Just In
- 18 min ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 1 hr ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- 9 hrs ago
ಶನಿವಾರದ ದಿನ ಭವಿಷ್ಯ (14-12-2019)
- 19 hrs ago
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
Don't Miss
- Education
IAF ನೇಮಕಾತಿ: ದ್ವಿತೀಯ ಪಿಯುಸಿ ಪಾಸ್ ?... ತಿಂಗಳಿಗೆ 33,000/-ರೂ ವೇತನ ಪಡೆಯುವ ಅವಕಾಶ
- News
ಭಾರತ್ ಬಚಾವೋ ಕಹಳೆ ಮೊಳಗಿಸಿದ ಕಾಂಗ್ರೆಸ್
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Technology
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಶ್ರೀಕೃಷ್ಣನ ಕಿರೀಟದಲ್ಲಿರುವ 'ನವಿಲಿನ ಗರಿಯ' ಹಿಂದಿರುವ ರಹಸ್ಯ
ಶ್ರೀಕೃಷ್ಣನನ್ನು ಮನದಲ್ಲಿ ನೆನೆದೊಡನೆ ನಮಗೆ ಮೊದಲು ನೆನಪಿಗೆ ಬರುವುದು ಅವರ ನೀಲ ವರ್ಣ, ತುಂಟಾಟ, ಸ್ನಿಗ್ಧ ಸೌಂದರ್ಯ, ಮಾಸದ ನಗು, ಕೈಯಲ್ಲಿ ಹಿಡಿದುಕೊಂಡಿರುವ ಕೊಳಲು, ಕಿರೀಟದಲ್ಲಿರುವ ನವಿಲು ಗರಿಯಾಗಿದೆ. ಮೇಘ ವರ್ಣನೆಂಬ ಹೆಸರೂ ಕೃಷ್ಣನಿಗಿದ್ದು ಹೊಳಪಿನಿಂದ ಕೂಡಿದ ಕಣ್ಣುಗಳನ್ನು ಕೃಷ್ಣ ಪರಮಾತ್ಮ ಹೊಂದಿದ್ದಾರೆ. ರೇಷ್ಮೆ ವಸ್ತ್ರಗಳು, ಬೆಣ್ಣೆ ಕದಿಯುವ ತುಂಟ ನೋಟ, ಸಖಿಯರನ್ನು ಗೋಳಾಡಿಸುವ ಪ್ರಿಯ ಸಖ ಹೀಗೆ ಕೃಷ್ಣನನ್ನು ವಿಧವಿಧವಾಗಿ ಬಣ್ಣಿಸಲಾಗುತ್ತದೆ. ಭಗವಾನ್ ಕೃಷ್ಣ ಹೇಳಿದಂತೆ ದಿನ ಬೆಳಿಗ್ಗೆ ಹೀಗೆ ಮಾಡಿ, ಸಂಕಷ್ಟ ದೂರವಾಗುತ್ತೆ
ಅದಾಗ್ಯೂ ಇದೆಲ್ಲದಕ್ಕಿಂತ ಕೃಷ್ಣನೆಡೆಗೆ ನಮ್ಮನ್ನು ಆಕರ್ಷಿಸುವ ವಿಧ ಅವರು ತಲೆಯಲ್ಲಿ ಧರಿಸಿರುವ ನವಿಲು ಗರಿಯಾಗಿದೆ. ನವಿಲಿನ ಗರಿಯನ್ನು ಧರಿಸಿದರು 'ಮೋರ್ ಮುಕುಟ್ ಧಾರಿ' ಎಂಬ ಹೆಸರಿನಿಂದಲೂ ಭಕ್ತರು ದೇವರನ್ನು ಕರೆಯುತ್ತಾರೆ. ಅವತಾರ ಪುರುಷ ಶ್ರೀ ಕೃಷ್ಣ ಜಗತ್ತಿಗೆ ಸಾರಿದ ಉಪದೇಶ
ಆದರೆ ಕೃಷ್ಣನು ಈ ಗರಿಯನ್ನು ಕಿರೀಟದಲ್ಲಿ ಏಕೆ ಧರಿಸಿದ್ದಾರೆ ಎಂಬುದರ ಹಿಂದಿರುವ ಹಿನ್ನೆಲೆ ನಿಮಗೆ ತಿಳಿದಿದೆಯೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ಇದರ ಮಹತ್ವವನ್ನು ನಾವು ತಿಳಿಸಲಿದ್ದೇವೆ...

