For Quick Alerts
ALLOW NOTIFICATIONS  
For Daily Alerts

ಮಂತ್ರೋಚ್ಛಾರಣೆಗೆ ಮೊದಲು 'ಓಂ' ಪದ ಹೇಳುವುದು ಯಾಕೆ?

|

ಹಿಂದೂ ಧರ್ಮದಲ್ಲಿನ ಹೆಚ್ಚಿನ ಮಂತ್ರಗಳು ನಮ್ಮ ಸುತ್ತಲು ಇರುವಂತಹ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಧನಾತ್ಮಕವಾದ ಶಕ್ತಿಯನ್ನು ಉಂಟು ಮಾಡುವುದು ಎಂದು ಹೇಳಲಾಗುತ್ತದೆ. ಮಂತ್ರೋಚ್ಛಾರದಿಂದಾಗಿ ಸುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿ ಮೂಡುವುದು ಎನ್ನುವ ನಂಬಿಕೆ ಕೂಡ ಇದೆ. ಇದರ ಬಗ್ಗೆ ಕೆಲವೊಂದು ಅಧ್ಯಯನಗಳು ವೈಜ್ಞಾನಿಕವಾಗಿ ಇದು ಸಾಬೀತಾಗಿದೆ ಎಂದು ಹೇಳಿವೆ. ಹೆಚ್ಚಾಗಿ ಪ್ರತಿಯೊಂದು ಮಂತ್ರದಲ್ಲೂ ಕೂಡ ಓಂ ಎನ್ನುವ ಶಬ್ದವಿರುವುದನ್ನು ನಾವು ನೋಡಿದ್ದೇವೆ.

ಪ್ರತಿಯೊಂದು ಮಂತ್ರವು ಓಂನಿಂದ ಆರಂಭವಾಗಿ ಸ್ವಾಹಾದಿಂದ ಕೊನೆಯಾಗುವುದು. ಇದರ ಹಿಂದಿರುವ ಕಾರಣಗಳು ಏನು ಎಂದು ನೀವು ಯಾವತ್ತಾದರೂ ಆಲೋಚನೆ ಮಾಡಿದ್ದೀರಾ? ಇಲ್ಲ ತಾನೇ? ಹಾಗಾದರೆ ಈ ಲೇಖನ ಓದಿಕೊಂಡು ನಿಮ್ಮ ಜ್ಞಾನ ವೃದ್ಧಿಸಿಕೊಳ್ಳಿ. ಯಾಕೆಂದರೆ ಅನಾದಿ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಓಂ ಎನ್ನುವ ಪದವು ತುಂಬಾ ಶಕ್ತಿಯುತವಾಗಿರುವುದು ಎಂದು ನಂಬಲಾಗಿದೆ. ಓಂ ಶಬ್ಧವನ್ನು ಉಚ್ಛಾರ ಮಾಡಿದಾಗ ಓ' ಊ' ಮಾ' ಎನ್ನುವ ಮೂರು ಶಬ್ಧಗಳು ಬರುವುದು. ಹಿಂದೂ ನಂಬಿಕೆಗಳ ಪ್ರಕಾರ ಈ ಮೂರು ಪದಗಳು ತ್ರಿಮೂರ್ತಿಗಳಾಗಿರುವ ಬ್ರಹ್ಮ ದೇವರು, ವಿಷ್ಣು ದೇವರು ಮತ್ತು ಈಶ್ವರ ದೇವರಿಗೆ ಸಂಬಂಧಿಸಿದ್ದಾಗಿದೆ.

