For Quick Alerts
ALLOW NOTIFICATIONS  
For Daily Alerts

ಕುಂಕುಮವನ್ನು ಹಣೆಗೆ ಏಕೆ ಹಚ್ಚಬೇಕು, ಇದರ ಅದ್ಭುತವಾದ ವೈಜ್ಞಾನಿಕ ಪ್ರಯೋಜನಗಳು ಅಪಾರ!

|

ಕುಂಕುಮ ಹೆಣ್ಣಿಗೊಂದು ಸಂಭ್ರಮ, ಇದು ಹೆಣ್ಣಿನ ಶ್ರೇಷ್ಠತೆಯ ಸಂಕೇತ, ಹೆಣ್ಣಿನ ವೈವಾಹಿಕ ಸಂಬಂಧದ ಹೆಗ್ಗುರುತು. 'ಸಿಂಧೂರಮ್‌ ಸೌಂದರ್ಯ ಸಾಧನಂ' ಎಂಬ ಉಕ್ತಿ ಇದೆ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಭಾರತೀಯ ಪರಂಪರೆ, ಸಂಸ್ಕೃತಿಗಳಲ್ಲಿ ಕುಂಕುಮಕ್ಕೆ ಮಹತ್ವದ ಬೆಲೆಯುಂಟು.

Why do Hindus apply kumkum

ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ. ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ. ಹಣೆಗೆ ಕುಂಕುಮ ಹಚ್ಚುವುದು, ಗಂಡಸರು ತಿಲಕ ಇಡುವುದು ಸಂಪ್ರದಾಯ ಮಾತ್ರವಲ್ಲ ಕೆಲವು ಲಾಭಗಳನ್ನು ಹೊಂದಿದೆ. ಅದೊಂದು ನಮ್ಮ ಪೂರ್ವಿಕರ ವಿಜ್ಞಾನವು ಕೂಡ.

ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅರಶಿನಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಹಿಂದೂ ಸಂಪ್ರದಾಯ.

ಅದು ಮಂಗಲಪ್ರದವೆಂದು ನಂಬಿಕೆ. ದೇವಿದೇವತೆಯರ ಪೂಜೆಗೆ ಕುಂಕುಮ ಪವಿತ್ರವಾದ್ದರಿಂದ, ಅದನ್ನೇ ಬಳಸಲಾಗುತ್ತದೆ. ಅದನ್ನೇ ಕುಂಕುಮಾರ್ಚನೆ ಎನ್ನಲಾಗುತ್ತದೆ.

ಇಷ್ಟೆಲ್ಲಾ ಪ್ರಾಮುಖ್ಯತೆ ಪಡೆದಿರುವ ಕುಂಕುಮದ ಅರ್ಥ, ಹಿನ್ನಲೆ, ಇದನ್ನಿ ನಿತ್ಯ ಬಳಸುವುದರಿಂದಾಗುವ ವೈಜ್ಞಾನಿಕ ಪ್ರಯೋಜನ, ಇದನ್ನು ಹಚ್ಚುವ ವಿಧಾನ, ತಯಾರಿಸುವ ಬಗೆ ಇತರೆ ಮಾಹಿತಿಗಳನ್ನು ಮುಂದೆ ತಿಳಿಯೋಣ:

1. ಕುಂಕುಮದ ಅರ್ಥ ಹಾಗೂ ಹಿನ್ನೆಲೆ

1. ಕುಂಕುಮದ ಅರ್ಥ ಹಾಗೂ ಹಿನ್ನೆಲೆ

ಕುಂಕುಮ ಹಿಂದೂ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು. ಯಾರನ್ನೇ ನೋಡುವಾಗ ನಮ್ಮ ಕಣ್ಣು ಮುಡಿಯಿಂದ ಅಡಿಯವರೆವಿಗೆ ಚಲಿಸುವುದು. ಮೊದಲು ಕಾಣುವುದು ಮುಖದಲ್ಲಿನ ತಲೆಗೂದಲು. ನಂತರ ಹಣೆಯಮೇಲೆ ಕಾಣಿಸುವ ಕುಂಕುಮ.

