For Quick Alerts
ALLOW NOTIFICATIONS  
For Daily Alerts

ಸಾಂಟಾಕ್ಲಾಸ್‌ ಯಾರು? ಅವರ ನಿಜವಾದ ಹೆಸರೇನು, ಅವರ ಇತಿಹಾಸವೇನು ಗೊತ್ತೇ?

|

ಕ್ರಿಸ್ಮಸ್‌ನಲ್ಲಿ ಮಕ್ಕಳಿಗೆ ಸಾಂಟಾ ಕ್ಲಾಸ್‌ ಕಂಡರೆ ಸಾಕು ತುಂಬಾನೇ ಅಚ್ಚುಮೆಚ್ಚು. ಬಿಳಿ ಗಡ್ಡ, ಕೆಂಪು ಮಕ್ಮಲ್ ಟೋಪಿ, ಡೊಳ್ಳು ಹೊಟ್ಟೆ, ತನ್ನ ಎರಡು ತೋಳುಗಳಲ್ಲಿ ಜೋಳಿಗೆ, ಅದರಲ್ಲಿ ತುಂಬಾ ಸಿಹಿ-ತಿಂಡಿ ಉಡುಗೊರೆಗಳು, ಮಕ್ಕಳಿಗೆ ಇನ್ನೇನು ಬೇಕು, ಅವನನ್ನು ಕಂಡ ತಕ್ಷಣ ಮಕ್ಕಳ ಮುಖ ಅರಳುವುದು, ಸಾಂಟಾ ಬಂದ... ಸಾಂಟಾ ಬಂದ ಎಂದು ಕುಣಿದು ಕುಪ್ಪಳಿಸಲಾರಂಭಿಸುವುದು.

ಅಲ್ಲದೆ ಕ್ರಿಸ್ಮಸ್‌ ಹಿಂದಿನ ದಿನ ಮಕ್ಕಳು ಕೂಡ ಸಾಂಟಾ ಕ್ಲಾಸ್‌ ಉಡುಪು ಧರಿಸಿ ಸಂಭ್ರಮಿಸುತ್ತಾರೆ, ಸಾಂಟಾ ಕ್ಲಾಸ್‌ ಬರಿಗೈಯಲ್ಲಿ ಬರುವುದೇ ಇಲ್ಲ, ಆದ್ದರಿಂದಲೇ ಮಕ್ಕಳಿಗೆ ಸಾಂಟಾ ಕ್ಲಾಸ್‌ ಕಂಡರೆ ಅಷ್ಟೊಂದು ಪ್ರೀತಿ. ದೊಡ್ಡವರು ಸಾಂಟಾಕ್ಲಾಸ್‌ನನ್ನು ದೇವಧೂತನಾಗಿ ಕಾಣುತ್ತಾರೆ.

ಈ ಸಾಂಟಾಕ್ಲಾಸ್ ಯಾರು? ಕ್ರಿಸ್ಮಸ್‌ ದಿನದ ಹಿಂದೆ ಇವನು ಬರುವುದು ಏಕೆ? ಅವನ ಇತಿಹಾಸವೇನು ಎಂದು ನೋಡೋಣ ಬನ್ನಿ:

ಸಾಂಟಾಕ್ಲಾಸ್ ಯಾರು?

ಸಾಂಟಾಕ್ಲಾಸ್ ಯಾರು?