ಕೃಷ್ಣ ಮತ್ತು ನವಿಲಿನ ನೃತ್ಯ
ಒಮ್ಮೆ ಕೃಷ್ಣ ಮತ್ತು ಅವರ ಗೆಳೆಯರು ಅರಣ್ಯದಲ್ಲಿ ನಿದ್ದೆಯನ್ನು ಮಾಡುತ್ತಿದ್ದರು. ಮಧ್ಯಾಹ್ನದ ಸಮಯವಾದ್ದರಿಂದ ಗೋವುಗಳು ಮೇಯುತ್ತಿದ್ದವು. ನಿದ್ದೆಯಿಂದ ಎಚ್ಚೆತ್ತವರು ಮೊದಲು ಕೃಷ್ಣ ದೇವರಾಗಿದ್ದರು. ಸುತ್ತಲಿನ ಪರಿಸರ ಆನಂದಮಯವಾಗಿತ್ತು. ಕೃಷ್ಣನು ಕೊಳಲನ್ನು ನುಡಿಸಲು ಆರಂಭಿಸಿದರು. ಸುತ್ತಲಿನ ಪ್ರಾಣಿ ಪಕ್ಷಿಗಳು, ಗಿಡ ಮರಗಳು ಕೊಳಲಿನ ಹಾಡಿಗೆ ತಲೆದೂಗಿ ಮೈಮರೆತು ನೃತ್ಯಮಾಡಲು ಆರಂಭಿಸಿದವು.

ನವಿಲಿನ ನೃತ್ಯ
ನವಿಲಿನ ನೃತ್ಯ ಇದರಲ್ಲಿ ಮನಮೋಹಕವಾಗಿತ್ತು. ಕೃಷ್ಣನ ಕೊಳಲಿನ ನಾದ ನಿಂತೊಡನೆ ನವಿಲುಗಳ ರಾಜ ಕೃಷ್ಣನ ಬಳಿಗೆ ಹೋಗಿ ತನ್ನ ಗರಿಯನ್ನು ಉದುರಿಸುತ್ತದೆ. ಇದನ್ನು ಅವುಗಳು ಗುರುದಕ್ಷಿಣೆಯ ರೂಪದಲ್ಲಿ ನೀಡುತ್ತವೆ. ಕೃಷ್ಣನು ಪ್ರೀತಿಯಿಂದ ಅದನ್ನು ಕೈಗೆತ್ತಿಕೊಂಡು ತಮ್ಮ ಕಿರೀಟದಲ್ಲಿ ಇಟ್ಟುಕೊಳ್ಳುತ್ತಾರೆ. ತಾವು ಯಾವಾಗಲೂ ಇದನ್ನು ಧರಿಸುವುದಾಗಿ ಕೃಷ್ಣನು ಹೇಳುತ್ತಾರೆ.

ಏಳು ಬಣ್ಣಗಳು
ನವಿಲಿನ ಗರಿಯಲ್ಲಿ ಏಳು ಬಣ್ಣಗಳು ಕಂಡುಬರುತ್ತವೆ ಎಂದು ಹೇಳಲಾಗಿದೆ. ಜೀವನದ ಪ್ರತಿಯೊಂದು ಬಣ್ಣಗಳನ್ನು ತಾನು ಧರಿಸಿಕೊಂಡಿದ್ದೇನೆ ಎಂಬುದನ್ನು ಕೃಷ್ಣನು ಈ ಮೂಲಕ ತೋರಿಸುತ್ತಿದ್ದಾರೆ. ಸಂಪೂರ್ಣ ವಿಶ್ವವನ್ನೇ ಕಾಪಾಡುವ ಕೃಷ್ಣನು ಬದುಕಿನ ಏಳು ಬಣ್ಣಗಳಿರುವ ನವಿಲಿನ ಗರಿಯನ್ನು ಕಿರೀಟದಲ್ಲಿ ಇರಿಸಿಕೊಂಡು ಭಕ್ತರನ್ನು ಸಲಹುತ್ತಿದ್ದಾರೆ.

