For Quick Alerts
ALLOW NOTIFICATIONS  
For Daily Alerts

ಮೌಂಟ್ ಬ್ಯಾಟನ್ ಭಾರತದ ಸ್ವಾತಂತ್ರ್ಯಕ್ಕೆ ಆಗಸ್ಟ್ 15 ಏಕೆ ಆಯ್ಕೆ ಮಾಡಿದ ಗೊತ್ತೇ?

|

ಭಾರತೀಯರಾದ ನಮಗೆಲ್ಲಾ ಆಗಸ್ಟ್‌ 15 ಅಂದರೆ ಸಡಗರ, ಸಂಭ್ರಮ ಜೊತೆಗೆ ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ ಮಹಾನ್‌ ವ್ಯಕ್ತಿಗಳನ್ನು ನೆನೆದಾಗ ಅವರ ಬಗ್ಗೆ ಕೃತಜ್ಞತಾ ಭಾವ. ನಮ್ಮ ದೇಶದ ಬಾವುಟ ಹಾರಿಸುವಾಗ ದೇಶಪ್ರೇಮದ ರೋಮಾಂಚನ.

ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ 74 ನೇ ಸ್ವಾತಂತ್ರ್ಯ ದಿನದಂದು ಸಶಸ್ತ್ರ ಪಡೆಗಳಿಗೆ ಗೌರವ. | Oneindia Kannada
Why 15th August is Celebrated as Independence Day of India? | Why Did Mountbatten Choose The Day August 15

ನಮಗೆ ಆಗಸ್ಟ್ 15ಕ್ಕೆ ಸ್ವತಂತ್ರ ದೊರೆಯಿತು. ಆದ್ದರಿಂದ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತೇವೆ ಎಂದು ನಮಗೆಲ್ಲಾ ಗೊತ್ತಿದೆ . ಆದರೆ ಭಾರತಕ್ಕೆ ಆಗಸ್ಟ್ 15ರಂದೇ ಸ್ವಾತಂತ್ರ್ಯ ನೀಡಲು ಬ್ರಿಟಿಷರು ತೀರ್ಮಾನಿಸಿದ್ದೇಕೆ, ಬ್ರಿಟಿಷ್ ಅಧಿಕಾರಿ ಮೌಂಟ್‌ ಬ್ಯಾಟನ್‌ 1948ರಲ್ಲಿ ಭಾರತವನ್ನು ಬಿಟ್ಟು ಹೋಗಬೇಕೆಂದ ತನ್ನ ತೀರ್ಮಾನವನ್ನು ಬದಲಾಯಿಸಿ ಆಗಸ್ಟ್ 15ರಂದೇ ಭಾರತಕ್ಕೆ ಸ್ವಾತಂತ್ರ್ಯ ಏಕೆ ನೀಡಿದ ಎಂಬ ಬಗ್ಗೆ ನಮ್ಮ ಇತಿಹಾಸದ ತುಣುಕು ಇಲ್ಲಿ ನೀಡಲಾಗಿದೆ ನೋಡಿ.

ಜನವರಿ 26ಕ್ಕೆ ಪೂರ್ಣ ಸ್ವರಾಜ್ಯಕ್ಕೆ ಕರೆ

ಜನವರಿ 26ಕ್ಕೆ ಪೂರ್ಣ ಸ್ವರಾಜ್ಯಕ್ಕೆ ಕರೆ

1929ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರು ಪೂರ್ಣ ಸ್ವರಾಜ್ಯಕ್ಕೆ ಕರೆ ನೀಡಿ ಜನವರಿ 26 ಸ್ವಾತಂತ್ರ್ಯ ದಿನಾಚರಣೆಯಾಗಿ ಆಯ್ಕೆ ಮಾಡಿದರು. ಅಲ್ಲಿಂದ ಕಾಂಗ್ರೆಸ್ ಪಕ್ಷ ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಆ ದಿನದಂದೇ ಸ್ವಾತಂತ್ರ್ಯ ದಿನಾಚರಣೆ ಎಂದು ಆಚರಿಸಲಾಗುತ್ತಿತ್ತು. ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಭಾರತ ಸಾರ್ವಭೌಮತ್ವ ಪಡೆದ ದಿನವನ್ನು ಗಣರಾಜ್ಯೋತ್ಸವ ದಿನ ಎಂದು ಆಚರಿಸಲಾಗುತ್ತಿದೆ.

ಆಗಸ್ಟ್ 15 ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹೇಗಾಯ್ತು?

ಆಗಸ್ಟ್ 15 ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹೇಗಾಯ್ತು?

ಬ್ರಿಟಿಷ್ ಅಧಿಕಾರಿ ಮೌಂಟ್ ಬ್ಯಾಟನ್ ಬ್ರಿಟಿಷ್ ಪಾರ್ಲಿಮೆಂಟ್‌ಗೆ ಭಾರತಕ್ಕೆ ಅಧಿಕಾರವನ್ನು ಜೂನ್‌ 30, 1948ರಂದು ವರ್ಗಾಯಿಸುವಂತೆ ಸೂಚಿಸಲಾಗಿತ್ತು. ಇದರ ಬಗ್ಗೆ ಸಿ. ರಾಜಗೋಪಾಲಚಾರಿಯವರ ಮಾತುಗಳಲ್ಲಿ ಹೇಳುವುದಾದರೆ ಅಷ್ಟರವರೆಗೆ ಬ್ರಿಟಿಷರು ಕಾದಿದ್ದರೆ ಅಧಿಕಾರ ವರ್ಗಾಯಿಸಲು ಅವರ ಕೈಯಲ್ಲಿ ಅಧಿಕಾರವೇ ಇರುತ್ತಿರಲಿಲ್ಲ. ಆದ್ದರಿಂದ 1947ಕ್ಕೆ ಅಧಿಕಾರ ಹಸ್ತಾಂತರಿಸಿದರು.

