For Quick Alerts
ALLOW NOTIFICATIONS  
For Daily Alerts

ಭಾರತೀಯ ಮಹಿಳೆಯರು ಏಕೆ ಬಳೆಗಳನ್ನು ಧರಿಸುತ್ತಾರೆ? ಇದರ ಹಿಂದಿನ ಕಾರಣವೇನು?

|

ಕೈತುಂಬಾ ಬಳೆ, ಹಣೆಯಲ್ಲಿ ಸಿಂಧೂರ, ತಲೆಯಲ್ಲಿ ಹೂವು, ಕೆನ್ನೆಯಲ್ಲಿ ಅರಿಶಿನ, ಕಾಲಲ್ಲಿ ಕಾಲುಂಗುರವನ್ನು ಧರಿಸುವುದು ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಸುಮಂಗಳೆಯರ ಲಕ್ಷಣ ಎಂದು ಹೇಳಲಾಗುವುದು. ಮಂಗಳ ಕಾರ್ಯವನ್ನು ಮಾಡುವಾಗ ಸುಮಂಗಲಿಯರು ಕಡ್ಡಾಯವಾಗಿ ಈ ರೀತಿಯ ಅಲಂಕಾರವನ್ನು ಮಾಡಿಕೊಳ್ಳಬೇಕು. ಆಗಲೇ ದೇವತೆಗಳ ಆಶೀರ್ವಾದ ದೊರೆಯುವುದು ಎಂದು ಹೇಳಲಾಗುವುದು. ಮಹಿಳೆಯರು ಧರಿಸುವ ಬಳೆ, ಕಾಲುಂಗುರ, ಕಿವಿಯೋಲೆ, ಉಂಗುರ, ಸಿಂಧೂರ ಇಡುವುದು ಎಲ್ಲವೂ ವೈಜ್ಞಾನಿಕ ಹಿನ್ನೆಲೆಯನ್ನು ಪಡೆದುಕೊಂಡಿದೆ.

ಮಹಿಳೆಯರು ಧರಿಸುವ ಬಳೆಯು ಸಾಕಷ್ಟು ಕಥೆ ಹಾಗೂ ಕವನವನ್ನು ರಚಿಸಿರುವುದನ್ನು ಕಾಣಬಹುದು. ಮನೆಯಲ್ಲಿ ಬಳೆಗಳ ಶಬ್ದ ಮಾಡುವ ಕೈಗಳಿರಬೇಕು. ಆಗಲೇ ಮನೆಯು ಸಮೃದ್ಧ ತೆಯಿಂದ ಕೂಡಿರುತ್ತದೆ ಎಂದು ಸಹ ಹೇಳಲಾಗುವುದು. ಅಂದರೆ ಬಳೆಯನ್ನು ಧರಿಸಿರುವ ಮಹಿಳೆಯರು ಮನೆಯಲ್ಲಿ ಇರಬೇಕು. ಆಗಲೇ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ತುಂಬಿರುತ್ತದೆ ಎಂದು ಹೇಳಲಾಗುವುದು. ಮಹಿಳೆಯ ಸೌಂದರ್ಯ ಹಾಗೂ ಘನತೆಯನ್ನು ಹೆಚ್ಚಿಸುವ ಬಳೆಯು ಸಾಕಷ್ಟು ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡಿದೆ. ಮಹಿಳೆಯರು ಏಕೆ ಬಳೆಯನ್ನು ತೊಡಬೇಕು? ಅದರ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ಸಾಕಷ್ಟು ವಿಚಾರಗಳಿರುವುದನ್ನು ಕಾಣಬಹುದು.

women wear Bangles

ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ದುರ್ಬಲರಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಪುರುಷರೊಂದಿಗೆ ಹೋಲಿಸಿದರೆ ಮಹಿಳೆಯ ಮೂಳೆಗಳು ದುರ್ಬಲವಾಗಿರುತ್ತವೆ ಮತ್ತು ನಾಜೂಕಾಗಿರುತ್ತವೆ. ಬಳೆಗಳನ್ನು ಧರಿಸುವುದರಿಂದ ಮೂಳೆಗಳಿಗೆ ಶಕ್ತಿಯು ಒದಗುತ್ತದೆ ಮತ್ತು ಅದು ಮಹಿಳೆಯರ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ಮಹಿಳೆಯು ಬೆಳೆಯುತ್ತಾ ಹೋದಂತೆ, ಅವರು ಮೂಳೆ ಸಂಬಂಧಿತ ರೋಗಳಿಗೆ ಒಳಗಾಗುತ್ತಾರೆ ಹಾಗೂ ಇಂತಹ ವಿವಿಧ ರೋಗಗಳನ್ನು ತಡೆಗಟ್ಟುವಲ್ಲಿ ಬಳೆಗಳು ಸಹಾಯ ಮಾಡುತ್ತವೆ.