ಸ್ಕಂದನ ಶುಭಾಕಾಂಕ್ಷಿ
ಪಾರ್ವತಿ ದೇವಿಯ ಸಹೋದರನೆಂದು ಮಹಾವಿಷ್ಣುವನ್ನು ಕರೆಯಲಾಗುತ್ತದೆ. ಶಿವ ಪಾರ್ವತಿ ವಿವಾಹ ಸಮಯದಲ್ಲಿ ಸಹೋದರನ ಸ್ಥಾನದಲ್ಲಿ ನಿಂತು ವಿಷ್ಣುವು ಪಾರ್ವತಿಯನ್ನು ಧಾರೆಯೆರೆದು ಕೊಡುತ್ತಾರೆ. ಹೀಗಾಗಿ ಕಾರ್ತೀಕೇಯನಿಗೆ ವಿಷ್ಣುವು ಸೋದರ ಮಾವನೆನಿಸಿಕೊಂಡಿದ್ದಾರೆ. ಕಾರ್ತೀಕೇಯನು ನವಿಲನ್ನು ತಮ್ಮ ವಾಹನವನ್ನಾಗಿ ಮಾಡಿಕೊಂಡಿದ್ದಾರೆ. ನವಿಲಿನ ಗರಿಯನ್ನು ತನ್ನ ಕಿರೀಟದಲ್ಲಿ ಇರಿಸಿಕೊಂಡು ಕೃಷ್ಣನು ತನ್ನ ಸೋದರಳಿಯನಿಗೆ ಶುಭವನ್ನು ಬಯಸುತ್ತಿದ್ದಾರೆ ಎಂಬ ಅರ್ಥವನ್ನು ಇದು ಹೊಂದಿದೆ.

ಶ್ರೀರಾಮ ಮತ್ತು ನವಿಲುಗಳು
ತ್ರೇತಾಯುಗದಲ್ಲಿ ರಾಮನು ಭೂಮಿಯ ಮೇಲೆ ನಡೆದಾಡುವ ಸಂದರ್ಭದಲ್ಲಿ ನವಿಲಿನ ಹಿಂಡುಗಳು ತಮ್ಮ ಗರಿಗಳಿಂದ ರಾಮನ ಬರುವ ನೆಲವನ್ನು ಶುದ್ಧಗೊಳಿಸುತ್ತಾರೆ. ನವಿಲುಗಳು ಈ ಆದರಪೂರ್ಣ ಸ್ವಾರ್ಥ ರಹಿತ ಮನಸ್ಸಿಗೆ ಮರುಳಾಗುತ್ತಾರೆ. ದ್ವಾಪರಯುಗದಲ್ಲಿ ತಾನು ಜನ್ಮವೆತ್ತಿದಾಗ ನಿಮ್ಮ ಗರಿಗಳನ್ನು ತಲೆಯ ಮೇಲೆ ಇರಿಸಿಕೊಂಡು ನಿಮಗೆ ಗೌರವವನ್ನು ನೀಡುತ್ತೇನೆ ಎಂದು ಭಾಷೆ ಕೊಡುತ್ತಾರೆ. ತಾವು ಕೃಷ್ಣನಾಗಿ ಜನ್ಮವೆತ್ತಿದಾಗ ನವಿಲುಗಳಿಗೆ ತಾವು ನೀಡಿದ ಪ್ರತಿಜ್ಞೆಯನ್ನು ಅವರು ಪೂರ್ಣಗೊಳಿಸುತ್ತಾರೆ.