For Quick Alerts
ALLOW NOTIFICATIONS  
For Daily Alerts

ಬ್ರಾಹ್ಮಣರಿಗೆ ಈರುಳ್ಳಿ-ಬೆಳ್ಳುಳ್ಳಿಯೇಕೆ ನಿಷೇಧ?

By Manu
|

ಹಿಂದೂ ಧರ್ಮದಲ್ಲಿ ಹಲವಾರು ಜಾತಿ ಉಪಜಾತಿಗಳಿವೆ. ಇದರಲ್ಲಿ ಪ್ರಮುಖವಾದ ಬ್ರಾಹ್ಮಣರಲ್ಲಿ ದೇವರನ್ನು ಪೂಜಿಸುವ ಅರ್ಚಕರು ಹಾಗೂ ವಿದ್ವಾಂಸರೇ ಹೆಚ್ಚಾಗಿದ್ದಾರೆ. ಸಂಸ್ಕೃತಿ, ಧರ್ಮ ಮತ್ತು ಪುರಾಣಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮುಂದಿನ ಪೀಳಿಗೆಗೆ ಈ ಬಗ್ಗೆ ಸುಸಂಸ್ಕೃತರನ್ನಾಗಿಸುವಲ್ಲಿ ಬ್ರಾಹ್ಮಣರ ಕೊಡುಗೆ ಮಹತ್ವದ್ದಾಗಿದೆ. ಅತೀವ ದೈವಭಕ್ತರಾದ ಬ್ರಾಹ್ಮಣರು ಪೂಜೆ, ವ್ರತ ಪುನಸ್ಕಾರಗಳಂತಹ ತಮ್ಮ ಧರ್ಮದ ಕಟ್ಟುಪಾಡುಗಳನ್ನು ಬಹಳ ಕಟ್ಟುನಿಟ್ಟಾಗಿ ಆಚರಿಸುವವರಾಗಿದ್ದಾರೆ. ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

ಬ್ರಾಹ್ಮಣರಲ್ಲಿಯೇ ಭಗವಾನ್ ವಿಷ್ಣುವನ್ನು ಆರಾಧಿಸುವವರನ್ನು ವೈಷ್ಣವರೆಂದೂ, ಲಕ್ಷೀ ನಾರಾಯಣನನ್ನು ಪೂಜಿಸುವವರನ್ನು ಶ್ರೀವೈಷ್ಣವರೆಂಬ ಪಂಗಡಗಳಿವೆ. ಇವರಲ್ಲಿ ಇನ್ನೊಂದು ಪಂಗಡವಾದ ಸ್ಮಾರ್ತರು ಎಲ್ಲ ಪ್ರಮುಖ ಹಿಂದೂ ದೇವತೆಗಳನ್ನು ಬ್ರಹ್ಮನ ರೂಪಗಳೆಂದು ಸ್ವೀಕರಿಸುವ, ಮುಖ್ಯವಾಗಿ ಬ್ರಾಹ್ಮಣರಿಂದ ರಚಿತವಾದ ಒಂದು ಶಾಸ್ತ್ರಾನುಸಾರಿಯಾದ ಹಿಂದೂ "ಕುಟುಂಬ ಸಂಪ್ರದಾಯ" ಅಥವಾ ಪಂಥ. ಧಾರ್ಮಿಕ ಆಚರಣೆಯಲ್ಲಿ ಎಷ್ಟು ಕಟ್ಟುನಿಟ್ಟುಗಳಿವೆಯೇ, ಅಷ್ಟೇ ಕಟ್ಟುನಿಟ್ಟು ಅವರ ಆಹಾರಕ್ರಮದಲ್ಲಿಯೂ ಆಚರಿಸಲಾಗುತ್ತದೆ. ಇವರು ಖಾರವಾದ ಮಸಾಲೆ ವಸ್ತುಗಳನ್ನು ಸೇವಿಸುವುದಿಲ್ಲ. ಮುಖ್ಯವಾಗಿ ಇವರ ಅಡುಗೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲವೇ ಇಲ್ಲ! ಮುಂದೆ ಓದಿ... ಸಮೃದ್ಧ ಪೋಷಕಾಂಶಗಳ ಆಗರ - ಬಿಳಿ ಈರುಳ್ಳಿ

ಹಿಂದಿನ ಕಾಲದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸುತ್ತಲೇ ಇರಲಿಲ್ಲ!

