For Quick Alerts
ALLOW NOTIFICATIONS  
For Daily Alerts

ಅಕಾಲ ಮೃತ್ಯು ತಡೆಯುವ ಯಮದೀಪ: ಯಮನಿಗೆ ಗೋಧಿ ಹಿಟ್ಟಿನ ದೀಪ ಹಚ್ಚಬೇಕು ಏಕೆ?

|

ದೀಪಾವಳಿ ಆಚರಣೆಯಲ್ಲಿ ಹಚ್ಚುವ ಯಮ ದೀಪಕ್ಕೆ ತುಂಬಾನೇ ಮಹತ್ವವಿದೆ. ಸಾಮಾನ್ಯವಾಗಿ ನಾವು ದಕ್ಷಿಣ ದಿಕ್ಕಿನಲ್ಲಿ ದೇವರಿಗೆ ದೀಪ ಹಚ್ಚುವುದಿಲ್ಲ, ಆದರೆ ಯಮ ದೀಪವನ್ನು ದಕ್ಷಿಣ ದಿಕ್ಕಿನಲ್ಲಿ ಹಚ್ಚಿಡಲಾಗುವುದು.

ಧನತ್ರಯೋದಶಿಯಂದು ಯಮ ದೀಪ ಹಚ್ಚಿಡಲಾಗುವುದು. ಈ ವರ್ಷ ನವೆಂಬರ್‌ 2ರಂದು ಧನತ್ರಯೋದಶಿ. ಯಮದೀಪ ಹಚ್ಚಿಟ್ಟರೆ ಯಮಧರ್ಮನ ಕೃಪೆಯಿಂದ ನಾವು ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು ಎಂದು ಈ ದೀಪವನ್ನು ಹಚ್ಚಿಡಲಾಗುವುದು.

ನಮ್ಮ ನಂಬಿಕೆ ಪ್ರಕಾರ ನಮ್ಮ ಪ್ರಾಣವನ್ನು ಕೊಂಡೊಯ್ಯುವವನು ಯಮಧರ್ಮ. ಈ ಯಮಧರ್ಮ ಸುರ್ಯ ಪುತ್ರ. ಯಮನು ಧನತ್ರಯೋದಶಿಯಂದು ತುಂಬಾ ಚಟುವಟಿಕೆಯಿಂದ ಇರುತ್ತಾನೆ, ಈ ದಿನ ಯಮನನ್ನು ಪೂಜಿಸಿದರೆ ಅವನು ಬೇಗ ಕರುಣೆ ತೋರುತ್ತಾನೆ ಎಂದು ಹೇಳಲಾಗುವುದು. ಹಾಗಾಗಿ ಯಮನ ಕೃಪೆಯಿಂದ ಅಕಾಲಿಕ ಮೃತ್ಯು ತಪ್ಪಿಸಬಹುದು, ಈ ಕಾರಣಕ್ಕಾಗಿ ಯಮ ದೀಪ ಹಚ್ಚಿಡಲಾಗುವುದು.

ಯಮ ದೀಪ ಹಚ್ಚಿಡಲು ಕೆಲವೊಂದು ನಿಯಮಗಳಿವೆ, ಅವುಗಳನ್ನು ಚಾಚೂತಪ್ಪದೆ ಪಾಲಿಸಬೇಕು. ದೀಪಾವಳಿಯಲ್ಲಿ ನಾವು ಮಣ್ಣಿನ ಹಣತೆಯ ದೀಪಗಳನ್ನು ಹಚ್ಚುತ್ತೇವೆ, ಆದರೆ ಯಮ ದೀಪವನ್ನು ಗೋಧಿ ಹೊಟ್ಟಿನಿಂದ ತಯಾರಿಸಿ ಹಚ್ಚಿಡಬೇಕು.