ಕುಂಕುಮ ಎನ್ನುವುದು ಕೆಂಪು ಬಣ್ಣದ ಪುಡಿ. ಅದನ್ನು ಅರಿಶಿನ ಮತ್ತು ಸುಣ್ಣದ ಕಲ್ಲಿನ ಪುಡಿಯ ಜೊತೆ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿ ತಯಾರಿಸುವರು.

ಕುಂಕುಮವನ್ನು ಹಣೆಯ ಮಧ್ಯದಲ್ಲಿ ಇಡುವರು. ಇದು ಬುದ್ಧಿಶಕ್ತಿ, ವಿವೇಕದ ಅರ್ಥವನ್ನು ಹೇಳುತ್ತದೆ. ಈ ಜಾಗ ಅಶಕ್ತರಾಗಿರುವವರನ್ನು ಸಮ್ಮೋಹನಗೊಳಿಸಲು ಸುಲಭ. ಈ ಜಾಗದಲ್ಲಿ ಉಷ್ಣ ಉತ್ಪಾದನೆ ಬಹಳವಾಗಿ ಆಗುವುದು.

ನಮ್ಮ ದೇಹದಲ್ಲಿರುವ 7 ಚಕ್ರಗಳಲ್ಲಿ 6ನೆಯ ಚಕ್ರ ಸ್ಥಿತವಾಗಿರುವುದು ಭ್ರೂಮಧ್ಯೆ - ಅದೇ ಆಜ್ಞಾಚಕ್ರ. ಅದನ್ನು "ಮರ್ಮಪ್ರದೇಶ'ವೆಂದೂ ಕರೆಯಲಾಗುತ್ತದೆ.

ದೇಹದ ಒಳಗಿರುವ 3ನೆಯ ಕಣ್ಣು ಕೂಡ ಇದೇ ಭಾಗದಲ್ಲಿ ಸ್ಥಿತವಾಗಿದೆ. 3ನೆಯ ಕಣ್ಣು ಇಂದ್ರಿಯವಲ್ಲ, ಬದಲಾಗಿ ಇಂದ್ರಿಯಾತೀತ. ಈ ಭಾಗದಿಂದಲೇ ಜೀವಾತ್ಮದ ರಹದಾರಿ ಪರಮಾತ್ಮನತ್ತ ಸಾಗುವ ಪ್ರಕ್ರಿಯೆ ಆರಂಭ. ಆದ್ದರಿಂದಲೇ ಅಲ್ಲಿರಿಸುವ ಕುಂಕುಮ ಕ್ಕೆ ಅಷ್ಟೊಂದು ಪಾವಿತ್ರ್ಯ. ಕುಂಕುಮ ಮಂಗಲಕರವೂ ಹೌದು.

ಕುಂಕುಮದ ಬಣ್ಣ ಹಲವಾರು ಇದೆ. ಈಗೀಗಂತೂ ಬಿಂದಿಗಳು ಬಂದು ತರಹಾವರಿ ವಿಚಿತ್ರವಾದ ಕುಂಕುಮಗಳನ್ನು ನೋಡಬಹುದು. ಇಂದಿನ ಹೆಣ್ಣುಮಕ್ಕಳಲ್ಲಿ ಕುಂಕುಮವನ್ನು ಕಾಣುವುದು ಬಹಳ ಕಷ್ಟ. ಇದಕ್ಕೆ ಕಾರಣವೇನೆಂದರೆ ಈಗಿನ ತರಾತುರಿ ಜೀವನದಲ್ಲಿ ಪುಡಿ ಕುಂಕುಮ ಕಾಪಾಡುವುದು ಕಷ್ಟ. ಅಲ್ಲದೇ ಬೆಲ್ಲದ ಜೊತೆ ಮಿಶ್ರಣ ಮಾಡಿದ ಪಾಕದಂತಹ ಕುಂಕುಮ ಮಾಡಲು ಸಮಯವಿಲ್ಲ, ಇದೆಲ್ಲ ರೇಜಿಗೆಯ ವಿಷಯ. ಅದರ ಬದಲಾಗಿ ಸುಲಭವಾಗಿ ಅಂಗಡಿಗಳಲ್ಲಿ ಸಿಗುವ ಬೇರೆ ಬೇರೆ ಆಕಾರಗಳಿರುವ ಬಣ್ಣ ಬಣ್ಣದ ಬಿಂದಿಗಳು ಹೆಣ್ಣುಮಕ್ಕಳನ್ನು ಆಕರ್ಷಿಸಿದೆ.