ಸಾಂಟಾಕ್ಲಾಸ್‌ನ ಮೂಲ ಹೆಸರು ಸಂತ ನಿಕೋಲಸ್‌, ಆತ ಆಗರ್ಭ ಶ್ರೀಮಂತ. ಈತನು ನಾಲ್ಕನೇ ಶತಮಾನದಲ್ಲಿ ಜನಿಸಿದ ಅಂತ ಹೇಳಲಾಗುತ್ತದೆ. ಈತನಿಗೆ ಬಡವರು-ನಿರ್ಗತಿಕರನ್ನು ಕಂಡರೆ ತುಂಬಾ ಕರುಣೆ, ಅವರಿಗೆ ಸದಾ ಸಹಾಯ ಮಾಡುತ್ತಿದ್ದ. ಈತ ತನ್ನ ಪೋಷಕರನ್ನು ಕಳೆದುಕೊಮಡ ಬಳಿಕ ತನ್ನೆಲ್ಲಾ ಆಸ್ತಿಯನ್ನು ರಹಸಯವಾಗಿ ಬಡವರಿಗೆ ಪ್ರತಿದಿನ ದಾನ ಮಾಡುತ್ತಾ ಬರುತ್ತಾನೆ.. ಜನರಿಗೆ ಹಲವಾರು ರೀತಿಯಲ್ಲಿ ರಹಸ್ಯವಾಗಿ ಸಹಾಯ ಮಾಡುತ್ತಾನೆ. ಯಾರಿಗೂ ತಮಗೆ ಸಹಾಯ ಮಾಡುತ್ತಿರುವುದು ಯಾರು ಎಂದು ಗೊತ್ತೇ ಇರಲಿಲ್ಲ.. ಒಬ್ಬ ಬಡವನಿದ್ದ ಅವನಿಗೆ ತನ್ನ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುವ ಶಕ್ತಿ ಇರಲಿಲ್ಲ ಇದನ್ನರಿತ ಸಾಂಟಾ ಕ್ಲಾಸ್‌ ಅವರಿಗೆ ಸಹಾಯ ಮಾಡುತ್ತಾನೆ, ಆಗ ಆ ಬಡವನಿಗೆ ತಮಗೆ ಸಹಾಯ ಮಾಡಿದ್ದು ಯಾರು ಎಂದು ತಿಳಿಯುತ್ತದೆ, ಅಲ್ಲಿಂದ ಜನರಿಗೆ ತಮಗೆ ಸೀಕ್ರೆಟ್ ಗಿಫ್ಟ್ಸ್ ಬಂದರ ಅದು ಸಾಂಟಾಕ್ಲಾಸ್‌ ಕೊಟ್ಟಿದ್ದು ಎಂದು ಹೇಳುತ್ತಿದ್ದರು.

ಕ್ರಿಸ್ಮಸ್‌ನಲ್ಲಿ ಸಾಂಟಾಕ್ಲಾಸ್‌ ಸಂಪ್ರದಾಯ

ಕ್ರಿಸ್ಮಸ್‌ನಲ್ಲಿ ಸಾಂಟಾಕ್ಲಾಸ್‌ ಸಂಪ್ರದಾಯ

ಸಾಂಟಾ ಕ್ಲಾಸ್‌ ಮರಣವೊಂದಿದ ಬಳಿಕ ಚರ್ಚ್‌ ಅನುಯಾಯಿಗಳು ಈ ಅಭ್ಯಾಸವನ್ನು ಮುಂದುವರೆಸಿದರು, ಹಾಗೇ ಕ್ರಿಸ್ಮಸ್‌ ಹಿಂದಿನ ದಿನ ಸಾಂಟಾಕ್ಲಾಸ್ ಬಂದು ಮಕ್ಕಳಿಗೆ ಉಡುಗೊರೆ ನೀಡುವ ಸಂಪ್ರದಾಯ ಬಂತು.

ಡಚ್‌ನ ವಸಾಹತುಗಾರರು ಈ ಸಾಂಟಾಕ್ಲಾಸ್‌ ಸಾಂಪ್ರದಾಯವನ್ನು ಪಾಲಿಸುತ್ತಾ ಬರುತ್ತಿದ್ದರು, ನಂತರ ಅವರು 17ನೇ ಶತಮಾನದಲ್ಲಿ ನ್ಯೂಯಾರ್ಕ್‌ನಲ್ಲಿ ನೆಲೆ ನಿಲ್ಲುತ್ತಾರೆ, ಅವರು ಡಿಸೆಂಬರ್ 6ರ ಹಬ್ಬದಲ್ಲಿ ಈ ಸಾಂಟಾಕ್ಲಾಸ್ ಆಚರಣೆ ಮಾಡುತ್ತಾ ಬರುತ್ತಿದ್ದರು. 19ನೇ ಶತಮಾನದಲ್ಲಿ The Night Before Christmasನಲ್ಲಿ ಸಾಂಟಾಕ್ಲಾಸ್‌ ಕ್ರಿಸ್ಮಸ್‌ ಹಿಂದಿನ ದಿನ ಬಂದು ಮಕ್ಕಳಿಗೆಲ್ಲಾ ಸೀಕ್ರೆಟ್ ಗಿಫ್ಟ್ಸ್ ನೀಡಿದ ಎಂದು ಹೇಳಲಾಗಿದೆ, 20ನೇ ಶತಮಾನದಲ್ಲಿ ಕೋಕಾ ಕೋಲಾ ಕಂಪನಿ ಜಾಹೀರಾತಿನಲ್ಲಿ ಸಾಂಟಾಕ್ಲಾಸ್‌ ಗೆ ಬಿಳಿ ಗಡ್ಡ, ಕೆಂಪು ಟೋಪಿ ಹಾಕಿ ಪರಿಚಯಿಸಲಾಯಿಸಿತು, ಅಲ್ಲಿಂದ ಸಾಂಟಾಕ್ಲಾಸ್‌ ಅಂದರೆ ಬಿಳಿ ಗಡ್ಡದ ಕೆಂಪು ಟೋಪಿ, ಕೆಂಪು ವಸ್ತ್ರ ಧರಿಸಿ ಸಾಂಟಾಕ್ಲಾಸ್‌ ಆಗಿ ಬಂದು ಮಕ್ಕಳನ್ನು ರಂಜಿಸುತ್ತಾರೆ.

