ಹಣೆಗೆ ಹಚ್ಚಿಕೊಳ್ಳುವ ವಿಭೂತಿಯ ಹಿಂದಿದೆ, ರೋಚಕ ಕಹಾನಿ

By: Deepu
Subscribe to Boldsky

ಹಿಂದೂ ಧರ್ಮವು ಸನಾತನ ಧರ್ಮವಾಗಿ ಖ್ಯಾತಿ ಪಡೆದಿದೆ. ಇದು ತನ್ನ ಸಂಪ್ರದಾಯಗಳು, ಪದ್ಧತಿಗಳು ಮತ್ತು ಆಚಾರ ವಿಚಾರಗಳ ಮೂಲಕ ಇಡೀ ಜಗತ್ತಿನ ಗಮನವನ್ನು ಅನಾದಿಕಾಲದಿಂದಲೂ ಸೆಳೆಯುತ್ತ ಬರುತ್ತಿದೆ. ಅದು ಇಂದಿಗೂ ಸಹ ಮುಂದುವರಿದಿದೆ. ಹಾಗೆಂದು ಇಲ್ಲಿ ಆಚರಿಸಲಾಗುವ ಎಲ್ಲಾ ಪದ್ಧತಿಗಳು ಸರಿ ಎಂದು ಹೇಳಲಾಗದು. ಕೆಲವೊಂದು ಸಂಪ್ರದಾಯಗಳನ್ನು ಸುಮ್ಮನೆ ಮೂಢನಂಬಿಕೆಯಿಂದ ಪಾಲಿಸಲಾಗುತ್ತದೆ. ಇನ್ನೂ ಕೆಲವೊಂದು ಆಚರಣೆಗಳಿಗೆ ಮಹತ್ವದ ಉದ್ದೇಶವಿದ್ದರು, ಅದನ್ನು ಅರಿತುಕೊಳ್ಳದೆ ಅದನ್ನು ಪಾಲಿಸಲಾಗುತ್ತದೆ. ವಿಭಿನ್ನ ವಿಭೂತಿ ನಿಮ್ಮ ಆರೋಗ್ಯದ ಸಂಗಾತಿ..

ಅಂತಹ ಒಂದು ಆಚರಣೆಯಲ್ಲಿ ಹಣೆಗೆ ವಿಭೂತಿ ಲೇಪಿಸಿಕೊಳ್ಳುವುದು ಸಹ ಸೇರಿದೆ. ಸಾಮಾನ್ಯವಾಗಿ ನಾವು ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕರು ಮತ್ತು ಸ್ಮಾರ್ಥ ಬ್ರಾಹ್ಮಣರು, ಲಿಂಗಾಯತರು ಮತ್ತು ಇನ್ನಿತರ ಪಂಥದವರು ಸಹ ತಮ್ಮ ಹಣೆಗೆ ವಿಭೂತಿಯಿಂದ ಮೂರು ಗೆರೆಗಳನ್ನು ಎಳೆದುಕೊಂಡಿರುವುದನ್ನು ನೀವು ನೋಡಿರಬಹುದು.

ವಿಭೂತಿ ಅಥವಾ ಭಸ್ಮ ಎಂದು ಕರೆಯಲ್ಪಡುವ ಇದನ್ನು ನಮ್ಮ ಉಂಗುರ, ಮಧ್ಯ ಮತ್ತು ತೋರು ಬೆರಳುಗಳ ಮೂಲಕ ತೆಗೆದುಕೊಂಡು ಹಣೆಗೆ ಲೇಪಿಸಿಕೊಳ್ಳಲಾಗುತ್ತದೆ. ಇದನ್ನು ಏಕೆ ಮಾಡುತ್ತಾರೆ ಎಂದು ಕಾರಣ, ಭಸ್ಮವು ದುಷ್ಟ ಶಕ್ತಿಗಳನ್ನು ಓಡಿಸುವ ಶಕ್ತಿಯನ್ನು ಹೊಂದಿರುತ್ತದೆಯಂತೆ. ಇದು ನಿಮ್ಮನ್ನು ದುಷ್ಟ ಶಕ್ತಿಗಳಷ್ಟೇ ಅಲ್ಲದೆ ನಕಾರಾತ್ಮಕ ಶಕ್ತಿಯಿಂದ ಸಹ ಕಾಪಾಡುತ್ತದೆ ಎಂದು ಭಾವಿಸಲಾಗುತ್ತದೆ. ಹಾಗಾಗಿ ಇಂದು ಈ ಅಂಕಣದಲ್ಲಿ ನಾವು ವಿಭೂತಿಯ ಮಹತ್ವದ ಕುರಿತಾಗಿ ನಿಮಗೆ ತಿಳಿಸಿಕೊಡಲು ಪ್ರಯತ್ನಿಸಿದ್ದೇವೆ. ಮುಂದೆ ಓದಿ...

