For Quick Alerts
ALLOW NOTIFICATIONS  
For Daily Alerts

2022ರಲ್ಲಿ ಹಜ್‌ ಯಾತ್ರೆ ಯಾವಾಗ? ಮೆಕ್ಕಾದ ಕಾಬಾದ ವಿಶೇಷತೆಯೇನು?

|

ಹಜ್‌ ಮುಸ್ಲಿಂರಿಗೆ ತುಂಬಾ ಪವಿತ್ರವಾದ ಸ್ಥಳ, ಇಲ್ಲಿಗೆ ಪ್ರತೀವರ್ಷ ಲಕ್ಷಾಂತರ ಜನರು ಭೇಟಿಕೊಡುತ್ತಾರೆ. ಹಜ್‌ ಯಾತ್ರೆ ಮಾಡುವುದು ಮುಸ್ಲಿಂ ಸಮುದಾಯದಲ್ಲಿ ತುಂಬಾ ಪವಿತ್ರವಾದ ಕಾರ್ಯವಾಗಿದೆ. ಕೋವಿಡ್‌ ಸಾಂಕ್ರಮಿಕದಿಂದಾಗಿ ಎರಡು ವರ್ಷಗಳಿಂದ ಹಜ್‌ ಯಾತ್ರೆಗೆ ಅವಕಾಶವಿರಲಿಲ್ಲ, ಈ ವರ್ಷ ಪವಿತ್ರ ಹಜ್‌ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ.

ಹಜ್‌ ಯಾತ್ರೆ ಮಾಡಬೇಕೆಂಬುವುದು ಪ್ರತಿಯೊಂದು ಮುಸ್ಲಿಂನ ಕನಸಾಗಿರುತ್ತೆ. ಯಾರು ದೈಹಿಕವಾಗಿ ಹಾಗೂ ಆರ್ಥಿಕವಾಗಿ ಸದೃಢವಾಗಿರುತ್ತಾರೋ ಅವರು ಹಜ್‌ ಯಾತ್ರೆ ಮಾಡುತ್ತಾರೆ. ಎರಡು ವರ್ಷದಿಂದ ಹಜ್‌ ಯಾತ್ರೆ ನಡೆಯದಿದ್ದ ಕಾರಣ ಈ ವರ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ಊಹಿಸಲಾಗಿದೆ.

2022ರಲ್ಲಿ ಹಜ್‌ ಯಾತ್ರೆ ಯಾವಾಗ? ಹಜ್‌ ಯಾತ್ರೆಯ ಮಹತ್ವವೇನು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

2022ರಲ್ಲಿ ಹಜ್‌ ಯಾತ್ರೆ ಯಾವಾಗ?

2022ರಲ್ಲಿ ಹಜ್‌ ಯಾತ್ರೆ ಯಾವಾಗ?

ಈ ವರ್ಷ ಹಜ್‌ ಯಾತ್ರೆ ಜುಲೈ 7, ಗುರುವಾರದಂದು ಪ್ರಾರಂಭವಾಗಲಿದೆ. ಈ ಹಜ್‌ ಯಾತ್ರೆ ಜುಲೈ 12, ಮಂಗಳವಾರ ಸಂಜೆ ಮುಕ್ತಾಯವಾಗಲಿದೆ.

ಇಸ್ಲಾಮಿಕ್ ಕ್ಯಾಲೆಂಡರ್‌ನ 12ನೇ ಮತ್ತು ಕೊನೆಯ ತಿಂಗಳಾದ ಧು ಅಲ್-ಹಿಜ್ಜಾದ 8ನೇ ದಿನದಂದು ಹಜ್‌ ಯಾತ್ರೆ ಬರುತ್ತದೆ.

ಹಜ್‌ ಯಾತ್ರೆಯನ್ನು ಯಾರು ಮಾಡುತ್ತಾರೆ?

ಹಜ್‌ ಯಾತ್ರೆಯನ್ನು ಯಾರು ಮಾಡುತ್ತಾರೆ?

ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಹಜ್ ಯಾತ್ರೆ ಮಾಡಬೇಕೆಂಬುವುದು ಪ್ರತಿಯೊಬ್ಬ ಮುಸ್ಲಿಂನ ಬಯಕೆಯಾಗಿರುತ್ತದೆ. ಪುರುಷರು ಹಾಗೂ ಮಹಿಳೆಯರು ಹಜ್‌ ಯಾತ್ರೆಗೆ ಹೋಗುತ್ತಾರೆ. ಯಾತ್ರೆಯ ಬಳಿಕ ಯಾತ್ರಿಗಳು ತಮ್ಮ ಕೂದಲು ಸಂಪೂರ್ಣವಾಗಿ ಕತ್ತರಿಸುತ್ತಾರೆ. ಮಹಿಳೆಯರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸುತ್ತಾರೆ.