ಜೀಸಸ್‌ ಮರಣವೊಂದುವ ಮುನ್ನವೇ ಸಾಂಟಾಕ್ಲಾಸ್‌ ಇದ್ದ

ಜೀಸಸ್‌ ಮರಣವೊಂದುವ ಮುನ್ನವೇ ಸಾಂಟಾಕ್ಲಾಸ್‌ ಇದ್ದ

ಸಾಂಟಾಕ್ಲಾಸ್‌ ಜೀಸಸ್ ಮರಣವೊಂದುವ 280 ವರ್ಷಗಳ ಮುಂಚೆಯೇ ಇದ್ದ ಎಂದು ಹೇಳಲಾಗುವುದು. ಈತ ಯಾವಾಗಲೂ ಖುಷಿಯಾಗಿ ಇರುತ್ತಿದ್ದ, ವಿಶೇಷ ಉಡುಪು ಧರಿಸಿ ಮಕ್ಕಳನ್ನು ಸಂತೋಷ ಪಡಿಸುತ್ತಿದ್ದ ಎನ್ನಲಾಗುತ್ತಿದೆ.

ಆಗಿನ ಕಾಲದಲ್ಲಿಯೇ ಟರ್ಕಿಯಲ್ಲಿ ಸಾಂಟಾಕ್ಲಾಸ್‌ ಹೆಸರಿನಲ್ಲಿ ಅಂಚೆ ಚೀಟಿಗಳನ್ನು ಹೊರ ತಂದಿದ್ದರು, ಮೈರಾದಲ್ಲಿ ಸಾಂಟಾಕ್ಲಾಸ್ ಸಮಾಧಿ ಇಂದಿಗೂ ಇದೆ. ಸಾಂಟಾಕ್ಲಾಸ್ ಅವಶೇಷಗಳನ್ನು 11ನೇ ಶತಮಾನದಲ್ಲಿ ಇಟಲಿಯ ಬಾರಿ ಎಂಬ ಸ್ಥಳಕ್ಕೆ ಕೊಂಡೊಯ್ದು ಸ್ಮಾರಕ ನಿರ್ಮಿಸಿದ್ದಾರೆ. ಅಮೆರಿಕದಲ್ಲಿ ಸೈಂಟ್ ನಿಕೋಲಸ್ ಎಂಬ ಪುಟ್ಟ ಊರೇ ಇದೆ, ಈ ಊರಿನಿಂದ ಕ್ರಿಸ್ಮಸ್ ಸಮಯದಲ್ಲಿ ಜಗತ್ತಿನ ಹಲವು ಕಡೆಗೆ ಬಡ ಮಕ್ಕಳಿಗೆ ಉಡುಗೊರೆಗಳನ್ನು ಕಳುಹಿಸಲಾಗುವುದು.

ಹೀಗೆ ಸಾಂಟಾಕ್ಲಾಸ್ 4ನೇ ಶತಮಾನದಲ್ಲಿ ಜನಿಸಿದರೂ ತನ್ನ ದಾನದಿಂದಾಗಿ 21ನೇ ಶತಮಾನದಲ್ಲಿಯೂ ಜನರು ಅವನನ್ನು ನೆನಸಿಕೊಳ್ಳುವಂತಾಗಿದೆ.

English summary

Christmas : Who is Santa Claus? Know History, Real name, Legend, & Facts in kannada

Who is Santa Claus? Know History, Real name, Legend, & Facts in kannada, Read on...
X
Desktop Bottom Promotion