ವಸಾಹುತುಶಾಹಿ ಆಡಳಿತದ ಕೊನೆ

ವಸಾಹುತುಶಾಹಿ ಆಡಳಿತದ ಕೊನೆ

ಮೌಂಟ್ ಬ್ಯಾಟನ್ ಮೊದಲು ನಿಗದಿ ಮಾಡಿದ್ದ ದಿನಾಂಕಕ್ಕೆ ಯಾವುದೇ ರಕ್ತಪಾತವಿಲ್ಲದೆ, ಅಧಿಕಾರ ಹಸ್ತಾಂತರ ಮಾಡುವುದಾಗಿ ಹೇಳಿದ್ದ. ಆದರೆ ಆತನ ಮಾತುಗಳು ಸುಳ್ಳಾದವು, ನಂತರ ಆತ ತಮ್ಮ ಆಡಳಿತವನ್ನು ಸಮರ್ಥನೆ ಮಾಡಿಕೊಳ್ಳಲು ವಸಾಹತುಶಾಹಿ ಆಡಳಿತ ಕೊನೆಯಾಗುವಾಗ ಎಲ್ಲೆಲ್ಲಿ ಗಲಭೆ, ರಕ್ತ ಹರಿಯಿತೋ ಅದು ಅವರು ತೆತ್ತ ಬೆಲೆ' ಎಂದ.

ಭಾರತದಿಂದ ಬ್ರಟಿಷರು ನಿರ್ಗಮಿಸಿದ ದಿನ

ಭಾರತದಿಂದ ಬ್ರಟಿಷರು ನಿರ್ಗಮಿಸಿದ ದಿನ

ಮೌಂಟ್‌ ಬ್ಯಾಟನ್ ಭಾರತದ ಸ್ವಾತಂತ್ರ್ಯ ಬಿಲ್ ಅನ್ನು ಬ್ರಿಟಿಷ್ ಹೌಸ್ ಆಫ್‌ ಕಾಮನ್‌ಗೆ ಜುಲೂ 4, 1947ರಂದು ಸಲ್ಲಿಸಿತು. ಇದು ಭಾರತದಲ್ಲಿ ಬ್ರಿಟಿಷರ ಆಡಳಿಕ್ಕೆ ಆಗಸ್ಟ್ 15, 1947ಕ್ಕೆ ಕೊನೆಗೊಳಿಸುವಂತೆ ಸೂಚಿಸಿತು. ಹೀಗಾಗಿ ಭಾರತ, ಪಾಕಿಸ್ತಾನ ಎರಡು ದೇಶಗಳಿಗೆ ಸ್ವಾತಂತ್ರ್ಯ ಸಿಕ್ಕಿತು.

ಪಾಕಿಸ್ತಾನದವರಿಗೆ ನಮಗಿಂತ ಮೊದಲು ಸ್ವಾತಂತ್ರ್ಯ ಸಿಕ್ಕಿತೇ?

ಪಾಕಿಸ್ತಾನದವರಿಗೆ ನಮಗಿಂತ ಮೊದಲು ಸ್ವಾತಂತ್ರ್ಯ ಸಿಕ್ಕಿತೇ?

ಪಾಕಿಸ್ತಾನದಲ್ಲಿ ಆಗಸ್ಟ್ 14ಕ್ಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುವುದು. ಹಾಗಂತ ಅವರಿಗೆ ಮೊದಲು ಸಿಕ್ಕಿತೇ ಖಂಡಿತ ಇಲ್ಲ. ಭಾರತ ಹಾಗೂ ಪಾಕಿಸ್ತಾನಕ್ಕೆ ಆಗಸ್ಟ್ 15ರಂದೇ ಸ್ವಾತಂತ್ರ್ಯ ಲಭಿಸಿತು. ಪಾಕಿಸ್ತಾನ ದೇಶವನ್ನು ಉದ್ದೇಶಿಸಿ ಮಾತನಾಡಿದ ಜಿನ್ನಾ' ಆಗಸ್ಟ್ 15 ಪಾಕಿಸ್ತಾನ ಹುಟ್ಟಿದ ದಿನ ಹಾಗೂ ಸಾರ್ವಭೌಮತ್ವ ಪಡೆದ ದಿನವೆಂದು' ಎಂದು ಹೇಳಿದ್ದಾರೆ. ಆದರೆ 1948ರಿಂದ ಪಾಕಿಸ್ತಾನದಲ್ಲಿ ಆಗಸ್ಟ್ 14ಕ್ಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ, 1947ರಲ್ಲಿ ಕರಾಚಿಯಲ್ಲಿ ಅಧಿಕಾರ ಹಸ್ತಾಂತರ ಸಮಾರಂಭ ನಡೆದಿತ್ತು ಹಾಗೂ ಆ ದಿನ ಮುಸ್ಲಿಂರ ಪವಿತ್ರ ಹಬ್ಬವಾದ ರಂಜಾನ್ ಆಗಿತ್ತು. ಹಾಗಾಗಿ ಅವರು ಆಗಸ್ಟ್ 14ಕ್ಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಾರೆ ವಿನಃ ನಮಗಿಂತ ಮೊದಲು ಅವರಿಗೆ ಸ್ವಾತಂತ್ರ್ಯ ಲಭಿಸಿಲ್ಲ.

English summary

Why 15th August is Celebrated as Independence Day of India? | Why Did Mountbatten Choose The Day August 15

Do you know why 15th August is Celebrated as Independence Day of India? | Why Did Mountbatten Choose The Day August 15?
X
Desktop Bottom Promotion