ಹಿಂದಿನ ಕಾಲದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸುತ್ತಲೇ ಇರಲಿಲ್ಲ!

ಹೌದು, ಹಿಂದಿನ ಕಾಲದಲ್ಲಿ ಜನರು ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸುತ್ತಲೇ ಇರಲಿಲ್ಲ, ಅಥವಾ ಇವುಗಳ ಇರುವಿಕೆಯೇ ಗೊತ್ತಿದ್ದಿಲ್ಲದ್ದಿರಬಹುದು. ಬಳಿಕ ನಿಧಾನವಾಗಿ ಇದರ ಬಳಕೆ ಪ್ರಾರಂಭವಾದಂತೆ ಇತರರು ಈ ತರಕಾರಿಗಳನ್ನು ತಮ್ಮ ಅಡುಗೆಯಲ್ಲಿ ಬಳಸಿಕೊಂಡರೂ ಬ್ರಾಹ್ಮಣರು ಮಾತ್ರ ಇದನ್ನು ಸೇವಿಸಲು ಮನಸ್ಸು ಮಾಡಿರದಿರುವುದೇ ಕಾರಣವಾಗಿರಬಹುದು.

ಹಿಂದಿನ ಕಾಲದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸುತ್ತಲೇ ಇರಲಿಲ್ಲ!

ಹಿಂದಿನ ಕಾಲದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸುತ್ತಲೇ ಇರಲಿಲ್ಲ!

ಆದರೆ ದಿನಗಳೆದಂತೆ ಇತರ ಹಿಂದೂ ಜಾತಿಗಳು ಇವನ್ನು ಸ್ವೀಕರಿಸಿದರೂ ಇತರ ಜಾತಿಗಳಾದ ಸ್ಮಾರ್ತ, ಐಯಂಗಾರ್ ಮತ್ತು ಮಾಧ್ವರು ಇದರ ಬಳಕೆಯನ್ನು ಬಹಿಷ್ಕರಿಸಿ ಇಂದಿಗೂ ಇವೆರಡನ್ನು ಸೇವಿಸುವುದಿಲ್ಲ. ಅಷ್ಟೇ ಅಲ್ಲ, ದೇವರಿಗೆ ಸಲ್ಲುವ ನೈವೇದ್ಯದಲ್ಲಿಯೂ ಇವೆರಡು ತರಕಾರಿಗಳನ್ನು ಬಳಸಲಾಗುವುದಿಲ್ಲ. ಇದಕ್ಕೇನು ಕಾರಣ ಎಂಬ ಮಾಹಿತಿಯನ್ನು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ ನಾವು ಸೇವಿಸುವ ಆಹಾರಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಸತ್ವ, ರಜಸ್ ಮತ್ತು ತಮಸ್. ಸತ್ವಭರಿತ ಅಂದರೆ ಸಾತ್ವಿಕ ಆಹಾರಗಳು ಮಾನಸಿಕ ಶಾಂತಿಯನ್ನು ನೀಡುತ್ತವೆ.

ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ

ಇವುಗಳ ಸೇವನೆಯಿಂದ ನೆಮ್ಮದಿ, ಸತ್ಯವನ್ನು ನುಡಿಯಲು ಮತ್ತು ಸದಾ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಬ್ರಾಹ್ಮಣರು ಎಂದಿಗೂ ಸಾತ್ವಿಕ ಆಹಾರವನ್ನೇ ಸೇವಿಸಲು ಆದ್ಯತೆ ನೀಡುತ್ತಾರೆ.

ರಜಸ್ ಆಹಾರಗಳು

ರಜಸ್ ಆಹಾರಗಳು

ರಜಸ್ ಆಹಾರಗಳೆಂದರೆ ಈ ಭೂಮಿಯ ಮೇಲಿರುವ ಆನಂದ ಮತ್ತು ವಿಲಾಸಗಳನ್ನು ಅನುಭವಿಸುವ ಆಹಾರಗಳಾಗಿವೆ. ಉದಾಹರಣೆಗೆ ಸಕ್ಕರೆ, ಬೆಲ್ಲ, ಈರುಳ್ಳಿ, ಹುಳಿ, ಖಾರ ಇತ್ಯಾದಿ. ಈರುಳ್ಳಿಯ ಸೇವನೆಯಿಂದ ಲೈಂಗಿಕ ಬಯಕೆ ಹೆಚ್ಚುತ್ತದೆ. ಇದೇ ಕಾರಣಕ್ಕೆ ಈರುಳ್ಳಿಯನ್ನು ತಿನ್ನದಿರಲು ಹಿಂದಿನ ಕಾಲದಲ್ಲಿ ನಿಷೇಧಿಸಲಾಗಿತ್ತು.