ಏಕೆ ಗೋಧಿ ಹೊಟ್ಟಿನಿಂದ ತಯಾರಿಸಿದ ದೀಪವನ್ನೇ ಬಳಸಬೇಕು, ಎಷ್ಟು ದೀಪಗಳನ್ನು ಇಡಬೇಕು, ಎಲ್ಲಿಡಬೇಕು, ಹೇಗೆ ಇಡಬೇಕು ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ಯಮ ದೀಪಕ್ಕೆ ಗೋಧಿ ಹಿಟ್ಟಿನಿಂದ ತಯಾರಿಸಿದ ದೀಪ ಬಳಸುವುದು ಏಕೆ?

ಯಮ ದೀಪಕ್ಕೆ ಗೋಧಿ ಹಿಟ್ಟಿನಿಂದ ತಯಾರಿಸಿದ ದೀಪ ಬಳಸುವುದು ಏಕೆ?

ಧನತ್ರಯೋದಶಿಯಂದು ವಿಶ್ವದಲ್ಲಿ ತಮ ಆವರ್ತನಾ ಶಕ್ತಿ ಹೆಚ್ಚು ಸಕ್ರೀಯವಾಗಿರುತ್ತೆ, ಈ ತಮ ವರ್ತನಗಳು ವ್ಯಕ್ತಿಯ ಅಕಾಲಿಕ ಮೃತ್ಯುವಿಗೆ ಕಾರಣವಾಗಿದೆ. ಗೋಧಿ ಹಿಟ್ಟಿನಿಂದ ಮಾಡಿದ ದೀಪಕ್ಕೆ ಈ ತಮ ಆವರ್ತನಾ ಶಕ್ತಿಯನ್ನು ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಅಕಾಲಿಕ ಮೃತ್ಯು ತಡೆಗಟ್ಟಲು ಯಮನಿಗೆ ಗೋಧಿ ಹಿಟ್ಟಿನ ದೀಪ ಹಚ್ಚಿಡಲಾಗುವುದು.

ಯಮ ದೀಪ ಹಚ್ಚಿಡುವ ವಿಧಾನ:

ಯಮ ದೀಪ ಹಚ್ಚಿಡುವ ವಿಧಾನ:

* ಗೋಧಿ ಹಿಟ್ಟಿನಲ್ಲಿ ತಯಾರಿಸಿದ ದೀಪ ಬಳಸಬೇಕು.

* ದೀಪಕ್ಕೆ 4 ಬತ್ತಿಯನ್ನು ಹಾಕಿ, ಎಳ್ಳೆಣ್ಣೆ ಹಾಕಿ, ದಕ್ಷಿಣ ದಿಕ್ಕಿನಲ್ಲಿ 13 ದೀಪಗಳನ್ನು ಹಚ್ಚಿಡಬೇಕು.

* ಸಂಧ್ಯಾಕಾಲದಲ್ಲಿ ಯಮ ದೀಪವನ್ನು ಮನೆಯ ಹೊರಗಡೆ ಹಚ್ಚಿಡಬೇಕು.

* ಯಮ ದೀಪವನ್ನು ಗೋಶಾಲೆ, ಬಾವಿ, ನದಿ ತೀರಗಳಲ್ಲಿ ಯಮ ದೀಪ ಹಚ್ಚಿಡಬಹುದು.

ಯಮ ದೀಪ ಹಚ್ಚಿಡುವಾಗ ಪೂಜಾ ವಿಧಾನ

ಯಮ ದೀಪ ಹಚ್ಚಿಡುವಾಗ ಪೂಜಾ ವಿಧಾನ

* ದೀಪಗಳನ್ನು ಶ್ರೀಕೃಷ್ಣ ಯಂತ್ರದ ರಂಗೋಲಿ ಬಿಡಿಸಿ ಅದರ ಮೇಲಿಡಬೇಕು.