ವಿಭೂತಿಯನ್ನು ಹಣೆಗೆ ಏಕೆ ಹಚ್ಚಿಕೊಳ್ಳಲಾಗುತ್ತದೆ?

ವಿಭೂತಿಯನ್ನು ಹಣೆಗೆ ಏಕೆ ಹಚ್ಚಿಕೊಳ್ಳಲಾಗುತ್ತದೆ?

ಮೊದಲಿಗೆ ವಿಭೂತಿಯನ್ನು ಅಥವಾ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳುವ ಹಿಂದೆ ಇರುವ ಕಥೆಯನ್ನು ನಿಮಗೆ ಹೇಳುತ್ತೇವೆ. ಇದರ ಹಿಂದೆ ಒಂದು ಪ್ರಮುಖ ಕಾರಣ ಇದೆ, ಅದೇ ಈಶ್ವರ. ಹೌದು, ಸ್ವಾಮಿ ಈಶ್ವರನು ತನ್ನ ಇಡೀ ದೇಹಕ್ಕೆ ಭಸ್ಮದಿಂದ ಲೇಪಿಸಿಕೊಂಡಿರುತ್ತಾನೆ. ಪುರಾಣದ ಪ್ರಕಾರ ಭೃಗು ಎಂಬ ಮಹರ್ಷಿಯು ಇದ್ದ. ಈತನು ಒಮ್ಮೆ ಒಂದು ಘೋರ ತಪಸ್ಸನ್ನು ಮಾಡಿದನು. ಆ ಸಮಯದಲ್ಲಿ ಈತ ಕಾಡಿನಲ್ಲಿ ಹಣ್ಣು ಮತ್ತು ಸೊಪ್ಪುಗಳನ್ನು ಮಾತ್ರ ಸೇವಿಸುತ್ತಿದ್ದನು.

ಅಹಂಕಾರವನ್ನು ಬೆಳೆಸಿಕೊಂಡ ಭೃಗು ಮಹರ್ಷಿ

ಅಹಂಕಾರವನ್ನು ಬೆಳೆಸಿಕೊಂಡ ಭೃಗು ಮಹರ್ಷಿ

ಈ ಭೃಗು ಒಂದು ದಿನ ದರ್ಬೆಯನ್ನು ಕತ್ತರಿಸುವಾಗ ಆಕಸ್ಮಿಕವಾಗಿ ತನ್ನ ಕೈಬೆರಳುಗಳನ್ನು ಕತ್ತರಿಸಿಕೊಂಡನು. ಆಗ ಅವನ ಕತ್ತರಿಸಿದ ಬೆರಳಿನಿಂದ ರಕ್ತ ಬರುವ ಬದಲು, ಗಿಡದ ಕಾಂಡ ಕತ್ತರಿಸಿದಾಗ ಬರುವ ರಸದಂತಹ ದ್ರವ ಒಸರತೊಡಗಿತು. ಇದನ್ನು ನೋಡಿದ ಭೃಗುವಿಗೆ ತನ್ನ ಮೇಲೆ ತನಗೆ ಹೆಮ್ಮೆ ಮೂಡಿತು. ಆತ ಈ ಬೆಳವಣಿಗೆಯಿಂದ ಖುಷಿಗೊಂಡನು ಮತ್ತು ಸಹ ಬೆಳೆಸಿಕೊಂಡನು.

ಭೃಗುವಿಗೆ ಪಾಠ ಕಲಿಸಲು ಮುಂದಾದ ಶಿವ

ಭೃಗುವಿಗೆ ಪಾಠ ಕಲಿಸಲು ಮುಂದಾದ ಶಿವ

ಇದನ್ನು ಗ್ರಹಿಸಿದ ಈಶ್ವರನು ಭೃಗುವಿಗೆ ಪಾಠ ಕಲಿಸಲು ಮನಸ್ಸು ಮಾಡಿದನು. ಆದ್ದರಿಂದ ಭೃಗುವಿನ ಬಳಿಗೆ ಮಾರು ವೇಷದಲ್ಲಿ ಮುದುಕನಂತೆ ಇವರ ಮುಂದೆ ಕಾಣಿಸಿಕೊಂಡನು. ಹೀಗೆ ಮುದುಕನಾಗಿ ಬಂದು ಶಿವನು ಭೃಗುವಿಗೆ ಏಕೆ ಸಂತೋಷನಾಗಿದ್ದೀಯಾ ಎಂದು ಕೇಳಿದನು.