ಚಿನ್ನ ಅಥವಾ ಬೆಳ್ಳಿ ಮುಂತಾದ ಬೆಲೆಬಾಳುವ ಲೋಹಗಳಿಂದ ತಯಾರಾದ ಆಭರಣಗಳನ್ನು ಧರಿಸುವುದರಿಂದ ಮಹಿಳೆಯರಿಗೆ ಶಕ್ತಿಯನ್ನು ಒದಗಿಸುತ್ತವೆ ಹಾಗೂ ಅವುಗಳನ್ನು ಧರಿಸಿದ ಮಹಿಳೆಯರಿಗೆ ಒಂದು ಬಗೆಯ ಧನಾತ್ಮಕ ಕಂಪನಗಳು ಅವರ ಸುತ್ತ ರಕ್ಷಣೆಯನು ಒದಗಿಸುತ್ತವೆ. ಪುರಾತನ ಇತಿಹಾಸದ ಪ್ರಕಾರ ಚಿನ್ನ ಅಥವಾ ಬೆಳ್ಳಿಯಿಂದ ಮಾಡಲ್ಪಟ್ಟ ಬಳೆಯು ನಿಮ್ಮ ಚರ್ಮದ ಜೊತೆಗೆ ಸಂಪರ್ಕಕ್ಕೆ ಬಂದಾಗ ಅಲ್ಲಿ ಉಂಟಾಗುವ ಘರ್ಷಣೆಯಿಂದಾಗಿ ಅದರ ಗುಣಗಳು ಮತ್ತು ವೈಶಿಷ್ಟ್ಯಗಳು ನಿಮ್ಮ ದೇಹವನ್ನು ಪ್ರವೇಶಿಸುತ್ತವೆ.

Most Read: ಸೀಮಂತ ಹೆರಿಗೆಯಲ್ಲಿ ಸಮಾಧಾನ ನೀಡಬಲ್ಲದೇ?

ನಮೆಗೆಲ್ಲರಿಗೂ ತಿಳಿದಿರುವಂತೆ, ಆಯುರ್ವೇದವು ಭಾರತೀಯ ಮೂಲದ್ದಾಗಿದೆ, ಇದು ಅಭರಣಗಳನ್ನು ಧರಿಸುವುದರಲ್ಲಿ ಕೆಲವು ಬಲವಾದ ನಂಬಿಕೆಗಳನ್ನು ಹೊಂದಿದೆ. ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳ ಭಸ್ಮವನ್ನು ಬಳಸುವ ಆಯುರ್ವೇದವು ಶಕ್ತಿಯ ಥೆರಪಿಯನ್ನು ನೀಡುತ್ತದೆ. ಇದರ ಸ್ಪಷ್ಟವಾದ ಅರ್ಥವೇನೆಂದರೆ, ಇದು ಪ್ರಬಲವೂ ಮತ್ತು ಶಕ್ತಿಯುತವೂ ಆಗಿದ್ದು, ಬಳೆಯ ರೂಪದಲ್ಲಿ ಧರಿಸುವಂತಹ ಮಹಿಳೆಗೆ ತನ್ನ ಶಕ್ತಿಯನ್ನು ಹಂಚುತ್ತದೆ.

women wear Bangles

ಪೌರಾಣಿಕ ನಂಬಿಕೆ

ನಿಮ್ಮ ಸ್ಮರಣ ಶಕ್ತಿಯ ಹಿಂದೆಯೇ ಇರುಂತಹ ಬಳೆಗಳನ್ನು ಧರಿಸಿರುವ ಬಗ್ಗೆ ಒಂದು ಪೌರಾಣಿಕ ನಂಬಿಕೆ ಇದೆ. ಪುರಾಣದ ಪ್ರಕಾರ, ಮಹಿಳೆಯು ತನ್ನ ಪತಿಯ ಸುರಕ್ಷತೆಗಾಗಿ ಬಳೆಗಳನ್ನು ಧರಿಸಿರಬೇಕು ಮತ್ತು ಇದು ತನ್ನ ಪತಿಯ ವಯಸ್ಸನ್ನು ಹೆಚ್ಚಿಸಬಲ್ಲದು. ವಿವಾಹಿತ ಮಹಿಳೆಯರು ಬಳೆಗಳನ್ನು ಏಕೆ ಧರಿಸುತ್ತಾರೆ ಎಂಬುದು ಇದರಿಂದ ಸಾಬೀತಾಗಿದೆ.