2. ಚಿ। ಸೌ। ಹ। ಕುಂ। ಶೋ ಅರ್ಥ

2. ಚಿ। ಸೌ। ಹ। ಕುಂ। ಶೋ ಅರ್ಥ

ಮದುವೆ ಕರೆಯೋಲೆಗಳಲ್ಲಿ ಹೆಣ್ಣುಮಕ್ಕಳನ್ನು ಸಂಬೋಧಿಸುವಾಗ ಚಿ। ಸೌ। ಹ। ಕುಂ। ಶೋ ಎಂದು ಬರೆಯುತ್ತಾರೆ. ಅದರ ವಿಸ್ತೃತ ರೂಪ ಚಿರಂಜೀವಿ ಸೌಭಾಗ್ಯವತಿ ಹರಿದ್ರಾ ಕುಂಕುಮ ಶೋಭಿತೇ. ಹೆಣ್ಣುಮಕ್ಕಳಿಗೆ ಹಾರೈಸುವಾಗ ಚಿರಂಜೀವಿಯಾಗಿ ಅಂದರೆ ಸಾವೇ ಬರದಂತೆ ಇರು ಎಂದು, ಸೌಭಾಗ್ಯವತಿಯಾಗಿ ಅಂದ್ರೆ ಗಂಡನ ಪ್ರಾಣ ಉಳಿಸಿಕೊಂಡು ಅವನೊಡನೆ ಇರು ಎಂದೂ, ಹರಿದ್ರಾ ಕುಂಕುಮ ಶೋಭಿತೇ ಅರಿಶಿನ ಕುಂಕುಮ ಹಚ್ಚಿಕೊಂಡು ಶೋಭಿಸು ಎಂದರ್ಥ.

3. ಹಣೆಗೆ ಕುಂಕುಮ ಧಾರಣೆಮಾಡಿಕೊಳ್ಳುವಾಗ ಹೇಳುವ ಶ್ಲೋಕ

3. ಹಣೆಗೆ ಕುಂಕುಮ ಧಾರಣೆಮಾಡಿಕೊಳ್ಳುವಾಗ ಹೇಳುವ ಶ್ಲೋಕ

ಕುಂಕುಮಂ ಶೋಭನಂ ದಿವ್ಯಂ ಸರ್ವದಾ ಮಂಗಳಪ್ರದಂ |

ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ ||

ಎಂದು ಹೇಳಿಕೊಂಡು ಕುಂಕುಮಧಾರಣೆ ಮಾಡಿಕೊಳ್ಳಬೇಕು.

4. ಕುಂಕುಮವನ್ನು ಯಾವಾಗ ಮತ್ತು ಹೇಗೆ ಹಚ್ಚಿಕೊಳ್ಳಬೇಕು, ಅದರ ಹಿಂದಿನ ಶಾಸ್ತ್ರವೇನು?

4. ಕುಂಕುಮವನ್ನು ಯಾವಾಗ ಮತ್ತು ಹೇಗೆ ಹಚ್ಚಿಕೊಳ್ಳಬೇಕು, ಅದರ ಹಿಂದಿನ ಶಾಸ್ತ್ರವೇನು?

* ಸ್ನಾನವಾದ ನಂತರ ಬಲಗೈಯ ಅನಾಮಿಕ ದಿಂದ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು.

* ಅನಾಮಿಕಾದಿಂದ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರ ಹಿಂದಿನ ಶಾಸ್ತ್ರ

ಅನಾಮಿಕಾದಿಂದ ಪ್ರಕ್ಷೇಪಿತವಾಗುವ ಆಪತತ್ತ್ವದ ಲಹರಿಗಳ ಸಹಾಯದಿಂದ ಕುಂಕುಮದಲ್ಲಿನ ಶಕ್ತಿತತ್ತ್ವವು ಕಡಿಮೆ ಕಾಲಾವಧಿಯಲ್ಲಿ ಜಾಗೃತವಾಗಿ ಆಜ್ಞಾಚಕ್ರದಲ್ಲಿ ಸಂಗ್ರಹವಾಗುವುದರಿಂದ ಕುಂಕುಮದಲ್ಲಿನ ರಜೋಗುಣದ ಕಾರ್ಯಕ್ಕೆ ಶಕ್ತಿಯ ಬಲವು ಪ್ರಾಪ್ತವಾಗುತ್ತದೆ.

