For Quick Alerts
ALLOW NOTIFICATIONS  
For Daily Alerts

ಅ.13ಕ್ಕೆ ದುರ್ಗಾಷ್ಟಮಿ, ಈ ದಿನದ ವಿಶೇಷತೆ ಏನು, ಪೂಜಾ ವಿಧಿಗಳೇನು?

|

ನವರಾತ್ರಿಯ ಎಂಟನೇ ದಿನವನ್ನು ದುರ್ಗಾಷ್ಟಮಿ ಎಂದು ಆಚರಿಸಲಾಗುವುದು. ಭಕ್ತರಿಗೆ ಈ ದಿನ ತುಂಬಾ ವಿಶೇಷವಾದ ದಿನವಾಗಿದೆ. ಇದನ್ನು ದೇಶದ ವಿವಿಧ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುವುದು.

ಒಂಭತ್ತು ದಿನ ನಡೆಯುವ ನವರಾತ್ರಿ ಆಚರಣೆಯಲ್ಲಿ ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಕೆಲವರು ಈ ದಿನಗಳಲ್ಲಿ ವ್ರತವನ್ನು ಕೂಡ ಆಚರಿಸುತ್ತಾರೆ.

ಈ ವರ್ಷ ಅಷ್ಟಮಿಯನ್ನು ಅಕ್ಟೋಬರ್‌ 13ರಂದು ಆಚರಿಸಲಾಗುತ್ತದೆ. ಈ ದಿನದ ವಿಶೇಷ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

ದುರ್ಗಾಷ್ಟಮಿ ತಿಥಿ ಪ್ರಾರಂಭ: ಅಕ್ಟೋಬರ್ 12 ರಾತ್ರಿ 9:27ಕ್ಕೆ
ದುರ್ಗಾಷ್ಟಮಿ ತಿಥಿ ಮುಕ್ತಾಯ: ಅಕ್ಟೋಬರ್ 13 ರಾತ್ರಿ 08:07ಕ್ಕೆ
ಪೂಜಾ ಮುಹೂರ್ತ ಅಕ್ಟೋಬರ್‌ 13 ರಾತ್ರಿ 07:43ರಿಮದ 08:31ರವರೆಗೆ

ದುರ್ಗಾಷ್ಟಮಿ ಮಹತ್ವ

ದುರ್ಗಾಷ್ಟಮಿ ಮಹತ್ವ

ದುರ್ಗಾಷ್ಟಮಿಯಂದು ಅನೇಕ ಪೂಜಾ ವಿಧಿ ವಿಧಾನಗಳನ್ನು ಆಚರಿಸಲಾಗುವುದು. ಅನೇಕ ಹಿಂದೂ ಕುಟುಂಬಗಳಲ್ಲಿ ಈ ದಿನ ಕನ್ಯಾಪೂಜೆ ಮಾಡಲಾಗುವುದು, ಇದನ್ನು ಕನ್ಯಾ ಬೋಜ್‌ ಎಂದು ಕೂಡ ಕರೆಯಲಾಗುವುದು. ಈ ದಿನ ಮುಟ್ಟಿನ ಚಕ್ರ ಪ್ರಾರಂಭವಾಗದ 9 ಬಾಲಕಿಯರನ್ನು ಮನೆಗೆ ಆಹ್ವಾನಿಸಿ, ಅವರಿಗೆ ಸ್ವಾದಿಷ್ಟಕರವಾದ ಆಹಾರವನ್ನು ನೀಡಲಾಗುವುದು. ಈ ಬಾಲಕಿಯರನ್ನು ದುರ್ಗೆಯ ಅವತಾರ ಎಂದು ಪೂಜಿಸಲಾಗುವುದು. ಮನೆಗೆ ಆಹ್ವಾನಿಸಿದ ಬಾಲಕಿಯರ ಪಾದಗಳನ್ನು ತೊಳೆದು, ಕೆಂಪು ದಾರವನ್ನು ಕೈಗೆ ಕಟ್ಟಲಾಗುವುದು, ನಂತರ ಅವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು. ಸಾಮಾನ್ಯವಾಗಿ ವಸ್ತ, ಮೇಕಪ್ ಬಾಕ್ಸ್ ಈ ರೀತಿಯ ವಸ್ತುಗಳನ್ನು ಗಿಪ್ಟ್‌ ಆಗಿ ನೀಡುತ್ತಾರೆ.