ತಮಸ್ ಆಹಾರಗಳು

ತಮಸ್ ಆಹಾರಗಳು

ತಮಸ್ ಆಹಾರಗಳೆಂದರೆ ಇದರ ಸೇವನೆಯಿಂದ ಮನದಲ್ಲಿ ಋಣಾತ್ಮಕ ಭಾವನೆಗಳಿಗೆ, ಸಿಟ್ಟು, ಕ್ರೌರ್ಯ, ರೌದ್ರತೆಗಳಿಗೆ ಪುಷ್ಟಿ ನೀಡುವ ಆಹಾರಗಳಾಗಿದ್ದು ಮನದ ನಿಯಂತ್ರಣವನ್ನು ಕಳೆದುಕೊಳ್ಳುವ ಮೂಲಕ ಮಾನವ ರಾಕ್ಷಸನಾಗಿ ಮಾರ್ಪಾಡುವ ಆಹಾರಗಳಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಮಸ್ ಆಹಾರಗಳು

ತಮಸ್ ಆಹಾರಗಳು

ಉದಾಹರಣೆಗೆ ಮದ್ಯ, ನಶೆ ಏರಿಸುವ, ಅಮಲೇರಿಸುವ ಆಹಾರಗಳು. ಈ ಅಂಶಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಗಳಲ್ಲಿ ಇವೆ ಎಂದು ಹೇಳಲಾಗುತ್ತದೆ

ತಮಸ್ ಆಹಾರಗಳು

ತಮಸ್ ಆಹಾರಗಳು

ಇದೇ ಕಾರಣದಿಂದ ಹಿಂದಿನ ಕಾಲದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಕೆಲವರು ಬೆಳ್ಳುಳ್ಳಿಯನ್ನು ಔಷಧಿಯ ರೂಪದಲ್ಲಿ ಫಲಕಾರಿ ಎಂದು ಕಂಡುಕೊಂಡು ಕೆಲವು ಕಾಯಿಲೆಗಳಿಗೆ ಔಷಧಿ ಎಂದು ಸೇವಿಸತೊಡಗಿ ಕ್ರಮೇಣ ತಮ್ಮ ಆಹಾರದಲ್ಲಿ ಅಳವಡಿಸಿಕೊಂಡರು.

ಬ್ರಾಹ್ಮಣರು ಮಾತ್ರ ಈರುಳ್ಳಿ -ಬೆಳ್ಳುಳ್ಳಿಗಳು ಆಗಿಬರಲ್ಲ!

ಬ್ರಾಹ್ಮಣರು ಮಾತ್ರ ಈರುಳ್ಳಿ -ಬೆಳ್ಳುಳ್ಳಿಗಳು ಆಗಿಬರಲ್ಲ!

ಬ್ರಾಹ್ಮಣರು ಮಾತ್ರ ಇಂದಿಗೂ ತಮ್ಮ ಹಿಂದಿನ ಸಂಪ್ರದಾಯಗಳನ್ನೇ ಚಾಚೂ ತಪ್ಪದೇ ಅನುಸರಿಸಿಕೊಂಡು ಬರುತ್ತಿರುವ ಕಾರಣ ಹಿಂದಿನ ಕಟ್ಟುಪಾಡುಗಳಲ್ಲಿ ಒಂದಾದ ಈರುಳ್ಳಿ ಮತ್ತು ಬೆಳ್ಳುಳ್ಳಿಗಳ ಬಹಿಷ್ಕಾರ ಇಂದಿಗೂ ನಡೆದುಕೊಂಡು ಬಂದಿದೆ.

ಬ್ರಾಹ್ಮಣರು ಮಾತ್ರ ಈರುಳ್ಳಿ -ಬೆಳ್ಳುಳ್ಳಿಗಳು ಆಗಿಬರಲ್ಲ!