* ಓರ್ವ ಸ್ತ್ರೀಯು ಇತರ ಸ್ತ್ರೀಯರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು ಉಪಯೋಗಿಸುವುದರ ಹಿಂದಿನ ಶಾಸ್ತ್ರ

ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯದ ಬೆರಳು ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಅವರಲ್ಲಿರುವ ಕೆಟ್ಟಶಕ್ತಿಗಳು ಬೆರಳಿನ ಮೂಲಕ ನಮ್ಮ ದೇಹದೊಳಗೆ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.

* ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು.

* ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ.

* ಕುಂಕುಮ ಅಳಿಸಿ ಹೋಗದಂತೆ ದೀರ್ಘ ಕಾಲ ಇರಲು ಬೆಲ್ಲ ಮತ್ತು ನೀರಿನೊಂದಿಗೆ ಕುಂಕುಮ ಸೇರಿಸಿ ಮಿಶ್ರಣ ಮಾಡಿ ಹಣೆಗೆ ಇಟ್ಟುಕೊಳ್ಳಿ. ಇದರಿಂದ ಕುಂಕುಮ ಬಿದ್ದು ಹೋಗುವುದಿಲ್ಲ ಅಥವಾ ಅಳಿಸಿ ಹೋಗುವುದಿಲ್ಲ.

5. ಕುಂಕುಮ ಹಚ್ಚುವುದರ ಪ್ರಯೋಜನಗಳು

5. ಕುಂಕುಮ ಹಚ್ಚುವುದರ ಪ್ರಯೋಜನಗಳು

* ಹಣೆ ಮೇಲೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂಬುದು ನಮ್ಮ ಪೂರ್ವಿಕರ ವೈಜ್ಞಾನಿಕ ನಂಬಿಕೆ.

* ‘ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.

* ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.

* ಕುಂಕುಮದಲ್ಲಿ ಉಷ್ಣವನ್ನು ಶಮನ ಮಾಡುವ ಶಕ್ತಿ ಇದೆ.

* ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.

* ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ !

* ಹೆಣ್ಣಿನ ಅಂದದ ಮೇಲೆ ಇತರರ ಕಣ್ಣು ಬೀಳಬಾರದು. ಆಕೆಯ ಅಂದ ಚಂದವೆಲ್ಲಾ ಕೇವಲ ತನ್ನ ಪತಿಗೆ ಮೀಸಲು ಎಂಬ ಅರ್ಥವನ್ನು ಕುಂಕುಮ ಸೂಚಿಸುತ್ತದೆ.

* ತಾಳಿ ಸೆರಗಿನ ಒಳಗೆ ಮುಚ್ಚಿರುವುದರಿಂದ ಮದುವೆಯಾದ ಸಂಕೇತ ಸೂಚಿಸಲು ಕುಂಕುಮದ ಉಪಯೋಗ.

* ಕುಂಕುಮ ಧರಿಸಿರುವ ಹೆಣ್ಣಿನ ಮುಖವನ್ನು ಯಾರಾದರೂ ನೋಡಿದಾಗ ಅವರ ಕಣ್ಣು ಅವಳ ಆ ಕುಂಕುಮದ ಮೇಲೆಯೇ ಕೇಂದ್ರೀಕೃತವಾಗುತ್ತೆ, ಅವಳ ಬೇರೆ ಯಾವ ಸೌಂದರ್ಯವನ್ನೂ ನೋಡಿ ಚಂಚಲಚಿತ್ತರಾಗಲು ಅವಕಾಶವಿರುವುದಿಲ್ಲ.