ಒಂದಕ್ಕೊಂದು ತಾಗುವ ಮೂಲಕ ಬಳೆಗಳಿಂದ ಉಂಟಾಗುವ ಬಳೆಗಳ ಕಿಣಿಕಿಣಿ ಶಬ್ದವು ಋಣಾತ್ಮಕ ಕಂಪನಗಳನ್ನು ದೂರವಿರಿಸುತ್ತದೆ ಹಾಗೂ ಅನಪೇಕ್ಷಿತ ಶಕ್ತಿಯು ಹತ್ತಿರ ಸುಳಿಯದಂತೆ ನಿಮ್ಮ ಮನೆಯಿಂದ ದೂರವಿರುತ್ತದೆ. ನಿಮ್ಮ ಹಿರಿಯರು ನಂಬಿಕೆಯ ಪ್ರಕಾರ ಈ ರೀತಿ ಹೇಳುತ್ತಾರೆ, 'ಮನೆಯಲ್ಲಿ ಬಳೆಗಳ ಶಬ್ದವು ನಮ್ಮ ಪವಿತ್ರ ದೇವಾನುದೇವತೆಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಸುಖಿಯಾಗಿರಿಸುತ್ತದೆ'. ಬಳೆಗಳನ್ನು ಧರಿಸುವುದಕ್ಕೆ ಸಂಬಂಧಪಟ್ಟ ಅತ್ಯಂತ ಪುರಾತನ ಸಂಗತಿಯೊಂದು ಬಹಳ ಸ್ಪಷ್ಟವಾಗಿದೆ. ಹಿಂದಿನ ಹಳೆಯ ಕಾಲದಲ್ಲಿ 'ಪಾರ್ದಾ ಪ್ರಥಾ' ಅನ್ನು ಅಭ್ಯಸಿಸಿದಾಗ, ಮಹಿಳೆಯರು ತಮ್ಮ ಮುಖದ ಮೇಲೆ ಧರಿಸುತ್ತಿದ್ದ ತಮ್ಮ ದುಪ್ಪಟ್ಟಾಗಳನ್ನು ಧರಿಸುವ ಮೂಲಕ ತಮ್ಮ ಮುಖಗಳನ್ನು ಮುಚ್ಚಿ ಇರಿಸಿಕೊಳ್ಳಬೇಕಾಗಿತ್ತು. ಪುರುಷರನ್ನು ತಮ್ಮ ಮಿತಿಗಳಲ್ಲಿ ಇರಿಸಿಕೊಳ್ಳಲು ಹಾಗೂ ತಮ್ಮ ಮನೆಗಳಲ್ಲಿ ಹಿರಿಯರಿಗೆ ಗೌರವದ ಸಂಕೇತವೆಂದು ಈ ಸಂಪ್ರದಾಯವನ್ನು ಪರಿಗಣಿಸಲಾಗಿತ್ತು. ಪುರುಷರು ಈ ವ್ಯವಸ್ಥೆಯನ್ನು ಗೌರವಿಸಿದ್ದರು, ಅದರ ಅರ್ಥ ಒಬ್ಬ ಮಹಿಳೆಗೆ ಅವಮಾನಿಸುವ ಉದ್ದೇಶವೂ ಎಂದಿಗೂ ಇರಲಿಲ್ಲ. ಅದಕ್ಕಾಗಿಯೇ ಅವರು ಬಳೆಗಳ ಕಿಣಿಕಿಣಿ ಧ್ವನಿ ಕೇಳಿದಾಗ ಮಹಿಳೆಗೆ ಮುಜುಗರಕ್ಕೆ ಒಳಗಾಗುವ ಯಾವುದೇ ಕೆಲಸವನ್ನು ತಕ್ಷಣವೇ ನಿಲ್ಲಿಸಿ ನಿಂತುಬಿಡುತ್ತಿದ್ದರು

women wear Bangles

ಭಾರತೀಯ ಮಹಿಳೆಯರು ಏಕೆ ಬಳೆಗಳನ್ನು ಧರಿಸುತ್ತಾರೆ?