ಬ್ರಾಹ್ಮಣರು ಮಾತ್ರ ಈರುಳ್ಳಿ -ಬೆಳ್ಳುಳ್ಳಿಗಳು ಆಗಿಬರಲ್ಲ!

ಇನ್ನು ಬೆಳ್ಳುಳ್ಳಿ ವಿಷಯಕ್ಕೆ ಬಂದರೆ, ಬೆಳ್ಳುಳ್ಳಿಯ ಔಷಧೀಯ ಗುಣಗಳನ್ನು ಇತರ ಗಿಡಮೂಲಿಕೆಗಳಲ್ಲಿ ಪಡೆಯುವ ಮೂಲಕ ಬೆಳ್ಳುಳ್ಳಿಯನ್ನು ನೆಚ್ಚದಿರಲು ಇನ್ನೊಂದು ಕಾರಣವಾಗಿದೆ.

ಮನುಷ್ಯರಿಗೆ ಮನಸ್ಸಿನ ಮೇಲೆ ನಿಯಂತ್ರಣ ಕೊಂಚ ಕಷ್ಟಕರ....

ಮನುಷ್ಯರಿಗೆ ಮನಸ್ಸಿನ ಮೇಲೆ ನಿಯಂತ್ರಣ ಕೊಂಚ ಕಷ್ಟಕರ....

ಮಂಗನಿಂದ ಮಾನವ ವಿಕಾಸವಾಗಿದ್ದಾನೆ ಎಂಬ ನಂಬಿಕೆಗೆ ಪೂರಕವಾಗಿ ಮಾನವರಲ್ಲಿ ಕಾಲಕ್ಕೆ ತಕ್ಕಂತೆ ವಿಕಾಸದೊಂದಿಗೆ ಹಲವು ಬದಲಾವಣೆಗಳನ್ನೂ ಕಾಣುತ್ತಾ ಹೋಗಬಹುದು. ಏಕೆಂದರೆ ಮನುಷ್ಯರಿಗೆ ಮನಸ್ಸಿನ ಮೇಲೆ ನಿಯಂತ್ರಣ ಕೊಂಚ ಕಷ್ಟಕರವಾಗಿದೆ.

Image courtesy

ಮನುಷ್ಯರಿಗೆ ಮನಸ್ಸಿನ ಮೇಲೆ ನಿಯಂತ್ರಣ ಕೊಂಚ ಕಷ್ಟಕರ....

ಮನುಷ್ಯರಿಗೆ ಮನಸ್ಸಿನ ಮೇಲೆ ನಿಯಂತ್ರಣ ಕೊಂಚ ಕಷ್ಟಕರ....

ಆದರೆ ಬ್ರಾಹ್ಮಣರು ಕೇವಲ ಸಾತ್ವಿಕ ಆಹಾರಗಳನ್ನು ಸೇವಿಸಿ ಇತರ ಅಹಾರಗಳಾದ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮದ್ಯ ಮೊದಲಾದವುಗಳನ್ನು ಸೇವಿಸದೇ ಮನಸ್ಸಿನ ಮೇಲಿನ ನಿಯಂತ್ರಣ ಸಾಧಿಸಲು ಯತ್ನಿಸುತ್ತಾರೆ. ತನ್ಮೂಲಕ ಮಾನಸಿಕ ನೆಮ್ಮದಿ, ಶಾಂತಿ ಹಾಗೂ ಜೀವನದ ಗುರಿಯನ್ನು ಸಾಧಿಸಲು ಇಚ್ಛಿಸುತ್ತಾರೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ತಮ್ಮ ಮತ್ತು ಭಗವಂತನ ನಡುವೆ ಇರುವ ಲಕ್ಷ್ಯವನ್ನು ಬೇರೆಡೆ ಸೆಳೆಯುವ ಯಾವುದೇ ಆಹಾರವನ್ನು ಅವರು ನಿಷೇಧಿಸುತ್ತಾರೆ.

English summary

Why Brahmins Don't Eat Onions And Garlic

Brahmin is a caste in Hinduism, where majority of the people are priests and scholors. Brahmins are those people who are known to preach their culture. They are bound to their traditions and always are close to god by performing their daily set of pujas and vratas. . Let us see what was the actual reason behind this:
X
Desktop Bottom Promotion