ಕನ್ಯಾಪೂಜೆಯನ್ನು ಮಾಡುವ ಹಿಂದಿರುವ ಕಾರಣ

ಕನ್ಯಾಪೂಜೆಯನ್ನು ಮಾಡುವ ಹಿಂದಿರುವ ಕಾರಣ

  • ಒಂದು ಹುಡುಗಿಯನ್ನು ಕನ್ಯಾಪೂಜೆ ಮಾಡುವುದರಿಂದ ಐಶ್ವರ್ಯ ಪ್ರಾಪ್ತಿಯಾಗುವುದು
  • ಎರಡು ಹುಡುಗಿಯರನ್ನು ಪೂಜಿಸಿದರೆ ಭೋಗ ಮತ್ತು ಮೋಕ್ಷ ಸಿಗುವುದು.
  • ಮೂರು ಹುಡುಗಿಯರನ್ನು ಪೂಜಿಸಿದರೆ ಧರ್ಮ, ಅರ್ಥ, ಕಾಮವನ್ನು ಒದಗಿಸುತ್ತದೆ.
  • ನಾಲ್ಕು ಹುಡುಗಿಯರನ್ನು ಪೂಜಿಸಿದರೆ ಅಧಿಕಾರ ಲಭಿಸುವುದು.
  • ಐದು ಹುಡುಗಿಯರನ್ನು ಪೂಜಿಸಿದರೆ ಜ್ಞಾನ ಹೆಚ್ಚುವುದು.
  • ಆರು ಹುಡುಗಿಯರನ್ನು ಪೂಜಿಸಿದರೆ ಆರು ತರದ ವಿಶೇಷ ಸಿದ್ಧಿಗಳು ಲಭಿಸುತ್ತದೆ.
  • ಏಳು ಹುಡುಗಿಯರನ್ನು ಪೂಜಿಸಿದರೆ ಆಳುವ ಅಧಿಕಾರ ದೊರೆಯುವುದು.
  • ಎಂಟು ಹುಡುಗಿಯರನ್ನು ಪೂಜಿಸಿದರೆ ಸಂಪತ್ತು ಹೆಚ್ಚುವುದು.
  • ಒಂಭತ್ತು ಹುಡುಗಿಯರನ್ನು ವೃತ್ತಿಯಲ್ಲಿ ಪ್ರಗತಿ ಸಿಗುವುದು.
  • ದೇವಿ ಪೂಜೆ

    ದೇವಿ ಪೂಜೆ

    ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ ಈ ದಿನಗಳಲ್ಲಿ ಹಬ್ಬದ ಸಡಗರ ಹೆಚ್ಚಾಗುವುದು ಅದರಲ್ಲೂ ಅಷ್ಟಮಿ ದಿನ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ದುರ್ಗೆಗೆ 108 ದೀಪಗಳನ್ನು ಹಚ್ಚಿ, 108 ತಾವರೆ ಹಾಗೂ ಬಿಲ್ವಾ ಪತ್ರೆ ಎಲೆಗಳನ್ನು ಅರ್ಪಿಸಲಾಗುವುದು.

    ಪೌರಾಣಿಕ ಕತೆ

    ಪೌರಾಣಿಕ ಕತೆ

    ಪೌರಾಣಿಕ ಕತೆಯ ಪ್ರಕಾರ ದುರ್ಗೆಯ ಮೂರನೇಯ ಕಣ್ಣಿನಿಂದ ಉದ್ಭವವಾಗುವ ಕಾಳಿಗೆ ಯುದ್ಧ ನಿಯಮಗಳನ್ನು ಉಲ್ಲಂಘಿಸುವ ಮಹಿಷಾಸುರ ಕಣ್ಣಿಗೆ ಬೀಳುತ್ತಾನೆ. ಆತನ ಸಂಹಾರ ಮಾಡುತ್ತಾಳೆ.

    ಪ್ರಸಾದ

    ಪ್ರಸಾದ

    ದುರ್ಗಾಷ್ಟಮಿ ದಿನದಂದು ಬೋಗ್ ಎನ್ನುವ ವಿಶೇಷ ಪ್ರಸಾದವನ್ನು ತಯಾರಿಸಲಾಗುವುದು. ಅವುಗಳನ್ನು ದೊಡ್ಡ ಪಾತ್ರೆಯಲ್ಲಿ ತಯಾರಿಸಿ ದುರ್ಗೆಯ ದರ್ಶನಕ್ಕೆ ಬಂದಿರುವ ಭಕ್ತಾದಿಗಳಿಗೆ ನೀಡಲಾಗುವುದು. ಈ ದಿನ ಚನ್ನಾದಾಲ್, ಪಲಾವ್, ಪನ್ನೀರ್, ಕಿಚಡಿ, ರಾಜ್‌ಬೋಗ್, ಟೊಮೆಟೊ ಚಟ್ನಿ, ಹಪ್ಪಳ, ಸಲಾಡ್ ಮುಂತಾದ ವಿಶೇಷ ತಿನಿಸುಗಳನ್ನು ನೀಡಲಾಗುವುದು.

English summary

Durga Ashtami or Maha Ashtami 2021: Date, History, Puja vidhi, shubh muhurat, mantra, and samagri

Here are Significance, puja, time detail about surga Ashatami.
X
Desktop Bottom Promotion