ಕೈತುಂಬಾ ಬಳೆ, ಹಣೆಯಲ್ಲಿ ಸಿಂಧೂರ, ತಲೆಯಲ್ಲಿ ಹೂವು, ಕೆನ್ನೆಯಲ್ಲಿ ಅರಿಶಿನ, ಕಾಲಲ್ಲಿ ಕಾಲುಂಗುರವನ್ನು ಧರಿಸುವುದು ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಸುಮಂಗಳೆಯರ ಲಕ್ಷಣ ಎಂದು ಹೇಳಲಾಗುವುದು. ಮಂಗಳ ಕಾರ್ಯವನ್ನು ಮಾಡುವಾಗ ಸುಮಂಗಲಿಯರು ಕಡ್ಡಾಯವಾಗಿ ಈ ರೀತಿಯ ಅಲಂಕಾರವನ್ನು ಮಾಡಿಕೊಳ್ಳಬೇಕು. ಆಗಲೇ ದೇವತೆಗಳ ಆಶೀರ್ವಾದ ದೊರೆಯುವುದು ಎಂದು ಹೇಳಲಾಗುವುದು. ಮಹಿಳೆಯರು ಧರಿಸುವ ಬಳೆ, ಕಾಲುಂಗುರ, ಕಿವಿಯೋಲೆ, ಉಂಗುರ, ಸಿಂಧೂರ ಇಡುವುದು ಎಲ್ಲವೂ ವೈಜ್ಞಾನಿಕ ಹಿನ್ನೆಲೆಯನ್ನು ಪಡೆದುಕೊಂಡಿದೆ.

Most Read: ಬೆಳ್ಳಿ ಕಾಲುಂಗುರದಲ್ಲಿದೆ ಮಹಿಳೆಯರ ಆರೋಗ್ಯದ ರಹಸ್ಯ!

ಮಹಿಳೆಯರು ಧರಿಸುವ ಬಳೆಯು ಸಾಕಷ್ಟು ಕಥೆ ಹಾಗೂ ಕವನವನ್ನು ರಚಿಸಿರುವುದನ್ನು ಕಾಣಬಹುದು. ಮನೆಯಲ್ಲಿ ಬಳೆಗಳ ಶಬ್ದ ಮಾಡುವ ಕೈಗಳಿರಬೇಕು. ಆಗಲೇ ಮನೆಯು ಸಮೃದ್ಧ ತೆಯಿಂದ ಕೂಡಿರುತ್ತದೆ ಎಂದು ಸಹ ಹೇಳಲಾಗುವುದು. ಅಂದರೆ ಬಳೆಯನ್ನು ಧರಿಸಿರುವ ಮಹಿಳೆಯರು ಮನೆಯಲ್ಲಿ ಇರಬೇಕು. ಆಗಲೇ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ತುಂಬಿರುತ್ತದೆ ಎಂದು ಹೇಳಲಾಗುವುದು. ಮಹಿಳೆಯ ಸೌಂದರ್ಯ ಹಾಗೂ ಘನತೆಯನ್ನು ಹೆಚ್ಚಿಸುವ ಬಳೆಯು ಸಾಕಷ್ಟು ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡಿದೆ. ಮಹಿಳೆಯರು ಏಕೆ ಬಳೆಯನ್ನು ತೊಡಬೇಕು? ಅದರ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ಸಾಕಷ್ಟು ವಿಚಾರಗಳಿರುವುದನ್ನು ಕಾಣಬಹುದು.

ವಿವಾಹಿತ ಮಹಿಳೆಯರು ಏಕೆ ಬಳೆಗಳನ್ನು ಧರಿಸಬೇಕು?