ಹಜ್‌ ಯಾತ್ರೆಯ ಮಹತ್ವ

ಹಜ್‌ ಯಾತ್ರೆಯ ಮಹತ್ವ

ಹಜ್‌ ಯಾತ್ರೆ ಮುಸ್ಲಿಂರ ಪ್ರಮುಖವಾದ ಸಂಪ್ರದಾಯವಾಗಿದೆ. ವಿಶ್ವದ ಎಲ್ಲಾ ಕಡೆಯ ಮುಸ್ಲಿಂರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಮುಖ್ಯ ಹಜ್‌ ಅನ್ನು ಬಕ್ರೀದ್‌ ದಿನದಂದು ಆಚರಿಸಲಾಗುವುದು. ಇದು ತ್ಯಾಗದ ಸಂಕೇತದ ಹಬ್ಬವಾಗಿದೆ. ಹಜ್ ಮೆಕ್ಕಾದಲ್ಲಿರುವ ಪವಿತ್ರವಾದ ಕಾಬಾಕ್ಕೆ ತೆರಳುವುದಾಗಿದೆ. ಯಾತ್ರಿಕರು ಜಮ್ರಾಹೆ ಉಕ್ವಾ, ಜಮ್ರಾಹೆ ವುಸ್ತಾ ಮತ್ತು ಜಮ್ರಾಹೆ ಉಲಾ ಸ್ಥಳಗಳಲ್ಲಿ ನಿರ್ಮಿಸಲಾದ ಮೂರು ವಿಭಿನ್ನ ಕಂಬಗಳ ಮೇಲೆ ಕಲ್ಲುಗಳನ್ನು ಎಸೆಯುವ ಸಂಪ್ರದಾಯವಿದೆ.

ಕುರಾನ್‌ನ ಪ್ರಕಾರ

ಕುರಾನ್‌ನ ಪ್ರಕಾರ

ಕುರಾನ್‌ನ ಪ್ರಕಾರ ಈ ಮೂರು ಸ್ಥಳಗಳಲ್ಲಿ ಹಜರತ್‌ ಇಬ್ರಾಹಿಂ ತನ್ನ ಮಗನನ್ನು ಬಲಿ ಪಡೆಯಲು ಮುಂತಾದ ಸೈತಾನನ್ನು ತಡೆಯಲು ಯತ್ನಿಸಿದಾಗ ಅವನ ಮೇಲೆ ಕಲ್ಲು-ಮಣ್ಣುಗಳನ್ನು ಎಸೆಯಲಾಯಿತು ಎಂದು ಹೇಳಲಾಗಿದೆ. ಹಾಗಾಗಿ ಹಜ್‌ ಯಾತ್ರಿಗಳು ಸೈತಾನನಿಗೆ ಕಲ್ಲುಗಳನ್ನು ಎಸೆಯುವುದಾಗಿ ಆ ಕಂಬಗಳಿಗೆ ಕಲ್ಲುಗಳನ್ನುಎಸೆಯಲಾಗುವುದು. ನಾಲ್ಕನೇ ಹಂತದಲ್ಲಿ ಮತ್ತೆ ಕಲ್ಲು ತೂರಾಟ ನಡೆಯುತ್ತದೆ. ಈ ಆಚರಣೆಯು ದಿನವಿಡೀ ನಡೆಯುತ್ತದೆ. ಹಜ್ ಎರಡು ಬಾರಿ ಜಮ್ರಾಹೆ ಉಕ್ವಾ, ಜಮ್ರಾಹೆ ವುಸ್ತಾ ಮತ್ತು ಜಮ್ರಾಹೆ ಉಲಾ ಸ್ಥಳಗಳಲ್ಲಿ ನಿರ್ಮಿಸಲಾದ ಸ್ತಂಭಗಳಿಗೆ ಕಲ್ಲುಗಳನ್ನು ಎಸೆಯುತ್ತಾ ಮಿನಾವನ್ನು ತಲುಪಲಾಗುವುದು, ಹಜ್‌ ಯಾತ್ರೆಯಲ್ಲಿ ಏಳು ಬಾರಿ ಕಲ್ಲುಗಳನ್ನು ಎಸೆಯಲಾಗುವುದು. ನಂತರ ಕಾಬಾದ ಸುತ್ತ ಅಪ್ರದಕ್ಷಿಣೆಯಾಗಿ 7 ಸುತ್ತುಗಳನ್ನು ಸುತ್ತುವುದರೊಂದಿಗೆ ಹಜ್‌ ಯಾತ್ರೆ ಪೂರ್ಣಗೊಳ್ಳುವುದು.

English summary

When is Hajj 2022? Start date, meaning behind the Mecca pilgrimage in Kannada

When is Hajj 2022? when it Start date, what is the significance read on...
Story first published: Tuesday, July 5, 2022, 11:34 [IST]
X
Desktop Bottom Promotion