* ಮೆದುಳಿನಲ್ಲಿರುವ ಲಿಂಫಾಟಿಕ್ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಅಮಿಗ್ದಲ ಅನ್ನುವ ಭಾಗಕ್ಕೆ ಈ ಅಭ್ಯಾಸದಿಂದ ಚೇತನ ಶಕ್ತಿ ಬರುತ್ತೆ. ಅದ್ದರಿಂದ ನರಮಂಡಲದಲ್ಲಿ ಆಗುವ ಒತ್ತಡದ ಏರುಪೇರುಗಳು ಕಡಿಮೆಯಾಗುತ್ತದೆ.

* ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಇದನ್ನು ಹಣೆ ಮೇಲೆ ಇರಿಸುವುದರಿಂದ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಹಾರ್ಮೋನ್‌ ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.

* ಕುಂಕುಮ ಹಚ್ಚುವುದರಿಂದ ಗ್ರಹಿಕೆಯು ಕೂಡ ಹೆಚ್ಚಾಗುತ್ತದೆ.

* ಹಣೆಗೆ ಕುಂಕುಮ ಇಡುವುದರಿಂದ ಮುಖದ ಸ್ನಾಯುಗಳಿಗೆ ರಕ್ತದ ಪೂರೈಕೆಯು ಹೆಚ್ಚುತ್ತದೆ, ಇದರಿಂದ ಮುಖದ ಕಾಂತಿಯು ಹೆಚ್ಚಿ ವ್ಯಕ್ತಿಯು ಸುಂದರವಾಗಿ ಕಾಣುತ್ತಾನೆ.

* ಕುಂಕುಮ ಹಚ್ಚುವುದರಿಂದ ಫೇಶಿಯಲ್‌ ಮಸಲ್ಸ್‌ ಸ್ಟ್ರಾಂಗ್‌ ಆಗುತ್ತದೆ. ಹಾಗೂ ಬೇಗನೆ ಸುಕ್ಕು ಉಂಟಾಗುವುದನ್ನು ತಡೆಯುತ್ತದೆ.

* ತಲೆನೋವು ಕಡಿಮೆ ಮಾಡಲು ಸಹ ಕುಂಕುಮ ಸಹಾಯ ಮಾಡುತ್ತದೆ.

* ಹಣೆಯ ಮೇಲೆ ಕುಂಕುಮ ಇಡುವುದರಿಂದ ಅನ್ಯ ಚಕ್ರವು ಸಕ್ರಿಯಗೊಳ್ಳುತ್ತದೆ, ನಮ್ಮ ಅಂತಃ ಪ್ರಜ್ಞೆಯು ಹೆಚ್ಚುತ್ತದೆ. ಇದರಿಂದ ಏಕಾಗ್ರತೆ ವೃದ್ದಿಸುತ್ತದೆ. ಮನಸ್ಸು ಕೂಡ ಶಾಂತಗೊಳ್ಳುತ್ತದೆ.

* ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.

* ‘ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.

6. ವಿಭಿನ್ನ ರೀತಿಯಲ್ಲಿ ಇಡುವ ಕುಂಕುಮದ ಅರ್ಥ

6. ವಿಭಿನ್ನ ರೀತಿಯಲ್ಲಿ ಇಡುವ ಕುಂಕುಮದ ಅರ್ಥ

* ವಿವಿಧ ರೀತಿಯಲ್ಲಿ ಕುಂಕುಮ ಬಳಸುವ ಸಂಪ್ರದಾಯವಿದೆ. ಅದಕ್ಕೆ ವಿವಿಧ ಅರ್ಥವೂ ಇದೆ. ವೈಷ್ಣವರಲ್ಲಿ ಧರಿಸುವ ಬಿಳಿಯ ಗೆರೆಗಳ ನಡುವಿನ ಕುಂಕುಮ ಲಕ್ಷ್ಮೀದೇವಿಯ ಪಾದಕಮಲವನ್ನು ಸಾಂಕೇತಿಕವಾಗಿ ಸಂಬೋಧಿಸಿದರೆ, ಬಿಳಿ ಗೆರೆಗಳು ಶ್ರೀಮನ್ನಾರಾಯಣನ ಪಾದಗಳ ಚಿಹ್ನೆಯಾಗಿವೆ.

* ಅಂತೆಯೇ ಭ್ರೂಮಧ್ಯೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ.