ದೇವರ ಕೆಲಸ ಅಥವಾ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ವಿವಾಹ ಆಗಿರಬೇಕು ಎನ್ನುವ ಸಂಪ್ರದಾಯವಿದೆ. ವಿವಾಹವಾದ ಮಹಿಳೆಯರು ಕಡ್ಡಾಯವಾಗಿ ಬಳೆಗಳನ್ನು ಧರಿಸಬೇಕು. ಬಳೆಗಳನ್ನು ಧರಿಸುವಾಗ ಕೇವಲ ಚಿನ್ನದ ಅಥವಾ ಬೆಳ್ಳಿಯ ಬಳೆಯನ್ನು ಧರಿಸಬಾರದು. ಅವುಗಳ ಜೊತೆಗೆ ಗಾಜಿನ ಬಳೆಯನ್ನು ಧರಿಸಬೇಕು. ಮಹಿಳೆಯರ ಕೈಗಳಲ್ಲಿ ಸದ್ದು ಮಾಡುವ ಬಂಗಾರ ಹಾಗೂ ಗಾಜಿನ ಬಳೆಗಳು ಶುಭ ಶಕುನವನ್ನು ನೀಡುತ್ತವೆ. ಕೆಲವು ಸಾಂಪ್ರದಾಯಿಕ ನಂಬಿಕೆಗಳು ಹಾಗೂ ಕಥೆಗಳು ಥಳುಕು ಹಾಕಿಕೊಂಡಿರುವುದನ್ನು ಸಹ ನೋಡಬಹುದು. ಬಳೆಗಳನ್ನು ಬದಲಿಸುವಾಗ ಎಲ್ಲಾ ಬಳೆಗಳನ್ನು ತೆಗೆಯಬಾರದು. ಒಂದು ಬಳೆಯಾದರೂ ಕೈಯಲ್ಲಿ ಇರಬೇಕು ಎನ್ನುವ ನಿಯಮವಿದೆ. ಕಾಲಿ ತೋಳುಗಳನ್ನು ಹೊಂದುವುದು ಕೆಟ್ಟ ಅದೃಷ್ಟವನ್ನು ತರುವುದು ಎನ್ನಲಾಗುತ್ತದೆ.

women wear Bangles

ಬಳೆ ಧರಿಸುವುದಕ್ಕೆ ಇರುವ ವೈಜ್ಞಾನಿಕ ಕಾರಣಗಳು:

ಪ್ರಾಚೀನ ಕಾಲದಲ್ಲಿ ಪುರುಷರು ಮನೆಯ ಹೊರಗಡೆ ಸಾಕಷ್ಟು ಶ್ರಮದಾಯಕವಾದ ಕೆಲಸವನ್ನು ಮಾಡುತ್ತಿದ್ದರು. ಮಹಿಳೆಯರು ಮನೆಯ ಒಳಗಡೆ ಆಹಾರ ತಯಾರಿಸುವಂತಹ ಕೆಲಸ ಮಾಡುತ್ತಿದ್ದರು. ಇದರಿಂದ ಮಹಿಳೆಯರಿಗೆ ಹೆಚ್ಚು ದೈಹಿಕ ಶ್ರಮಗಳು ಉಂಟಾಗುತ್ತಿರಲಿಲ್ಲ. ಪುರುಷರ ಕೆಲಸಕ್ಕೆ ಹೋಲಿಸಿದರೆ ಅದು ಕಡಿಮೆ ಪ್ರಮಾಣವನ್ನು ಹೊಂದಿದ್ದಾಗಿರುತ್ತಿತ್ತು. ಹೆಚ್ಚು ದೈಹಿಕ ಕೆಲಸ ಮಾಡದೆ ಹೋದರೆ ರಕ್ತದೊತ್ತಡ ಹೆಚ್ಚುವುದು. ಅವುಗಳನ್ನು ತಡೆಯುವುದು ಹಾಗೂ ಮಹಿಳೆಯರ ಆರೋಗ್ಯ ಉತ್ತಮವಾಗಿರುವಂತೆ ಮಾಡಲು ಬಳೆಯನ್ನು ತೊಡಬೇಕು ಎನ್ನುವ ಸಂಪ್ರದಾಯ ರೂಢಿಯಲ್ಲಿ ತಂದರು. ಇದರಿಂದ ಮಹಿಳೆಯರಿಗೆ ಸಾಕಷ್ಟು ವೈಜ್ಞಾನಿಕ ಅನುಕೂಲತೆಗಳು ದೊರೆತವು. ಹಾಗೆಯೇ ಆರೋಗ್ಯವು ಉತ್ತಮವಾಗಿ ಇರಲು ಅನುಕೂಲವಾಯಿತು ಎನ್ನಲಾಗುವುದು.

Most Read: ಕನಸಿನಲ್ಲಿ ಆಭರಣಗಳನ್ನು ಕಂಡರೆ, ನಿಮ್ಮ ಅದೃಷ್ಟವೇ ಬದಲಾಗಲಿದೆ!!