ಧರ್ಮಶಾಸ್ತ್ರದ ಪ್ರಕಾರ ಇದಕ್ಕೆ ಏನು ಅರ್ಥವಿದೆ

ಧರ್ಮಶಾಸ್ತ್ರದ ಪ್ರಕಾರ ಇದಕ್ಕೆ ಏನು ಅರ್ಥವಿದೆ

ಧರ್ಮಶಾಸ್ತ್ರವು ಹೇಳುವಂತೆ ಈ ಭೂಮಿಯು ಮೂರು ವಿಧದ ಶಕ್ತಿಗಳಿಂದ ನಿರ್ಮಿಸಲ್ಪಟ್ಟಿರುವುದಾಗಿದೆ. ಅವುಗಳೆಂದರೆ ಸತ್ವ, ರಾಜಸ ಮತ್ತು ತಮಸ. ಸತ್ವ ಎಂದರೆ ಅದರಲ್ಲಿ ಒಳ್ಳೆಯ ಗುಣಗಳು ಇದೆ ಎಂದು ಹೇಳಬಹುದು. ರಾಜಸ ಎಂದರೆ ಇದು ಮನುಷ್ಯ ಅಥವಾ ಒಬ್ಬ ರಾಜನ ಗುಣಗಳು ಇದೆ ಎಂದು ಹೇಳಬಹುದು. ತಮಸ ಎಂದರೆ ರಾಕ್ಷಸರಂತಹ ಗುಣಗಳು ಇದೆ ಎಂದು ಹೇಳಬಹುದು. ಪ್ರತಿಯೊಂದು ಅಂಶವು ಈ ಮೂರು ಗುಣಗಳನ್ನು ವಿಭಿನ್ನ ಪ್ರಮಾಣದಲ್ಲಿ ಶಕ್ತಿಗಳೊಂದಿಗೆ ಒಳಗೊಂಡಿದೆ. ಇಲ್ಲಿ ಕೆಲವು ಸಲ ಶಕ್ತಿಯ ಪ್ರಮಾಣದಲ್ಲಿ ಬದಲಾವಣೆಗಳು ಆಗಬಹುದು. ಆದರೆ ಅಂಶವು ಮಾತ್ರ ಅದೇ ಆಗಿರುವುದು. ಎಲ್ಲವನ್ನು ಜತೆಯಾಗಿ ಸೇರಿಸಿಕೊಂಡಾಗ ಇದು ಒಂದು ಪರಿಪೂರ್ಣ ಸಮೂಹವಾಗುವುದು. ಈ ಮೂರು ಗುಣಗಳ ಸಮೀಕರಣವನ್ನು ಓಂ ಎನ್ನುವ ಒಂದು ಪದವು ಹೇಳುವುದು ಮತ್ತು ಇದರ ಗುಣಮಟ್ಟವನ್ನು ಗುಣ ಗಳು ಎಂದು ಕರೆಯಲಾಗುತ್ತದೆ. ಪ್ರಾಮುಖ್ಯತೆ ಎಂದು ಹೇಳಬಹುದಾಗಿದೆ.

Most Read: 'ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು

ಒಂದು ಪವಿತ್ರ ಆರಂಭ

ಒಂದು ಪವಿತ್ರ ಆರಂಭ

ಹಿಂದೂ ಧರ್ಮದ ಪ್ರಕಾರ ಓಂ ಎನ್ನುವುದು ಕೇವಲ ಈಶ್ವರ ದೇವರ ಸಂಕೇತ ಮಾತ್ರವಲ್ಲ, ಇದು ಗಣಪತಿ ದೇವರ ಸಂಕೇತವು ಹೌದು. ಇದರಿಂದಾಗಿ ನಾವು ಗಣಪತಿ ದೇವರನ್ನು ಹೆಚ್ಚಾಗಿ ಓಂ ಆಕಾರದ ಚಿತ್ರಗಳಲ್ಲಿ ಕಾಣಬಹುದಾಗಿದೆ. ಯಾವುದೇ ಕಾರ್ಯಕ್ರಮ, ಕೆಲಸವಾದರೂ ನಾವು ಮೊದಲಿಗೆ ಗಣಪತಿ ದೇವರನ್ನು ವಂದಿಸುವ ಕಾರಣದಿಂದಾಗಿ ಮೊದಲಿಗೆ ನಾವು ಓಂ ಮಂತ್ರವನ್ನು ಉಚ್ಛಾರ ಮಾಡುತ್ತೇವೆ. ಗಣಪತಿ ದೇವರ ಯಾವುದೇ ರೀತಿಯ ಮಂತ್ರೋಚ್ಛಾರ ಮಾಡುವಾಗಲೂ ನಾವು ಮೊದಲಿಗೆ ಓಂ ಪದವನ್ನು ಬಳಸುತ್ತೇವೆ.