* ಉತ್ತರ ಭಾರತದಲ್ಲಿ ಕೂದಲಿನ ಬೈತಲೆಯ ಭಾಗದಲ್ಲಿ ಕುಂಕುಮ ನೀಳವಾಗಿ ಹಚ್ಚಿಕೊಳ್ಳುತ್ತಾರೆ. ಇದಕ್ಕೆ "ಮಾಂಗ್‌ ಮೇ ಸಿಂಧೂರ್‌ ಲಗಾನಾ' ಎನ್ನಲಾಗುತ್ತದೆ.

ಉತ್ತರ ಭಾರತದಲ್ಲಿ ಇದು ಮದುವೆಯಾದ ಸ್ತ್ರೀಯರು ಮಾತ್ರ ಹಚ್ಚುವ ಸಂಪ್ರದಾಯ.

* ದಕ್ಷಿಣ ಭಾರತದಲ್ಲಿ ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ , ಹೆಣ್ಣು ಮಕ್ಕಳಲ್ಲಿಯೂ ಸಂಪ್ರದಾಯವಿದೆ.

7. ಶುದ್ಧ ಕುಂಕುಮ ತಯಾರಿಸುವ ವಿಧಾನ

7. ಶುದ್ಧ ಕುಂಕುಮ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳ

ಒಳ್ಳೆ ಜಾತಿಯ ಅರಿಶಿನ ಕೋಡು ಒಂದು ಕಿಲೊ

ಬಿಳಿಗಾರ 150ಗ್ರಾಂ

ಸ್ಪಟಿಕ ಹತ್ತುಗ್ರಾಂ

ನಿಂಬೆಹುಳಿಯ ರಸ 750 ಮಿಲಿ ಲೀಟರು (ಬೀಜ ತೆಗೆದು ಸೋಸಿದ್ದು)

ತುಪ್ಪ 100 ಗ್ರಾಂ

ಒಂದು ಪ್ಲಾಸ್ಟಿಕ್ ಶೀಟ್

ಇಷ್ಟು ಸಾಮಾನುಗಳನ್ನು ತುಂಬಬಹುದಾದ ಒಂದು ಪಾತ್ರೆ. (ಪಿಂಗಾಣಿಯದ್ದೋ, ಮಣ್ಣಿನದ್ದೋ ಆದರೆ ಒಳ್ಳೆದು. ಅದು ಸಿಕ್ಕದೆ ಇದ್ದರೆ ಸ್ಟೀಲ್ ಪಾತ್ರೆ. ಅಗಲ ಬಾಯಿದಾದರೆ ಪಾಕವನ್ನು ಗೋಟಾಯಿಸಲು ಸುಲಭ.)

ಕುಂಕುಮ ತಯಾರಿಕೆಯ ವಿಧಾನ

* ಶುದ್ಧವಾದ ಅರಿಶಿನ ಕೋಡನ್ನು ತೊಳೆದು ಸಣ್ಣ-ಸಣ್ಣ ತುಂಡುಮಾಡಿಗೊಳ್ಳಬೇಕು. ಮತ್ತೆ ಸ್ಪಟಿಕವನ್ನೂ ಬಿಳಿಗಾರವನ್ನೂ ನುಣ್ಣಗೆ ಪುಡಿ ಮಾಡಿಕೊಂಡು, ನಿಂಬೆಹುಳಿಯ ರಸದಲ್ಲಿ ಸರಿಯಾಗಿ ಕಲಸಿ ಅದಕ್ಕೆ ಅರಿಶಿನ ಹೋಳುಗಳನ್ನ ಹಾಕಿ ಸರಿಯಾಗಿ ಮಿಶ್ರಮಾಡಬೇಕು.

* ಈ ಮಿಶ್ರಣವನ್ನು, ಪಾತ್ರೆಯಲ್ಲಿ ಎರಡು ದಿನ (ಅರಿಶಿನ ತುಂಡು ನಿಂಬೆಹುಳಿ ರಸ ಹೀರುವುದಕ್ಕೆ ಇಡಬೇಕು. ದಿನಕ್ಕೆ ಏಳೆಂಟು ಸರ್ತಿ ಅದನ್ನು ಸೌಟುಹಾಕಿ ಗೋಟಾಯಿಸಬೇಕು.)