ಸಾಮಾನ್ಯವಾಗಿ ಮಣಿಕಟ್ಟಿನ ಭಾಗವು ಯಾವುದೇ ಮನುಷ್ಯನ ಮೇಲೆ ನಿರಂತರ ಸಕ್ರಿಯಗೊಳಿಸುವಿಕೆಯಾಗಿದೆ. ಈ ಭಾಗದಲ್ಲಿ ಕಾಣುವ ನಾಡಿ ಮಿಡಿತದಿಂದಲೇ ಎಲ್ಲಾ ಬಗೆಯ ಕಾಯಿಲೆಗಳನ್ನು ಪರೀಕ್ಷಿಸಲಾಗುವುದು. ಮಹಿಳೆಯರು ಧರಿಸುವ ಬಳೆಗಳು ಈ ಭಾಗದಲ್ಲಿಯೇ ಇರುವುದರಿಂದ ಸಾಮಾನ್ಯವಾಗಿ ಮಣಿಕಟ್ಟಿನ ಭಾಗ ನಿರಂತರ ಘರ್ಷಣೆ ರಕ್ತ ಪರಿಚಲನೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹೊರಗಿನ ಚರ್ಮದ ಮೂಲಕ ಹಾದುಹೋಗುವ ವಿದ್ಯುಚ್ಛಕ್ತಿಯು ಮತ್ತೊಮ್ಮೆ ತನ್ನದೇ ಆದ ದೇಹಕ್ಕೆ ಹಿಂತಿರುಗುತ್ತದೆ. ಏಕೆಂದರೆ ರಿಂಗ್ ಆಕಾರದ ಬಳೆಗಳ ಕಾರಣದಿಂದಾಗಿ ಅದು ಹೊರಗೆ ಶಕ್ತಿಯನ್ನು ಹಾದುಹೋಗಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ಮಹಿಳೆಯರ ಆರೋಗ್ಯವು ಉತ್ತಮವಾಗಿರಲು ಸಹಾಯ ಮಾಡುತ್ತದೆ.

ಅಕ್ಯುಪಂಕ್ಚರ್ ಉಂಟಾಗುವುದು:

ಅಕ್ಯುಪಂಕ್ಚರ್ ಸೈನ್ಸ್ (ಸೂಚಿ ಚಿಕಿತ್ಸೆ) ನೀಡಿದ ವಿವರಣೆಯ ಪ್ರಕಾರ; ನಾವು ಧರಿಸುವಂತಹ ಬಳೆಗಳು ಅಥವಾ ಇತರೇ ಆಭರಣಗಳು ತಮ್ಮ ಹಿಂದೆ ಪ್ರಮಾಣೀಕೃತ ಕಾರಣಗಳನ್ನು ಹೊಂದಿವೆ. ಅಕ್ಯುಪಂಕ್ಚರ್ ಎಂಬ ಚಿಕಿತ್ಸೆಯು ನಮ್ಮ ದೇಹದ ಎಲ್ಲಾ ಭಾಗಗಳಲ್ಲೂ ಇರುವಂತಹ ಒತ್ತಡದ ಬಿಂದುಗಳನ್ನು ತಮ್ಮ ಗುಣಪಡಿಸುವ ಅಥವಾ ಚಿಕಿತ್ಸೆ ನೀಡುವ ಅಥವಾ ನಿರ್ದಿಷ್ಟ ಅಂಗಕ್ಕೆ ಉಪಚಾರ ಮಾಡುವಂತಹ ಚಿಕಿತ್ಸಾ ಕ್ರಮವನ್ನು ಉತ್ತೇಜಿಸುವಂತಹ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ, ಬಳೆಗಳನ್ನು ಮಣಿಕಟ್ಟುಗಳಲ್ಲಿ ಮತ್ತು ಕಾಲ್ಕಡಗಗಳನ್ನು ಕಾಲುಗಳಲ್ಲಿ ಧರಿಸಿದಾಗ ಅವು ಮಹಿಳೆಯ ಜನನಾಂಗದ ಅಂಗಗಳ ಒತ್ತಡದ ಬಿಂದುಗಳನ್ನು ಉತ್ತೇಜಿಸುತ್ತವೆ. ಹೀಗೆ, ವಯಸ್ಸಾದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಅಂಡಾಶಯಕ್ಕೆ ಸಂಬಂಧಿಸಿದ ಕೆಲವು ಆನಾರೋಗ್ಯಗಳನ್ನು ಎದುರಿಸುವಲ್ಲಿ ಇದು ಮುಖ್ಯ ಕಾರಣವಾಗಿದೆ.

English summary

Why do Indian women wear Bangles?

The tradition of wearing bangles in India started way back in ancient times. However, even today, women love to wear bangles to enhance their feminine grace and beauty with the help of bangles that are available in various colors and models. The word bangle has been derived from the HINDI word Bangri or Bangali, Which in sanskrit gives the meaning “The ornament which adorns the arm”.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X