ಮೊದಲು ಕೇಳಿಬಂದ ಪದವಿದು

ಮೊದಲು ಕೇಳಿಬಂದ ಪದವಿದು

ಮೊದಲ ಸಲ ಭೂಮಿಯ ಸೃಷ್ಟಿಯಾದಾಗ ಮೊದಲು ಕೇಳಿಬಂದ ಶಬ್ಧವೇ ಓಂ ಎಂದು ಹೇಳಲಾಗುತ್ತದೆ. ಭೂಮಿಯು ಅಂತ್ಯವಾಗುವಾಗಲೂ ಇದೇ ರೀತಿಯ ಶಬ್ಧವು ಕೇಳಿಬರಲಿದೆ ಎಂದು ಹೇಳಲಾಗುತ್ತದೆ. ಇದು ಮೊದಲ ಶಬ್ಧವಾಗಿರುವ ಕಾರಣದಿಂದಾಗಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯು ಇದೆ. ಈ ಕಾರಣದಿಂದಾಗಿಯೇ ನಾವು ಮಂತ್ರೋಚ್ಛಾರವನ್ನು ಮಾಡುವ ವೇಳೆಯಲ್ಲಿ ಮೊದಲಿಗೆ ಈ ಪದವನ್ನು ಉಚ್ಛಾರ ಮಾಡುತ್ತೇವೆ.

Most Read: ವಿಷ್ಣು ಸಂಕಷ್ಟಹರ ಮಂತ್ರ ಪಠಿಸಿ-ಸುಖ ಸಂಪತ್ತನ್ನು ಪಡೆದುಕೊಳ್ಳಿ

ಏಕಾಗ್ರತೆ ಸುಧಾರಣೆ ಮಾಡುವುದು

ಏಕಾಗ್ರತೆ ಸುಧಾರಣೆ ಮಾಡುವುದು

ಈ ಎಲ್ಲಾ ಶಕ್ತಿಗಳ ಮೇಲೆ ಹಿಡಿತ ಸಾಧಿಸಿಕೊಂಡು, ಅದನ್ನು ಸಮತೋಲನದಲ್ಲಿ ಇರಿಸಿಕೊಂಡಿರುವ ವ್ಯಕ್ತಿಯು ಯಾವಾಗಲೂ ಮಾನಸಿಕವಾಗಿ ಬಲಿಷ್ಠನಾಗಿರುವನು ಮತ್ತು ಇದು ಆತನಿಗೆ ತುಂಬಾ ಆರಾಮ ನೀಡುವುದು ಎಂದು ಹೇಳಲಾಗಿದೆ. ಮಾನಸಿಕವಾಗಿ ಆರಾಮವಾಗಿರುವ ವ್ಯಕ್ತಿಯು ಯಾವಾಗಲೂ ಹೆಚ್ಚು ಏಕಾಗ್ರತೆ ಸಾಧಿಸಬಹುದು. ಮಂತ್ರೋಚ್ಛಾರಣೆ ಮಾಡುವ ವೇಳೆ ಏಕಾಗ್ರತೆ ಎನ್ನುವುದು ತುಂಬಾ ಮಹತ್ವದ ವಿಚಾರವಾಗಿದೆ. ಇದರಿಂದಾಗಿ ಮಂತ್ರವು ನಮಗೆ ಏಕಾಗ್ರತೆ ಉಂಟು ಮಾಡಲು ನೆರವಾಗುವುದು. ಇದರಿಂದಾಗಿಯೇ ಯೋಗದಲ್ಲೂ ಇದನ್ನು ಬಳಸಲಾಗಿದೆ. ರಾಜ ಯೋಗ ಮತ್ತು ಹಠ ಯೋಗ ವ್ಯಾಯಾಮಕ್ಕೆ ಮೊದಲು ಈ ಮಂತ್ರಗಳನ್ನು ಹೇಳಲಾಗುತ್ತದೆ.

English summary

Why Most Hindu Mantras Begin With Aum?

We often chant Aum before beginning most of the Hindu Mantras. Ever thought why this is done? Will the mantra not bear fruits if chanted without it? What can be the reasons? While it is said that Aum was the first sound that was heard when the universe began, it is also often associated with Lord Ganesha.
Story first published: Monday, December 10, 2018, 14:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X