of Bheemana Amavasya.
X
Desktop Bottom Promotion