For Quick Alerts
ALLOW NOTIFICATIONS  
For Daily Alerts

ಇಕೋ ಉತ್ತರಾಧಿಕಾರಿಯಾದದು ಹೇಗೆ?

|
Kannada Zen story
ಮೊಕುಜನ್ಸ್ ವಿಸಾಜ್ ಎಂಬ ಝೆನ್ ಗುರುಗಳಿದ್ದರು. ಕೊನೆಯವರೆಗೂ ಅವರ ಮುಖದಲ್ಲಿ ನಗುವೆಂಬುದು ಯಾರೂ ನೋಡಿರಲಿಲ್ಲ. ಭೂಮಿಯಲ್ಲಿ ಅವರ ಕೊನೆಯ ದಿನ ಸಮೀಪಿಸಿತು.

ಆ ದಿನ ತನ್ನ ಶಿಷ್ಯರನ್ನು ಕರೆದು "ನಾನು ನಿಮಗೆ ತುಂಬಾ ವರ್ಷಗಳವರೆಗೆ ಕಲಿಸಿದ್ದೇನೆ. ಈಗ ನೀವು ಝೆನ್ ಧರ್ಮದ ಬಗ್ಗೆ ನಿಮಗೆಷ್ಟು ಮನವರಿಕೆಯಾಯಿತು ಎಂದು ಹೇಳಿ, ಯಾರು ಸರಿಯಾಗಿ ಹೇಳುತ್ತೀರೊ ಅವರಿಗೆ ನನ್ನ ತಟ್ಟೆ ಕೊಡುತ್ತೇನೆ. ಅವರು ನನ್ನ ಉತ್ತರಾಧಿಕಾರಿಗಳು ಆಗುವಿರಿ ಎಂದನು.

ಯಾರೂ ಏನೂ ಮಾತನಾಡದೆ ಮುಖ-ಮುಖ ನೋಡಿಕೊಂಡು ಸುಮ್ಮನೆ ನಿಂತರು. ಅವರಲ್ಲಿ ಒಬ್ಬ ಇಕೋ ಎಂಬ ಶಿಷ್ಯ ಇದ್ದ. ಅವನು ಅನೇಕ ವರ್ಷಗಳಿಂದ ಗುರುವಿನ ಬಳಿಯೇ ಇದ್ದನು. ಅವನು ಗುರುಗಳ ಹತ್ತಿರ ಬಂದು ಔಷಧಿ ಇರುವ ಕಪ್ ಅನ್ನು ಗುರುಗಳ ಬಳಿ ಇಟ್ಟನು.

ಗುರುಗಳು ಮುಖವನ್ನು ಮತ್ತಷ್ಟು ಗಂಟಕ್ಕಿಕೊಂಡು ಇದಾ ನೀವು ಕಲಿತಿದ್ದು ಎಂದು ಕಪ್ ಅನ್ನು ಹಿಂದೆ ತಳ್ಳಿದರು. ಆದರೆ ಅವನು ಪುನಃ ವಿನಯದಿಂದ ಆ ಕಪ್ ತಂದು ಗುರುಗಳ ಸಮೀಪ ಇಟ್ಟನು. ಗುರುಗಳಿಗೆ ಭಾರೀ ಖುಷಿಯಾಯಿತು. ಅವರ ಮುಖದಲ್ಲಿ ಮೊದಲು ಬಾರಿಗೆ ಮಂದಹಾಸ ಕಂಡು ಬಂದಿತು. ಇಕೋನನ್ನು ಕರೆದು ಅವನಿಗೆ ತಟ್ಟೆ ನೀಡಿ " \ನೀನೆ ನನ್ನ ಉತ್ತರಾಧಿಕಾರಿಯಾಗಲು ಸಾಧ್ಯ" ಎಂದು ಹೇಳಿ ಹರೆಸಿದನು.

English summary

Kannada Zen story | Inspirational short stories | ಝೆನ್ ಕಥೆ : ಇಕೋ ಉತ್ತರಾಧಿಕಾರಿಯಾದದು ಹೇಗೆ?

Mokugen's visage never wore a smile until his last day on the earth. When the time approached for him to leave the body he told his pupils : " Since you have studied ten years of Zen under me, show me your real interpretation of Zen.
X
Desktop Bottom Promotion