ಮಮ ಆಪ್ಮೃತ್ಯು ವಿನಾಶಾರ್ಥಂ ಯಮದೀಪ್ದಾನಂ ಕರಿಷ್ಯೇ

ಅರ್ಥ: ನನ್ನ ಅಕಾಲಿನ ಮೃತ್ಯ ತಡೆಯಲು ಈ ಯಮ ದೀಪವನ್ನು ಹಚ್ಚುತ್ತಿದ್ದೇನೆ ಎಂದು ಹೇಳಿ ದೀಪ ಬೆಳಗಬೇಕು.

* ದೀಪಕ್ಕೆ ಶ್ರೀಗಂಧ, ಕುಂಕುಮ, ಅರಿಶಿಣಹಚ್ಚಿ, ಅಕ್ಷತೆಯನ್ನು ಹಾಕಬೇಕು.

* ದೀಪಕ್ಕೆ ಹೂಗಳನ್ನು ಅರ್ಪಿಸಬೇಕು.

ನಂತರ ಈ ಮಂತ್ರಗಳನ್ನು ಹೇಳಿ ಪ್ರಾರ್ಥಿಸಿ

ಮೃತ್ಯುನಾ ಪಾಷಾದನ್ ದಾಭ್ಯಾಂ ಕಾಲೇನ ಶ್ಯಾಮಯಾಯುತಃ |

ತ್ರಯೋದಶ್ಯಾಮ್ ದೀಪದಾನಾತ್ ಸೂರ್ಯಜಃ ಪ್ರಿಯತಾಂ ಮಮ |

ಅರ್ಥ: ಧನತ್ರಯೋಧಶಿಯಂದು ಸುರ್ಯನ ಪುತ್ರನಾದ ಯಮ ದೇವನಿಗೆ ಈ ದೀಪ ಹಚ್ಚುತ್ತಿದ್ದೇನೆ. ಯಮರಾಯನು ನನ್ನ ಅಕಾಲಿಕ ಮೃತ್ಯು ತಡೆದು ನನಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಬೇಕು.

* ನಂತರ ದೀಪಕ್ಕೆ ನಮಸ್ಕರಿಸಬೇಕು.

* ಅದಾದ ಬಳಿಕ ಸ್ವಲ್ಪ ನೀರನ್ನು ಕೈಯಲ್ಲಿ ತೆಗೆದು ಅರ್ಪಿಸಬೇಕು.

ಯಮದೀಪ ದಕ್ಷಿಣ ದಿಕ್ಕಿನಲ್ಲಿ ಇಡುವುದರ ಮಹತ್ವ

ಯಮದೀಪ ದಕ್ಷಿಣ ದಿಕ್ಕಿನಲ್ಲಿ ಇಡುವುದರ ಮಹತ್ವ

* ಅಷ್ಟದಿಕ್ಪಾಲರದಲ್ಲಿ ಒಬ್ಬನಾಗಿರುವ ಯಮರಾಯ ದಕ್ಷಿಣ ದಿಕ್ಕಿನ ಅಧಿಪತಿ.

* ದಕ್ಷಿನ ದಿಕ್ಕಿನಲ್ಲಿ ದೀಪವನ್ನು ಬೆಳಗುವುದರಿಂದ ಆ ಬೆಳಕು ಯಮನನ್ನು ಆಕರ್ಷಿಸುತ್ತದೆ.

* ಯಮನ ಶಕ್ತಿಯಿಂದಾಗಿ ಅಲ್ಲಿರುವ ಋಣಾತ್ಮಕ ಶಕ್ತಿ ಇಲ್ಲವಾಗುವುದು, ವ್ಯಕ್ತಿ ಅಕಾಲಿಕ ಮೃತ್ಯುವಿನಿಂದ ಪಾರಾಗುತ್ತಾನೆ.

English summary

Why Are Lamps Made From Wheat Flour Used For Yamadipadana In Kannada

Why are lamps made from wheat flour used for Yamadipadana in Kannada, read on...
Story first published: Saturday, October 30, 2021, 9:36 [IST]
X
Desktop Bottom Promotion