* ಎರಡು ದಿನ ಬಿಟ್ಟು ಪ್ಲಾಸ್ಟಿಕ್ ಶೀಟಿನಲ್ಲಿ ಹರವಿ ಮನೆ ಒಳಗೆ ಒಣಗಿಸಬೇಕು. ಇದು ಸಾಧಾರಣ ಹದಿನೈದು ದಿನ ಒಣಗಿದ ಮೇಲೆ ನುಣ್ಣಗೆ ಪುಡಿ ಮಾಡಿ, ಜರಡಿಯಾಡಿಸಬೇಕು. ಕೊನೆಗೆ ತುಪ್ಪ ಹಾಕಿ ಚೆನ್ನಾಗಿ ಕೈಯಲ್ಲಿ ತಿಕ್ಕಿ, ತಿಕ್ಕಿ ಹದ ಮಾಡಬೇಕು. ಇದೀಗ ಶುದ್ಧ ಕುಂಕುಮ ಸಿದ್ಧ.

* ಇದು ಸರಿಯಾದ ಕುಂಕುಮ. ಒಳ್ಳೆ ಬಣ್ಣ ಹೊಂದಿದ್ದು, ತುಂಬಾ ಸಮಯಕ್ಕೆ ಬಾಳಿಕೆ ಬರುತ್ತದೆ. ಮಾತ್ರ ಅಲ್ಲ, ಮನುಷ್ಯನ ಭ್ರೂಮಧ್ಯಕ್ಕೆ ಹಾಕಿದರೆ ಆರೋಗ್ಯದಾಯಕ. ಪುಟ್ಟ ಮಕ್ಕಳಿಗೂ ನೆತ್ತಿಗೆ ಹಾಕಿ ತಿಕ್ಕಿದರೆ ಒಂದೇ ದಿನದಲ್ಲಿ ಶೀತ ನಿಲ್ಲುತ್ತದೆ.

8. ಕಲಬೆರೆಕೆ ಕುಂಕುಮ ಪತ್ತೆ ಮಾಡುವುದು ಹೇಗೆ

8. ಕಲಬೆರೆಕೆ ಕುಂಕುಮ ಪತ್ತೆ ಮಾಡುವುದು ಹೇಗೆ

ಕುಂಕುಮ ಕಲಬೆರಕೆಯದೋ ಎಂದು ಪರೀಕ್ಷಿಸಲು ಅದಕ್ಕೆ ಸ್ವಲ್ಪ ಸುಣ್ಣ ಸೇರಿಸಿದರೆ ಹಳದಿ ಬಣ್ಣ ಪಡೆಯದಿದ್ದರೆ, ಕಲಬೆರಕೆಯ ಕುಂಕುಮ ಎಂದರ್ಥ.

ಕಲಬೆರಕೆಯ ಕುಂಕುಮ, ರಾಸಾಯನಿಕಗಳಿರುವ ಕುಂಕುಮ ಲೇಪಿಸಿದಾಗ ತುರಿಕೆ ಕಜ್ಜಿಗಳೂ ಉಂಟಾಗುವುದಿದೆ. ಆದ್ದರಿಂದ ಮುತುವರ್ಜಿ ಅವಶ್ಯ.

ಅಲ್ಲದೆ ಕೃತಕ ಬಿಂದಿಗಳನ್ನು , ಕುಂಕುಮ ಬಣ್ಣದ ಸ್ಟಿಕರ್‌ಗಳನ್ನು ಬಳಸಿದರೂ, ಅದರ ನಿಜವಾದ ಪರಿಣಾಮ ಪ್ರಭಾವ ಉಂಟಾಗುವುದಿಲ್ಲ. ಆದರೂ ನಾವು ಅನುಕೂಲಕ್ಕೆಂದೋ ಬಣ್ಣ ಬಣ್ಣದ ಸ್ಟಿಕರ್‌ಗಳನ್ನೋ ಬಿಂದಿಗಳನ್ನೋ ಬಳಸುವುದು ಸರ್ವೇಸಾಮಾನ್ಯವಾಗಿದೆ.

English summary

Why do Hindus apply kumkum? Know Significance & Benefits in Kannada

Here we are discussing about Why do Hindus apply kumkum ? Know Significance & Benefits in Kannada. Read more.
X
Desktop Bottom Promotion