ಪಾಠ ಕಲಿಸಿದ ಶಿವ

ಪಾಠ ಕಲಿಸಿದ ಶಿವ

ಈ ಪ್ರಶ್ನೆಯಿಂದ ಕುಪಿತನಾದ ಭೃಗುವು ಆ ಮುದುಕನಿಗೆ ಹೀಗೆ ಹೇಳಿದನು. ನಾನು ಮಾಡಿದ ತಪಸ್ಸು ಫಲವನ್ನು ನೀಡಿದೆ. ಆದ್ದರಿಂದ ನನ್ನ ರಕ್ತವು ಒಂದು ಪವಿತ್ರ ಮರವನ್ನು ಕತ್ತರಿಸಿದರೆ ಬರುವ ರಸದಂತೆ ಪರಿವರ್ತನೆಯಾಗಿದೆ ಎಂದನು. ಆಗ ಮುದುಕನ ರೂಪದಲ್ಲಿದ್ದ ಶಿವನು ಇದರಲ್ಲಿ ಹೆಚ್ಚುಗಾರಿಕೆ ಏನಿದೆ. ಒಂದು ಗಿಡ ಅಥವಾ ಮರವನ್ನು ಕತ್ತರಿಸಿ ಸುಟ್ಟರೆ ಭಸ್ಮವಾಗುತ್ತದೆ ಎಂದು ತನ್ನ ಬೆರಳನ್ನು ಕತ್ತರಿಸಿಕೊಂಡನು, ಆಗ ಬೆರಳಿನಿಂದ ರಕ್ತ ಬರುವ ಬದಲು, ವಿಭೂತಿ ಬರಲು ಆರಂಭಿಸಿತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಾಠ ಕಲಿಸಿದ ಶಿವ

ಪಾಠ ಕಲಿಸಿದ ಶಿವ

ಆಗ ಭೃಗುವಿಗೆ ಇಲ್ಲಿ ಮುದುಕನ ರೂಪದಲ್ಲಿ ಬಂದಿರುವುದು ಶಿವ ಎಂದು ಅರ್ಥವಾಗಲು ತಡವಾಗಲಿಲ್ಲ. ಆಗ ತನ್ನ ಬಗ್ಗೆ ಇರಿಸಿಕೊಂಡಿದ್ದ ಹೆಮ್ಮೆ ಮತ್ತು ಅಹಂಕಾರವನ್ನು ಆತ ತ್ಯಜಿಸಿದನು. ಅಂದಿನಿಂದ ಭಸ್ಮವು ಸಾಕ್ಷಾತ್ ಶಿವನ ರೂಪವಾಗಿ ಪರಿಗಣಿಸಲ್ಪಟ್ಟಿತು.

ಪವಿತ್ರ ವಸ್ತುಗಳಲ್ಲಿ ವಿಭೂತಿಗೂ ಸ್ಥಾನ

ಪವಿತ್ರ ವಸ್ತುಗಳಲ್ಲಿ ವಿಭೂತಿಗೂ ಸ್ಥಾನ

ಹಿಂದೂ ಧರ್ಮದಲ್ಲಿ ಶಿವನಿಗೆ ಸಂಬಂಧಿಸಿದ ಪವಿತ್ರ ವಸ್ತುಗಳಲ್ಲಿ ಇದನ್ನು ಸಹ ಒಂದಾಗಿ ಪರಿಗಣಿಸಲಾಯಿತು. ಪ್ರತಿದಿನ ನಾವು ಈ ಭಸ್ಮವನ್ನು ಶಿವನ ಸ್ವರೂಪವಾಗಿ, ನಕಾರಾತ್ಮಕ ಅಂಶಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಬಳಸುತ್ತೇವೆ. ಈಗ ನಿಮಗೆ ಅರ್ಥವಾಯಿತಲ್ಲವೇ, ನಾವು ಏಕೆ ವಿಭೂತಿಯನ್ನು ಧರಿಸುತ್ತೇವೆ ಎಂದು.

 
English summary

Why Hindus Apply Ash On Forehead

Hindus follow several traditions and customs. However, most of the time, some traditions are blindly followed, without knowing their actual significance. One such custom that is blindly followed is to apply the ash or bhasma on the forehead. We, generally, see a pandit in a temple having the three lines of ash on his forehead.
Story first published: Saturday, January 9, 2016, 14:32 [IST]
Subscribe Newsletter